ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..

ಟೀಮ್​ ವೈ.ಎಸ್​. ಕನ್ನಡ

ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..

Tuesday April 05, 2016,

3 min Read

ಭಾರತದಲ್ಲಿ ಅತೀ ದೊಡ್ಡ ಮನೋರಂಜನಾ ಮಾಧ್ಯಮ ಅಂದ್ರೆ ಅದು ಸಿನಿಮಾ.. ಬದುಕಿನಲ್ಲಿ ಬರುವ ಭಾವಗಳು ಹಾಗೂ ಪಾತ್ರಗಳನ್ನೆಲ್ಲಾ ತೆರೆಯ ಮೇಲೆ ವಿಜೃಂಭಿಸುವಂತೆ ಮಾಡುತ್ತಾ, ನಾಟಕೀಯತೆಯಲ್ಲೇ ಒಂದು ಸಹಜತೆ ತುಂಬುತ್ತಾ ಮನುಷ್ಯನ ಮನಸ್ಸನ್ನ ನೇರವಾಗಿ ತಲುಪುವಲ್ಲಿ ಸಿನಿಮಾ ಸಕ್ಸಸ್ ಆಗಿದೆ. ಇನ್ನು ಇಲ್ಲಿನ ಗ್ಲಾಮರ್ ಸಿನಿಮಾ ಪ್ರೇಕ್ಷಕನನ್ನು ತಣಿಸುತ್ತದೆ. ಈ ಗ್ಲಾಮರ್ ಜನರ ತೆರೆಯ ಹಿಂದಿನ ಬದುಕನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ನಡೆಸುತ್ತಾ ಅದ್ರಲ್ಲೇ ಅವರನ್ನ ಪರವಾಶರಾಗಿ, ತಮ್ಮ ಬದುಕನ್ನೇ ಚಿತ್ರದ ಪಾತ್ರಗಳಲ್ಲಿ ಕಾಣುವ ಪ್ರಯತ್ನ ನಡೆಸುತ್ತಾರೆ. ಹೀಗಾಗೇ ಸಿನಿಮಾ ಪ್ರೇಕ್ಷಕನನ್ನ ಅಷ್ಟು ಬಿಗಿಯಾಗಿ ಹಿಡಿದಿಡುತ್ತದೆ. ಇನ್ನು ಭಾರತದ ಸಿನಿಮಾದಲ್ಲಿ ಅದೆಷ್ಟೋ ಮಂದಿ ದಿಗ್ಗಜರು ಬಂದು ಹೋಗಿದ್ದಾರೆ. ಅವರು ಚಲನ ಚಿತ್ರವನ್ನ ಒಂದು ಕಲೆಯಾಗಿ ತೋರಿಸುವ ಪ್ರಯತ್ನ ನಡೆಸಿ ಅದ್ರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಅಲ್ಲದೆ ಮನುಷ್ಯನ ಬದುಕು ಹಾಗೂ ಭಾವನಗೆಳನ್ನ ಆಳಕ್ಕೆ ಇಳಿಯುವ ಯತ್ನ ನಡೆಸಿದ್ದಾರೆ. ಇದ್ರಲ್ಲೂ ಸಾಮಾಜಿಕ ಹಾಗೂ ಮಹಿಳಾ ಪರ ಕಳಕಳಿಯನ್ನೂ ತೆರೆದಿದ್ದಾರೆ. ಪ್ರತಿಯೊಬ್ಬನನ್ನ ಸೆಳೆದಿಡೋ ಸ್ಕ್ರಿಪ್ಟ್, ಸಿನಿಮೋಟಗ್ರಫಿ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಭಾರತದ ಚಿತ್ರರಂಗದಲ್ಲಿ ಇಂತಹ ಖ್ಯಾತ ನಾಮ ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರೋದ್ಯಮಿಗಳ ಹೆಸರು ಸದಾ ನೆನಪಿನಲ್ಲಿ ಉಳಿಯುವಂತಿದೆ.

image


ಸತ್ಯಜಿತ್ ರೇ..

ಭಾರತದ ಚಿತ್ರವನ್ನ ಅತ್ಯುನ್ನತ ಮಟ್ಟಕ್ಕೆ ಕರೆದೊಯ್ದ ಖ್ಯಾತರಲ್ಲಿ ಸತ್ಯಜಿತ್ ರೇ ಕೂಡ ಒಬ್ರು. 1992ರಲ್ಲಿ ಸ್ವರ್ಗಸ್ಥರಾದ ಇವರಿಗೆ ಜೀವನಶ್ರೇಷ್ಠ ಸಾಧನೆಗೆ ಆಸ್ಕರ್ ಗೌರವವೂ ಸಿಕ್ಕಿರೋದು ವಿಶೇಷ. ನಿಜವಾದ ಭಾವುಕತೆ, ಬರಹ ಹಾಗೂ ತಾಂತ್ರಿಕ ಅದ್ಭುತಕಗಳಿಗೆ ಹೆಸರಾಗಿದ್ದ ಸತ್ಯಜಿತ್ ರೇ, ಬಂಗಾಳಿ ಸಿನಿಮಾ ಪತೇರ್ ಪಾಂಚಾಲಿ ಸಿನಿಮಾದ ಮೂಲಕ ಇಡೀ ಜಗತ್ತಿನ ಗಮನ ಸೆಳೆದವರು. ಇನ್ನು ತಮ್ಮ ಚಿತ್ರಗಳಲ್ಲಿ ಮಹಿಳೆಯರು ಅನುಭವಿಸುವ ಪಾಡು ಹಾಗೂ ಅವರ ಬಡತನದ ಬಗ್ಗೆ ತಮ್ಮ ಚಿತ್ರದಲ್ಲಿ ಅದ್ಭುತವಾಗಿ ತೆರೆದಿಟ್ಟವರು. ದೇವಿ , ಮಹಾನಗರ್ ಮತ್ತು ಚಾರುಲತಾ ದಂತಹ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳಿಗೆ ಇನ್ನಿಲ್ಲದ ರೀತಿ ಜೀವ ತುಂಬಿದ ಹೆಗ್ಗಳಿಕೆ ಸತ್ಯಜಿತ್ ಅವರದ್ದು.

ಬಿಮಲ್ ರಾಯ್

ಸಾಮಾಜಿಕ ಕಾಳಜಿಯನ್ನ ತೆರೆಯಮೇಲೆ ನೈಜ್ಯವಾಗಿ ತೆರೆದಿಡುತ್ತಿದ್ದ ಮತ್ತೊಬ್ಬ ಮಹಾನ್ ಚಿತ್ರ ನಿರ್ದೇಶಕ ಬಿಮಲ್ ರಾಯ್. ಕಲಾವಂತಿಕೆಯ ಸಿರಿ ಹೊಂದಿದ್ದ ದೋ ಬಿಗಾ ಜಮೀನ್ ನಲ್ಲಿ ತೋರಿಸಲಾದ ಬಡರೈತ ಕುಟುಂಬ ಹಾಗೂ ಆತನ ಪಡಿಪಾಟಲುಗಳು ಎಲ್ಲರ ಮನಸ್ಸನ್ನ ತಲುಪಿತ್ತು. ದುರಂತ ಅಂದ್ರೆ ಆ ಚಿತ್ರಕ್ಕೆ 60 ವರ್ಷಗಳು ತುಂಬಿದ್ರೂ, ರೈತರ ಪಾಡು ಹಾಗೂ ಪಡಿಪಾಟಲು ಮಾತ್ರ ಇನ್ನೂ ಬದಲಾಗಿಲ್ಲ.

ಇದನ್ನು ಓದಿ: ರಜಾ ದಿನಗಳಿಗೆ ಸಿಂಪಲ್​ ಆಗಿ ಪ್ಲಾನ್​ ಮಾಡಿ...

ಕೇತನ್ ಮೆಹ್ತಾ..

ತೆರೆಯ ಮೇಲೆ ನೈಜ್ಯತೆಯನ್ನ ತೆರೆದಿಡುತ್ತಿದ್ದ ಮತ್ತೊಬ್ಬ ಅದ್ಭತ ಕಲಾವಿದ ಕೇತನ್ ಮೆಹ್ತಾ. ಅವರ ಮಿರ್ಚಿ ಮಸಲಾ ಇನ್ನಿಲ್ಲ ರೀತಿ ಸದ್ದು ಮಾಡಿತ್ತು. ಇದ್ರಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಅವರು ಅವುಗಳನ್ನೆಲ್ಲಾ ಧೈರ್ಯವಾಗಿ ಎದುರಿಸುವ ರೀತಿಗಳನ್ನ ಮನೋಜ್ಞವಾಗಿ ಚಿತ್ರಿಸಲಾಗಿತ್ತು.

ಶ್ಯಾಮ್ ಬೆನೆಗಲ್

ಭಾರತೀಯ ಚಿತ್ರಗಳಿಗೆ ನೀಡಲಾದ ಅದ್ಭುತ ಕೊಡುಗೆಗಳಿಗೆ 2005ರಲ್ಲಿ ಶ್ಯಾಮ್ ಬೆನಗಲ್ ದಾದಾ ಸಾಹೇಬ್ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ಅಂದ್ರೆ ಶ್ಯಾಮ್ ಬೆನೆಗಲ್ ಕೂಡ ಸತ್ಯ ಜಿತ್ ರೇ ಅವರಂತೆ ಜಾಹೀರಾತು ಪ್ರಪಂಚದಿಂದಲೇ ಹೊರಬಂದವರು. ಅವರ ಮೊದಲ ಸಾಕ್ಷ್ಯಚಿತ್ರ ಆಂಧ್ರಪ್ರದೇಶದ ಹಿಂದುಳಿದ ಮಹಿಳೆಯರ ಪಾಡುಗಳು ಹಾಗೂ ಅವರು ಲೈಂಗಿಕವಾಗಿ ಎದುರಿಸುತ್ತಿರುವ ದೌರ್ಜನ್ಯಗಳನ್ನ ಒಳಗೊಂಡ ಕಥೆಯನ್ನಾಧರಿಸಿ ತಯಾರಿಸಲಾಗಿತ್ತು. ಮನ್ಥನ್ ಅನ್ನೋ ಹೆಸ್ರಲ್ಲಿ ಹೊರಬಂದ ಆ ಸಿನಿಮಾಕ್ಕೆ ಇನ್ನಿಲ್ಲದ ಪ್ರಶಂಸೆಗಳು ವ್ಯಕ್ತವಾಗಿದ್ದವು.

ಗೋವಿಂದ್ ನಿಲ್ಹಾನಿ..

ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದ ಗೋವಿಂದ್ ನಿಲ್ಹಾನಿ ಕುಟುಂಬ ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾಗುವ ಸಂದರ್ಭದಲ್ಲಿ ಹಿಂದೂಸ್ತಾನ ಸೇರಿಕೊಂಡ್ರು. ಗೋವಿಂದ್ ಅವರು ನಿರ್ದೇಶಿಸಿದ ಆಕ್ರೋಶ್ ಕತ್ತಲ ಜಗತ್ತಿನಲ್ಲಿ ಬದುಕುತ್ತಿದ್ದ ಜನರ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅರ್ಧಸತ್ಯ ಹಾಗೂ ತಮಸ್ ನಂತಹ ಚಿತ್ರಗಳು ಹಿಂಸೆಯನ್ನು ಬಿಂಬಿಸಿದ್ರೂ ಅದರೊಳಗೆ ಒಂದು ಮಾನವೀಯ ಮುಖಗಳನ್ನ ತೆರೆದಿಡಲಾಗಿತ್ತು. ಇದ್ರಲ್ಲಿ ನಟಿಸಿದ್ದ ಲೆಜೆಂಡ್ ಆಕ್ಟರ್ ಓಂ ಪುರಿ ಅದ್ಭುತವಾದ ನಟನೆ ಮೂಲಕ ಮುಂಚಿದ್ರು.

ರಿತ್ವಾಕ್ ಘಾಟಕ್..

ಬೆಂಗಾಲಿ ಸಿನಿಮಾದ ಮತ್ತೊಬ್ಬ ಲೆಜೆಂಡ್ ಆಕ್ಟರ್ ರಿತ್ವಾಕ್ ಘಾಟಕ್.. ಬಾಂಗ್ಲಾ ಹಾಗೂ ಭಾರತದ ನಡುವಿನ ಬಾಂಧವ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ರಿತ್ವಾಕ್, ತಮ್ಮ ಸಿನಿಮಾದ ಮೂಲಕ ಮನೆ ಮಾತಾಗಿದ್ರು. ಹೀಗೆ ಭಾರತೀಯ ಚಿತ್ರರಂಗವನ್ನ ಅವಲೋಕಿಸುತ್ತಾ ಹೋದ್ರೆ ದೀಪಾ ಮೆಹ್ತಾ, ಅಪರ್ಣಾ ಸೇನ್, ಅಡೂರ್ ಗೋಪಾಲ್ ಕೃಷ್ಣನ್ ಅವರಂತಹ ಮೇರು ನಿರ್ದೇಶಕರು ಕಾಣುತ್ತಾರೆ. ತಮ್ಮ ಚಿತ್ರಗಳಲ್ಲಿ ಸಾಮಾಜಿಕ ಹಾಗೂ ಮಹಿಳಾ ಪರ ಕಾಳಜಿಯನ್ನ ಎತ್ತಿ ಹಿಡಿಯುವ ಮೂಲಕ ಅಪರೂದ ಚಿತ್ರದ್ಯಮಿಗಳಾಗಿ ಕಾಣಿಸಿಕೊಳ್ಳುತ್ತಾರೆ.

ಲೇಖಕರು – ಶಾರಿಕಾ ನಾಯರ್

ಅನುವಾದ – ಸ್ವಾತಿ 

ಇದನ್ನು ಓದಿ:

1. ಸುಲಭವಾಗಿ ಸಾಲ ಪಡೆಯಬೇಕೆ? ಸಾಲಗಾರರ ಸಾಥಿ `ಐ2ಐ ಫಂಡಿಂಗ್'

2. ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ತಮಟೆ ಶಿವಮ್ಮನ ಕಥೆ..!

3. ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!