ರೈತನ ಸಮಸ್ಯೆಗೆ ಸ್ಪಂದಿಸುವ ಜಿಕೆವಿಕೆಯ ಆ್ಯಪ್

ಎನ್​​ಎಸ್​ಆರ್​

ರೈತನ ಸಮಸ್ಯೆಗೆ ಸ್ಪಂದಿಸುವ ಜಿಕೆವಿಕೆಯ ಆ್ಯಪ್

Saturday April 09, 2016,

2 min Read

ಅನ್ನದಾತ ತಾನು ಉತ್ತಮ ಬೆಳೆ ಬೆಳೆದ್ರು ಕೆಲವೊಮ್ಮೆ ಸೂಕ್ತ ಆರೈಕೆ ಮಾಡಲಾಗೆದೆ, ಅಥವಾ ಸರಿಯಾಗಿ ರಾಸಾಯನಿಕ ಗೊಬ್ಬರ ಸಿಂಪಡಿಸದೆ, ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾಗುವುದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಕೊನೆಗೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿ ಬೆಂಗಳೂರು ಕೃಷಿ ವಿವಿ ಹೊಸ ತಂತ್ರಜ್ಞಾನ ಸಿದ್ಧಪಡಿಸಿದೆ. ರೈತರು ತಾವು ಬೆಳೆಯುವ ಬೆಳೆಗೆ ರೋಗ ತಗುಲಿದ್ರೆ ಅದನ್ನ ನಿಯಂತ್ರಣ ಮಾಡಲು ಹರಸಾಹಸ ಪಡುವಂತಹ, ತಲೆನೋವಿನಿಂದ ಈ ಆ್ಯಪ್ ಮುಕ್ತಿ ನೀಡಿದೆ.

image


ಸಿಕ್ಕ ಸಿಕ್ಕ ರಾಸಾಯನಿಕ ಸಿಂಪಡಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕೈಸುಟ್ಟು ಕೊಳ್ಳುವ ರೈತರು ದೇಶದ ತುಂಬಾಯಿದ್ದಾರೆ. ಆದರೆ ರೈತರಿಗೆ ಸರ್ಕಾರ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಅಥವಾ ಸೂಕ್ತ ಜ್ಞಾನದ ಕೊರತೆಯಿಂದ ರೈತರು ಬಳಲುವಂತಾಗಿದೆ. ಬೆಂಗಳೂರು ಕೃಷಿ ವಿವಿ`‘ಅಗ್ರಿ ಎಕ್ಸ್​​ಪರ್ಟ್ ಸಿಸ್ಟಮ್ ‘ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಈ ಆ್ಯಪ್ ಬಳಸಬೇಕು ಅಂದ್ರೆ ರೈತನ ಬಳಿ ಸ್ಮಾರ್ಟ್ ಫೋನ್ ಇರಬೇಕು. ಈ ಆ್ಯಪ್​ನ್ನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಬೆಂಗಳೂರಿನ ಜಿಕೆವಿಕೆ ಅಭಿವೃದ್ಧಿ ಪಡಿಸಿದೆ. ಇದು ಅನ್ನದಾತನ ಮತ್ತು ವಿಜ್ಞಾನಿಗಳ ನೇರ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಇನ್ಮುಂದೆ ರೈತ ತನ್ನ ಎಲ್ಲ ಸಮಸ್ಯೆಗಳನ್ನು ಸ್ಮಾರ್ಟ್ ಆಗುವ ಮೂಲಕ ಸ್ಮಾರ್ಟ್ ಆಗಿಯೇ ಬಗೆಹರಿಸಿಕೊಳ್ಳಬಹುದು.

ಇದನ್ನು ಓದಿ: ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

ಈ ಆ್ಯಪ್ ಕೆಲಸ ಮಾಡುವ ರೀತಿ ಕೂಡ ತುಂಬಾ ಆಪ್ತವಾಗಿದೆ. ರೈತ ತಾನು ಬೆಳೆದ, ಬೆಳೆಗೆ ತಗುಲಿರುವ ರೋಗದ ಬಗ್ಗೆ ಫೋಟೋ ತೆಗದು ಆ್ಯಪ್ ಮೂಲಕ ಕೃಷಿ ತಜ್ಞರಿಗೆ ಕಳಿಸಬೇಕು. ಅಲ್ಲದೆ ಆ ಬೆಳೆಯಿಂದ ಏನು ಸಮಸ್ಯೆ ಇದೆ ಅಂತ ಟೈಪ್ ಮಾಡಿ ಕೂಡ ಕಳಿಸಬಹುದು. ಒಂದು ವೇಳೆ ರೈತನಿಗೆ ಅಕ್ಷರ ಜ್ಞಾನ ಇಲ್ಲದೆ ಇದ್ರೆ ವಾಯ್ಸ್ ನೋಟ್ ಸಹ ಕಳಿಸಬಹುದು. ಈ ಎಲ್ಲಾ ಪ್ರಕ್ರಿಯೆಯನ್ನ ರೈತ ಕನ್ನಡದಲ್ಲೇ ಮಾಡಬಹುದು. ಅಂತಿಮವಾಗಿ ರೋಗ ನಿಯಂತ್ರಣ ಅಥವಾ ರೈತನ ಸಮಸ್ಯೆ ಬಗ್ಗೆ ರೈತ ಕೇಳಿದ ಪ್ರಶ್ನೆಗಳಿಗೆ ಒಂದೆರಡು ದಿನದಲ್ಲೇ ತಜ್ಞರು ರೈತನಿಗೆ ಇದೇ ಆ್ಯಪ್‍ನಲ್ಲೇ ಸಂದೇಶ ಅಥವಾ ಕರೆ ಮಾಡುವ ಮೂಲಕ ಉತ್ತರಿಸುತ್ತಾರೆ. ಸೂಕ್ತ ಪರಿಹಾರ ಕೂಡ ನೀಡುತ್ತಾರೆ.

image


ಅತ್ಯಂತ ಸುಲಭವಾಗಿ ಈ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಗೂಗಲ್ ಪ್ಲೇ ಸ್ಟೋರ್​ನಿಂದ ಅಗ್ರಿ ಎಕ್ಸ್​​ಪರ್ಟ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು. ಈಗಾಗಲೇ ಇದನ್ನ 2 ಸಾವಿರಕ್ಕೂ ಹೆಚ್ಚು ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರತಿನಿತ್ಯ 50 ರಿಂದ 60 ರೈತರು ಆ್ಯಪ್ ಮೂಲಕ ತಮ್ಮ ಬೆಳೆಯ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಸೂಕ್ತ ಪಡರಿಹಾರ ಕೂಡ ಕಂಡುಕೊಂಡಿದ್ದಾರೆ. ವಿದ್ಯಾರ್ಥಿಗಳು ಕೃಷಿ ಮೇಳಗಳಲ್ಲಿ ರೈತರಿಗೆ ಈ ಆ್ಯಪ್ ಬಗ್ಗೆ ತಿಳಿಸಿ ರೈತರ ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಡುತ್ತಿದ್ದಾರೆ. ಒಟ್ಟಿನಲ್ಲಿ ಈ ವರ್ಷ ಹೆಚ್ಚಿದ ರೈತರ ಆತ್ಮಹತ್ಯೆ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರವಹಿಸಲಿದೆ. ನಮ್ಮ ಎಲ್ಲ ರೈತರು ಸ್ವಲ್ಪ ಸ್ಮಾರ್ಟ್ ಆಗಬೇಕಷ್ಟೇ.

ಇದನ್ನು ಓದಿ:

1. ಆಟೋ ರಿಕ್ಷಾ ಜಾಹೀರಾತು ಸ್ಟಾರ್ಟ್ ಅಪ್ ನಲ್ಲಿ 1 ಕೋಟಿ ಮೊತ್ತದ ಬಂಡವಾಳ ಸೃಷ್ಠಿ.. !

2. ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

3. ‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....