`ಬೆಳ್ಳಿ' ಆಭರಣ ಲೋಕದಲ್ಲಿ ಸಹೋದರಿಯರು ಶೈನಿಂಗ್...

ಟೀಮ್​ ವೈ.ಎಸ್​. ಕನ್ನಡ

`ಬೆಳ್ಳಿ' ಆಭರಣ ಲೋಕದಲ್ಲಿ ಸಹೋದರಿಯರು ಶೈನಿಂಗ್...

Tuesday March 15, 2016,

3 min Read

ವಜ್ರಗಳು ಯಾವಾಗ್ಲೂ ಯುವತಿಯರ ಬೆಸ್ಟ್ ಫ್ರೆಂಡ್ ಏನಲ್ಲ, ದಿವ್ಯಾ ಬಾತ್ರಾ ಅವರ ವಿಚಾರದಲ್ಲಂತೂ ಇದು ಸತ್ಯ. ಅವರ ನಿಜವಾದ ಲವ್ ಅಂದ್ರೆ ಬೆಳ್ಳಿ. `ಕ್ವಿರ್ಕಿ ಜ್ಯುವೆಲ್ಲರಿ' ಸ್ಥಾಪಿಸುವ ಮೂಲಕ ದಿವ್ಯಾ ಬಾತ್ರಾ ತಮ್ಮ ಬೆಳ್ಳಿ ಪ್ರೇಮಕ್ಕೊಂದು ಹೊಸ ಅರ್ಥ ಕಲ್ಪಿಸಿದ್ದಾರೆ. 2014ರ ಸಪ್ಟೆಂಬರ್‍ನಲ್ಲಿ ` Quirksmith ' ಅನ್ನು ಆರಂಭಿಸಲಾಗಿದೆ. ಸಹೋದರಿಯರಾದ ದಿವ್ಯಾ ಬಾತ್ರಾ ಮತ್ತು ಪ್ರಗ್ಯಾ ಬಾತ್ರಾ ಜೊತೆಯಾಗಿ ` Quirksmith' ಯನ್ನು ಕಟ್ಟಿ ಬೆಳೆಸಿದ್ದಾರೆ. ಆಭರಣ ಕ್ಷೇತ್ರಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದ ಈ ಸಹೋದರಿಯರು, ಬೆಳ್ಳಿ ಇಷ್ಟಪಡುವವರನ್ನೇ ಗಮನದಲ್ಲಿಟ್ಟುಕೊಂಡು ಉದ್ಯಮ ಆರಂಭಿಸಿದ್ದಾರೆ. ದಿವ್ಯಾ ಹಾಗೂ ಪ್ರಗ್ಯಾ ನಡುವೆ ಬಾಲ್ಯದಿಂದ್ಲೂ ಅತ್ಯಂತ ಆತ್ಮೀಯತೆ ಇದೆ, ಪರಸ್ಪರರನ್ನು ಶ್ಲಾಘಿಸುವುದರಲ್ಲಿ ಅವರೆಂದೂ ಹಿಂದೆ ಬಿದ್ದಿಲ್ಲ. ಹಾಗಾಗಿ ಜೊತೆಯಾಗಿ ಏನನ್ನಾದ್ರೂ ಮಾಡಬೇಕು ಅನ್ನೋ ಆಸೆ ಕೂಡ ಅವರಿಗಿತ್ತು.

ಇದನ್ನು ಓದಿ: ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!

`` Quirksmith" ನ ಆಭರಣಗಳನ್ನು ನೀವು ಧರಿಸಿದ್ದೀರಾ ಎಂದುಕೊಳ್ಳಿ, ನಿನ್ನ ಕಿವಿಯೋಲೆ ತುಂಬಾ ಸುಂದರವಾಗಿದೆ ಅಂತಾ ಎಲ್ರೂ ಓಲೆ ಕಡೆಗೆ ಗಮನಹರಿಸ್ತಾರೆ ಹೊರತು ನಿಮ್ಮ ಬಗೆಗಲ್ಲ. ಅದು Quirksmith ಯ ವಿನ್ಯಾಸಗಳ ಹೆಗ್ಗಳಿಕೆ. ನಾವು ಯಾವಾಗ್ಲೂ ನಮ್ಮದೇ ವಿನ್ಯಾಸದ ಓಲೆಗಳನ್ನು ಧರಿಸಿ ಹೊರಗೆ ಹೊರಡುತ್ತೇವೆ. ಅದೇ ನಿಖರವಾದ ಭಾವನೆಯೊಂದಿಗೆ ವಾಪಸ್ ಬರುತ್ತೇವೆ'' ಎನ್ನುತ್ತಾರೆ ಈ ಸಹೋದರಿಯರು.

image


ಪ್ರೀತಿ ಮತ್ತು ಬಂಧ..

ದಿವ್ಯಾ ಮತ್ತು ಪ್ರಗ್ಯಾ ಇಬ್ಬರೂ ಹುಟ್ಟಿದ್ದು ಆಗ್ರಾದಲ್ಲಿ. ದಿವ್ಯಾ ಹಿರಿಯವರು, ಆಕೆಗೀಗ 32ರ ಹರೆಯ. ವೃತ್ತಿಯಲ್ಲಿ ದಿವ್ಯಾ ಡಿಸೈನರ್, ಇಂಡಸ್ಟ್ರಿಯಲ್ಲಿ ಸುಮಾರು 11 ವರ್ಷ ಕೆಲಸ ಮಾಡಿದ ಅನುಭವವಿದೆ. 2004ರಲ್ಲಿ ಎನ್‍ಐಎಫ್‍ಟಿಯಲ್ಲಿ ಪದವಿ ಪಡೆದಿರೋ ದಿವ್ಯಾ, ಆಮ್ರಪಾಲಿಗಾಗಿ ವಿನ್ಯಾಸ ಮಾಡಿದ್ದಾರೆ. ಜೈಪುರದ ಪರ್ಲ್ ಅಕಾಡೆಮಿ ಪಾಠ ಮಾಡಿದ ಅನುಭವ ಕೂಡ ಅವರಿಗಿದೆ. 2007ರ ಲಂಡನ್ ಫ್ಯಾಷನ್ ವೀಕ್‍ಗಾಗಿ ಫ್ಯಾಷನ್ ಡಿಸೈನರ್ ಮನೀಷ್ ಅರೋರಾ ಅವರ ಧಿರಿಸುಗಳಿಗೆ ಆಭರಣಗಳನ್ನು ವಿನ್ಯಾಸ ಮಾಡಿದ್ರು. 2008ರಲ್ಲಿ ದಿವ್ಯಾ ವಜ್ರಾಭರಣ ತಯಾರಿಕಾ ಕಂಪನಿ ಫ್ಯಾಬ್ ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್‍ನ ಡಿಸೈನ್ ಸ್ಟುಡಿಯೋದ ಮುಖ್ಯಸ್ಥೆಯಾಗಿದ್ರು. ಕಳೆದ ವರ್ಷ ಮೇನಲ್ಲಿ ಅವರು ಮುಂಬೈನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.

ಇನ್ನು 31ರ ಹರೆಯದ ಪ್ರಗ್ಯಾ ಐಐಟಿ ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದು, INSEADನಲ್ಲಿ ಎಂಬಿಎ ಮುಗಿಸಿದ್ದಾರೆ. ಬೈನ್&ಕಂಪನಿಯಲ್ಲಿ ಕೆಲಸ ಮಾಡಿರುವ ಪ್ರಗ್ಯಾ ಸದ್ಯ ಇನ್‍ಮೊಬಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೀಕೆಂಡ್‍ಗಳನ್ನೆಲ್ಲ Quirksmithಗಾಗಿ ಮೀಸಲಿಡುತ್ತಾರೆ.

ಜೈಪುರದಿಂದ ಬೆಂಗಳೂರಿನವರೆಗೆ - ದಾರಿಯುದ್ದಕ್ಕೂ ಸವಾಲುಗಳು..

ದಿವ್ಯಾ ವಿನ್ಯಾಸದ ಜವಾಬ್ಧಾರಿ ಹೊತ್ತಿದ್ರೆ, ಮಾರ್ಕೆಟಿಂಗ್ ಕೆಲಸ ಪ್ರಗ್ಯಾರದ್ದು. ಆದ್ರೆ Quirksmith ಬೆಂಗಳೂರಿನಲ್ಲಿಲ್ಲ, ಕುಶಲಕರ್ಮಿಗಳೆಲ್ಲ ಜೈಪುರದಲ್ಲಿದ್ದಾರೆ. ಆಮ್ರಪಾಲಿಯಲ್ಲಿದ್ದಾಗಿನಿಂದ್ಲೂ ದಿವ್ಯಾ ಅವರೊಂದಿಗೆ ಕೆಲಸ ಮಾಡ್ತಾ ಇದ್ರು. ಎಲ್ಲ ಕಚ್ಚಾವಸ್ತುಗಳು ಹಾಗೂ ಉತ್ಪಾದನೆ ಜೈಪುರದ ಪುಟ್ಟ ಮಳಿಗೆಯಲ್ಲಿ ನಡೆಯುತ್ತೆ. ವಿನ್ಯಾಸದ ಕಾರ್ಯಗಳೆಲ್ಲ ನಡೆಯೋದು ಬೆಂಗಳೂರಲ್ಲಿ.

ಎರಡು ವಿಭಿನ್ನ ನಗರಗಳಲ್ಲಿ ಕೆಲಸ ಮಾಡುವುದು, ವೀಕೆಂಡ್ ಅನ್ನು ಕೂಡ Quirksmithಗಾಗಿ ಮೀಸಲಿಡುವುದು ಈ ಸಹೋದರಿಯರಿಗೆ ನಿಜಕ್ಕೂ ಸವಾಲಿನ ಕೆಲಸ. ತಮ್ಮ ಫೇಸ್‍ಬುಕ್ ಪೇಜ್ ಮೂಲಕ ಮತ್ತು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಅವರು ಮಾರಾಟ ಮಾಡುತ್ತಾರೆ. ಬೆಂಗಳೂರಿನ ಟಿಮ್ರಿ ಎಂಬ ಮಳಿಗೆಗೆ ಎಕ್ಸ್​​ಕ್ಲೂಸಿವ್ ವಿನ್ಯಾಸದ ಆಭರಣಗಳನ್ನು ಕೂಡ ಅವರು ಪೂರೈಸುತ್ತಾರೆ. ಬೆಳ್ಳಿ ಆಭರಣ ಪ್ರಿಯ ಗ್ರಾಹಕರನ್ನು ಸಂಪಾದಿಸುವುದೇ ಇವರಿಗೆ ಬಹುದೊಡ್ಡ ಸವಾಲು. ``ಇದು ನಿಮಗೆ ಸಾಮಾನ್ಯ ಮಾರುಕಟ್ಟೆಗಳಲ್ಲಿ ಸಿಗುವ ಮೆಟಲ್ ಆಭರಣಗಳಂತಲ್ಲ, ಬೆಲೆ ಕೂಡ ಹೆಚ್ಚಾಗಿರುತ್ತದೆ. ಆದ್ರೂ ಈಗಾಗ್ಲೇ ಹಲವು ಗ್ರಾಹಕರನ್ನು ಸಂಪಾದಿಸಿದ್ದೇವೆ ಅನ್ನೋದೇ ನಮಗೆ ಖುಷಿಯ ಸಂಗತಿ. ಪ್ರತಿ ತಿಂಗಳಿನಿಂದ ತಿಂಗಳಿಗೆ ಮಹಿಳೆಯರು ಹತ್ತಾರು ಆರ್ಡರ್‍ಗಳೊಂದಿಗೆ ನಮ್ಮ ಬಳಿ ಬರುತ್ತಾರೆ'' ಎನ್ನುವ ದಿವ್ಯಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

image


ಸಾಮರ್ಥ್ಯದಲ್ಲೇ ಬೆಂಬಲ...

ಉತ್ಪನ್ನದ ಬಗೆಗಿನ ಪ್ರೀತಿ ಮತ್ತು ಮೆಚ್ಚುಗೆ, ಇವರ ಪರಿಶ್ರಮಕ್ಕೆ ಪ್ರೇರಣೆ. ಗ್ರಾಹಕರಿಗಾಗಿ ಇನ್ನಷ್ಟು ಹೊಸ ಹೊಸ ವಿನ್ಯಾಸಗಳನ್ನು ಸೃಷ್ಟಿಸಲು ಈ ಪ್ರೇರಣೆಯೇ ಮೂಲ. ತಮ್ಮ ಡಿಸೈನ್ ಸ್ಟುಡಿಯೋಗಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ದಿವ್ಯಾ ಅವರ ಗಮನ ಅವರ ಪೆಡಿಗ್ರಿ ಬಗೆಗಿರಲಿಲ್ಲ, ಅವರು ಸಂಸ್ಥೆಗಾಗಿ ಏನು ಮಾಡಬಲ್ಲರು ಎಂಬುದರ ಕಡೆಗಿತ್ತು. ``ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ಆಭರಣ ವಿನ್ಯಾಸಗಾರರಲ್ಲ, ಎಲ್ಲಾ ಕೆಲಸವನ್ನೂ ನಿಭಾಯಿಸಬಲ್ಲ ಪ್ರತಿಭಾವಂತರು'' ಅನ್ನೋದು ಅವರ ಹೆಮ್ಮೆಯ ನುಡಿ.

ವ್ಯಾಪಕ ಗ್ರಾಹಕರು...

ಈ ವರ್ಷ ಸಹೋದರಿಯರು Quirksmith ಗಾಗಿ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕೆಲ ತಿಂಗಳುಗಳಲ್ಲೇ ಇ-ಕಾಮರ್ಸ್ ವೇದಿಕೆಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಬೇರೆ ಬೇರೆ ಬಗೆಯ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಮಾರಾಟ ಮಾಡುವ ಮೂಲಕ ಯಾವುದು ಗ್ರಾಹಕರನ್ನು ಹೆಚ್ಚಾಗಿ ತಲುಪಲಿದೆ ಅನ್ನೋದನ್ನು ಪತ್ತೆ ಮಾಡುವುದು ಇವರ ಉದ್ದೇಶ. ಸ್ವಂತ ವೆಬ್‍ಸೈಟ್ ಒಂದನ್ನು ಕೂಡ ಆರಂಭಿಸಲು ಸಿದ್ಧತೆ ನಡೆದಿದೆ. ಸದ್ಯದಲ್ಲೇ ಪರ್ನಿಯಾದ ಪಾಪ್ ಅಪ್ ಅಂಗಡಿಗಳಲ್ಲಿ Quirksmith ಆಭರಣಗಳು ದೊರೆಯಲಿವೆ.

Quirksmith 2016ರ ಅಂತ್ಯಕ್ಕೆ ತನ್ನ ಮಾಸಿಕ ಉತ್ಪಾದನೆಯನ್ನು ನಾಲ್ಕರಷ್ಟು ಹೆಚ್ಚಿಸಲು ಮುಂದಾಗಿದೆ. ಸಹೋದರಿಯರು ಮುಂದಿನ 2 ತಿಂಗಳುಗಳಲ್ಲಿ ತಮ್ಮ ಕಾರ್ಯಾಗಾರವನ್ನು ಕೂಡ ವಿಸ್ತರಿಸಲಿದ್ದಾರೆ. ಇನ್ನಷ್ಟು ಕುಶಲಕರ್ಮಿಗಳನ್ನು ನೇಮಿಸಲಿದ್ದಾರೆ. ಇನ್ಮುಂದೆ ದೆಹಲಿ ಮತ್ತು ಮುಂಬೈನಲ್ಲೂ Quirksmith ಆಭರಣಗಳನ್ನು ನೀವು ಕೊಂಡುಕೊಳ್ಳಬಹುದು. ಯಾಕಂದ್ರೆ ಅಲ್ಲಿ ನಡೆಯುವ ವಿನ್ಯಾಸ ಪ್ರದರ್ಶನಗಳಲ್ಲಿ ದಿವ್ಯಾ ಹಾಗೂ ಪ್ರಗ್ಯಾ ಕೂಡ ಭಾಗವಹಿಸಲಿದ್ದಾರೆ.

ಲೇಖಕರು: ತನ್ವಿ ದುಬೆ

ಅನುವಾದಕರು: ಭಾರತಿ ಭಟ್  

ಇದನ್ನು ಓದಿ: 

1. ಬೇಟಿ-ಬಚಾವೊ-ಬೇಟಿ ಪಡಾವೋ: ಪ್ರಧಾನಿ ಮೋದಿ ಕನಸಿಗೆ ಬಣ್ಣ ತುಂಬುತ್ತಿರುವ ಬನಾರಸ್ ವೈದ್ಯೆ

2. 14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!

3. ಸಾಹಸದ ಹಾದಿಯಲ್ಲಿ ಮೂವರು ಮಹಿಳೆಯರ ಯಶಸ್ವೀ ಯಾನ.. !