ರೊಬೋ ಮೇಟ್ ಪ್ಲಸ್: ಮೊಬೈಲ್ ಅಂದ್ರೆ ಆಟವಲ್ಲ, ಮೊಬೈಲ್ ನಲ್ಲೇ ಪಾಠ..!

ಭಾವನಾ ಜಿ

ರೊಬೋ ಮೇಟ್ ಪ್ಲಸ್: ಮೊಬೈಲ್ ಅಂದ್ರೆ ಆಟವಲ್ಲ, ಮೊಬೈಲ್ ನಲ್ಲೇ ಪಾಠ..!

Friday January 15, 2016,

2 min Read

ಮೊಬೈಲ್ ಅಂದ್ರೆ ಓದುವ ಮಕ್ಕಳ ಪಾಲಿಗೆ ಆಟದ ಸಾಮಾನು. ಬಹಳಷ್ಟು ಮಕ್ಕಳಿಗೆ ಅದ್ರಲ್ಲೂ ಎಸ್ಎಸ್ಎಲ್​ಸಿ ದಾಟಿದ ಟೀನೇಜರ್ಸ್ ಗಳಿಗೆ ಮೊಬೈಲ್ ಅಂದ್ರೆ ಅದೇನೋ ಮೋಹ. ಪಠ್ಯ ಪುಸ್ತಕ ಅಲರ್ಜಿ. ಮೊಬೈಲ್ ಹಿಡಿದು ಕೂರುವ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ತಲೆಯೊಳಗೆ ಹೋಗೋದು ಹೇಗೆ..? ಪಾಲಕರಿಗಂತೂ ಮೊಬೈಲ್ ಗೆ ಅಡಿಕ್ಟ್ ಆದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗೋದು ಪಕ್ಕಾ. ಇಂಥ ಚಿಂತೆ ವಿದ್ಯಾರ್ಥಿ ಸಮೂಹದ ಬಗ್ಗೆ ಕಳಕಳಿ ಹೊಂದಿರೋ ಮಂಗಳೂರು ಮೂಲದ ಎಂ.ಟಿ. ಎಜ್ಯುಕೇರ್ ಚಾರಿಟೇಬಲ್ ಟ್ರಸ್ಟ್​ಗೂ ಕಾಡಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕು ಅಂತ ಎಂ.ಟಿ. ಎಜ್ಯುಕೇರ್ ಲಿಮಿಟೆಡ್ ನ ಚೇರ್ಮನ್ ಮಹೇಶ್ ಶೆಟ್ಟಿಯವರಿಗೆ ಗಟ್ಟಿಯಾಗಿ ತಲೆಯಲ್ಲಿ ಕುಳಿತಿತ್ತು. ಅವರ ಕನಸಿನ ಕೂಸಾಗಿ ಇದೀಗ ಹೊರ ಹೊಮ್ಮಿದ್ದೇ ರೋಬೋ ಮೇಟ್ ಪ್ಲಸ್ ಆ್ಯಂಡ್ರಾಯ್ಡ್ ಮೊಬೈಲ್ ಅಪ್ಲಿಕೇಷನ್.

image


ರಾಕೆಟ್ ವೇಗದಲ್ಲಿ ಬೆಳೆಯುತ್ತಿರೋ ಜಗತ್ತಿನಲ್ಲಿ ಪ್ರತಿಯೊಂದು ಕ್ಷಣ ಕೂಡ ಇಂಪಾರ್ಟೆಂಟ್. ಅದೆಷ್ಟೋ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಮಾಡುವ ಪಾಠ ರುಚಿಸೋದಿಲ್ಲ. ಇನ್ನಷ್ಟು ಮಕ್ಕಳು ಬಹಳಷ್ಟು ಬಾರಿ ಕ್ಲಾಸ್ ಗಳಿಗೆ ಬಂಕ್ ಹಾಕಿರ್ತಾರೆ. ಅನಾರೋಗ್ಯ ಅದೂ ಇದೂ ಅಂತ ಕ್ಲಾಸ್ ಗಳಿಗೆ ಅಬ್ಸೆಂಟ್ ಆಗೋದು ಕಾಮನ್, ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಪಾಠಗಳು ಮಿಸ್ ಆಗಿ ಬಿಡುತ್ತವೆ. ಹೀಗೆ ವಿದ್ಯಾರ್ಥಿಗಳು ಪಾಠಗಳಿಂದ ಮಿಸ್ ಆಗ್ಬಾರ್ದು ಅಂತಲೇ ರೂಪಿತವಾಗಿದೆ ರೋಬೋಮೇಟ್ ಪ್ಲಸ್​ ಮೊಬೈಲ್ ಆ್ಯಪ್.

ಏನಿದೆ ರೊಬೋಮೇಟ್ ಪ್ಲಸ್ ಆ್ಯಪ್ ನಲ್ಲಿ..?

ರೋಬೋಮೇಟ್ ಪ್ಲಸ್ ವಿದ್ಯಾರ್ಥಿಗಳ ಮೊಬೈಲ್ ಮೇಟ್ ಆಗೋದ್ರಲ್ಲಿ ಡೌಟೇ ಇಲ್ಲ. ಗೂಗಲ್ ಪ್ಲಸ್ ನಲ್ಲಿ ರೊಬೋಮೇಟ್ ಪ್ಲಸ್ ಉಚಿತವಾಗಿ ಸಿಗತ್ತೆ. ಇದನ್ನು ಡೌನ್ ಲೋಡ್ ಮಾಡಿಕೊಂಡ್ರೆ ಸಾಕು, ನಿಮ್ಮ ಪಾಠ ನಿಮ್ಮ ಬೆರಳ ತುದಿಯಲ್ಲೇ ಫಿಕ್ಸ್.

ರೊಬೋಮೇಟ್ ಪ್ಲಸ್ ಆ್ಯಪ್ ನಲ್ಲಿ ವೀಡಿಯ ಮೂಲಕ ಪಾಠಗಳನ್ನು ಅಪ್ ಲೋಡ್ ಮಾಡಲಾಗಿದೆ. ಪಿಯುಸಿ, ಐಐಟಿ, ಎಂಬಿಎ, ಸಿಎ, ಸಿಪಿಟಿ, ಸಿಬಿಎಸ್ಇ, ಅಥವಾ ಐಸಿಎಸ್ಇ ಯಾವುದೇ ಇರಲಿ, ಎಲ್ಲ ಪಠ್ಯಕ್ರಮಗಳೂ ಕೂಡ ರೊಬೋಮೇಟ್ ಪ್ಲಸ್ ನಲ್ಲಿ ಲಭ್ಯ. ನಿಮಗೆ ಅವಶ್ಯಕವಾದ ಕೋರ್ಸ್ ಗಳನ್ನು ಸೆಲೆಕ್ಟ್ ಮಾಡಿಕೊಂಡು ಅವುಗಳ ಪಾಠವನ್ನು ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಮೊಬೈಲ್ ನಲ್ಲಿಯ ಪಾಠಗಳನ್ನು ಕೇಳಬಹುದು, ನೋಡಬಹುದು. ಕ್ಲಾಸ್ ರೂಮ್ ಟೀಚಿಂಗ್ ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದ ರೋಬೋಮೇಟ್ ಪ್ಲಸ್.

image


ಕೇವಲ ಅನುಭವೀ ಉಪನ್ಯಾಸಕರ ಲೆಕ್ಚರ್ ಮಾತ್ರವಲ್ಲ, ಪಾಠಗಳಿಗೆ ಸಂಬಂಧಪಟ್ಟ ಆ್ಯನಿಮೇಟೆಡ್ ಚಿತ್ರಗಳು, ಕಲರ್ ಫುಲ್ ಗ್ರಾಫಿಕ್ಸ್, ವಂಡರ್ ಫುಲ್ ಮೇಕಿಂಗ್ ವಿದ್ಯಾರ್ಥಿಗಳನ್ನು ಹಿಡಿದು ಕೂರಿಸುತ್ತದೆ. ಜೀವಶಾಸ್ತ್ರ ವಿಷಯದಲ್ಲಿ ಆ್ಯನಿಮೇಷನ್ ಮೂಲಕವೇ ಪಾಠಗಳು ಮನಸ್ಸಿಗೆ ನಾಟುವಂತಿದ್ರೆ ಇನ್ನುಳಿದ ಸಬ್ಜೆಕ್ಟ್ ಗಳಲ್ಲೂ ಅಂತರವಿಲ್ಲ. ರಾಜ್ಯ ಪಠ್ಯಕ್ರಮದಂತೆ ಪಾಠಗಳನ್ನು ಇಂಗ್ಲೀಷ್ ನಲ್ಲಿ ನೀಡಲಾಗಿದೆ.

ರೊಬೋಮೇಟ್ ಪ್ಲಸ್ ಅನ್ನು ಸದ್ಯ ಇಂಗ್ಲೀಷ್ ವರ್ಷನ್ ನಲ್ಲಿ ಉಚಿತವಾಗಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕನ್ನಡ ಅವತರಣಿಕೆಯಲ್ಲೂ ಆ್ಯಪ್ ಬಿಡುಗಡೆ ಮಾಡೋ ಉದ್ದೇಶವಿಟ್ಟುಕೊಳ್ಳಲಾಗಿದೆ. ಮೊಬೈಲ್ ಅಂದ್ರೆ ಅದೊಂದು ಆಟದ ಸಾಮಾನಲ್ಲ, ಕೇವಲ ಫೋನ್ ಕಾಲ್, ವಾಟ್ಸಪ್ ನ ಚಾಟಿಂಗ್ ಮಷಿನ್ ಕೂಡ ಅಲ್ಲ, ರೊಬೋಮೇಟ್ ನಂತಹ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ಮೊಬೈಲ್ ವಿದ್ಯಾರ್ಥಿಗ ಳಪಾಲಿನ ಮೆಂಟರ್ ಆಗೋದಂತೂ ಪಕ್ಕಾ.

image


ಎಂ.ಟಿ ಎಜ್ಯುಕೇರ್ ಚಾರಿಟೇಲ್ ಟ್ರಸ್ಟ್ 2009 ರಲ್ಲಿ ಪ್ರಾರಂಭವಾಗಿದ್ದು ಪ್ರಮುಖವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 33 ವರ್ಷಗಳಿಂದ ತನ್ನನ್ನ ತೊಡಗಿಸಿಕೊಂಡಿರುವ ಚೇರ್ಮನ್ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ 18 ಪಿಯು ಕಾಲೇಜುಗಳೂ ಕೂಡ ಇವೆ.

“ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಇಟ್ಟುಕೊಂಡು ಈ ಮೊಬೈಲ್ ಆ್ಯಪ್ ರೂಪಿಸಿದ್ದೇವೆ. ಹತ್ತು ಹಲವು ಕಾರಣಗಳಿಗೆ ವಿದ್ಯಾರ್ಥಿಗಳು ಕ್ಲಾಸ್ ರೂಮ್ ಟೀಚಿಂಗ್​ನಿಂದ ವಿಮುಖರಾಗ್ತಾರೆ. ಆದರೆ ಅಂಥ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮುಟ್ಟಿಸಬೇಕು ಎನ್ನುವ ನಿಟ್ಟಿನಲ್ಲಿ ಆ್ಯಪ್ ಉಚಿತವಾಗಿ ಸಿಗುವಂತೆ ಮಾಡಿದ್ದೇವೆ. ಅದರಲ್ಲೂ ಮುಖ್ಯವಾಗಿ ನಗರದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ವ್ಯತ್ಯಾಸವಿದೆ, ಈ ಮೊಬೈಲ್ ಆ್ಯಪ್ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ದೊರೆಯುವುದು ಗ್ಯಾರಂಟಿ. ಅನುಭವಿ ಉಪನ್ಯಾಸಕರ ಪಾಠಗಳಿಂದ ಗ್ರಾಮೀಣ ವಿದ್ಯಾರ್ಥಿಗಳೂ ವಂಚಿತರಾಗೋದಿಲ್ಲ ಅಂತಾರೆ ಸಂಸ್ಥೆಯ ಟ್ರಸ್ಟಿಯಾದ ಸುಜಿತ್ ಕುಮಾರ್.