ಉದ್ಯೋಗ ಕ್ಷೇತ್ರದಲ್ಲಿ ಸಹಜ ಸೌಂದರ್ಯವಂತರಾಗಿ ಗುರುತಿಸಿಕೊಳ್ಳುವುದು ಹೇಗೆ.. ?

ಟೀಮ್​ ವೈ.ಎಸ್​. ಕನ್ನಡ

ಉದ್ಯೋಗ ಕ್ಷೇತ್ರದಲ್ಲಿ ಸಹಜ ಸೌಂದರ್ಯವಂತರಾಗಿ ಗುರುತಿಸಿಕೊಳ್ಳುವುದು ಹೇಗೆ.. ?

Thursday April 14, 2016,

3 min Read

ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಹಿಳೆಗೆ ಇನ್ನಿಲ್ಲದ ರೀತಿಯಲ್ಲಿ ಸಮಸ್ಯೆಗಳ ಸರಮಾಲೆ ಕಾಡುತ್ತಿರುತ್ತವೆ. ಕೆಲಸ ಮತ್ತು ಜೀವನವನ್ನ ಒಂದೇ ರೀತಿ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆ, ಎಂತಹ ಪರಿಸ್ಥಿತಿಯಲ್ಲೂ ತೋರಬೇಕಾದ ಗಟ್ಟಿತನದ ಮನಸ್ಥಿತಿಗಳು ಆಕೆಯನ್ನ ಸದಾ ಕಾಡುವ ಸವಾಲುಗಳು. ಹೀಗಿರುವ ನೈಸರ್ಗಿಕ ಚಾರ್ಮ್ ಕಾಪಾಡಿಕೊಳ್ಳಲು ಆಕೆ ಇನ್ನಿಲ್ಲದ ಸಾಹಸಕ್ಕೆ ಕೈ ಹಾಕಬೇಕಾಗುತ್ತದೆ. ಇನ್ನು ಉದ್ಯಮಿಯಾಗಿ ನಾವು ಇತರೆ ಸ್ಟೇಕ್ ಹೋಲ್ಡರ್ ಗಳನ್ನ ಸೆಳೆದುಕೊಳ್ಳುವುದು ಅನಿವಾರ್ಯ. ಆದ್ರೆ ಇದೆಲ್ಲಾ ಅಷ್ಟು ಸುಲಭವಾಗಿ ಆಗೋದಿಲ್ಲ. ಇದೆಲ್ಲಾ ಸರಳವಾಗಬೇಕು ಅಂದ್ರೆ ನಿಮ್ಮ ಪದ ಬಳಕೆ ಹಾಗೂ ನಿಮ್ಮ ಪ್ರಸೆನ್ಸ್ ನಿರ್ಣಾಯಕವೆನಿಸುತ್ತದೆ. ಅಲ್ಲದೆ ಪ್ರಸೆಂಟೇಶನ್ ಹಾಗೂ ಬ್ರಾಂಡಿಂಗ್ ಪ್ರತೀ ಹಂತದಲ್ಲೂ ನಿರ್ಣಾಯಕ ಪಾತ್ರವಹಿಸುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಒಂದು ಗಟ್ಟಿತನದ ಮನಸ್ಥಿತಿ ನೈಸರ್ಗಿಕವಾದ ಚರಿಶ್ಮಾಗಳನ್ನ ಕಾಪಾಡಿಕೊಳ್ಳುವುದರ ಜೊತೆಗೆ ಹೊಸ ಅವಕಾಶಗಳ ಹುಡುಕಾಟಗಳಿಗೂ ಇದು ಪ್ರೇರಣೆ ನೀಡುತ್ತದೆ. ಹೀಗಾಗಿ ನೈಸರ್ಗಿಕವಾಗಿ ಚಾರ್ಮ್ ಹೆಚ್ಚಿಸಿಕೊಳ್ಳಬೇಕಾದ್ರೆ ವ್ಯಕ್ತಿಗತವಾಗಿ ಕೆಲವು ಅಂಶಗಳ್ನನ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯ.

ಇದನ್ನು ಓದಿ: ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''

1. ಶರೀರ ತೆರೆದುಕೊಂಡಂತಿರಲಿ

ಈ ಅಂಶವನ್ನ ಸಾಕಷ್ಟು ಮಂದಿ ನಿರ್ಲಕ್ಷಿಸುವ ಸಾದ್ಯತೆಗಳೇ ಹೆಚ್ಚು. ಯಾವುದೇ ಮೀಟಿಂಗ್ ಆಗಿರಲಿ ಅಲ್ಲಿನಿಮ್ಮ ಹಾವಭಾವ ಸಾಕಷ್ಟು ಮಹತ್ವ ಪಡೆಯುತ್ತವೆ. ಮುಖ್ಯವಾಗಿ ಮೀಟಿಂಗ್ ಗಳಲ್ಲಿ ನಿಮ್ಮ ಮುಂಡ ತೆರೆದುಕೊಂಡಂತಿದ್ದರೆ ಒಳ್ಳೆಯದು. ಇದ್ರ ಬದಲು ಇಡೀ ಶರೀರ ಮುದುಡಿದ ರೀತಿ ಅಥವಾ ಒಳಗೆ ಸೆಳೆದುಕೊಂಡಂತಿದ್ದರೆ ಅದು ನಿಮ್ಮ ಮುಂದಿರುವವರ ಬಗ್ಗೆ ಅನಾದರ ಹೊಂದಿದ್ದೀರಿ ಅನ್ನೋ ಅರ್ಥ ಉಂಟುಮಾಡುತ್ತದೆ. ಅದ್ರಲ್ಲೂ ನೆಟ್ ವರ್ಕ್ ಅಥವಾ ಸೇಲ್ಸ್ ಗೆ ಸಂಬಂಧಿಸಿದ ಮಾತುಕತೆಗಳಲ್ಲಿ ನಮ್ಮ ಶರೀರದ ಭಾಷೆ ಸಾಕಷ್ಟು ಮಹತ್ವ ವಹಿಸುತ್ತದೆ ಅನ್ನೋದು ವಾಸ್ತವ.

image


2. ಮಾತನಾಡುವಾಗ ಗಲ್ಲ ಎತ್ತುವುದು

ಇದೊಂದು ಕುತೂಹಲಕಾರಿಯಾದ ದೇಹ ಭಾಷೆಯಾಗಿದೆ. ಪ್ರಮುಖವಾಗಿ ಮಹಿಳಾ ಉದ್ಯಮಿಗಳಿಗೆ ಇದು ಪಾಲಿಸಲೇ ಬೇಕಾದ ಅತ್ಯಂತ ಪ್ರಮುಖ ಅಂಶವಾಗಿದೆ. ಯಾಕಂದ್ರೆ ಸಾಮಾನ್ಯವಾಗಿ ಮಹಿಳೆಯರು ಕಡಿಮೆ ಡೈನಾಮಿಕ್ ಹಾಗೂ ಪ್ರಗತಿ ವೇಗ ಹೊಂದಿರುವವರಾಗಿತ್ತಾರೆ. ಅಲ್ಲದೆ ಮೃದುತ್ವಕ್ಕೆ ಅವರು ಹೆಸರಾಗಿದ್ದಾರೆ. ಹೀಗಾಗಿ ಇದನ್ನ ಬ್ರೇಕ್ ಮಾಡಬೇಕು ಅಂದ್ರೆ ಬಾಡಿ ಲಾಂಗ್ವೇಜ್ ಅತ್ಯಂತ ಹೆಚ್ಚು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಮಾತನಾಡುವಾಗ ಹುಡುಗಿಯ ಕೈಗಳ ಚಲನೆ ಹಾಗೂ ಗಲ್ಲವನ್ನ ಮೇಲೆತ್ತುವುದು ಹೆಚ್ಚ ಸೂಕ್ತ. ಯಾಕಂದ್ರೆ ಅದು ಆಕೆಯ ಆತ್ಮವಿಶ್ವಾಸವನ್ನ ಎತ್ತಿ ತೋರಿಸುತ್ತದೆ.

3 ಮಾತಿನ ಏರಿಳಿತದ ಕಡೆ ಗಮನ

ಯಾವುದೇ ಕೆಲಸ ಸಕ್ಸಸ್ ಆಗಬೇಕು ಅಂದ್ರೆ ಅಲ್ಲಿ ಮಾತೇ ಮುಖ್ಯ.. ಮಾತೇ ಬಂಡವಾಳ. ಹಾಗಂತ ನಾವು ಹೇಗೆಂದರೆ ಹಾಗೇ ಮಾತನ್ನ ಬಳಕೆ ಮಾಡಲು ಸಾಧ್ಯವಿಲ್ಲ. ಕ್ಲೈಂಟ್ ಗಳ ಜೊತೆಗೆ ವ್ಯವಹರಿಸುವಾಗ ಮಾತಿನ ಶೈಲಿ ಮತ್ತು ಅದ್ರ ಮೇಲಿನ ಹಿಡಿತ ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ. ಇನ್ನ ಮಾತನಾಡುವ ಮೊದ್ಲು ದೀರ್ಘವಾಗಿ ಉಸಿರಾಡುವತ್ತ ಗಮನ ನೀಡುವುದು ಅತ್ಯಂತ ಹೆಚ್ಚು ಮುಖ್ಯವಾದ ಅಂಶಗಳಲ್ಲಿ ಒಂದು. ಉಸಿರಾಟದಲ್ಲಿ ಸೂಕ್ತ ರೀತಿಯ ಏರಿಳಿತಗಳಿದ್ದರೆ ಅದು ನಿಮ್ಮ ಮಾತಿನ ಗತಿಯನ್ನು ನಿರ್ಧರಿಸುತ್ತದೆ. ಅದೇ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

4 . ಕೆಲಸದಲ್ಲಿ ಮುಖಭಾವದ ಕಡೆ ಗಮನ ಕೊಡಿ

ಕೆಲವರು ಅತ್ಯಂತ ಲವಲವಿಕೆ ಹಾಗೂ ಚಟುವಟಿಕೆಗಳನ್ನ ಹೊಂದಿರುತ್ತಾರೆ. ಇನ್ನು ಕೆಲವರು ಮಾತನಾಡುವಾಗ ಅವರ ಹಾವಭಾವಗಳು ನಮ್ಮನ್ನ ಸೆಳೆಯುತ್ತವೆ. ಅದ್ರಲ್ಲೂ ಅವರು ಮುಖದಲ್ಲಿ ತೋರಿಸುವ ವಿವಿಧ ಭಾವಗಳು ಅವರನ್ನ ಹೆಚ್ಚು ಆಕರ್ಷಿಸುತ್ತವೆ. ಹಾಗೇ ಕೆಲಸದ ವೇಳೆಯಲ್ಲಿ ಹಾಗೂ ಇತರರೊಡನೆ ನೀವು ಸಂವಹನ ನಡೆಸುವಾಗ ಮಾತಿನಲ್ಲಿ ಭಾವನೆಗಳನ್ನ ವ್ಯಕ್ತಪಡಿಸುವುದನ್ನ ಅಭ್ಯಾಸ ಮಾಡಿಕೊಳ್ಳಿ. ಮಾತಿಗೆ ತಕ್ಕಂತೆ ಮುಖ ಭಾವ ಹಾಗೂ ನಗು ಹೊಂದಿದ್ದೇ ಆದ್ರೆ ಸುಲಭವಾಗಿ ನೀವು ಕ್ಲೈಂಟ್ ಗಳನ್ನ ನಿಮ್ಮತ್ತ ಸೆಳೆಯಲು ಸಾಧ್ಯವಾಗುತ್ತದೆ.

5. ಆಕರ್ಷಕವಾಗಿ ಕಾಣುವುದು

ಇದು ಯಾವುದೇ ಉದ್ಯಮದಲ್ಲಿ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಅತ್ಯಂತ ಗಂಭೀರವಾಗಿ ಪರಿಗಣಿಸಲೇ ಬೇಕಾದ ವ್ಯಕ್ತಿತ್ವದ ಒಂದು ಭಾಗ. ನಿಮ್ಮ ಡ್ರೆಸ್ಸಿಂಗ್ ನಿಮ್ಮ ಕೆಲಸಕ್ಕೆ ತಕ್ಕಂತೆ ಇದ್ರೆ ಅದು ಇನ್ನಷ್ಟು ಚೆನ್ನ. ಬಾಡಿ ಸ್ಪ್ರೇ ಮತ್ತು ಪರ್ಫ್ಯೂಮ್ ಗಳ ಬಗ್ಗೆ ನಿಮಗೆ ಅತ್ಯಂತ ಹೆಚ್ಚು ಒಲವಿದ್ರೆ ಅವುಗಳ ಆಯ್ಕೆಯಲ್ಲೂ ಎಚ್ಚರಿಕೆ ನಿಮಗಿರಲಿ. ಯಾಕಂದ್ರೆ ಒಮ್ಮೆ ನೀವು ಇದ್ರಲ್ಲಿ ಎಡವಿದ್ರೆ ನಿಮ್ಮ ಎಲ್ಲಾ ಪ್ರಯತ್ನಗಳೂ ಕೈಕೊಡುವುದು ನಿಶ್ಚಿತ. ಹೀಗೆ ಕೇವಲ ಸೌಂದರ್ಯವರ್ಧಕಗಳಿಂದ ಮಾತ್ರ ಸೌಂದರ್ಯ ಹೆಚ್ಚಿಸಿಕೊಳ್ಳುವತ್ತ ಗಮನ ನೀಡದೆ, ವ್ಯಕ್ತಿತ್ವದಲ್ಲಿ ಸೌಂದರ್ಯ ಕಾಣಲು ಬಯಸಿದರೆ ನೀವು ಒಬ್ಬ ಯಶಸ್ವೀ ಉದ್ಯಮಿಯಾಗೋದ್ರಲ್ಲಿ ಅನುಮಾನವಿಲ್ಲ.

ಲೇಖನ – ಶ್ರೇಯಾ ಡುಂಗ್ರಾ

ಅನುವಾದ – ಸ್ವಾತಿ

ಇದನ್ನು ಓದಿ:

1. ಸ್ಮಾರ್ಟ್​ಫೋನ್​ನಲ್ಲಿ ಅಡಗಿಕುಳಿತಿರುವ ಡಾಕ್ಟರ್​..!

2. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

3. ಪ್ಲಾಸ್ಟಿಕ್‍ಗೆ ಪರ್ಯಾಯ ಇಕೋವೇರ್