ಝಿರೋದಿಂದ ಕೋಟಿವರೆಗೆ.. ಇದು ವಿದ್ಯಾರ್ಥಿಗಳ ‘ಟೆಸ್ಟಮೆಂಟ್ ’ಸ್ಟೋರಿ..!

ಟೀಮ್​ ವೈ.ಎಸ್​. ಕನ್ನಡ

ಝಿರೋದಿಂದ ಕೋಟಿವರೆಗೆ.. ಇದು ವಿದ್ಯಾರ್ಥಿಗಳ ‘ಟೆಸ್ಟಮೆಂಟ್ ’ಸ್ಟೋರಿ..!

Thursday February 11, 2016,

3 min Read

ಹೊಸ ಉದ್ಯಮದ ಕನಸು, ಅದ್ರಲ್ಲಿ ಯಶಸ್ಸು ಸಾಧಿಸಬೇಕು ಅನ್ನೋ ಮನಸ್ಸು ಸಾಮಾನ್ಯವಾಗಿ ಎಲ್ಲರಲ್ಲೂ ತುಡಿಯುತ್ತಲೇ ಇರುತ್ತೆ. ಆದ್ರೆ ಇದನ್ನ ವಾಸ್ತವದಲ್ಲಿ ಮಾಡಲು ಹೋದಾಗ ಆಗುವ ಅಡ್ಡಿ ಆತಂಕಗಳು ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ.. ಹೊಸ ಉದ್ದಿಮೆಯನ್ನ ಆರಂಭಿಸಲು ಸಾಗಬೇಕಾದ ಹಾದಿಯನ್ನೇ ಕಲ್ಪಿಸಿಕೊಂಡು ಅದೆಷ್ಟೋ ಮಂದಿ ಇಟ್ಟ ಹೆಜ್ಜೆಯನ್ನ ಹಿಂದೆಗೆಯುತ್ತಾರೆ. ಅದ್ರಲ್ಲೂ ಕಾಲೇಜು ವಿದ್ಯಾರ್ಥಿ ಮಟ್ಟದಲ್ಲಿ ಏನಾದ್ರೂ ಇದನ್ನ ಸಾಧಿಸಲು ಹೊರಟರೆ ಆಗಬಹುದಾದ ಅನುಭವಗಳನ್ನ ಊಹಿಸಲೂ ಅಸಾಧ್ಯ. ಅಭ್ಯಾಸವನ್ನೂ ಸಮರ್ಥವಾಗಿ ನಿಭಾಯಿಸುತ್ತಾ, ತಮ್ಮ ಉತ್ಪನ್ನಗಳ ಗಮನ ಕೊಡುತ್ತಾ, ಆಪರೇಷನಲ್ ರೋಡ್ ಮ್ಯಾಪ್ ಕಡೆ ಗಮನ ಕೊಡುವುದರ ಜೊತೆಗೆ ಅಗತ್ಯವಿರುವ ಫಂಡ್ ರೈಸಿಂಗ್ ಮಾಡುವ ಸವಾಲೂ ಅವರ ಮುಂದಿರುತ್ತದೆ. ಅದ್ರಲ್ಲೂ ಮೊಟ್ಟ ಮೊದಲು ಆರಂಭಿಸುವ ಕನಸಿನ ಉದ್ದಿಮೆಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದ ಕಂಪನಿಗಳೇನಾದ್ರೂ ಮಾತಿಗೆ ತಪ್ಪಿದ್ರೆ ಆಗುವ ಪರಿಸ್ಥಿತಿ ಎಂತಹವರನ್ನೂ ಕುಗ್ಗಿಸುತ್ತದೆ. ಆದ್ರೆ ಐಪಿ ವಿಶ್ವವಿದ್ಯಾಲಯದ ಈ ಮೂವರು ವಿದ್ಯಾರ್ಥಿಗಳಿಗೆ ಇದ್ಯಾವುದರ ಅನುಭವವಾಗಲೇ ಇಲ್ಲ. ಯಾಕಂದ್ರೆ ಇವರು ಇನ್ನೇನು ಸೋತೇ ಬಿಟ್ಟೆವು ಅನ್ನೋ ಪರಿಸ್ಥಿತಿಯಲ್ಲಿ ಇವರ ನೆರವಿಗೆ ನಿಂತಿದ್ದು ಕಾಲೇಜಿನ ಆಡಳಿತ ಮಂಡಳಿ. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಸ್ವತಃ ಆಡಳಿತ ಮಂಡಳಿ ಆರ್ಥಿಕ ನೆರವು ನೀಡಿದೆ. ಇದೀಗ ಇವರು ಹುಟ್ಟುಹಾಕಿರುವ ಟೆಸ್ಟಮೆಂಟ್ ಪತ್ರಿಕೆ ಇದೀಗ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪ.

ಇದನ್ನು ಓದಿ

ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !

ಕನಸಿನ ಟೆಸ್ಟಮೆಂಟ್ ಶುರುವಾಗಿದ್ದು ಏಪ್ರಿಲ್ 2012ರಲ್ಲಿ. ಅದು ವಿಶ್ವವಿದ್ಯಾಲಯದ ಪತ್ರಿಕೆಯಾಗಿ ಶುರುವಾಗಿತ್ತು. ನಾವು ಈ ಸಾಹಸಕ್ಕೆ ಕೈ ಹಾಕಿದ್ದು ಐಪಿ ಯುನಿವರ್ಸಿಟಿಯನ್ನ ಬ್ರಾಂಡಿಂಗ್ ಮಾಡೋದಿಕ್ಕೆ. ಜೊತೆಗೆ ದುರ್ಬಲ ಮನಸ್ಥಿತಿಯ ವಿದ್ಯಾರ್ಥಿಗಳಲ್ಲಿ ಕಾಡುವ ಹಿಂಜರಿಕೆಯನ್ನ ದೂರ ಮಾಡುವುದು ನಮ್ಮ ಮೂಲೋದ್ದೇಶವಾಗಿತ್ತು ಅಂತಾರೆ ಟೆಸ್ಟಮೆಂಟ್ ನ ಸಹ ಸಂಸ್ಥಾಪಕ ನಿಶಾಂತ್ ಮಿತ್ತಲ್. ಆರಂಭದಲ್ಲಿ ಈ ಜರ್ನಲ್ ತನ್ನ ಅಸ್ಥಿತ್ವನನ್ನ ಹುಡುಕಿಕೊಳ್ಳಲು ಭಾರೀ ಸಾಹಸ ಪಡಬೇಕಾಯ್ತು. ಪ್ರಮುಖವಾಗಿ ಕಾಡಿದ್ದು ಇದನ್ನ ಬೆಳೆಸಲು ಅನಿವಾರ್ಯವಾಗಿದ್ದ ಸಂಪನ್ಮೂಲದ ಕೊರತೆ. ಜುಲೈ 2012ರಲ್ಲಿ ಯುನಿವರ್ಸಿಟಿ ಈ ವಿದ್ಯಾರ್ಥಿಗಳ ಸಾಹಸಕ್ಕೆ ಕೊಂಚ ನೆರವು ನೀಡಿದ್ರೂ, ಇವರ ಶಕ್ತಿ ಹೊರಜಗತ್ತಿಗೆ ಹೊರಹೊಮ್ಮಿದ್ದು ಕೆಲವು ರಾಷ್ಟ್ರೀಯ ಪತ್ರಿಕೆಗಳಲ್ಲಿ ಇವ್ರ ಬಗ್ಗೆ ಪ್ರಕಟವಾದ ಬಳಿಕ. ಅಲ್ಲಿಂದ ದೊಡ್ಡ ಮಟ್ಟದ ಪ್ರಚಾರ ಪಡೆದ ಟೆಸ್ಟಮೆಂಟ್ ಮುನ್ನುಗ್ಗ ತೊಡಗಿತು. ಈ ಹಂತದಲ್ಲಿ ಇವರ ತಂಡವು ಮುಂದಿನ ದಿನಗಳಲ್ಲಿ ಹೊಸ ಬ್ಯುಸಿನೆಸ್ ಬಗ್ಗೆ ಯೋಚಿಸಿದ್ರೂ ಟೆಸ್ಟಮೆಂಟನ್ನೇ ಇನ್ನಷ್ಟೇ ಪರಿಣಾಮಕಾರಿಯಾಗಿ ಬೆಳೆಸಲು ನಿರ್ಧರಿಸಿತು ಇವರ ತಂಡ. ವಿಶೇಷ ಅಂದ್ರೆ ಈ ತಂಡದಲ್ಲಿರುವ ಕಂಪನಿಯ ಸಹಸಂಸ್ಥಾಪಕರಾದ ಅವಿನಾಶ್ ಕನ್ಹಾ, ಕುಮಾರ್ ಸಂಭವ್ ಐಪಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಸ್ಟುಡೆಂಟ್ಸ್ ..

image


ಸರಿಯಾದ ದಾರಿಗೆ ಬರುವವರೆಗೂ ಪ್ರಯತ್ನವಿರಲಿ..

ಯುನಿವರ್ಸಿಯ ಜರ್ನಲ್ ಆಗಿ ಹುಟ್ಟಿಕೊಂಡ ಟೆಸ್ಟಿಮೆಂಟ್ ಆರಂಭದಿಂದಲೂ ತನ್ನೊಳಗೇ ವಿವಿಧ ಪ್ರಯೋಗಗಳಿಗೆ ಒಗ್ಗಿಕೊಂಡಿತು. ನಂತ್ರವಷ್ಟೇ ಮಾಧ್ಯಮ ಹಾಗೂ ಮಾರುಕಟ್ಟೆಯಲ್ಲಿರುವ ಅವಕಾಶಗಳ ಬಗ್ಗೆ ಯೋಚನೆ ನಡೆಸಲು ಶುರುಮಾಡಿತು. “ ನಾವು ಸಾಗುತ್ತಿದ್ದ ಹಾದಿ ಅತ್ಯಂತ ಕಠಿಣವಾಗಿದ್ದಾದ್ರೂ ನಮ್ಮ ಪ್ರಯಾಣ ಮುಂದೊಂದು ದಿನ ಉತ್ತಮ ಫಲ ಕೊಟ್ಟೇ ಕೊಡುತ್ತದೆ ಅಂತ ನಂಬಿದ್ದೆವು. ಆ ನಂಬಿಕೆಯಿಂದಲೇ ನಾವಿವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದ್ದೇವೆ. ಕೇವಲ 12 ತಿಂಗಳುಗಳಲ್ಲೇ ಮಿಲಿಯನ್ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ನೆಟ್ ವರ್ಕ್ ಆಗಿ ಬೆಳೆದಿದ್ದೇವೆ” ಅಂತ ನಿತೀಶ್ ವಿವರಿಸುತ್ತಾರೆ. ಇನ್ನು ಕಾಲಕ್ರಮೇಣ ಮಾರುಕಟ್ಟೆಯ ನಡೆಗಳಿಗೆ ಹೊಂದಿಕೊಂಡ ಟೆಸ್ಟಮೆಂಟ್ ಪ್ರಬಲವಾಗಿ ಬೆಳೆದಿದ್ದು ವಿಶೇಷ.

ಝೀರೋದಿಂದ ಕೋಟಿ ರೂಪಾಯಿ ಆದಾಯ..

ಟೆಸ್ಟಮೆಂಟ್ ನಲ್ಲಿ ಈಗಾಗಲೇ 60 ಮಂದಿ ಉದ್ಯೋಗಳು ದೇಶದ 10 ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪರಿಶ್ರಮದ ಫಲವಾಗಿ ವಿದ್ಯಾರ್ಥಿಗಳ ಈ ಕಂಪನಿ ಕಳೆದೊಂದು ವರ್ಷದಲ್ಲಿ ಶೇಕಡಾ 400ರಷ್ಟು ಪ್ರಗತಿ ಸಾಧಿಸಿರೋದು ವಿಶೇಷ. “ ಕಳೆದ ಆರ್ಥಿಕ ವರ್ಷದಲ್ಲಿ 1.2 ಕೋಟಿ ರೂಪಾಯಿ ಆದಾಯವನ್ನ ಟೆಸ್ಟಮೆಂಟ್ ಗಳಿಸಿದೆ. ಈ ಸ್ಟಾರ್ಟ್ ಅಪ್ ಪ್ರತೀ ಪ್ರಾಜೆಕ್ಟ್ ಗೂ ಶೇಕಡಾ 20ರಷ್ಟು ಶುಲ್ಕ ವಿಧಿಸುತ್ತದೆ. ಈಗಾಗಲೇ ನಮ್ಮ ಕಂಪನಿ ಫೋರ್ಡ್, ಜನರಲ್ ಮೋಟರ್ಸ್, ಮಾರುತಿ ಸುಜುಕಿ, ಯುಬಿಎಂ, ಮೆಸ್ಸಿಗಳಂತ ಕಂಪನಿಗಳಿ ಸರ್ವೀಸ್ ನೀಡಿದೆ. ಅಲ್ಲದೆ ಉಬರ್, ಕ್ವಿಕರ್, ಟ್ರಿಪ್ಡಾ, ಅರ್ಬನ್ ಕ್ಲಾಪ್, ಸ್ವಜಲ್ ಹಾಗೂ ಜಿಎಂಎಎಸ್ ನಂತಹ ಕಂಪನಿಗಳೊಂದಿಗೆ ಕೈಜೋಡಿಸಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ನೆರವಾಗುವ ನಿಟ್ಟಿನಲ್ಲಿ ಭವಿಷ್ಯದ ತಂತ್ರಜ್ಞಾನದ ಬಗ್ಗೆ ಯೋಚಿಸಲಾಗುತ್ತಿದೆ” ಅಂತ ನಿಶಾಂತ್ ತಮ್ಮ ಕಂಪನಿಯ ಸಾಧನೆಯ ಬಗ್ಗೆ ವಿವರಿಸುತ್ತಾರೆ.

ಇದಿಷ್ಟು ಸಾಧನೆ ಮಾಡಿರುವ ಟೆಸ್ಟಮಂಟ್ ಭವಿಷ್ಯ ಹಾದಿಯ ಬಗ್ಗೆಯೂ ಸ್ಪಷ್ಟವಾದ ಪರಿಕಲ್ಪನೆ ಹೊಂದಿದೆ. 2016-17ರ ಅಂತ್ಯದ ಒಳಗೆ 5 ಕೋಟಿ ರೂಪಾಯಿ ಆದಾಯ ಗಳಿಸುವ ಲೆಕ್ಕಾಚಾರದಲ್ಲಿದೆ. 20 ನಗರಗಳಲ್ಲಿ 500ಕ್ಕೂ ಹೆಚ್ಚು ನೌಕರರನ್ನ ಹೊಂದುವುದು ಈ ಕಂಪನಿಯ ಪ್ರಮುಖ ಗುರಿಯಾಗಿದೆ. ಸದ್ಯ 90 ಶೇಕಡದಷ್ಟು ನೌಕರರನ್ನ ಪಾರ್ಟ್ ಟೈಂ ಆಗಿ ಈ ಕಂಪನಿ ಹೊಂದಿದೆ. ಜೊತೆಗೆ ಹೊಸ ತಲೆಮಾರಿನ ಹೊಸ ಟೆಕ್ನಾಲಜಿ ನಿರೀಕ್ಷೆಯಲ್ಲಿ ಈ ಕಂಪನಿ ಇದೆ.

ಇನ್ನು ಟೆಸ್ಟಮೆಂಟ್ ನಂತಹ ಕಂಪನಿಗಳನ್ನ ಶುರುಮಾಡಬೇಕಾದ್ರೆ ಆರ್ಥಿಕ ಸಂಪನ್ಮೂಲದ ಬಗ್ಗೆ ಸ್ಪಷ್ಟ ಪರಿಜ್ಞಾನ ಇರಬೇಕು ಅನ್ನೋದು ನಿತೀಶ್ ವಾದ. 1999ರಿಂದ 2007ರ ನಡುವೆ ಗುರುತಿಸಲ್ಪಟ್ಟ ಸುಮಾರು 900 ಕಂಪನಿಗಳು ತಮ್ಮ ಭವಿಷ್ಯದ ಹಾಗೂ ಸದ್ಯದ ಮೂಲ ಬಂಡವಾಳದ ಲೆಕ್ಕಾಚಾರಗಳನ್ನ ಹಾಕಿರುವುದರಿಂದಲೇ ಗಟ್ಟಿಯಾಗಿ ಮಾರುಕಟ್ಟೆಯಲ್ಲಿ ತಳವೂರಿವೆ ಅಂತಾರೆ ನಿತೀಶ್. ಹೀಗೆ ವಿದ್ಯಾರ್ಥಿಗಳ ನಡುವೆಯೇ ಹುಟ್ಟಿಕೊಂಡ ಟೆಸ್ಟಮೆಂಟ್ ಕಂಪನಿ ಇದೀಗ ವಿದ್ಯಾರ್ಥಿಗಳಿಗೇ ಆಸರೆಯಾಗಿ ಕೋಟಿ ಕೋಟಿ ರೂಪಾಯಿಗಳ ಆದಾಯ ಗಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ..

ಲೇಖಕರು – ಜೈವರ್ಧನ್

ಅನುವಾದ - ಬಿ ಆರ್ ಪಿ

ಇದನ್ನು ಓದಿ

ಪಿಡ್ಜಾ ಐಸ್‍ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್!!!

ಉರಿವ ಕುಲುಮೆಯಲ್ಲಿ ಬೆಂದು ನಳನಳಿಸುವ ಆಯುಧವಾದ ಖಡಕ್ ಆಫೀಸರ್ ರವಿ.ಡಿ ಚೆನ್ನಣ್ಣನವರ್

ಹೆಲ್ಮೆಟ್ ಧರಿಸದಿದ್ರೆ ಬೈಕ್ ಸ್ಟಾರ್ಟ್​ ಆಗಲ್ಲ..!