ಸಾಫ್ಟ್​​ವೇರ್ ಎಂಜಿನಿಯರ್ ಕೈಯಲ್ಲರುಳುತ್ತಿವೆ ಸುಂದರ ಆಭರಣಗಳು

ನಿನಾದ

ಸಾಫ್ಟ್​​ವೇರ್ ಎಂಜಿನಿಯರ್ ಕೈಯಲ್ಲರುಳುತ್ತಿವೆ ಸುಂದರ ಆಭರಣಗಳು

Tuesday December 01, 2015,

3 min Read

image


ಪ್ರತಿಯೊಬ್ಬರಲ್ಲೂ ಒಂದೊಂದು ಕಲೇ ಇದ್ದೇ ಇರುತ್ತೆ. ಕೆಲವರು ತಮ್ಮಲ್ಲಿನ ಕಲೆಯನ್ನು ಗುರುತಿಸಿಕೊಂಡು ಅದಕ್ಕೊಂದು ರೂಪ ಕೊಟ್ರೆ ಇನ್ನು ಕೆಲವರು ಇದು ನಮ್ಮಂಥವರಿಗಲ್ಲ ಅಂತಾ ಸುಮ್ಮನಾಗುತ್ತಾರೆ. ಆದ್ರೆ ಕಲೆಯನ್ನು ಸರಿಯಾಗಿ ಬಳಸಿಕೊಂಡ್ರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಉದಾಹರಣೆ ಯಲಹಂಕದ ನ್ಯೂ ಟೌನ್ ನಿವಾಸಿ ಸ್ಮಿತಾ ವೃಷಭರಾಜು.

image


ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಸ್ಮಿತಾ ಅವರಿಗೆ ಶಾಲಾ ದಿನಗಳಿಂದಲೂ ಫ್ಯಾಶನ್ ಜ್ಯುವೆಲ್ಲರಿಗಳು ಅಂದ್ರೆ ತುಂಬಾನೇ ಇಷ್ಟವಂತೆ. ಅದರಲ್ಲೂ ಚಿತ್ರಕಲಾ ಪರಿಷತ್ ಮುಂತಾದೆಡೆ ನಡೆಯುತ್ತಿದ್ದ ವಸ್ತು ಪ್ರದರ್ಶನಗಳಿಗೆ ಸ್ಮಿತ ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಅಲ್ಲಿರುತ್ತಿದ್ದ ವಿವಿಧ ವಿನ್ಯಾಸಗಳ ಆಭರಣಗಳನ್ನು ನೋಡಿ ನಾನು ಹೀಗೆ ಮಾಡಿದ್ರೆ ಚೆನ್ನಾಗಿರುತ್ತಲ್ವಾ ಅಂತಾ ಲೆಕ್ಕಾಚಾರ ಹಾಕುತ್ತಿದ್ರು. ಒಂದು ದಿನ ಆ ಪ್ರಯತ್ನಕ್ಕೆ ಕೈ ಹಾಕಿಯೇ ಬಿಟ್ರು. ಅಕ್ಕ ಶೃತಿ ಜೊತೆ ಸೇರಿ ಮೊದಲಿಗೆ ವುಡನ್ ಹಾಗೂ ಉಲನ್ ನೆಕ್ಲೆಸ್ ತಯಾರಿಸಿದ್ರಂತೆ. ಅವರು ತಯಾರಿಸಿದ ಈಯರ್​​​ ರಿಂಗ್​​ಗೆ ಆಫೀಸ್ ನಲ್ಲಿ ಉತ್ತಮ ಪಶ್ರಂಸೆ ಕೂಡ ಸಿಕ್ಕಿತ್ತು. ಅಂದಿನಿಂದ ವುಡನ್ , ಪೇಪರ್ ಮುಂತಾದವುಗಳಿಂದ ತಾವೇ ಆಭರಣಗಳನ್ನು ತಯಾರಿಸುವುದನ್ನು ಆರಂಭಿಸಿದ್ರು ಸ್ಮಿತಾ. ದಿನ ಕಳೆದಂತೆ ಅವರ ಸಹೋದ್ಯೋಗಿಗಳಿಂದ ಬೇಡಿಕೆ ಹೆಚ್ಚಿದರಿಂದ ಅವರಿಗೂ ಮಾಡಿ ಕೊಡಲು ಆರಂಭಿಸಿದ್ರು ಸ್ಮಿತಾ. ಬಳಿಕ ಆಭರಣ ತಯಾರಿಕೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡಲು ಆರಂಭಿಸಿದ್ರು. ಟೆರಕೋಟಾ, ಮೆಟಲ್ , ಕ್ರಿಸ್ಟಲ್, ಗ್ಲಾಸ್ ಹೀಗೆ ವಿವಿಧ ವಿನ್ಯಾಸಗಳ ಆಭರಣಗಳನ್ನು ತಯಾರಿಸಲು ಪ್ರಾರಂಭಿಸಿದ್ರು.

image


ಬೇಡಿಕೆ ಹೆಚ್ಚಾದಂತೆ ಸ್ಮಿತ ನಾನೇ ಇದಕ್ಕೊಂದು ಸುಂದರ ರೂಪ ಯಾಕೆ ನೀಡಬಾರದು ಅಂದುಕೊಂಡು 2012ರಲ್ಲಿ ಕಲಾಕೃತಿ ಅನ್ನುವ ಆನ್ ಲೈನ್ ಸ್ಟೋರ್ ಆರಂಭಿಸಿದ್ರು. ತಮ್ಮ ಕೆಲಸದ ಜೊತೆಗೆ ಬಿಡುವಿನ ವೇಳೆಯಲ್ಲಿ ಗ್ರಾಹಕರ ಬೇಡಿಕೆಗಳಿಗ ತಕ್ಕಂತೆ ಆಭರಣಗಳನ್ನು ತಯಾರಿಸಲು ಶುರು ಮಾಡಿಕೊಂಡ್ರು. ಮೊದಲಿಗೆ ತಮ್ಮ ಕಲೆಗೆ ಪ್ರಚಾರ ಕೊಡೋದು ಕಷ್ಟವಾದ್ರೂ ನಿಧಾನವಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕತು. ಇನ್ನು ಫೇಸ್ ಬುಕ್ ನಲ್ಲಿ ಕಲಾಕೃತಿ ಎಂಬ ಪೇಜ್ ಕ್ರಿಯೆಟ್ ಮಾಡಿದ್ರು. ಇದರಿಂದಾಗಿ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು .

image


ಇವತ್ತು ಸ್ಮಿತ ನಾನಾ ವಿನ್ಯಾಸದ ನೆಕ್ಲೇಸ್, ಕಿವಿಯೋಲೆಗಳು ಸೆಟ್ ಗಳು ಹೀಗೆ ಗ್ರಾಹಕರು ಯಾವ ರೀತಿಯ ಆಭರಣ ಬಯಸುತ್ತಾರೋ ಅದರಂತೆ ಆಭರಣಗಳನ್ನು ತಯಾರಿಸುತ್ತಾರೆ. ಅಚ್ಚರಿ ಸಂಗತಿಯಂದ್ರೆ ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿರೋದು ಸ್ಮಿತ ಒಬ್ಬರೇ. ಹೆತ್ತವರ ಬೆಂಬಲ ಇರೋದರಿಂದ ನಾನು ಇದನ್ನೆಲ್ಲಾ ಮಾಡೋದಕ್ಕೆ ಸಾಧ್ಯವಾಯ್ತು ಅಂತಾರೆ ಸ್ಮಿತ. ಸಾಫ್ಟ್​​​ವೇರ್ ಎಂಜಿನಿಯರ್ ಆಗಿರೋದರಿಂದ ಸ್ಮಿತ ಅವರಿಗೆ ರಜೆಯ ದಿನಗಳಲ್ಲಿ ಮಾತ್ರ ಸಮಯ ಸಿಗೋದರಿಂದ ಆಗ ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದ್ರೂ ಆದ್ರೆ ಆದಾಯಕ್ಕಿಂತ ನನಗೆ ಇದನ್ನು ಮಾಡೋದರಿಂದ ಖುಷಿ ಸಿಗುತ್ತೆ ಜೊತೆಗೆ ಮನಸ್ಸು ಕೂಡ ರಿಲ್ಯಾಕ್ಸ್ ಆಗುತ್ತೆ ಅಂತಾರೆ ಸ್ಮಿತ. ಅಲ್ಲದೇ ಇದು ಸ್ಮಿತ ಜೀವನಕ್ಕೆ ಬಹು ದೊಡ್ಡ ತಿರುವು ಕೊಟ್ಟಿದೆಯಂತೆ.

image


ಇನ್ನು ಕೆಲವರಿಗೆ ಇಂತಹ ಆಭರಣಗಳನ್ನು ಮಾಡೋದು ಗೊತ್ತಿರುತ್ತೆ.ಆದ್ರೆ ಮಾರ್ಕೆಟಿಂಗ್ ಮಾಡೋದು ಹೇಗೆ ಅಂತಾ ಗೊತ್ತಿರಲ್ಲ. ಆದ್ರೆ ಅಂತಹವರಿಗೊಂದು ಸ್ಮಿತ ಸಲಹೆ ನೀಡುತ್ತಾರೆ. ಯಾವಾಗ ನಾವು ನಮ್ಮ ಕಲೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇವೋ ಆಗ ಜನ ಇಷ್ಟಪಡುತ್ತಾರೆ.ಒಂದೇ ತರಹದ ಫ್ಯಾಶನ್ ಜನ ಯಾವಾಗಲೂ ಇಷ್ಟಪಡೋದಿಲ್ಲ. ನಾನೀಗ ಗ್ಲಾಸ್ ಹಾಗೂ ಮೆಟಲ್ ನಲ್ಲಿ ಹೊಸ ಮಾದರಿ ಆಭರಣಗಳನ್ನು ಮಾಡುವ ಪ್ರಯತ್ನಕ್ಕಿಳಿದಿದ್ದೇನೆ. ಜನರಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಗುತ್ತಿದೆ ಅಂತಾರೆ ಸ್ಮಿತ.

image


ಸ್ಮಿತ ಬೆಂಗಳೂರಿನ ವಿವಿಧೆಡೆ ನಡೆಯೋ ಕಲಾಪ್ರದರ್ಶನಗಳಿಗೆ ತೆರಳಿ ಅಲ್ಲಿ ತಾವು ತಯಾರಿಸಿದ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡುತ್ತಾರೆ. ಇದರಿಂದ ಅವರ ಕಲೆಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆಯಂತೆ. ಇನ್ನು ಫೇಸ್ ಬುಕ್ ಮೂಲಕವೂ ಗ್ರಾಹಕರು ಆಭರಣಗಳನ್ನು ಆರ್ಡರ್ ಮಾಡಬಹುದು. ಹತ್ತು ದಿನದ ಒಳಗಾಗಿ ಸ್ಮಿತ ನಿಮ್ಮ ನೆಚ್ಚಿನ ಆಭರಣಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.ಇನ್ನು ಬೇರೆ ಕಡೆಗೆ ಹೋಲಿಸಿದ್ರೆ ಕಲಾಕೃತಿಯಲ್ಲಿ ಸಿಗುವ ಆಭರಣಗಳು ತುಂಬಾನೇ ಅಗ್ಗವಾಗಿದೆ ಅಂತಾರೆ ಆಭರಣ ಪ್ರಿಯೆ ದೀಪಾ. ಇಲ್ಲಿ 35 ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿವರೆಗಿನ ಆಭರಣಗಳು ಲಭ್ಯವಿದೆ.

ನಾವು ಮಾಡುವ ಕೆಲಸದಲ್ಲಿ ನಮಗೆ ಆಸಕ್ತಿಯಿದ್ರೆ ಸಮಯವನ್ನು ಹೇಗಾದ್ರೂ ಮಾಡಿ ಹೊಂದಿಸಿಕೊಳ್ಳುತ್ತೇವೆ ಅನ್ನುವ ಸ್ಮಿತ ತಮ್ಮ ಸಂಸ್ಥೆಯನ್ನು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಪ್ಲಾನ್ ನಲ್ಲಿದ್ದಾರೆ. ಜೊತೆಗೆ ಇನ್ನೊಂದಷ್ಟು ಪ್ರಯೋಗಗಳನ್ನು ಮಾಡುವ ತುಡಿತದಲ್ಲಿದ್ದಾರೆ. ಇನ್ನು ನೀವೇನಾದ್ರೂ ಸ್ಮಿತ ಅವರಿಂದ ಫ್ಯಾಶನ್ ಜ್ಯುವೆಲ್ಲರಿಗಳನ್ನು ಕೊಳ್ಳಬೇಕು ಅಂತಿದ್ರೆ ಫೇಸ್ ಬುಕ್ ನಲ್ಲಿರುವ ಕಲಾಕೃತಿ (www.Facebook.com/mykalakruthi) ಫೇಜ್ ಮೂಲಕ ಆರ್ಡರ್ ಮಾಡಬಹುದು. ಇಲ್ಲಾ 9449386596ಗೆ ಕಾಲ್ ಮಾಡಿಯೂ ನಿಮ್ಮಿಷ್ಟದ ಆಭರಣಗಳನ್ನು ಸ್ಮಿತ ಅವರಿಂದ ಖರೀದಿಸಬಹುದು.