ನಿಮ್ಮ ಬ್ಯುಟಿಫುಲ್ ಲುಕ್ ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !

ಟೀಮ್​ ವೈ.ಎಸ್​.ಕನ್ನಡ

ನಿಮ್ಮ ಬ್ಯುಟಿಫುಲ್ ಲುಕ್ ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !

Sunday March 06, 2016,

3 min Read

ಹೆಣ್ಣಿಗೆ ಸೀರೆನೇ ಅಂದ ಅಂತಾರೆ.. ಹೆಣ್ಣಿಗೆ ಆಕೆ ತೊಡುವ ಉಡುಪುಗಳು ಆಕೆಯ ವ್ಯಕ್ತಿತ್ವವನ್ನೂ ಬಿಂಬಿಸುತ್ತವೆ. ಇನ್ನು ಒಂದು ಹುಡುಗಿ ಡೆಸ್ಸಿಂಗ್ ಮಾಡ್ಕೊಂಡು ಹೊರಡೋದು ಅಂದ್ರೆ ಅದು ಸುಲಭದ ಮಾತಲ್ಲ. ಇನ್ನು ಡೆಸ್ಸಿಂಗ್ ಗೆ ಹುಡುಗಿಯರು ಕೊಡುವ ಮಹತ್ವ ಹಾಗೂ ಅವರು ವಹಿಸುವ ಕಾಳಜಿ ಅಷ್ಟಿಷ್ಟಲ್ಲ. ಕೆಲವರು ತಮ್ಮ ಡ್ರೆಸ್ ಹಾಗೂ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಇನ್ನಿಲ್ಲದ ಗಮನ ಕೊಡುತ್ತಾರೆ. ತಮ್ಮ ಡ್ರೆಸ್ಸಿಂಗ್ ಹೇಗಿರಬೇಕು, ಎಲ್ಲಿಗಾದ್ರೂ ಹೊರಡುವಾಗ ತಾವು ಹೇಗೆ ರೆಡಿಯಾಗಿರಬೇಕು ಅಂತ ಇತರರಲ್ಲಿ ಚರ್ಚಿಸುವುದು ಸಾಮಾನ್ಯ. ಯಾಕಂದ್ರೆ ಪ್ರತೀ ಹುಡುಗಿಯ ಸ್ಟೈಲ್ ಆಕೆಯನ್ನ ಪ್ರತಿನಿಧಿಸುತ್ತದೆ. ಅದು ಸೌಂದರ್ಯ ಹಾಗೂ ವ್ಯಕ್ತಿತ್ವದ ಪ್ರತೀಕದಂತಿರುವುದರಿಂದಲೇ ಅದಕ್ಕೆ ಇನ್ನಿಲ್ಲದ ಮಹತ್ವ. ಹೀಗಾಗಿ ಸುಂದರವಾಗಿ ಕಾಣಿಸಲು ಇಚ್ಛಿಸುವ ಮಹಿಳೆಯರಿಗೆ ಹಾಗೂ ತಮ್ಮ ಉಡುಪು ಕೊಡಬಹುದಾದ ಟೆನ್ಶನ್ ಗಳಿಂದ ಹೊರತರಲು ಇಲ್ಲಿದೆ ಕೆಲವು ಟಿಪ್ಸ್ ಗಳು..

ಇದನ್ನು ಓದಿ: ಸ್ಮಾರ್ಟ್ ಜಮಾನದ ಸ್ಮಾರ್ಟ್ ಸ್ಕೂಟರ್ ಎಸ್340

ಒಪ್ಪವಾಗಿ ಜೋಡಿಸುವುದಕ್ಕೆ ಮೊದಲ ಆದ್ಯತೆ

ಹೆಣ್ಣು ಮಕ್ಕಳ ಬಟ್ಟೆ ಸಂಗ್ರಹ ಅಂದ್ರೆ ಅದು ಅಗಾಧವಾಗಿರುತ್ತದೆ. ಕಬೋರ್ಡ್ ನಲ್ಲಿ ಅವರಿಗೆ ಬೇಕಾಗ ಎಲ್ಲಾ ಮಾದರಿಯ ಬಟ್ಟೆಗಳನ್ನೂ ಅಲ್ಲಿ ತುರುಕಿರುತ್ತಾರೆ. ಅದು ಫಿಟ್ ಆಗುತ್ತೋ ಇಲ್ಲವೋ ಅನ್ನುವುದರ ಬಗ್ಗೆ ಕಿಂಚಿತ್ತು ಯೋಚಿಸದ ಅವರು ಸಾಮಾನ್ಯ ತಪ್ಪು ಅನ್ನುವಂತೆ ಅವರು ತಮ್ಮ ಬಟ್ಟೆಗಳನ್ನ ಒಪ್ಪ ಮಾಡಿ ಇಡುವುದೇ ಇಲ್ಲ. ಆದ್ರೆ ಇದಕ್ಕೊಂದು ಉತ್ತಮ ಟಚ್ ಸಿಗಬೇಕು ಅಂದ್ರೆ ನೀವು ಮೊದಲು ಯಾವ ಟೇಸ್ಟ್ ಹೊಂದಿದ್ದೀರಿ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ವೆಸ್ಟರ್ಸ್ ಸ್ಟೈಲ್ ಅಥವಾ ದೇಸಿ ಇವುಗಳಲ್ಲಿ ಯಾವುದು ಹೆಚ್ಚು ಸೂಕ್ತ ಅನ್ನೋದನ್ನನಿರ್ಧರಿಸಿಕೊಳ್ಳಿ. ಇನ್ನು ನೀವು ಧರಿಸುವ ಬಟ್ಟೆ ಜಾಳುಜಾಳಾಗಿರದೆ ಸಂದರ್ಭಕ್ಕೆ ತಕ್ಕಂತೆ ಫಿಟ್ ಆಗುವ ಬಟ್ಟೆಗಳ ಆಯ್ಕೆಗೆ ಹೆಚ್ಚು ಗಮನಕೊಡಿ.

image


ಅತಿಯಾದ ಆಭರಣಗಳ ಗೀಳಿನಿಂದ ಹೊರತಾಗಿರಿ..

ಬಟ್ಟೆ ಹಾಗೂ ನಿಮ್ಮ ದೇಹಕ್ಕೆ ಒಪ್ಪುವ ಆಭರಣಗಳ ಬಗ್ಗೆ ನಿಮಗೆ ಸೂಕ್ಷ್ಮವಾದ ಅರಿವಿರಲಿ. ಯಾಕಂದ್ರೆ ಅದೆಷ್ಟೋ ಬಾರಿ ನೀವು ಇಚ್ಛಿಸುವ ಆಭರಣಗಳು ನಿಮಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಹೀಗಾಗಿ ನಿಮ್ಮ ಚರ್ಮದ ಬಣ್ಣಕ್ಕೆ ತಕ್ಕಂತೆ ಆಭರಣಗಳ ಆಯ್ಕೆ ಇದ್ದರೆ ನಿಮ್ಮ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಬಹುದು. ಆಭರಣಗಳ ಆಯ್ಕೆಗೆ ಅನುಭವಿಗಳ ಸಲಹೆ ಹೊಂದುವುದು ಹೆಚ್ಚು ಸೂಕ್ತ.

ಮೂಡ್ ಗೆ ತಕ್ಕಂತೆ ಡ್ರೆಸ್ಸಿಂಗ್ ಮಾಡದಿರಿ..

ಹುಡುಗಿಯರು ಭಾವನಾತ್ಮಕತೆಯನ್ನ ಹೆಚ್ಚು ಹೊಂದಿರುತ್ತಾರೆ. ಅವರ ಪ್ರತಿಯೊಂದು ಹಂತಗಳು ಭಾವನೆಗಳೊಂದಿಗೇ ಬೆಸೆದುಕೊಂಡಿರುತ್ತೆ. ಆದ್ರೆ ನಿಮ್ಮ ಉಡುಗೆ ತೊಡುಗೆಗಳು ಭಾವನೆಗಳ ಮೇಲೆ ನಿಂತಿದ್ರೆ ಅದು ಉತ್ತಮ ಗುಣವಲ್ಲ. ಆ ದಿನ ನೀವು ಖುಷಿಯಲ್ಲಿರುತ್ತಿರೋ ಬೇಸರದಲ್ಲಿ ಇರುತ್ತೀರೋ ಅನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ. ಯಾಕಂದ್ರೆ ನೀವು ಅದೆಷ್ಟೋ ಬಾರಿ ಕೇಂದ್ರ ಬಿಂದುವಾಗಿರುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಮೂಡ್ ಮೇಲೆ ನಿಮ್ಮ ಉಡುಗೆ ನಿರ್ಧಾರವಾಗದಿರಲಿ.

ಒಂದೇ ರೀತಿ ಬಣ್ಣಗಳ ಆಯ್ಕೆ ನಿಮ್ಮದಾಗದೇ ಇರಲಿ..

ಹುಡುಗಿಯರು ಆಭರಣ, ಉಡುಗೆತೊಡುಗೆಗಳ ಪ್ರಿಯರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗೇ ಅದನ್ನ ಆಯ್ಕೆ ಮಾಡಿಕೊಳ್ಳುವಾಗಲೂ ಯಾವುದೇ ರಾಜಿಗೆ ಒಳಗಾಗುವುದಿಲ್ಲ. ಆದ್ರೆ ಕೆಲವು ಬಾರಿ ಕೇವಲ ಕೆಲವೇ ಆಯ್ಕೆಗೆ ಸೀಮಿತವಾಗಿ ತಮ್ಮತನವನ್ನ ಕಳೆದುಕೊಳ್ಳುತ್ತಾರೆ. ತಮಗಿಷ್ಟದ ಬಣ್ಣ ಎನ್ನುವ ಒಂದೇ ಕಾರಣಕ್ಕೆ ಪ್ರತೀ ಬಾರಿಯೂ ಒಂದೇ ತೆರನಾದ ಬಣ್ಣಕ್ಕೆ ಜೋತು ಬೀಳುತ್ತಾರೆ. ಅದು ಅವರ ಇಮೇಜನ್ನ ಕುಗ್ಗಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅದ್ರ ಬದಲು ಮಾಮೂಲಿಯಾಗಿ ಧರಿಸುವ ಪ್ಯಾಂಟ್ ನ ಮಾದರಿಯಲ್ಲೇ ವಿವಿಧ ಬಣ್ಣಗಳನ್ನ ಆಯ್ಕೆ ಮಾಡಿಕೊಳ್ಳಿ.. ಬೇರೆ ಬೇರೆ ಬಣ್ಣಗಳನ್ನ ಟ್ರೈ ಮಾಡುವುದರಿಂದ ಚೇಂಜ್ ಸಹಜವಾಗೇ ನಿಮ್ಮನ್ನ ಹಿಂಬಾಲಿಸುತ್ತದೆ.

ಹೊಂದಿಕೆಯಾಗದ ಮೇಕಪ್ ನಿಂದ ದೂರವಿರಿ..

ಬಟ್ಟೆ, ಬಣ್ಣಗಳ ಆಯ್ಕೆಗಳು ಎಷ್ಟು ಮುಖ್ಯನೋ ಹಾಗೇ ನೀವು ಎಲ್ಲಿಗೆ ತಯಾರಾಗಿ ಹೋಗುವಾಗ್ಲೂ ಮೇಕಪ್ ಗಳ ಕಡೆ ಗಮನ ನೀಡುವುದು ಅನಿವಾರ್ಯ. ನಿಮ್ಮ ಮೇಕಪ್ ನಿಮ್ಮನ್ನ ಹೈಲೈಟ್ ಮಾಡುವ ಜೊತೆಗೆ ನಿಮ್ಮನ್ನೂ ಅದೂ ನಿರ್ಧರಿಸುತ್ತದೆ. ಉದಾಹರಣೆಗೆ ಗಾಢ ಬೆಳಕಿರುವ ರೆಸ್ಟೋರೆಂಟ್ ಗಳಿಗೆ ಪಾರ್ಟಿಗೆ ನೀವು ತೆರಳುವುದಾದರೆ, ತೆಳುವಾದ ಮೇಕಪ್ ಇರಲಿ. ಅದಕ್ಕೆ ಒಪ್ಪುವಂತೆ ಚಾಕಲೇಟ್ ಬಣ್ಣದ ಲಿಪ್ಸ್ ಸ್ಟಿಕ್ ಹಾಕಿದ್ರೆ ಉತ್ತಮ.

ಹೀಗೆ ಸೌಂದರ್ಯದ ಆರಾಧಕರಾಗಿರುವ ಹೆಣ್ಣುಮಕ್ಕಳು ಉಡುಗೆ ತೊಡುಗೆಗಳ ಜೊತೆಗೆ ಮೇಕಪ್ ಹಾಗೂ ಇತರೆ ಆಯ್ಕೆಗಳ ಕಡೆಗೂ ಗಮನ ಕೊಡುವುದು ಅಗತ್ಯ. ಯಾಕಂದ್ರೆ ಅದು ನಿಮ್ಮ ವ್ಯಕ್ತತ್ವವನ್ನ ನಿರ್ಧರಿಸುತ್ತದೆ ಅನ್ನೋದು ಸತ್ಯ.

ಲೇಖಕರು – ನಿಧಿ ಅಗರ್ವಾಲ್

ಅನುವಾದ – ಸ್ವಾತಿ , ಉಜಿರೆ

ಇದನ್ನು ಓದಿ:

1. ಕೈಗಳೇ ಇಲ್ಲದ ಕಲಾವಿದೆಯ ಕುಂಚದಲ್ಲಿ ಅರಳಿದ ಕಲೆ...

2. ಬದುಕನ್ನೇ ಸಿಹಿ ಮಾಡಿದ ಕೇಕ್ ಬ್ಯುಸಿನೆಸ್...

3. ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!