ಸೆಲೆಬ್ರೆಟಿಗಳ ನೆಚ್ಚಿನ ತಾಣ ಶಿವಣ್ಣ ಗುಲ್ಕನ್ ಸೆಂಟರ್

ನಿನಾದ

ಸೆಲೆಬ್ರೆಟಿಗಳ ನೆಚ್ಚಿನ ತಾಣ ಶಿವಣ್ಣ ಗುಲ್ಕನ್ ಸೆಂಟರ್

Sunday March 13, 2016,

2 min Read

ಇವತ್ತು ಜನ ಎಲ್ಲದರಲ್ಲೂ ಆಧುನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ತಿನ್ನೋ ಫುಡ್ ಗಳಿಂದ ಹಿಡಿದು ಹಾಕೋ ಬಟ್ಟೆವರೆಗೂ ಎಲ್ಲವೂ ಇವತ್ತು ಪಾಶ್ಚಾತ್ಯ ಪ್ರಭಾವಕ್ಕೊಳಗಾಗಿದೆ. ಅದರಲ್ಲೂ ಫುಡ್ ವಿಚಾರದಲ್ಲಿ ಮನುಷ್ಯರು ತುಂಬಾನೇ ಬದಲಾಗಿದ್ದಾರೆ. ಮನೆಯಲ್ಲಿ ಮಾಡೋ ಅಡುಗೆ ತಿನ್ನೋದು ಅಂದ್ರೆ ಅನೇಕರಿಗೆ ಬೇಸರ. ಹೊರಗಡೆ ಸಿಗೋ ಫಾಸ್ಟ್ ಫುಡ್ ಅಂದ್ರೆ ಅದೇನೋ ವ್ಯಾವೋಹ. ಇವತ್ತಿನ ಈ ಫಾಸ್ಟ್ ಫುಡ್ ಜಮಾನಾದಲ್ಲಿ ಹಳೆಯ ಕೆಲವೊಂದು ತಿಂಡಿ ತಿನಿಸುಗಳ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಅದರಲ್ಲಿ ಗುಲ್ಕನ್ ಅನ್ನೋ ಟೇಸ್ಟಿ ಫುಡ್ ಕೂಡ ಒಂದು.ಆದ್ರೆ ಬೆಂಗಳೂರಿನ ವಿವಿ ಪುರಂನಲ್ಲಿರೋ ಶಿವಣ್ಣ ಗುಲ್ಕನ್ ಸೆಂಟರ್ ಮಾತ್ರ ಇವತ್ತಿನ ವೆರೈಟಿ ವೆರೈಟಿ ಐಸ್ ಕ್ರೀಂಗಳ ನಡುವೆ ಕೂಡ ಅವುಗಳಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದೆ.

image


ಅಂದ್ಹಾಗೆ ಶಿವಣ್ಣ ಗುಲ್ಕನ್ ಸ್ಟೋರ್ ಸುಮಾರು ಎಂಬತ್ತು ವರ್ಷ ಹಳೆಯದಾದು. ದಿವಂಗತ ಶಿವಣ್ಣ ಎಂಬರಿಂದ ಆರಂಭವಾದ ಈ ಗುಲ್ಕನ್ ಸ್ಟೋರ್ ನ್ನು ಈಗ ಅವರ ಮಗ ಲೊಕೇಶ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 80 ವರ್ಷಗಳ ಹಿಂದೆ ಇಲ್ಲಿ ಯಾವ ರೀತಿ ರುಚಿ ರುಚಿಯಾದ ಗುಲ್ಕನ್ ಸಿಗುತ್ತಿದ್ದವೋ ಅದೇ ರೀತಿ ಗುಲ್ಕನ್ ಗಳು ಈಗಲೂ ಸಿಗೋದರಿಂದ ಇಲ್ಲಿ ಗುಲ್ಕನ್ ಸವಿಯೋದಕ್ಕೆ ಜನ ಮುಗಿ ಬೀಳ್ತಾರೆ. ತಮ್ಮ ತಂದೆಯಿಂದ ಗುಲ್ಕನ್ ಮಾಡೋದನ್ನು ಕಲಿತ ಲೊಕೇಶ್ ಇವತ್ತು ಅದರಲ್ಲೇ ವಿವಿಧ ರೀತಿಯ ರುಚಿಗಳನ್ನು ಕಂಡು ಹುಡುಕಿಕೊಂಡಿದ್ದಾರೆ. ಐಸ್ ಕ್ರೀಂ ವಿತ್ ಗುಲ್ಕನ್, ಫ್ರೂಟ್ಸ್ ವಿತ್ ಗುಲ್ಕನ್, ಆಮ್ಲಾ ಗುಲ್ಕನ್, ಅಂಜೂರ ಗುಲ್ಕನ್ ಹೀಗೆ ಅನೇಕ ರೀತಿ ಟೇಸ್ಟಿ ಗುಲ್ಕನ್ ಗಳನ್ನು ಲೊಕೇಶ್ ಅವರು ತಯಾರಿಸುತ್ತಾರೆ. ಇನ್ನು ಗುಲ್ಕನ್ ಗಳನ್ನು ಇವರೇ ಮನೆಯಲ್ಲಿ ರೆಡಿ ಮಾಡೋದರಿಂದ ಇಲ್ಲಿ ಸಿಗುವ ಗುಲ್ಕನ್ ಅತ್ಯಂತ ಹೆಲ್ತಿ ಹಾಗೂ ಟೇಸ್ಟಿ ಆಗಿರುತ್ತೆ ಅಂತಾರೆ ಶಿವಣ್ಣ ಗುಲ್ಕನ್ ಸ್ಟೋರ್ ನ ಖಾಯಂ ಗಿರಾಕಿ ಸುರೇಶ್.

ಇದನ್ನು ಓದಿ: ರೆಮೋ ಅನ್ನುವ ಚಿಟಪಟ ಮಾತಿನ ಸಿಂಗರ್​​...

ಶಿವಣ್ಣ ಗುಲ್ಕನ್ ಸೆಂಟರ್ ನೋಡಿದ್ರೆ ಇದು ಪುಟಾಣಿ ಅಂಗಡಿಯಂತೆ ಕಾಣುತ್ತೆ. ಆದ್ರೆ ಅದರ ಹಿರಿಮೆ ಮಾತ್ರ ಅತ್ಯಂತ ದೊಡ್ಡದು. ಅನೇಕ ಸೆಲೆಬ್ರೆಟಿಗಳು ಶಿವಣ್ಣ ಗುಲ್ಕನ್ ಸೆಂಟರ್ ಗೆ ಆಗಾಗ್ಗೆ ಬರುತ್ತಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಿಹಿಕಹಿ ಚಂದ್ರು, ಗಾಯಕ ಬದ್ರಿಪ್ರಸಾದ್, ಶಾಸಕ ಆರ್ ವಿ ದೇವರಾಜ್, ವಿ. ಸೋಮಣ್ಣ ಮುಂತಾದವರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರಂತೆ. ಗುಲ್ಕನ್ ಜೊತೆಗೆ ಲೊಕೇಶ್ ವಿವಿಧ ರೀತಿಯ ಚಾಟ್ಸ್ ಗಳನ್ನು ಕೂಡ ತಯಾರಿಸುತ್ತಾರೆ. ಮದುವೆ ವಿವಿಧ ಸಮಾರಂಭಗಳಿಗೆ ಸಪ್ಲೈ ಕೂಡ ಮಾಡುತ್ತಾರೆ. ಇಲ್ಲಿ ತಯಾರಾದ ಗುಲ್ಕನ್ ಅಮೇರಿಕಾಕ್ಕೂ ರವಾನೆಯಾಗಿದೆ ಅಂತಾ ಹೆಮ್ಮೆಯಿಂದ ಹೇಳುತ್ತಾರೆ ಲೊಕೇಶ್.

image


ಬೆಳಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಈ ಗುಲ್ಕನ್ ಸೆಂಟರ್ ತೆರೆದಿರುತ್ತೆ. ಅದರಲ್ಲೂ ಸಂಜೆ ವೇಳೆ ಶಿವಣ್ಣ ಗುಲ್ಕನ್ ಸೆಂಟರ್ ಮುಂದೆ ಜನರ ದಂಡೇ ಇರುತ್ತೆ. ಮೂವತ್ತು ರೂಪಾಯಿಯಿಂದ ಹಿಡಿದು ಎಪ್ಪತ್ತು ರೂಪಾಯಿವರೆಗಿನ ವೆರೈಟಿ ವೆರೈಟಿ ಗುಲ್ಕನ್ ಗಳು ಇಲ್ಲಿ ಲಭ್ಯವಿದೆ. ಇದರ ಜೊತೆಗೆ ಸ್ಪೆಷಲ್ ಬಾದಾಮಿ ಚಾಕಲೇಟ್, ಆಮ್ಲಾ ನೆಲ್ಲಿಕಾಯಿ, ವಿವಿಧ ರೀತಿಯ ಮಸಾಲ ಸೋಡಾಗಳು ಇಲ್ಲಿ ಲಭ್ಯವಿದೆ. ನೀವೇನಾದ್ರೂ ಒಮ್ಮೆ ವಿವಿಪುರಂ ಕಡೆ ಭೇಟಿ ಕೊಟ್ರೆ ಶಿವಣ್ಣ ಗುಲ್ಕನ್ ಸೆಂಟರ್ ಗೆ ಭೇಟಿ ಕೊಟ್ಟು ನೋಡಿ ರುಚಿ ರುಚಿಯಾದ ಗುಲ್ಕನ್, ಚಾಟ್ಸ್ ಗಳನ್ನು ಸವಿದು ನೋಡಿ.

ಇದನ್ನು ಓದಿ

1. ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!

2. ಬೆಂಗಳೂರಿನಲ್ಲೊಂದು ದೀವಟಿಗೆ ಗ್ರೂಪ್..!

3. ಸುಮಧುರ ಕಂಠದ ಮನಸ್ಸಿನಲ್ಲಿದೆ ನೂರಾರು ಕನಸು- ಚಿಕ್ಕ ವಯಸ್ಸಿನಲ್ಲೇ ನೂರಾರು ಮಕ್ಕಳಿಗೆ ಆಸರೆ