ಅಂದದ ಉಗುರಿಗೆ ಸುಲಭದ ರೀಮುವರ್ ಟಿಶ್ಯೂ-ಪ್ಯಾಡ್

ವಿಸ್ಮಯ

ಅಂದದ ಉಗುರಿಗೆ ಸುಲಭದ ರೀಮುವರ್ ಟಿಶ್ಯೂ-ಪ್ಯಾಡ್

Friday January 15, 2016,

2 min Read

ಸೌಂದರ್ಯ ಎಂದರೆ ಮುಖದ ಸೌಂದರ್ಯ ಮಾತ್ರವಲ್ಲ. ಬದಲಿಗೆ ದೇಹದ ಎಲ್ಲ ಅಂಗಾಂಗಗಳೂ ಸುಂದರವಾಗಿರುವುದು ಅಷ್ಟೇ ಮುಖ್ಯ. ದೇಹದ ಪ್ರತಿಯೊಂದು ಅಂಗಾಂಗಗಳಿಗೆ ಪ್ರತ್ಯೇಕ ಆರೈಕೆಯ ಅಗತ್ಯವಿರುತ್ತೆ. ಕಾಲಿನಷ್ಟೇ ಕೈಯ ಕಾಳಜಿಯೂ ಮಾಡಬೇಕಾಗುತ್ತದೆ. ಇಂದು ಕೈಯ ಆರೈಕೆಗಾಗಿ ಬೇರೆ ಬೇರೆ ರೀತಿಯ ಮೆನಿಕ್ಯೂರ್‍ಗಳು ಸೆಲೂನ್‍ನಲ್ಲಿವೆ. ಇದರ ಜೊತೆಗೆ ನೈಲ್ ಆರ್ಟ್ ಕೂಡ ಚಾಲ್ತಿಯಲ್ಲಿವೆ. ಸ್ಮೈಲಿ, ಲವ್ ಸಿಂಬಲ್, ಹೂವಿನ ಚಿತ್ತಾರ ಮಾಡುವುದಲ್ಲದೇ, ಉಡುಪಿಗೆ ತಕ್ಕ ವಿವಿಧ ಬಣ್ಣದ ಉಗುರು ಬಣ್ಣವನ್ನು ಬಳಸುವುದು ಈಗಿನ ಟ್ರೆಂಡ್ ಆಗಿದೆ.

image


ಅಂದವಾದ ಉಗುರಿಗೆ ದಿನಕ್ಕೊಂದು ಬಣ್ಣವನ್ನು ಹಚ್ಚೇಕು. ಆದರೆ ದಿನಕ್ಕೊಂದು ನೈಲ್ ಪಾಲಿಷ್ ರಿಮೂವ್​ ಮಾಡೋದು ಹೇಗೆ ಅನ್ನೋ ಎಲ್ಲರಲ್ಲೂ ಬೇಸರ ಕಾಡ್ತಾ ಇರುತ್ತೆ. ಆದರೆ ಇನ್ಮುಂದೆ ಈ ಚಿಂತೆ ಬೇಡ, ಯಾಕೆಂದ್ರೆ ಮಾರುಕಟ್ಟೆಗೆ ಈಗ ನೈಲ್ ಪಾಲಿಷ್ ರಿಮೂವ್​​ ಟಿಶ್ಯೂನೇ ಬಂದಿದೆ. ನೀವು ನೈಲ್ ಕಲರ್ ಫ್ಯಾಷನ್‍ನ ಎಂಜಾಯ್ ಮಾಡಬಹುದು.

ಹಾಕಿದ ಡ್ರೆಸ್‍ಗೆ ಮ್ಯಾಚ್ ಆಗೋ ನೈಲ್ ಪಾಲಿಶ್ ಹಾಕೊಳ್ಳದೋ ಅಂದ್ರೆ ಹುಡುಗಿಯರಿಗೆ ತುಂಬಾ ಇಷ್ಟ. ದಿನಕ್ಕೊಂದು ಕಲರ್ ಹಾಕೋದಿಕ್ಕೆ ಸಾಧ್ಯ ಇಲ್ಲ. ಯಾಕೆಂದ್ರೆ ಪ್ರತೀ ದಿನ ನೈಲ್ ಪಾಲಿಷ್ ರಿಮೂವ್​​ ಮಾಡೋದು ಅಷ್ಟೊಂದು ಸುಲಭವಿಲ್ಲ. ಹತ್ತಿಯಿಂದ ರೀಮುವರ್ ಲಿಕ್​​ವಿಡ್ ಹಾಕಿ ನೈಲ್ ಪಾಲಿಷ್ ತೆಗೆಯಬೇಕು. ಇದು ಎಲ್ಲರಿಗೂ ದೊಡ್ಡ ತಲೆನೋವು ಕೂಡ ಆಗಿರುತ್ತೆ. ಇನ್ನು ಅರ್ಜೆಂಟ್ ಆಗಿ ಹೊರಗಡೆ ಯಾವುದೋ ಪಾರ್ಟಿಗೆ ಹೋಗಬೇಕು, ಡ್ರೆಸ್ ಗೆ ಮ್ಯಾಚ್ ಆಗೋ ನೈಲ್ ಪಾಲಿಷ್ ಹಾಕೋಣ ಅಂದ್ರೆ ಟೈಮ್ ಇರೋಲ್ಲ. ಹತ್ತಿಯಿಂದ ಲಿಕ್​ವಿಡ್ ಹಾಕಿ ಒರೆಸೋದಿಕ್ಕೆ ಟೈಮ್ ಹಿಡಿಯುತ್ತೆ. ಅಲ್ಲದೇ ನೇಲ್ ರಿಮೂವರ್ ಲಿಕ್​​ವಿಡ್ ಅನ್ನು ಅತಿಯಾಗಿ ಬಳಸಿದ್ರೆ, ಬೆರಳಿಗೆ ಅಲರ್ಜಿ ಆಗಬಹುದು ಅನ್ನೋ ಟೆನ್ಷನ್ ಸಾಕಷ್ಟು ಮಹಿಳೆಯರಲ್ಲಿ ಇರುತ್ತೆ. ಆದರೆ ಇನ್ಮುಂದೆ ಈ ಕಿರಿಕಿರಿ ಇರೋದಿಲ್ಲ ಬಿಡಿ. ಯಾಕೆಂದ್ರೆ ನಿಮ್ಮ ಟ್ರೆಂಡಿ ಫ್ಯಾಶನ್‍ಗೆ ನೇಲ್ ರಿಮುವರ್ ಟಿಶ್ಯೂನೆ ಮಾರುಕಟ್ಟೆಗೆ ಬಂದಿದೆ.

image


ಏನು ನೈಲ್ ರೀಮುವರ್ ಟಿಶ್ಯೂನಾ!!! ಅಂಥ ಆಶ್ಚರ್ಯ ಪಡಬೇಡಿ.. ಮಾರುಕಟ್ಟೆಯಲ್ಲಿ ಈಗ ಲಭ್ಯವಿರೋ ಈ ಹೊಸ ನೈಲ್ ರೀಮು ಟೀಶ್ಯೂ ನಿಮ್ಮನ್ನು ಈ ಎಲ್ಲ ಕಿರಿಕಿರಿಗಳಿಂದ ಪಾರು ಮಾಡುತ್ತೆ . ಹೊರಗಡೆ ರಾಸಾಯನಿಕ ಬಾಟಲಿಗಳನ್ನು ಕ್ಯಾರಿ/ ತೆಗೆದುಕೊಂಡು ಹೋಗೋಕು ಆಗೋಲ್ಲ.. ಎಲ್ಲಿ ಚೆಲ್ಲುತ್ತೋ ಅನ್ನೋ ಭಯ ಇರುತ್ತೆ. ಆದ್ರೆ ಇದನ್ನು ಆಗದೇ ಇರೋರು ರೀತಿಯಲ್ಲಿ ಈ ನೈಲ್ ಟೀಶ್ಯೂಗಳನ್ನೂ ಸುಲಭವಾಗಿ ಬಳಸಬಹುದು.

image


ಒಂದು ಪುಟ್ಟ ಬಾಕ್ಸಿನಲ್ಲಿ ಸುಮಾರು 30ರಷ್ಟು ನೈಲ್ ರಿಮೂವರ್ ಟಿಶ್ಯೂಗಳು ಇರುತ್ತವೆ. ಒಂದೇ ಒಂದು ಟಿಶ್ಯೂ ಪೇಪರ್ 2ಕೈಗಳಿಗೆ, ಕಾಲುಗಳಲ್ಲಿನ ನೈಲ್​​ ಪಾಲಿಷ್​​ ರಿಮೂವ್​​ ಮಾಡಲು ಬಳಸಿಕೊಳ್ಳಬಹುದು. ಇದನ್ನು ಬ್ಯಾಗ್‍ನಲ್ಲೂ ಇಟ್ಟುಕೊಳ್ಳಬಹುದು. ಬಸ್‍ನಲ್ಲಿ ಹೋಗುವಾಗ ಆರಾಮಾಗಿ ನೈಲ್ ಪಾಲಿಷ್ ಅನ್ನೂ ರಿಮೂವ್​​ ಮಾಡಬಹುದು ಅಂತಾರೆ ವಿದ್ಯಾ. ಇದ್ರಿಂದ ಟೈಮ್ ಕೂಡ ಸೇವ್ ಆಗುತ್ತೆ. ರಿಯಾಯಿತಿ ದರದಲ್ಲಿ ಇರೋ ಈ ಟಿಶ್ಯೂಗಳು ಎಲ್ಲರ ಕೈಗೆಟ್ಟುಕುಂವತಿದೆ. ತಿಂಗಳ ಕಾಲ ಬರೋದ್ರಿಂದ ಇದು ಹೆಚ್ಚು ಯೂಸ್‍ಫುಲ್ ಅಂತಾರೆ.

ರೀಮೂವರ್ ಟಿಶ್ಯೂಗಳು ಬೇರೆ ಬೇರೆ ಫ್ಲೇವರ್‍ಗಳಲ್ಲೂ ಲಭ್ಯವಿದೆ. ಸ್ಟ್ರಾಬೆರಿ, ಲೆಮನ್, ಆರೆಂಜ್, ಹೀಗೆ ಸಾಕಷ್ಟು ಫ್ಲೇವರ್‍ಗಳಲ್ಲಿ ಟಿಶ್ಯೂ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಹೀಗಾಗಿ ಕಲರ್ ಕಲರ್ ನೈಲ್ ಪಾಲಿಶ್ ಹಚ್ಕೋಬೇಕು ಅಂತಿರೋವವರಿಗೆ ಇನ್ಮುಂದೆ ಇದು ತುಂಬಾ ಸುಲಭ. ಹುಡುಗೀಯರು ಇದನ್ನೇ ಹೆಚ್ಚು ಬಳಸುತ್ತಿದ್ದಾರೆ. ಇದನ್ನು ಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ. ವ್ಯಾಪಾರ ಕೂಡ ಚೆನ್ನಾಗಿದೆ ಅಂತಾರೆ ಮಾರಾಟಗಾರರು.

image


ಅದೇನೆ ಹೇಳಿ, ಫ್ಯಾಷನ್ ಲೋಕನೇ ಹಾಗೇ, ಇಂದು ಇರೋದು ನಾಳೆ ಇರೋಲ್ಲ. ಒಲ್ಡ್ ಫ್ಯಾಷನ್ ಆಗಿರೋದು ಇವತ್ತು ನ್ಯೂ ಫ್ಯಾಷನ್ ಆಗಿರುತ್ತೆ. ಫ್ಯಾಷನ್ ಲೋಕದಲ್ಲಿ ಫ್ಯಾಷನ್ ಮಾಡೋ ಹುಡುಗಿಯರೇನು ಕಡಿಮೆ ಇಲ್ಲ, ತಾವು ಹಾಕಿದ ಡ್ರೆಸ್‍ಗೆ ಮ್ಯಾಚಿಂಗ್ ಆಗಿ ನೈಲ್ ಪಾಲಿಶ್‍ ಕೂಡ ಇರಬೇಕು ಅಂತ ಇಷ್ಟ ಪಡತ್ತಾರೆ. ಯಾವುದೇ ಪಾರ್ಟಿಗಳಿಗೆ ಹೋದ್ರೂ ಕೂಡ ಎಲ್ಲರೂ ಇವರನ್ನು ಗಮನಿಸಬೇಕು ಅಂತ ಇಷ್ಟ ಪಡುತ್ತಾರೆ. ಇಂತಹವರಿಗೆ ಇದು ನಿಜಕ್ಕೂ ಯೂಸ್ ಆಗುತ್ತೆ. ಒಟ್ಟಾರೆ ದಿನದಿಂದ ದಿನಕ್ಕೆ ಫ್ಯಾಷನ್ ಲೋಕದಲ್ಲಿ ಬದಲಾವಣೆಗಳು ಆಗುತ್ತಾ ಇರುತ್ತೆ. ಏನ್ ಇದ್ರೂ ಕೂಡ ಹುಡುಗಿಯರು ನೈಲ್ ರಿಮೂವರ್ ಟಿಶ್ಯೂಗಳಿಗೆ ಫುಲ್ ಫೀದಾ ಆಗಿದ್ದಾರೆ.