ಉದ್ಯಮಿಗಳಿಗೆ ಮಾರ್ಕೆಟಿಂಗ್ ಗುರು ರಮಾ ಬಿಜಾಪುರ್ಕರ್ ಸಲಹೆ

ಟೀಮ್​​ ವೈ.ಎಸ್​​. ಕನ್ನಡ

ಉದ್ಯಮಿಗಳಿಗೆ ಮಾರ್ಕೆಟಿಂಗ್ ಗುರು ರಮಾ ಬಿಜಾಪುರ್ಕರ್ ಸಲಹೆ

Tuesday December 01, 2015,

4 min Read

ಆರ್ಥಿಕತೆ, ಬದಲಾಗುತ್ತಿರುವ ಭಾರತದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯ ಒಳನೋಟವುಳ್ಳ ನಿರೂಪಕರೂ ಹೌದು. ರಮಾ ಬಿಜಾಪುರ್ಕರ್ ಅವರು ಬರೆದ `ವಿ ಆರ್ ಲೈಕ್ ದೆಟ್ ಓನ್ಲಿ', `ಕಸ್ಟಮರ್ ಇನ್ ದಿ ಬೋರ್ಡಮ್' ಮತ್ತು `ಎ ನೆವರ್ ಬಿಫೋರ್ ವರ್ಲ್ಡ್​​​ : ಟ್ರ್ಯಾಕಿಂಗ್ ದಿ ಎವಲ್ಯೂಷನ್ ಆಫ್ ಕನ್ಸ್ಯೂಮರ್ ಇಂಡಿಯಾ' ಪುಸ್ತಕಗಳು ಭಾರೀ ಜನಪ್ರಿಯವಾಗಿದ್ದು, ಅತಿ ಹೆಚ್ಚು ಮಾರಾಟವಾಗಿವೆ. ಗ್ರಾಹಕರ ಮೌಲ್ಯ, ಸಾಮಾಜಿಕ ಮಾಧ್ಯಮಗಳು ಮತ್ತು ಯುವಜನತೆ, ಉದ್ಯಮಗಳಿಗೆ ಮಾರ್ಗಗಳ ಪ್ರಮಾಣ ಮತ್ತವರ ಹೊಸ ಪುಸ್ತಕಗಳ ಬಗ್ಗೆ ರಮಾ `ಯುವರ್‍ಸ್ಟೋರಿ'ಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದಾರೆ.

ಯುವರ್​​ ಸ್ಟೋರಿ: ಸದ್ಯ ಗ್ರಾಹಕರ ಕ್ಷೇತ್ರದಲ್ಲಿ ನೀವು ಯಾವ ವಿಷಯದ ಮೇಲೆ ಸಂಶೋಧನೆ ಮಾಡುತ್ತಿದ್ದೀರಾ?

ಆರ್‍ಬಿ: ನನ್ನ ಕೆಲಸ 2 ಆಯಾಮಗಳನ್ನು ಹೊಂದಿದೆ. ಮೊದಲನೆಯದು, ಕೇವಲ ಪೂರೈಕೆಯೆಡೆಗೆ ದೃಷ್ಟಿ ಹರಿಸದೆ, ಗ್ರಾಹಕರು ಉದ್ಯಮ ತಂತ್ರಗಳತ್ತ ಗಮನಹರಿಸುವಂತೆ ಮಾಡುವುದು. ಉದಾಹರಣೆಗೆ, ನಿಧಾನಗತಿಯ ಬೆಳವಣಿಗೆ ಕಾಣುತ್ತಿರುವ ಪೈಪೋಟಿಯ ಮಾರುಕಟ್ಟೆ ಅದೇ ಸ್ಥಿತಿಯಲ್ಲಿರುವುದಕ್ಕೆ ಕಾರಣ ಗ್ರಾಹಕರ ಪರಾನುಭೂತಿಯಲ್ಲ, ಅದಕ್ಕೆ ಕಾರಣ ಪೂರೈಕೆದಾರರ ಮನಸ್ಥಿತಿ ಮತ್ತು ಅಧಿಕ ಸಂಖ್ಯೆಯ ಗ್ರಾಹಕರಿಗೆ ಹೆಚ್ಚು ಮೌಲ್ಯ ಒದಗಿಸಲಾಗದ ಅಸಹಾಯಕತೆ. ಈ ಬಗ್ಗೆ `ಕಸ್ಟಮರ್ ಇನ್ ಬೋರ್ಡಮ್' ಪುಸ್ತಕದಲ್ಲಿ ನಾನು ಬರೆದಿದ್ದೇನೆ. ಎರಡನೆಯ ಆಯಾಮ ಅಂದ್ರೆ, ಭಾರತದ ಗ್ರಾಹಕರ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಕಾರ್ಯನೀತಿ ಮತ್ತು ತಂತ್ರಗಳನ್ನು ರೂಪಿಸುವುದು. ಭಾರತೀಯರು ಹೇಗೆ ಹಣಗಳಿಸುತ್ತಾರೆ? ಹೇಗೆ ಉಳಿತಾಯ ಮಾಡುತ್ತಾರೆ? ಹೇಗೆ ಖರ್ಚು ಮಾಡ್ತಾರೆ? ಹೇಗೆ ಬದುಕುತ್ತಾರೆ? ಹೇಗೆ ಯೋಚಿಸುತ್ತಾರೆ? ಉದ್ಯಮ ಅವಕಾಶವನ್ನು ಪ್ರತಿನಿಧಿಸುತ್ತಿರುವ ಅಪಾಯದ ಸಂಕೇತ ಯಾವುದು? ತುರ್ತು ಕ್ರಮದ ಅಗತ್ಯವಿದೆಯಾ ಅನ್ನೋ ವಿಷಯಗಳನ್ನು ಒಳಗೊಂಡಿದೆ.

image


ಯುವರ್​​ ಸ್ಟೋರಿ: ಭಾರತದ ವ್ಯಾಪಾರ ಕ್ಷೇತ್ರದ ಸಂಶೋಧನೆಯಲ್ಲಿ ಶಿಕ್ಷಣ ಮತ್ತು ಕೈಗಾರಿಕೆ ನಡುವೆ ಸಹಕಾರ ಹಾಗೂ ಸಹಯೋಗ ಎಷ್ಟಿದೆ?

ಆರ್‍ಬಿ : ಔಪಚಾರಿಕವಾಗಿ ಶಿಕ್ಷಣ ಮತ್ತು ಕೈಗಾರಿಕೆ ಮಧ್ಯೆ ಹೇಳಿಕೊಳ್ಳುವಂತಹ ಸಹಕಾರವೇನೂ ಇಲ್ಲ. ಅನೌಪಚಾರಿಕವಾಗಿ ಇವುಗಳ ಜಾಲ ವಿಸ್ತರಿಸಿದೆ. ಆದ್ರೆ ಇನ್ನಷ್ಟು ಔಪಚಾರಿಕ ರಚನೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಇದಕ್ಕೆ ಅಕಾಡಮಿಗಳಿಂದ ನಿರಂತರವಾದ ನೈತಿಕ ಬಲ ಮತ್ತು ಸಂವಹನ ಬೇಕು, ಜೊತೆಗೆ ಒಳ್ಳೆ ವೇತನ ಕೊಡಲು ಸಿದ್ಧವಿರಬೇಕು. ಇಂತಹ ಪಾಲುದಾರಿಕೆ ಅಭಿವೃದ್ಧಿಪಡಿಸಬೇಕೆಂದಲ್ಲಿ ಹೂಡಿಕೆ ಮಾಡುವುದು ಕೂಡ ಅತ್ಯಗತ್ಯ.

ಯುವರ್​​ ಸ್ಟೋರಿ: ನಿಮ್ಮ ಪುಸ್ತಕಕ್ಕೆ ಪ್ರತಿಕ್ರಿಯೆ ಹೇಗಿದೆ ? ಅಸಹಜ ಎನಿಸುವಂತಹ ಯಾವುದಾದರೂ ಪ್ರತಿಕ್ರಿಯೆ ಬಂದಿದೆಯಾ?

ಆರ್‍ಬಿ: `ನೆವರ್ ಬಿಫೋರ್ ವರ್ಲ್ಡ್​​ ' ಪುಸ್ತಕವನ್ನು ಓದುಗರು ಸ್ವಾಗತಿಸಿದ್ದಾರೆ. ನೀತಿ ನಿರೂಪಕರಿಗೂ ಇದು ಉಪಯುಕ್ತವಾಗಿದೆ ಅನ್ನೋದನ್ನು ಕೇಳಿ ನನಗೆ ಅಚ್ಚರಿಯಾಗಿದೆ. ಹೊಸ ಮಾರುಕಟ್ಟೆ ಬಗ್ಗೆ ನನ್ನ ಕಣ್ಣು ತೆರೆಸಿದೆ.

ಯುವರ್​​ ಸ್ಟೋರಿ: ನಿಮ್ಮ ಪುಸ್ತಕ ಪಬ್ಲಿಷ್ ಆದಾಗಿನಿಂದ ಗಮನಾರ್ಹವಾದ ಗ್ರಾಹಕರ ದೃಷ್ಟಿಕೋನವೇನಾದ್ರೂ ನಿಮ್ಮ ಗಮನಕ್ಕೆ ಬಂದಿದೆಯಾ?

ಆರ್‍ಬಿ: ಎಷ್ಟೋ ಬಾರಿ ನಾನಿದನ್ನೂ ಪುಸ್ತಕದಲ್ಲಿ ಸೇರಿಸಬಹುದಿತ್ತು ಎಂಬಂತಹ ಅಂಶಗಳು ನನ್ನ ಗಮನಕ್ಕೆ ಬಂದಿವೆ. ಯುವ ಹಾಗೂ ಶ್ರೀಮಂತ ಭಾರತದ ಬಗ್ಗೆ ನಮಗಿರುವ ಕಲ್ಪನೆ ನಿಜವಲ್ಲ ಅನ್ನೋದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿಯ ಚುನಾವಣಾ ಪ್ರಚಾರ ತೋರಿಸಿಕೊಟ್ಟಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ತೀರಾ ಸಂಪ್ರದಾಯಸ್ಥರು ಹಾಗೂ ಅವರಿಗೆ ಸ್ವಾತಂತ್ರ್ಯವಿಲ್ಲ ಅನ್ನೋದು ಖಚಿತವಾಗಿದೆ. ಇದು ಆಧುನಿಕ ಭಾರತದ ಬೆಳವಣಿಗೆಗೆ ಪೂರಕವಲ್ಲ.

ಯುವರ್​​ ಸ್ಟೋರಿ: ಆವರಣ ಹಾಗೂ ಪ್ರವೃತ್ತಿಗಳಲ್ಲಿ ಹೊಸ ಸರ್ಕಾರ ತರುತ್ತಿರುವ ಬದಲಾವಣೆಗಳ ಬಗ್ಗೆ ನಿಮ್ಮ ಪುಸ್ತಕದಲ್ಲಿ ಉಲ್ಲೇಖವಿದೆಯಾ?

ಆರ್‍ಬಿ: ರಾಜಕೀಯ ಮುಖಂಡರು ಮಾರುಕಟ್ಟೆಯ ಪೂರೈಕೆ ಮತ್ತು ಗ್ರಾಹಕರ ಬಗ್ಗೆ ಗಮನವಿಟ್ಟಿದ್ದಾರೆ. ಹೊಸ ಸರ್ಕಾರ ವಿಭಿನ್ನವಾದ ಆಧುನಿಕ ಭಾರತವನ್ನು ನಿರ್ಮಾಣ ಮಾಡಲಿದೆ ಎಂಬ ನಂಬಿಕೆ ನನಗಿದೆ. 10 ವರ್ಷಗಳೊಳಗೆ ಜಾಗತಿಕ ಮಟ್ಟದಲ್ಲಿ ಭಾರತದ ಬಗೆಗಿನ ದೃಷ್ಟಿಕೋನ ಬದಲಾಗಲಿದೆ. ನಾನು 10 ವರ್ಷಗಳ ಬಳಿಕ ಈ ಪುಸ್ತಕವನ್ನು ಮತ್ತೆ ಬರೆಯಲು ಮುಂದಾದ್ರೆ ಅದು ನಿಜಕ್ಕೂ ವಿಭಿನ್ನವಾಗಿರಲಿದೆ. ಹೊಸ ಸರ್ಕಾರ ಹೊಸ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಇದು ವರ್ತಮಾನದ ವಿರುದ್ಧವಾಗಿಲ್ಲ, ಭವಿಷ್ಯದ ಬಗೆಗಿನ ಕಲ್ಪನೆಗಳನ್ನು ಬದಲಾಯಿಸಿದೆ.

ಯುವರ್​​ ಸ್ಟೋರಿ: ಸದ್ಯ ಭಾರತೀಯ ಉದ್ಯಮ ಎದುರಿಸುತ್ತಿರುವ ಪ್ರಮುಖ ಸವಾಲು ಮತ್ತು ಅವಕಾಶಗಳು ಯಾವುವು?

ಆರ್‍ಬಿ: ಅವಕಾಶಗಳು ಬಹಳಷ್ಟಿವೆ. ಬಂಡವಾಳವೇ ಅತಿ ದೊಡ್ಡ ಸವಾಲು. ಎಲ್ಲ ಹೂಡಿಕೆದಾರರು ಕೆಲವೇ ವರ್ಷಗಳಲ್ಲಿ ಮಿನುಗುವ ವಜ್ರದಂತಾಗಬೇಕು ಉದ್ಯಮ ಎಂದೇ ಬಯಸುತ್ತಾರೆ. ಆರಂಬಿಕ ಹಂತದಲ್ಲಿ ಬಂಡವಾಳ ಸಂಗ್ರಹಿಸಲು ರಿಸ್ಕ್ ತೆಗೆದುಕೊಳ್ಳಬೇಕಾಗಿದೆ.

ಯುವರ್​​ ಸ್ಟೋರಿ:ಉತ್ಪನ್ನಗಳ ಮಾರಾಟದಲ್ಲಿ ಬೆಲೆ ಹಾಗೂ ಮೌಲ್ಯದ ಬಗ್ಗೆ ಚೀನಾ ಚೆನ್ನಾಗಿ ಅರಿತಿದೆ ಎಂದೆನಿಸುತ್ತದೆಯಲ್ಲವೇ?

ಆರ್‍ಬಿ: ಬೆಲೆ ಹಾಗೂ ಗುಣಮಟ್ಟದ ತುಲನೆಯನ್ನು ಭಾರತದ ಮಧ್ಯಮ ಹಾಗೂ ಸಣ್ಣ ವ್ಯಾಪಾರಿಗಳು ಕೂಡ ಅರ್ಥಮಾಡಿಕೊಂಡಿದ್ದಾರೆ. ಆದ್ರೆ ಅದನ್ನು ಪ್ರಮಾಣೀಕರಿಸಲು ಅವರ ಬಳಿ ಹಣವಿಲ್ಲ, ಬೆಲೆ ಇಳಿಕೆ ಮಾಡುವ ಶಕ್ತಿಯೂ ಇಲ್ಲ. ಚೀನಾ ಉತ್ಪಾದನೆಯನ್ನು ಸೂಕ್ತವಾಗಿ ಪ್ರಮಾಣೀಕರಿಸುತ್ತಿದೆ.

ಯುವರ್​​ ಸ್ಟೋರಿ:ಉತ್ಪಾದನೆಯ ಹಂತದಿಂದ ಸಮೂಹ ಹಂತದವರೆಗೆ ತಮ್ಮ ಕಂಪನಿಯನ್ನು ಪ್ರಮಾಣೀಕರಿಸಲು ಉದ್ಯಮಿಗಳು ಎದುರಿಸುವ ಕಠಿಣ ಸವಾಲುಗಳು ಯಾವುವು?

ಆರ್‍ಬಿ: ಭಾರತ ಪೈಲಟ್ ಪರೀಕ್ಷೆಗೊಳಗಾಗಿದೆ, ಮಾರುಕಟ್ಟೆಯನ್ನೂ ಪರೀಕ್ಷಿಸಿದೆ. ಸಣ್ಣ ಪ್ರಮಾಣದ ಪ್ರಯೋಗ ಹಾಗೂ ಚಿಕ್ಕ ಚಿಕ್ಕ ಐಡಿಯಾ ಮೂಲಕ ಪರಿಕಲ್ಪನೆ ಕೂಡ ಸಾಬೀತಾಗಿದೆ. ಆದ್ರೆ ಉತ್ಪಾದನೆ ಮತ್ತು ಉತ್ಪನ್ನದಲ್ಲಿರುವ ಅವ್ಯವಸ್ಥೆಯೇ ದೊಡ್ಡ ಸಮಸ್ಯೆ. ಜನರ ಸಮಸ್ಯೆಗಳು ಹಾಗೂ ಮಾನವ ಸಂಪನ್ಮೂಲ ಉದ್ಯಮದ ಯಶಸ್ಸಿಗೆ ಎದುರಾಗುವ ಅತಿ ದೊಡ್ಡ ಸವಾಲು. ಬೇಸರ ತರಿಸುವಂತಹ ಸಮಗ್ರ ಪ್ರಮಾಣೀಕರಣದ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳಬಹುದು. ನಿಪುಣರು ಮತ್ತು ಆ ಕೆಲಸವನ್ನು ಯಶಸ್ವಿಯಾಗಿ ಪೂರೈಸುವಂತವರಿಗೆ ಅದನ್ನು ಒಪ್ಪಿಸಲು ಹಿಂದೇಟು ಹಾಕ್ತಾರೆ. ಬೆಳವಣಿಗೆಯ ದುರಾಸೆಯಿಂದ, ಮೌಲ್ಯಮಾಪನದ ಮೇಲಿನ ಪಂಥಾಹ್ವಾನವನ್ನು ಗಮನದಲ್ಲಿಟ್ಟುಕೊಂಡು ಉದ್ಯಮಿಗಳು ಪ್ರಮಾಣೀಕರಿಸುತ್ತಾರೆ. ಅನಿರೀಕ್ಷಿತವಾದದ್ದೇನಾದ್ರೂ ಸಂಭವಿಸಿದ್ರೆ ಆ ಆಘಾತ ತಡೆದುಕೊಳ್ಳುವ ಶಕ್ತಿ ಅವರಲ್ಲಿರುವುದಿಲ್ಲ.

ವೈಎಸ್: ಮಹಿಳೆಯರು ಮತ್ತು ಗ್ರಾಮೀಣ ಭಾರತದ ನಿವಾಸಿಗಳನ್ನು ಹೆಚ್ಹೆಚ್ಚು ಉದ್ಯಮದತ್ತ ಸೆಳೆಯಲು ಏನು ಮಾಡಬೇಕು?

ಆರ್‍ಬಿ: ಹಣ...ಹಣ.... ಹಣ .... ಏಂಜೆಲ್ ಹೂಡಿಕೆದಾರರ ಸಮೃದ್ಧಿ

ವೈಎಸ್: `ನಿಮ್ಮ ದೃಷ್ಟಿಕೋನವನ್ನು ನೆಚ್ಚಿಕೊಂಡಿರಿ' `ಬದಲಾದ ಜಗತ್ತಿಗೆ ಹೊಂದಿಕೊಳ್ಳಿ' ಎಂಬ ಎರಡು ಅಂಶಗಳ ಮಧ್ಯೆ ಉದ್ಯಮಿಗಳು ಸಮತೋಲನ ಕಾಪಾಡಿಕೊಳ್ಳುವುದು ಹೇಗೆ?

ಆರ್‍ಬಿ: ಇವೆರಡೂ ವಿರೋಧಾತ್ಮಕ ಅಂಶಗಳೇ ಅಲ್ಲ. ನಿಮ್ಮ ದೃಷ್ಟಿಕೋನ ಜನರಿಗೆ ಸೇವೆ ಒದಗಿಸಬಲ್ಲ ಗೌರವಾನ್ವಿತ ಸಂಸ್ಥೆಯಾಗಿ ಬದಲಾಗಬಹುದು. ಜನರ ಬದುಕನ್ನೇ ಬದಲಾಯಿಸಬಹುದು. ಬದಲಾಗುತ್ತಿರುವ ಜಗತ್ತಿನಲ್ಲಿ ಅದನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ತಂತ್ರ ಗ್ರಾಹಕರ ಮೌಲ್ಯ ಹೆಚ್ಚಿಸುವುದು ಮತ್ತು ಅವರಿಂದ ಪಡೆಯುವುದಾಗಿದ್ದಲ್ಲಿ, ಸ್ಪರ್ಧಿಗಳನ್ನು ನೀವು ಅನುಕರಿಸದೇ ಇದ್ದಲ್ಲಿ ನೀವು ನಿಮ್ಮ ದೃಷ್ಟಿಕೋನಕ್ಕೆ ಅಂಟಿಕೊಂಡಿರಿ, ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಿ.

ವೈಎಸ್: ಸದ್ಯ ಭಾರತದಲ್ಲಿ ನಿಮ್ಮ ಅಚ್ಚುಮೆಚ್ಚಿನ ಉದ್ಯಮಿಗಳು ಹಾಗೂ ಸಂಸ್ಥೆಗಳು ಯಾವುವು?

ಆರ್‍ಬಿ: ವಿನ್ಯಾಸ ಹಾಗೂ ಡೆಲಿವರಿಯಲ್ಲಿ ಹೈಬ್ರಿಡ್ ಮಾದರಿಯನ್ನು ಅನುಸರಿಸಿದ ಫ್ಲಿಪ್‍ಕಾರ್ಟ್ ನನಗೆ ಅಚ್ಚುಮೆಚ್ಚು. ಜಾಹೀರಾತಿಗಾಗಿಯೂ ಅವರು ಅಪಾರ ವೆಚ್ಚ ಮಾಡಿದ್ದಾರೆ. ಎಫ್.ಸಿ.ಕೋಹ್ಲಿ ಅವರ ಟಿಸಿಎಸ್, ಕಿಶೋರ್ ಬಿಯಾನಿ ಅವರ ಬಿಗ್ ಬಝಾರ್ ಕೂಡ ನನಗೆ ಇಷ್ಟವಾಗಿವೆ.

ವೈಎಸ್: ನಿಮ್ಮ ಮುಂದಿನ ಪುಸ್ತಕ ಯಾವ ವಿಷಯವನ್ನು ಒಳಗೊಂಡಿರುತ್ತದೆ?

ಆರ್‍ಬಿ: ಈ ಪ್ರಯಾಣದಲ್ಲಿ ನಾನು ಕಲಿತಿದ್ದು ಹಾಗೂ ಅರ್ಥಮಾಡಿಕೊಂಡಿದ್ದರ ಬಗ್ಗೆ ಮುಂದಿನ ಪುಸ್ತಕದಲ್ಲಿ ಬರೆಯಬೇಕೆಂದು ನನ್ನಾಸೆ. `ಹು ಡೈಡ್ & ಮೇಡ್ ಮಿ ಪೋಪ್' ಎಂದು ಹೆಸರಿಡಬೇಕೆಂದಿದ್ದೇನೆ. ಅದಕ್ಕೂ ಮೊದಲು `ಕಸ್ಟಮರ್ ಇನ್ ಬೋರ್ಡಮ್'ನ ಸೀಕ್ವಲ್ ಅನ್ನು ಬರೆಯಬೇಕು. ಐಐಎಮ್ ಅಹಮದಾಬಾದ್‍ನಲ್ಲಿ ನಾನು ಕಲಿಸುತ್ತಿರುವ ವಿಷಯವನ್ನು ಅದು ಒಳಗೊಂಡಿರುತ್ತದೆ.

ಯುವರ್​​ ಸ್ಟೋರಿ: ಮಹತ್ವಾಕಾಂಕ್ಷಿ ವಾಣಿಜ್ಯೋದ್ಯಮಿಗಳು ಮತ್ತು ಸಂಸ್ಥೆಗಳಿಗೆ ನಿಮ್ಮ ಸಂದೇಶವೇನು?

ಆರ್‍ಬಿ: ನನಗಿಷ್ಟವಾದ 2 ಲೇಖನಗಳ ಪ್ರಮುಖ ಶಬ್ಧಗಳನ್ನು ಉದ್ಯಮಿಗಳು ಪ್ರತಿನಿಧಿಸಬೇಕೆಂಬುದೇ ನನ್ನ ಬಯಕೆ. ಪ್ರತಿಸ್ಪರ್ಧಿಗಳು ಮಣಿಸುವುದು ನಿಮ್ಮ ತಂತ್ರವಾಗಬಾರದು, ಗ್ರಾಹಕರಿಗೆ ಹೆಚ್ಚಿನ ಮೌಲ್ಯ ಒದಗಿಸುವುದು ಹಾಗೂ ಸ್ಪರ್ಧಾತ್ಮಕ ಹೋರಾಟವನ್ನು ತಪ್ಪಿಸುವುದು ನಿಮ್ಮ ಉದ್ದೇಶವಾಗಬೇಕು. ``ನನ್ನ ಉತ್ಪನ್ನವನ್ನೇ ಏಕೆ ಕೊಳ್ಳಬೇಕು - ಬೇರೆಯವರ ಉತ್ಪನ್ನವನ್ನು ಯಾಕೆ ಖರೀದಿಸಬಾರದು?'' ಎಂಬ ಪ್ರಶ್ನೆಗೆ ನಿಮ್ಮ ಬಳಿ ಸ್ಪಷ್ಟ ಉತ್ತರವಿಲ್ಲದಿದ್ರೆ, ಬೇರೆಯವರಿಗಿಂತ ಹೆಚ್ಚಿನ ಮೌಲ್ಯವನ್ನು ನೀವು ಅಳವಡಿಸುವುದು ಅಸಾಧ್ಯ. ಗ್ರಾಹಕರು ಗ್ರಹಿಸುವಂತಹ ಮೌಲ್ಯ ನಿಮ್ಮಲಿಲ್ಲ ಎಂದಾದ್ರೆ, ಯಶಸ್ವಿ ಉದ್ಯಮಕ್ಕೆ ಬೇಕಾದದ್ದು ನಿಮ್ಮ ಬಳಿಯಿಲ್ಲ ಎಂದರ್ಥ.

ಲೇಖಕರು: ಮದನ್​​ ಮೋಹನ್​​ ರಾವ್​​

ಅನುವಾದಕರು: ಭಾರತಿ ಭಟ್​​​​​

    Share on
    close