ಮೈಸೂರಿನಲ್ಲಿ135 ಅಡಿ ಎತ್ತರದ ಕ್ಲಾಕ್ ಟವರ್..!
ಉಷಾ ಹರೀಶ್
Sunday February 28, 2016,
2 min Read
ಸಾಂಸ್ಕೃತಿಕ ನಗರ ಮೈಸೂರಿನಲ್ಲಿರುವ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರಗಳು ತಮ್ಮ ಅಂದ ಚೆಂದಗಳಿಂದ ಮೈಸೂರಿನ ಕೀರ್ತಿಯನ್ನು ಹೆಚ್ಚಿಸಿವೆ.ಇಂತಹ ಐತಿಹಾಸಿಕ ಅವಳಿ ಗೋಪುರಗಳು ಮೈಸೂರಿನಲ್ಲಿರುವುದು ಒಂದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲದೇ ಉತ್ತಮ ಲ್ಯಾಂಡ್ಮಾರ್ಕ್ ಕೂಡಾ ಆಗಿವೆ. ಇಂತಹದ್ದೇ ಒಂದು ಗಡಿಯಾರ ಗೋಪುರವನ್ನು ಮೈಸೂರು ವಿಶ್ವ ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಸಮಯದಲ್ಲಿ ಮಾನಸಗಂಗೋತ್ರಿಯಲ್ಲೂ ನಿರ್ಮಾಣ ಮಾಡಲಾಗಿತ್ತು. ಇದೀಗ ಐಟಿ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ ಕ್ಯಾಂಪಸ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ತಯಾರಿ ನಡೆಸಿದೆ.
ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !
ಮೈಸೂರಿನಲ್ಲಿ ಬೃಹತ್ ಕ್ಯಾಂಪಸ್
ಐಟಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಗಳಿಸುವುದಲ್ಲದೇ ದೇಶ ವಿದೇಶಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಇನ್ಫೋಸಿಸ್ ತನ್ನ ಬೃಹತ್ ಕ್ಯಾಂಪಸ್ನ್ನು ಮೈಸೂರಿನಲ್ಲಿ ಹೊಂದಿದೆ. ಸುಮಾರು 345 ಎಕರೆ ಪ್ರದೇಶಗಳಲ್ಲಿ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ ಇದೆ. ಇನ್ಫೋಸಿಸ್ ಕಂಪನಿಗೆ ಆಯ್ಕೆಯಾಗುವ ಸಾಕಷ್ಟು ಮಂದಿಗೆ ಈ ಕ್ಯಾಂಪಸ್ನಲ್ಲಿ ತರಬೇತಿ ಕಡ್ಡಾಯವಾಗಿದೆ. ಇದೇ ಪ್ರದೇಶದಲ್ಲಿ ಈಗ ಇನ್ಫಿ 135 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಉದ್ದೇಶಿಸಿದೆ.
ಲಂಡನ್ನ ಬಿಗ್ ಬೆನ್ ಟವರ್ಗಿಂತಲೂ ದೊಡ್ಡದು..!
ಇನ್ಫೋಸಿಸ್ ನಿರ್ಮಾಣ ಮಾಡಬೇಕಿಂದಿರುವ ಈ ಗಡಿಯಾರ ಗೋಪುರ ಲಂಡನ್ನಲ್ಲಿರುವ ಬಿಗ್ ಬೆನ್ (96 ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್ಗಿಂತಲೂ (87 ಮೀಟರ್) ಎತ್ತರವಾಗಲಿದೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ನಿರ್ಮಾಣಕ್ಕಾಗಿ ಸುಮಾರು 60 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರಲಿದ್ದು, ಇದರ ನಿರ್ಮಾಣಕ್ಕೆ ಸುಮಾರು 20 ತಿಂಗಳು ಸಮಯ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಕ್ಲಾಕ್ ಟವರ್ ನಿರ್ಮಾಣದ ಯೋಜನೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್ ನಾರಾಯಣಮೂರ್ತಿ ಕೂಡಾ ದೃಢಪಡಿಸಿದ್ದಾರೆ.
ಗಡಿಯಾರ ಗೋಪುರ ಇಲ್ಲದೆ ಮೈಸೂರಿನ ಇನ್ಫೋಸಿಸ್ ತರಬೇತಿ ಕೇಂದ್ರ ಪರಿಪೂರ್ಣವಾಗುವುದಿಲ್ಲ. ಕ್ಲಾಕ್ ಟವರ್ ಇರುವುದರಿಂದ ಕ್ಯಾಂಪಸ್ಗೆ ಅಕಾಡೆಮಿಕ್ ಭವ್ಯತೆಯ ಮೆರುಗು ಸಿಕ್ಕಂತಾಗುತ್ತದೆ. ’’
- ನಾರಾಯಣ ಮೂರ್ತಿ
ಮುಂಬೈ ಮೂಲದ ಕಂಟ್ರಾಕ್ಟರ್
ಇನ್ಫೋಸಿಸ್ನ ಮೈಸೂರಿನ ಕ್ಯಾಂಪಸ್ ವಿನ್ಯಾಸವನ್ನು ರೂಪಿಸಿದ್ದ ಮುಂಬಯಿ ಮೂಲದ ಹಫೀಜ್ ಕಾಂಟ್ರಾಕ್ಟರ್ ಅವರೇ ಈ ಗೋಪುರದ ವಿನ್ಯಾಸವನ್ನೂ ರಚಿಸಲಿದ್ದಾರೆ. ನಿರ್ಮಾಣ ಮಾತ್ರ ಬೆಂಗಳೂರು ಮೂಲದ ಕೆಇಎಫ್ ಇನ್ಫ್ರಾ ನಿರ್ಮಿಸಲಿದೆ. ಈ ಯೋಜನೆಗೆ ಸಂಬಂಧಿಸಿದ ಬಹುತೇಕ ಅನುಮೋದನೆಗಳನ್ನು ಪಡೆಯಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ರಾಮದಾಸ್ ಕಾಮತ್ ತಿಳಿಸಿದ್ದಾರೆ. ಸಾಂಪ್ರದಾಯಿಕತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಗಡಿಯಾರ ಗೋಪುರದಲ್ಲಿ ಸಂಯೋಜಿಸಲಗುವುದು. ಗೋಪುರದ ನಾಲ್ಕು ಬದಿಗಳಲ್ಲಿ ದೊಡದ್ಡ ಡಿಜಿಟಲ್ ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ಪ್ರಮುಖ ವಿದ್ಯಮಾನಗಳ ಸಂದೇಶಗಳನ್ನು ಈ ಸ್ಕ್ರೀನ್ನಲ್ಲಿ ಬಿತ್ತರಿಸಲಾಗುವುದು ಎಂದು ಕಂಪನಿಯ ಸ್ಥಳೀಯ ಆರ್ಕಿಟೆಕ್ಟ್ ಕೆ.ಪಿ ನಾಗರಾಜ್ ತಿಳಿಸಿದ್ದಾರೆ.ಒಟ್ಟಿನಲ್ಲಿ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ, ಯುನಿವರ್ಸಿಟಿಯೊಳಗಿರುವ ಗಡಿಯಾರದ ಜತೆಗೆ ಇನ್ಫೋಸಿಸ್ ಒಳಗಿರುವ ಗಡಿಯಾರುವೂ ಸೇರಿಕೊಂಡರೆ ಮೈಸೂರಿನ ಖ್ಯಾತಿ ಮತ್ತಷ್ಟು ಹೆಚ್ಚುತ್ತದೆ.
1. ಪಿಡ್ಜಾ ಐಸ್ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್ಕ್ರೀಮ್!!!
2. 'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್ನ ರಾಣಾ ಕಪೂರ್ ಯಶಸ್ಸಿನ ಮಂತ್ರ
3. ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ