"ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!

ಆರಾಧ್ಯ

"ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!

Thursday May 12, 2016,

2 min Read

ಹಿಂದೆ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಅನೇಕ ಬಗೆಯ ಆಟಿಕೆಗಳಿಗೆ ಬಹು ಬೇಡಿಕೆ ಇತ್ತು. ಪುಟ್ಟ ಮಕ್ಕಳು ಇರುವಂತಹ ಮನೆಯಗಳಲ್ಲಿ ತೆವಳಲು, ನಡೆಯಲು, ಉಪಯೋಗವಾಗುವಂತಹ ಹತ್ತು ಹಲವು ಆಟಿಕೆಗಳನ್ನ ಕಾಣಬಹುದಿತ್ತು. ಆದ್ರೆ ಈಗಿನ ಕಾಲದಲ್ಲಿ ಅವೆಲ್ಲ ಕಣ್ಮರೆಯಾಗಿ, ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್ ಗಳು ಬಂದಿದೆ. ಇನ್ನು ಆಗ ಮಕ್ಕಳನ್ನ ಐದು ವರ್ಷದ ವರೆಗೂ ಶಾಲೆಗೆ ಸೇರಿಸುತ್ತಿರಲಿಲ್ಲ. ಆದ್ರೆ ಈಗ ಹುಟ್ಟುತ್ತಿದ್ದಂತೆಯೇ ಮಕ್ಕಳನ್ನು ಮಾತನಾಡುವ, ನಡೆಯುವ ಕ್ಲಾಸ್ ಗಳಿಗೆ ಸೇರಿಸುತ್ತಾರೆ.. ಅಂತಹದೇ ಒಂದು ಕ್ಲಾಸ್ ಇದೀಗ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ.. ಅದ್ರ ಹೆಸರು ಬೇಬಿ ಸೆನ್ಸರಿ.

image


ಬೇಬಿ ಸೆನ್ಸರಿಯಲ್ಲಿ ಪುಟಾಣಿ ಮಕ್ಕಳ ಬೆಳವಣಿಗೆಗೆ ಸಹಾಯವಾಗಲೆಂದೇ ಅನೇಕ ತರಬೇತಿ ಕ್ಲಾಸುಗಳು ನಡೆಯುತ್ತವೆ.. ಈ ಕ್ಲಾಸ್ ಗಳನ್ನ ನಡೆಸಲಿಕ್ಕೆಂದೇ ಪರಿಣತರ ತಂಡವೇ ಇದೆ.. ಮಗು ಹುಟ್ಟಿದಾಗಿನಿಂದ ಹದಿಮೂರು ತಿಂಗಳ ವಯಸ್ಸಿನ ಮಗುವಿಗೆ ಈ ತರಬೇತಿ ಕ್ಲಾಸ್​​ . ಈ ಕ್ಲಾಸ್​​ ಮಗುವಿಗೆ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ ಮಗು ಆನಂದದಿಂದ ಇರುವಂತೆ ಮಾಡುತ್ತದೆ. ಲೈಟ್ ಶೋ, ಬಬಲ್, ಬೆಲ್ ಇತ್ಯಾದಿಗಳನ್ನು ಬಳಸಿ ಮಕ್ಕಳನ್ನು ಆಕರ್ಷಿಸಿ ಅವುಗಳು ಮರುಳಾಗುವಂತೆ ಮಾಡಲಾಗುತ್ತದೆ. ಹಾಗೆ ಆಟ ಆಡಿಸುತ್ತಲೇ ಹೊಸ ಸ್ಕಿಲ್ ಕಲಿಸುತ್ತಾರೆ. ಕ್ಲಾಸ್​ ಮುಗಿದಾಗ ಮಗು ಹೊಸ ಆಟಗಳನ್ನು ಕಲಿತಿರುತ್ತದೆ.

ದೇಶ ವಿದೇಶಗಳಲ್ಲಿ 2008 ರಿಂದ ಈ ವರೆಗೂ ಬಹಳಷ್ಟು ಹೆಸರು ಮಾಡಿರೋ ಈ ಸಂಸ್ಥೆ ಇದೀಗ ಬೆಂಗಳೂರಿನಲ್ಲೂ ಕೂಡ ಆರಂಭವಾಗಿದೆ. ಪುಟ್ಟ ಮಕ್ಕಳಿಗೆ ಆಕರ್ಷಣೆಯಾಗುವಂತಹ ಹಾಡು, ಶಬ್ಧ, ಸ್ಪರ್ಶ, ಭಾಷೆ, ಧ್ವನಿ ಗಳ ಸಹಾಯದಿಂದ ಮಕ್ಕಳಿಗೆ ತರಬೇತಿಯನ್ನ ನೀಡ್ತಾರೆ.. ಇವುಗಳಲ್ಲಿ ಪುಟ್ಟ ಕಂದಗಳು ಯಾವುದಕ್ಕೆ ಹೆಚ್ಚು ಗಮನ ನೀಡುತ್ತೋ, ಆ ಚಟುವಟಿಕೆಯನ್ನ ಹಂತ ಹಂತವಾಗಿ ಮಕ್ಕಳಿಗೆ ಪಡಿಚಯಿಸ್ತಾರೆ… ಈ ತರಬೇತಿಗೆ ಪೋಷಕರು ಕೂಡ ಹಾಜರಗಬಹುದು.. ಯಾಕಂದ್ರೆ ಆ ಸಮಯದಲ್ಲಿ ಪೋಷಕರ ಮಹತ್ವ ಹೆಚ್ಚಾಗಿರುತ್ತೆ…

image


ಈ ಸಂಸ್ಥೆಯನ್ನು ಪ್ರಾರಂಭ ಮಾಡೋ ಮೊದಲು 35 ವರ್ಷಗಳ ಕಾಲ ಮಕ್ಕಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿರೋ ಸಂಸ್ಥೆ ಮಕ್ಕಳ ಚಲನವಲನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದೆ.. ಇನ್ನು ಈ ಸಂಸ್ಥೆಗೆ ನಿಮ್ಮ ಮಕ್ಕಳನ್ನು ಸೇರಿಸಿದ್ರೆ ಸಂಪೂರ್ಣವಾಗಿ ತರಬೇತಿಯ ಬಗ್ಗೆ ಪೋಷಕರಿಗೆ ಮಾಹಿತಿಯನ್ನ ನೀಡ್ತಾರೆ… ಪುಟ್ಟ ಮಕ್ಕಳ ಮೊದಲ ವರ್ಷ ಬಹಳ ಮುಖ್ಯವಾಗಿರುತ್ತೆ ಈ ಕಾರಣಕ್ಕೆ ತರಬೇತಿ ಬಹಳ ಮುಖ್ಯವಾಗಿರುತ್ತೆ..

ಬೇಬಿ ಸೆನ್ಸರಿ ಒಂದು ಹಂತವಾದ್ರೆ, ಟಾಡ್ಲರ್ ಎರಡನೇ ಹಂತದ ಕಲಿಕೆ.. ಇಲ್ಲಿ ಮಗು ಹುಟ್ಟಿದ 13 ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ ತರಬೇತಿ ಕ್ಲಾಸ್ ನಡೆಯುತ್ತೆ… ಇಲ್ಲಿ ಸ್ವಲ್ಪ ದೊಡ್ಡ ಮಕ್ಕಳಿರುವುದರಿಂದ ಹೆಚ್ಚು ಚಟುವಟಿಕೆಗಳಿವೆ.. ಸಣ್ಣ ಪರ್ವತ ಹತ್ತುವುದು, ಸಫಾರಿ ಹೋಗುವುದು, ಡಾಲ್ಫಿನ್ ಗಳ ಜೊತೆ ಈಜುವುದು, ಡೈನೋಸಾರ್ ಗಳನ್ನು ಬೇಟೆಯಾಡುವುದು ಇವೆಲ್ಲಾ ಇಲ್ಲಿನ ಚಟುವಟಿಕೆಗಳಿರುವುದರಿಂದ ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸುತ್ತಾರೆ..

image


ಇತ್ತೀಚೆಗೆ ಬೆಂಗಳೂರಿನಲ್ಲಿ ಬೇಬಿ ಸೆನ್ಸರಿಗೆ ಸೇರಿಸುತ್ತಿರುವ ಪೋಷಕರ ಸಂಖ್ಯೆ ಹೆಚ್ಚಾಗಿದೆ.. ಇದಕ್ಕೆ ಮುಖ್ಯ ಕಾರಣ ಈಗಿನ ಹೆಣ್ಣು ಮಕ್ಕಳಿಗೆ ಪುಟ್ಟ ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು, ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಅರಿವು ಕಡಿಮೆ ಇದೆ, ಈ ಕಾರಣಕ್ಕೆ ಬೇಬಿ ಸೆನ್ಸರಿ ಬಹಳ ಉಪಯೋಗಕಾರಿಯಾಗಿದೆ.. ಬೆಂಗಳೂರಿನ ವೈಟ್ ಫೀಲ್ಡ್, ಕೋರಮಂಗಲ, ಬನಶಂಕರಿಯಲ್ಲಿ ಈ ತರಬೇತಿ ಕ್ಲಾಸ್​ಗಳು ಇದ್ದು, ನೀವು ಕೂಡ ನಿಮ್ಮ ಮಕ್ಕಳನ್ನು ಬೇಬಿ ಸೆನ್ಸರಿಗೆ ಸೇರಿಸಬಹುದು..