ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ಸಿಗಲಿದೆ “ಹೈ ಸ್ಪೀಡ್” ಟಚ್..!

ಟೀಮ್​ ವೈ.ಎಸ್​. ಕನ್ನಡ

ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ಸಿಗಲಿದೆ “ಹೈ ಸ್ಪೀಡ್” ಟಚ್..!

Monday July 25, 2016,

2 min Read

ಭಾರತೀಯ ರೈಲ್ವೇ ಇತಿಹಾಸ ಸೃಷ್ಟಿಸುತ್ತಿದೆ. ಭಾರತೀಯ ಸಾರಿಗೆಯ ಬೆನ್ನೆಲುಬಾಗಿರುವ ರೈಲ್ವೇಗೆ ಈಗ ಹೈ ಟೆಕ್ ಸ್ಪರ್ಷ ನೀಡುವ ಕಾರ್ಯದ ಬಗ್ಗೆ ಯೋಚನೆ ನಡೆಯುತ್ತಿದೆ. ಈಗಿನ ಜನರ ಬೇಡಿಕೆ ಅನುಗುಣವಾಗಿ ರೈಲ್ವೇಯನ್ನು ಮೇಲ್ದರ್ಜೆಗೆ ಏರಿಸುವ ಪ್ಲಾನ್ ಕೂಡ ನಡೆಯುತ್ತಿದೆ. ಇದರ ಮೊದಲ ಹೆಜ್ಜೆಯೇ ಹೈ ಸ್ಪೀಡ್ ರೈಲು. ದೇಶದ ಮೊದಲ ಹೈ ಸ್ಪೀಡ್ ರೈಲು ಇನ್ನು 6 ವರ್ಷಗಳಲ್ಲಿ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಓಡಾಡೋದು ಬಹುತೇಕ ಖಚಿತ.

image


ಭಾರತದ ಚೊಚ್ಚಲ ಹೈ ಸ್ಪೀಡ್ ರೈಲು ಗಂಟೆಗೆ ಗರಿಷ್ಠ 350 ಕಿಲೋಮೀಟರ್ ವೇಗದಲ್ಲಿ ಓಡಾಟ ನಡೆಸಲಿದೆ ಅಂತ ಹೇಳಲಾಗುತ್ತಿದೆ. ಸರಾಸರಿ ಈ ರೈಲು ಗಂಟೆಗೆ 320 ಕಿಲೋಮೀಟರ್ ಚಲಿಸೋದು ಖಚಿತವಾಗಿದೆ. ಹೈ ಸ್ಪೀಡ್ ರೈಲು ಯೋಜನೆ ಜನರ ಬಳಕೆಗೆ ಸಿಕ್ಕಿದ್ರೆ ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಇರುವ 508 ಕಿಲೋಮೀಟರ್​ಗಳ ದೂರ ಕೇವಲ 2 ಗಂಟೆಗಳ ಜರ್ನಿಗೆ ಮೀಸಲಾಗಲಿದೆ. ಸದ್ಯದ ಮಟ್ಟಿಗೆ ದುರಂತೋ ಎಕ್ಸ್​ಪ್ರೆಸ್ ಈ ಎರಡು ಫೈನಾನ್ಸಿಯಲ್ ರಾಜಧಾನಿಗಳ ನಡುವೆ ಓಡಾಡಲು ಸರಾಸರಿ 7 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ.

ಈ ಹೈಸ್ಪೀಡ್ ರೈಲ್ವೇ ಯೋಜನೆಯನ್ನು ಜಪಾನ್ ಸರ್ಕಾರದ ಸಹಾಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ. 508 ಕಿಲೋಮೀಟರ್​ಗಳ ಈ ಪ್ರಾಜೆಕ್ಟ್​ಗೆ ಸುಮಾರು 97,636 ಕೋಟಿ ರೂಪಾಯಿ ವೆಚ್ಚವಾಗಲಿದೆ. ಯೋಜನೆಯ ಪೂರ್ಣವೆಚ್ಚದ ಶೆಕಡಾ 81ರಷ್ಟು ಹಣಕಾಸಿನ ನೆರವನ್ನು ಜಪಾನ್ ಸರ್ಕಾರ ನೀಡಲಿದೆ. ಈ ಪ್ರಾಜೆಕ್ಟ್​ನ ಸಾಲ ಯೋಜನೆಯ ಮರುಪಾವತಿಗೆ 50 ವರ್ಷಗಳ ಅವಧಿ ಮೀಸಲಿಡಲಾಗಿದೆ. ಹಣದ ಜೊತೆಗೆ ತಾಂತ್ರಿಕ ಅಂಶಗಳನ್ನು ಕೂಡ ಜಪಾನ್ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಇದನ್ನು ಓದಿ: ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ

ಈ ಮಧ್ಯೆ ದೇಶದ ವಿವಿಧ ನಗರಗಳಿಗೆ ಹೈ ಸ್ಪೀಡ್ ರೈಲು ಯೋಜನೆಯನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ದೆಹಲಿ- ಮುಂಬೈ, ಮುಂಬೈ-ಚೆನ್ನೈ, ದೆಹಲಿ-ಕೊಲ್ಕತ್ತಾ, ದೆಹಲಿ-ನಾಗಪುರ ಮತ್ತು ಮುಂಬೈ-ನಾಗಪುರ ನಡುವೆ ಹೈ ಸ್ಪೀಡ್ ರೈಲು ಯೋಜನೆಯನ್ನು ವಿಸ್ತರಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಈ ಮಧ್ಯೆ ಸೆಮಿ ಹೈಸ್ಪೀಡ್ ರೈಲ್ವೇ ಯೋಜನೆ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ದೆಹಲಿ- ಚಂಡೀಘಢ, ಚೆನ್ನೈ- ಬೆಂಗಳೂರು- ಮೈಸೂರು, ದೆಹಲಿ- ಕಾನ್ಪುರ, ನಾಗಪುರ- ಬಿಲಸ್ಪುರ, ಮುಂಬೈ-ಗೋವಾ, ಮುಂಬೈ- ಅಹ್ಮದಾಬಾದ್, ಚೆನ್ನೈ- ಹೈದ್ರಾಬಾದ್ ಮತ್ತು ನಾಗಪುರ- ಸಿಕರಂದರಾಬಾದ್ ನಡುವೆ ಸೆಮಿ ಹೈಸ್ಪೀಡ್ ರೈಲು ಯೋಜನೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಒಟ್ಟಿನಲ್ಲಿ ವಿಶ್ವವಿಖ್ಯಾತ ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ವೇಗದ ಟಚ್ ಸಿಗಲಿದೆ.

ಇದನ್ನು ಓದಿ:

1. ಪತ್ನಿ ಹಂತಕರನ್ನೂ ದ್ವೇಷಿಸದ ಸಂಕರ್ಷಣ್​ ಜೇನಾ : ಆನೆಗಳ ರಕ್ಷಣೆಗಾಗಿ ನಿರಂತರ ಅಭಿಯಾನ

2. 70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು

3. ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್