ಕಾಲುಗಳಿಲ್ಲದ ಈಕೆ ವಿಶ್ವದ ಶ್ರೇಷ್ಠ ಈಜುಗಾರ್ತಿ..!

ಕೃತಿಕಾ

ಕಾಲುಗಳಿಲ್ಲದ ಈಕೆ ವಿಶ್ವದ ಶ್ರೇಷ್ಠ ಈಜುಗಾರ್ತಿ..!

Sunday March 20, 2016,

2 min Read

ಚೀನಿಯರ ಪಾಲಿಗೆ ಆ ಹುಡುಗಿಯನ್ನು ಇವತ್ತಿಗೂ `ಬಾಸ್ಕೆಟ್ ಬಾಲ್ ಗರ್ಲ್’ ಅಂತಲೇ ಕರೆಯುತ್ತಾರೆ. ಆದರೆ ಆಕೆ ಬಾಸ್ಕೆಟ್ ಬಾಲ್ ಆಟಗಾರ್ತಿಯೇನಲ್ಲ. ಈ ಹೆಸರಿನ ಹಿಂದೆ ಒಂದು ಕಣ್ಣೀರ ಕಥೆ ಇದೆ. ಈಕೆಯ ಹೆಸರು ಕ್ವಿಯಾನ್ ಹಾಂಗ್ಯಾನ್ . ಚೀನಾ ರಾಜಧಾನಿ ಬೀಜಿಂಗ್ ನ ಹುಡುಗಿ. ನಾಲ್ಕು ವರ್ಷದವಳಿದ್ದಾಗ ನಡೆದ ಅಪಘಾತ ಆಕೆಯ ಎರಡು ಕಾಲುಗಳನ್ನು ಕಳೆದುಕೊಳ್ಳುವಂತಾಯಿತು. ಬಾಸ್ಕೆಟ್ ಬಾಲ್ ಎಂದರೆ ಪಂಚ ಪ್ರಾಣವಾಗಿದ್ದ ಈಕೆ ಇನ್ನೆಂದಿಗೂ ಆ ಆಟ ಆಡಲು ಸಾಧ್ಯವಾದಂತಹ ಸ್ಥಿತಿಗೆ ತಂದಿತ್ತು ನಡೆದ ಭೀಕರ ಭೀಕರ ಅಪಘಾತ.

ಇದನ್ನು ಓದಿ: ಸತತ ಸೋಲುಗಳಿಂದ ಪಾಠ ಕಲಿತು ಯಶಸ್ವಿ ಉದ್ಯಮಿಯಾದ ರಾಜಸ್ಥಾನದ ಯುವಕ

ಕಾಲು ಕಳೆದುಕೊಂಡು ಮೂಲೆಗುಂಪಾದ ಮಗುವಿಗೆ ಜಗತ್ತೇ ಶೂನ್ಯವಾಗಿತ್ತು. ಮೊಮ್ಮಗಳ ಕಷ್ಟ ನೋಡಲು ಆಗದ ತಾತ, ಬ್ಯಾಸ್ಕೆಟ್ ಬಾಲ್ ಅನ್ನು ಅರ್ಧಭಾಗ ಕತ್ತರಿಸಿ ಕೆಳಗಿನ ಭಾಗಕ್ಕೆ ಜೋಡಿಸಿದ. ಕೈಗಳನ್ನು ನೆಲಕ್ಕೆ ಊರಿಕೊಂಡು ಸುಸ್ತಾದಾಗ ಬಾಸ್ಕೆಟ್​ಬಾಲ್​ನ್ನು ಆಸರೆಯಾಗಿಟ್ಟುಕೊಂಡು ಕುಳಿತುಕೊಳ್ಳುವಂತೆ ತರಬೇತಿ ನೀಡುವಲ್ಲಿ ಯಶಸ್ವಿಯೂ ಆದ.

image


ಚೀನಾದಲ್ಲಿ ಕ್ವಿಯಾನ್​ಗೆ ಸಿಕ್ಕ ಪ್ರಚಾರ ಅಷ್ಟಿಷ್ಟಲ್ಲ. ದೇಶ ವಿದೇಶಗಳಿಂದ ಹಣಕಾಸಿನ ನೆರವಿನ ಪೂರವೇ ಹರಿದು ಬಂದಿತು. 2007ರಲ್ಲಿ ಆಕೆಗೆ 11 ವರ್ಷವಿದ್ದಾಗ ಬೀಜಿಂಗ್ನ ಪುನರ್ವಸತಿ ಕೇಂದ್ರದಲ್ಲಿ ಮೊದಲ ಬಾರಿಗೆ ಆಕೆಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತು. ಕ್ವಿಯಾನ್ ಯಶೋಗಾಧೆ ಇಷ್ಟಕ್ಕೆ ಮುಗಿಯುವುದಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ಛಲ, ಹಠ ಇತ್ತು. ಇಡಿ ವಿಶ್ವಕ್ಕೆ ತನ್ನ ಹೆಸರು ಪ್ರಚುರವಾಗಬೇಕೆಂಬ ಮಹದಾಸೆ ಇತ್ತು.

ವಿಕಲಾಂಗರು ಈಜುವುದನ್ನು ಕೇಳಿದ್ದ ಕ್ವಿಯಾನ್ ತಾನು ಏಕೆ ಈಜು ಕಲಿಯಬಾರದು ಅನಿಸಿದ್ದೆ ತಡ ವಿಶೇಷ ತರಬೇತಿ ಪಡೆದಳು.

ಮೊದ ಮೊದಲು ಈಜು ಕಷ್ಟವಾದರೂ ನಂತರದ ಸಮಯದಲ್ಲಿ ಕಠಿಣ ಶ್ರದ್ಧೆ, ಪರಿಶ್ರಮದಿಂದ ಈಜುವುದನ್ನು ಕರಗತ ಮಾಡಿಕೊಂಡಳು.ಈಜುವುದನ್ನು ಪ್ರೀತಿಸತೊಡಗಿದಾಗ ಎಲ್ಲವೂ ಸುಲಭವಾಯಿತು. ಸ್ಥಳೀಯ ಮಟ್ಟದಲ್ಲಿ ವಿಕಲಾಂಗರಿಗಾಗಿ ನಡೆದ ಈಜು ಸ್ಪರ್ಧೆಗಳಲ್ಲಿ ಹಂತ ಹಂತವಾಗಿ ಪದಕಗಳನ್ನು ಪಡೆದಳು. ಇದು ಅಂತರ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಯಿತು. 2012ರಲ್ಲಿ ಲಂಡನ್ನಲ್ಲಿ ನಡೆದ ಅಂತರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದಾಗ ವಿಶ್ವವೇ ಬೆರಗಾಗಿ ಹೋಯಿತು. ಚೀನಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜತೆಗೆ ಎರಡು ಬೆಳ್ಳಿ ಪದಕಗಳನ್ನು ಪಡೆದ ಕ್ವಿಯಾನ್ ಮತ್ತೆ ಸದ್ದು ಮಾಡಿದಳು. ಇಂದು ಕ್ವಿಯಾನ್ ಚೀನಾ ದೇಶದ ಜನರ ಮನೆಮಗಳಾಗಿದ್ದಾಳೆ.

ಇದನ್ನು ಓದಿ:

1. 14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!

2. ಅಶಕ್ತರು, ದೃಷ್ಟಿವಿಕಲಚೇತನರಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತಿರುವ ಬೆಂಗಳೂರಿನ ಶಾಲೆ

3. ಹೂಡಿಕೆದಾರ ಆನ್‍ಲೈನ್ ಕಿರಾಣಿ ಅಂಗಡಿ ತೆರೆದಿದ್ದೇಕೆ?