ಡ್ರೈವಿಂಗ್ ಗೊತ್ತಿದೆಯೆ? ಹಾಗಾದ್ರೆ ಝೂಮ್ ಅಂತ ಸುತ್ತಾಡಿ

ಅಗಸ್ತ್ಯ

ಡ್ರೈವಿಂಗ್ ಗೊತ್ತಿದೆಯೆ? ಹಾಗಾದ್ರೆ ಝೂಮ್ ಅಂತ ಸುತ್ತಾಡಿ

Friday December 25, 2015,

2 min Read


ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಎಲ್ಲಾದ್ರೂ ಹೋಗಬೇಕು ಅಂದ್ರೆ ಸಾಕು ಸ್ವಂತ ಕಾರಿಲ್ಲದವರು ಬಾಡಿಗೆ ಕಾರು ಮಾಡ್ಕೊಂಡು ಝೂಮ್ ಅಂತ ಹೋಗ್ತಾರೆ. ಆದ್ರೆ ಆ ಕಾರಿನ ಜೊತೆ ಡ್ರೈವರ್ ಕೂಡ ಬರ್ತಾರೆ. ಈಗ ಹಾಗಾಗೋದಿಲ್ಲ ನಿಮಗೆ ಡ್ರೈವಿಂಗ್ ಗೊತ್ತಿದ್ದು, ಅದರ ಲೈಸೆನ್ಸ್ ಇದ್ರೆ ನೀವು ಬಾಡಿಗೆ ಕಾರಿಗೆ ಸ್ವಲ್ಪ ಕಾಲದ ಮಟ್ಟಿಗೆ ಓನರ್ ಆಗ್ಬಹುದು. ಅಚ್ಚರಿ ಪಡಬೇಡಿ. ಇದು ಝೂಮ್ ಸಂಸ್ಥೆ ಕೊಡ್ತಿರೋ ಸೇವೆ. ನಿಮಗೆ ಡ್ರೈವಿಂಗ್ ಗೊತ್ತಿದೆ. ಆದರೆ ಕಾರ್ ಇಲ್ಲ. ಎಲ್ಲಾದರೊಂದು ಕಡೆ ನೀವೇ ಡ್ರೈವ್ ಮಾಡ್ಕೊಂಡು ಟೂರ್ ಹೋಗಬೇಕು ಅನ್ನೋ ಆಸೆ ಇದೆ. ಆದರೆ ಕಾರ್ ಯಾರು ಕೊಡ್ತಾರೆ? ಫ್ರೆಂಡ್ಸ್ ಹತ್ರ ಕೇಳೋಕೆ ಮುಜುಗರ. ಇಂಥಾ ಹೊತ್ತಲ್ಲಿ ಏನು ಮಾಡಬಹುದು? ಸಿಂಪಲ್. ಝೂಮ್ ಕಂಪನಿಯಲ್ಲಿ ಬೇಕಾದ ಕಾರ್ ಬುಕ್ ಮಾಡ್ಕೊಂಡು ನೀವೇ ಡ್ರೈವ್ ಮಾಡಿ ಅರಾಮಾಗಿ ಹೋಗ್ಬಹುದು.

ಕಾರು ಬಾಡಿಗೆಗೆ ಕೊಡ್ತಾರೆ:

image


ಝೂಮ್ ಕಾರ್ ಎಂಬ ಕಂಪನಿಯೋರು ನಿಮಗೆ ಬೇಕಾದ ಕಾರ್ ಅನ್ನು ಬಾಡಿಗೆಗೆ ಕೊಡ್ತಾರೆ. ನೀವು ಕಾರ್ ತೆಗೆದುಕೊಂಡು ನೀವೇ ಡ್ರೈವ್ ಮಾಡಿಕೊಂಡು ಡ್ರೈವಿಂಗ್ ಖುಷಿ ಪಡೆಯಬಹುದು. ಹೀಗೆ ಖುಷಿ ಪಡೋಕೆ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಆಗ ಮಾತ್ರ ಝೂಮ್ ನಿಮಗೆ ಕಾರು ಬಾಡಿಗೆಗೆ ಕೊಡುತ್ತೆ.

ಬುಕಿಂಗ್ ಹೇಗೆ?:

ಝೂಮ್‍ನಲ್ಲಿ ಕಾರು ಪಡೆಯುವುದು ಬಹಳ ಸುಲಭ.www.zoomcar.com/bangalore ವೆಬ್‍ಸೈಟ್‍ಗೆ ಹೋಗಿ ನೀವು ಕಾರು ಬುಕ್ ಮಾಡಬಹುದು ಅಥವಾ ಇಂದಿರಾನಗರ, ರಾಜಾಜಿನಗರ ಮತ್ತು ಎಚ್‍ಎಎಲ್‍ನಲ್ಲಿರುವ ಸಂಸ್ಥೆಯ ಕಚೇರಿಗೆ ತೆರಳಿ ಬುಕ್ ಮಾಡಬಹುದು. ಬೆಂಗಳೂರು ಮಾತ್ರವಲ್ಲದೆ ದೆಹಲಿ, ಪುಣೆ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಚಂಡೀಘಡದಲ್ಲೂ ಝೂಮ್ ತನ್ನ ಸೇವೆ ಒದಗಿಸುತ್ತಿದೆ.

image


ಕಾರು ಪಡೆಯುವ ಮುನ್ನ:

ಇಲ್ಲಿ ಕಾರು ಬಾಡಿಗೆಗೆ ಪಡೆಯುತ್ತೀರಿ ಎನ್ನುವುದಾದರೆ ಮೊದಲು ನೀವು ಝೂಮ್ ಕಾರ್ ಮೆಂಬರ್ ಆಗಬೇಕು. ಆಮೇಲೆ ಅಲ್ಲಿ 5000 ಅಡ್ವಾನ್ಸ್ ಕೊಟ್ಟು ಕಾರ್ ಬಾಡಿಗೆಗೆ ಪಡೆಯಬಹುದು. ಅದನ್ನು ಕಾರ್ ಹಿಂತಿರುಗಿಸಿದಾಗ ವಾಪಸ್ ನೀಡಲಾಗುವುದು. ಬೇರೆ ಬೇರೆ ಕಾರ್‍ಗಳು ಇಲ್ಲಿರುವುದರಿಂದ ಆಗಾಗ ಬೇರೆ ಬೇರೆ ಕಾರ್ ಡ್ರೈವ್ ಮಾಡುವ ಅವಕಾಶ ನಿಮಗೆ ಇಲ್ಲಿ ಸಿಗುತ್ತದೆ.

ಬಾಡಿಗೆ ಹೇಗೆ?:

ಝೂಮ್ ಸಂಸ್ಥೆ ನಿಮಗೆ ಗಂಟೆ, ವಾರ, ತಿಂಗಳುಗಳ ಲೆಕ್ಕದಲ್ಲಿ ಕಾರನ್ನು ಬಾಡಿಗೆಗೆ ನೀಡುತ್ತಾರೆ. ಇಂತಿಷ್ಟು ಗಂಟೆಗೆ ಅಥವಾ ಇಂತಿಷ್ಟು ದಿನಕ್ಕೆ ಕಾರು ಬೇಕು ಅಂತ ಬುಕ್ ಮಾಡಬೇಕು. ಕರೆಕ್ಟಾಗಿ ಅಷ್ಟು ಹೊತ್ತಿಗೆ ವಾಪಸ್ ನೀಡಬೇಕು. ಅದಕ್ಕಿಂತ ಲೇಟಾದರೆ ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.

image


ಯಾವ್ಯಾವ ಕಾರ್ ಇದೆ?

ಝೂಮ್‍ನಲ್ಲಿ ನಿಮಗೆ ತರಹೇವಾರು ಕಾರು ಸಿಗುತ್ತದೆ. ನಿಮಗ್ಯಾವುದು ಇಷ್ಟವೋ ಅದನ್ನು ಪಡೆದು ಡ್ರೈವ್ ಮಾಡಬಹುದು. ಫಿಗೋ, ಅಮೇಝ್, ಹೋಂಡಾ ಸಿಟಿ, ಇಕೋನ್ಪೋರ್ಟ್, ಸ್ಕಾರ್ಪಿಯೋ ಎಲ್‍ಎಕ್ಸ್, ಸಫಾರಿ, ಎಕ್ಸ್​ಯುವಿ, ಎ ಕ್ಲಾಸ್, 3 ಸೀರೀಸ್, ಐ 20 ಹೀಗೆ ಎಲ್ಲಾ ಬಗೆಯ ಕಾರುಗಳು ಸಿಗುತ್ತವೆ. ಈ ಕಾರುಗಳನ್ನು ಝೂಮ್ ಲೈಟ್, ಕ್ಲಾಸಿಕ್ ಮತ್ತು ಎಕ್ಸ್​ಎಲ್​​ ಎಂದು ವಿಂಗಡಿಸಲಾಗಿದೆ. ಕಾರುಗಳ ಬಾಡಿಗೆ ಪಡೆಯುವ ಅವಧಿಗೆ ತಕ್ಕಂತೆ ಅವುಗಳನ್ನು ವಿಂಗಡಿಸಲಾಗಿದೆ.

image


ರೇಟೆಷ್ಟು?

ಒಂದೊಂದು ಕಾರ್‍ಗೆ ಒಂದೊಂದು ಥರ ಶುಲ್ಕ. ಫಿಗೋ ಕಾರಿಗೆ ನೀವು ಗಂಟೆಗೆ ರೂ.70 ಕೊಡಬೇಕು. ಹತ್ತು ಕಿಮೀ ಫ್ರೀ. ಆಮೇಲೆ ಕಿಮೀಗೆ 12 ರೂ. ಶುಲ್ಕ. ಈ ಶುಲ್ಕ ಸೋಮವಾರದಿಂದ ಗುರುವಾರದವರೆಗೆ ಮಾತ್ರ. ವಾರಾಂತ್ಯದ ದಿನಗಳಿಗೆ ಪ್ರತ್ಯೇಕ ಶುಲ್ಕವಿರುತ್ತದೆ. ಹೀಗೆ ಬೇರೆ ಬೇರೆ ಕಾರ್‍ಗೆ ಬೇರೆ ಬೇರೆ ಶುಲ್ಕ. ಸಂಸ್ಥೆ ಕೆಲವೊಮ್ಮೆ ವಿಶೇಷ ಕೊಡುಗೆಗಳನ್ನು ನೀಡುತ್ತದೆ. ಅದನ್ನು ಪಡೆದು ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಅರಾಮಾಗಿ ಸುತ್ತಾಡಬಹುದು.