ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!

ಟೀಮ್​ ವೈ.ಎಸ್​. ಕನ್ನಡ

ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!

Thursday April 07, 2016,

2 min Read

ಸ್ಮಾರ್ಟ್ ಜನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲರೂ ಕೂಡ ಸ್ಮಾರ್ಟ್ ಗ್ರಾಹಕರನ್ನು ಸೆಳೆಯಲು, ಹೇಗಾದ್ರ ಮಾಡಿ ಅವರನ್ನು ಆಕರ್ಷಿಸಲು ಹೊಸ-ಹೊಸ ಯೋಜನೆಗಳನ್ನು ಹಾಕುತ್ತಿದ್ದಾರೆ. ದೂರದರ್ಶನ ಕೂಡ ಈಗ ಇದೆ ಗುರಿಯನ್ನು ಹೊಂದಿದೆ. ಆದ್ದರಿಂದ ಈಗ ದೂರದರ್ಶನ ಉಚಿತ ಟಿವಿ ಸೇವೆಯನ್ನು ಆರಂಭಿಸುತ್ತಿದೆ. ನವದೆಹಲಿಯಲ್ಲಿ ಪ್ರಸರಣಾಕಾರರು ದೂರದರ್ಶನದ 'ಡಿಜಿಟಲ್ ಟೆರೆಸ್ಟ್ರಿಯಲ್ ದೂರದರ್ಶನ ಸೇವೆ' ಫೆಬ್ರವರಿ 25 ರಿಂದಲೇ 16 ನಗರಗಳಲ್ಲಿ ಆರಂಭವಾಗಿದ್ದು, ಈಗ ಮೊಬೈಲ್ ಟಿವಿ'ಯನ್ನು ಬಳಕೆದಾರರಿಗೆ ಒದಗಿಸಲಾಗುತ್ತಿದೆ.

image


ಟಿವಿ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ದೊರದರ್ಶನ, ಹೊಸ ತಂತ್ರಜ್ಞಾನದ ಮೋರೆ ಹೋಗಿದೆ. ಹಾಗಾಗಿ 16 ನಗರದಲ್ಲಿ ತನ್ನ ಹೊಸ ಸೇವೆಯನ್ನು ಆರಂಭಿಸಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಗುವಾಹಟಿ, ಪಾಟ್ನಾ, ರಾಂಚಿ, ಕಟಕ್, ಲಕ್ನೋ, ಜಲಂಧರ್, ರಾಯ್ಪುರ್, ಇಂಡೋರ್, ಔರಂಗಾಬಾದ್, ಭೋಪಾಲ್, ಬೆಂಗಳೂರು ಮತ್ತು ಅಹಮದಾಬಾದ್ ಉಚಿತ ಮೊಬೈಲ್ ಟಿವಿ ಸೇವೆ ಪಡೆದಿರುವ 16 ನಗರಗಳಾಗಿವೆ.

ಇದನ್ನು ಓದಿ: 'ಮೆಡಿಡೈಲಿ'ಗೆ ಜನ್ಮ ನೀಡಿದ ಮರಾಠಿ ಹಬ್ಬ..!

ಗ್ರಾಹಕರು ಗೂಗಲ್​ನಲ್ಲಿ ಹೋಗಿ ‘ಟಿವಿ ಆನ್ ಗೋ ಆ್ಯಪ್’ ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ OTG ಯಲ್ಲಿ DVB-T2 ಡಾಂಗಲ್ಸ್ ಅನ್ನು ಸ್ಮಾರ್ಟ್​ಫೋನ್ ಮತ್ತು ಟ್ಯಾಬ್ಲೆಟ್​ಗಳಲ್ಲಿ ಎನೇಬಲ್ ಮಾಡಬೇಕು ಹಾಗೂ ವಾಹನಗಳಲ್ಲಿ ಬಳಸುವವರು ವೈಫೈ ಡಾಂಗಲ್​ಗಳನ್ನು ಬಳಸಬೇಕು. ಟಿವಿ ಸೆಟ್ಸ್ ಪಕ್ಕದಲ್ಲಿ DVB-T2 ಅನ್ನು ಹೊಂದಬೇಕು. ಇದನ್ನು ಇಂಟಿಗ್ರೇಟೆಡ್ ಡಿಜಿಟಲ್ ಟಿವಿ ಎಂದು ಕರೆಯಲಾಗುತ್ತದೆ.

image


DVB-T2- ವಿಸ್ತರಣಾ ರೂಪ 'Digital Video Broadcasting - Second Generation Terrestrial'. ಇದು ಟೆಲಿವಿಷನ್ ಮಾದರಿಯ ವಿಸ್ತರಣೆ. OTG- USB OTG ಎಂಬುದು on-the-go ವಿಸ್ತರಣೆ. ಇದನ್ನು ಮೊಟ್ಟ ಮೊದಲಿಗೆ 2001 ರಲ್ಲಿ ಬಳಸಲಾಯಿತು. ಇದು ಯುಎಸ್​ಬಿ ಡಿವೈಸ್​​ಗಳಾಗಿ ಡಿಜಿಟಲ್ ಆಡಿಯೋ ಪ್ಲೇಯರ್ ಮತ್ತು ಮೊಬೈಲ್ ಅನ್ನು ಬಳಸಲು ಅವಕಾಶ ನೀಡುತ್ತದೆ. ಇಂಟಿಗ್ರೇಟೆಡ್ ಡಿಜಿಟಲ್ ಟಿವಿ (iDTV), ಸೋನಿ, ಎಲ್ಜಿ, ಪ್ಯಾನಾಸಾನಿಕ್, ಸ್ಯಾಮ್ಸಂಗ್ ಡಿವೈಸ್​ಗಳಿಗೆ ಲಭ್ಯವಿದೆ. ಡಾಂಗಲ್​ಗಳು ಆನ್​ಲೈನ್​ನಲ್ಲಿ ಲಭ್ಯವಿದೆ. 

image


ಮೊಬೈಲ್ ಬಳಕೆದಾರರು ಮೊದಲಿಗೆ ಸಾಫ್ಟ್​​ವೇರ್​ನ್ನು ಡೌನ್ಲೋಡ್ ಮಾಡಿ ನಂತರ ಡಾಂಗಲ್​​ಗಳನ್ನು ಸಂಪರ್ಕಸಿ ಡಿಡಿ ಸಿಗ್ನಲ್ ಅನ್ನು ಪಡೆಯಬೇಕು. ಡಿಡಿ ಚಾನೆಲ್ ಅನ್ನು ವೀಕ್ಷಿಸಲು ಯಾವುದೇ ಚಾರ್ಜ್ ಇಲ್ಲ. ಹಾಗೂ ಸಾಫ್ಟ್​​ವೇರ್ ಇನ್ಸ್​ಟಾಲ್ ಮಾಡಿದ ನಂತರ ಯಾವುದೇ ಇಂಟರ್ನೆಟ್ ಸಂಪರ್ಕ ಸಹ ಬೇಕಿಲ್ಲ.

ಪ್ರಸ್ತುತ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಸ್ಫೋಟ್ಸ್, ಡಿಡಿ ರೀಜನಲ್ ಪ್ರಸಾರವಾಗುತ್ತಿವೆ. ಕೇವಲ ಒಮ್ಮೆ ಸ್ಮಾರ್ಟ್​ಫೋನ್ ಬಳಕೆದಾರರು ಡಾಂಗಲ್ ಅನ್ನು ಖರೀದಿಸಿದರೆ ನಂತರದಲ್ಲಿ ಯಾವುದೇ ಇಂಟರ್ನೆಟ್ ಚಾರ್ಜ್ ಸಹ ಇಲ್ಲದೆ, ಉಚಿತ ಟಿವಿ ಸೇವೆಯನ್ನು ಪಡೆಯಬಹುದಾಗಿದೆ.

ಇದನ್ನು ಓದಿ

1. ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..

2. ರಜಾ ದಿನಗಳಿಗೆ ಸಿಂಪಲ್​ ಆಗಿ ಪ್ಲಾನ್​ ಮಾಡಿ...

3. ಕಾರ್ಪೋರೇಟ್ ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!