“ಯೂ ಆರ್ ಮೈ ಸೋನಿಯಾ”ಹಾಡಿನ ಹಿಂದಿರುವ ಸಂಗೀತ ಮಾಂತ್ರಿಕೆ 'ಮರ್ಲಿನ್'

ಟೀಮ್​​ ವೈ.ಎಸ್​​.

“ಯೂ ಆರ್ ಮೈ ಸೋನಿಯಾ”ಹಾಡಿನ ಹಿಂದಿರುವ ಸಂಗೀತ ಮಾಂತ್ರಿಕೆ 'ಮರ್ಲಿನ್'

Friday October 16, 2015,

6 min Read

ನೀವೇನಾದ್ರೂ 90ರ ದಶಕದವರಾಗಿದ್ರೆ "ಯೂ ಆರ್ ಮೈ ಸೋನಿಯಾ" ಚಿತ್ರದ ಹಾಡನ್ನ ಕೇಳಿಯೇ ಇರುತ್ತೀರಿ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದಂತೆಯೋ ಹಾಡನ್ನ ಗುನುಗಿರುತ್ತೀರಿ. ಬಾಲಿವುಡ್‍ನಲ್ಲಿ, ಹೊಸದೊಂದು ಟ್ರೆಂಡ್ ಕ್ರಿಯೇಟ್ ಮಾಡಿದ ಈ ಹಾಡನ್ನ ಹುಟ್ಟುಹಾಕಿದವರನ್ನ ಶ್ಲಾಘಿಸಿಯೂ ಇರುತ್ತೀರಿ. ಕರೀನಾ ಕಪೂರ್‍ರಿಂದ ಹಿಡಿದು, ಇಡೀ ಬಾಲಿವುಡ್ ಬೆರಗಾಗುವಂತಾ ಹೊಸ ಬಗೆಯ ಹಾಡಿನ ಹಿಂದೆ, ಎಲೆ ಮರೆ ಕಾಯಿಯಂತಿರುವ ಪ್ರತಿಭೆಯೊಂದನ್ನ ನಾವಿಂದು ನಿಮಗೆ ಪರಿಚಯ ಮಾಡಿಸ್ತೀವಿ.

image


ಮರ್ಲಿನ್ ಡಿಸೋಜಾ, ಪಿಯನೋ ಪರಿಣಿತೆ. ಎಂತಹ ಸಂಗೀತ ವಾದ್ಯವನ್ನೂ ಸುಲಲಿತವಾಗಿ ನುಡಿಸುವ ಚತುರೆ. ಸಂಗೀತವನ್ನೇ ಪ್ರವೃತ್ತಿಯಾಗಿ ಆರಿಸಿಕೊಂಡು, ಗಾಯನ, ಸಂಗೀತಾ ಸಂಯೋಜನೆ, ನಿರ್ಮಾಣ ಕಾರ್ಯದಲ್ಲೂ ಕೈಜೋಡಿಸಿ, ಸಂಗೀತ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು.

ಮುಂಬೈ ನಗರದ ಹೃದಯ ಭಾಗ ಬಾಂದ್ರಾದಲ್ಲಿದೆ ಮರ್ಲಿನ್​​ರ ಸಂಗೀತ ಸ್ಟುಡಿಯೋ. ಬಾಂದ್ರಾದಂತಹ ಬ್ಯುಸಿ ಏರಿಯಾದಲ್ಲೂ ಮರ್ಲಿನ್ ಸಂಗೀತದ ಅಲೆ ಇದೆ. ಮರ್ಲಿನ್ ಹುಟ್ಟಿ ಬೆಳೆದ್ದು ಬಾಂದ್ರಾದಲ್ಲೇ. ಸದಾಕಾಲ ಸಂಗೀತ ಲಹರಿಯ ಇಂಪಾದ ಧ್ವನಿ ಸ್ಟುಡಿಯೋದಲ್ಲಿ ಮಾರ್ಧನಿಸುತ್ತೆ. "ಇಂಧೀವ" ಎನ್ನುವ ಮಹಿಳೆಯರ ತಂಡವನ್ನ ಮುನ್ನಡೆಸುವ ಮರ್ಲಿನ್‍ಗೆ ಸದಾಕಾಲ ಕೈತುಂಬ ಅವಕಾಶಗಳಿರುತ್ತವೆ. ಅದರಲ್ಲೂ ಪ್ರಸಿದ್ಧ ಸಂಗೀತಕಾರರೊಂದಿಗಿನ ಒಡನಾಟ ಹಾಗೂ ಆಕೆಯ ಸೋಲೋ ಆಲ್ಬಮ್‍ಗಳ ಸಪ್ಪಳದಿಂದಾಗಿ ಹೆಚ್ಚಿನ ಪ್ರಸಿದ್ಧಿ ಪಡೆದಿದ್ದಾರೆ ಮರ್ಲಿನ್.

ಸ್ಟುಡಿಯೋ ಹಾಲ್‍ನ ಕೋಣೆಗೆ ತೆರಳುವ ಮುನ್ನ ಅಚ್ಚರಿ ಮೂಡಿಸುವ ಪೈಂಟಿಂಗ್‍ಗಳು ಮತ್ತೊಂದು ಲೋಕಕ್ಕೆ ಕರೆದೊಯ್ಯತ್ತೆ. ರೆಕ್ಕೆ ಬಿಚ್ಚಿ ಹಾರುತ್ತಿರುವ ಬಿಳಿ ಪಾರಿವಾಳಗಳು, ಪ್ರಕಾಶಮಾನವಾಗಿ ಬೆಳಗುತ್ತಿರುವ ಸೂರ್ಯ, ಮನಸಿಗೆ ಮುದ ನೀಡುವ ಬಣ್ಣಗಳ ಮಿಶ್ರಣ, "ಎಮ್" ಅಕ್ಷರದ ಸಾರಾಂಶ ತಿಳಿಸುವ ಚಿತ್ರಣ. ಇವೆಲ್ಲರೂ ಮರ್ಲಿನ್ ಸಂಗೀತದ ಮೋಡಿಗೆ ಒಳಗಾಗಿ ಅಭಿಮಾನಿಗಳು ಹಾಗೂ ಗ್ರಾಹಕರು ನೀಡಿರುವ ಪ್ರಶಂಸೆಯ ಉಡುಗೊರೆಗಳು. ಅಷ್ಟೇ ಅಲ್ಲ , ಮರ್ಲಿನ್ ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಮರ್ಲಿನ್ ಕೆಲಸದಿಂದ ಪುಳಕಿತಗೊಂಡು ಪ್ರಶಂಸೆಯ ಪ್ರತೀಕವಾಗಿ ನೀಡಿರುವ ಉಡುಗೊರೆಗಳು.

ವೃತ್ತಿ ಬದುಕು ಅನ್ನೋದು ಕೇವಲ ಯಾಂತ್ರಿಕ ಕೆಲಸವಲ್ಲ. ಅದು ಬದುಕು ಹಾಗೂ ಆಳವಾದ ಸಂಬಂಧಗಳನ್ನ ಬೆಸೆಯುವ ಮಾರ್ಗ ಅನ್ನೊದನ್ನ ಹಾಲ್‍ನಲ್ಲಿರುವ ಉಡುಗೊರೆಗಳು ನೆನಪು ಮಾಡುತ್ತವೆ. ಆಳವಾದ ಸಂಬಂಧಗಳಿಂದ ಮರ್ಲಿನ್ ಯಶೋಗಾಥೆ ಆರಂಭವಾಗತ್ತೆ.

ಮುಂಬೈನಿಂದ ಗೋವಾದವರೆಗೂ

ಮರ್ಲಿನ್​​​ ತಂದೆ ಹಾಗೂ ತಾಯಿ ಗೋವಾ ಮೂಲದವರು. ಗೋವಾ ಅಂದಮೇಲೆ ಕೇಳ್ತೀರಾ..ಕೊನೇ ಪಕ್ಷ ಮನೆಯಲ್ಲಿ . ಪಿಯಾನೋ, ವಯೋಲಿನ್, ಟ್ರಂಪ್ ಆದ್ರೂ ಇರುತ್ತಿತ್ತು. ವಿದ್ಯಾಭ್ಯಾಸಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಸಂಗೀತಕ್ಕೆ. ನಾನು 6ನೇ ವಯಸಿನಲ್ಲಿ ಇರುವಾಗ್ಲೇ ಪಿಯಾನೋ ಒಂದನ್ನ ಖರೀದಿ ಮಾಡಿ ತರಲಾಗಿತ್ತು. ಪಿಯಾನೋ ನುಡಿಸುವುದನ್ನು ಕಲಿಯದೆಯೇ ಅಚ್ಚುಕಟ್ಟಾಗಿ ನುಡಿಸುತ್ತಿದ್ದ ನನ್ನ ಪ್ರತಿಭೆಯನ್ನ ನನ್ನ ತಂದೆ ಗುರುತಿಸಿದ್ದರು. 8ನೇ ವಯಸಿನಲ್ಲೇ ನಾನು ಆಲ್ ಇಂಡಿಯಾ ರೇಡಿಯೋದಲ್ಲಿ ಕಲಾವಿದೆಯಾಗಿ ಕೆಲಸ ಮಾಡಿದೆ. ನನ್ನ ತಾಯಿ ನನಗೆ ಪ್ರತಿ ಬಾರಿ ಶೋ ಇರುವಾಗಲೂ ಹೊಸ ಬಟ್ಟೆಗಳನ್ನ ಕೊಡಿಸ್ತಾ ಇದ್ರು. ರೇಡಿಯೋದಲ್ಲಿ ನಾನು ತೊಡುವ ಹೊಸ ಬಟ್ಟೆ ಯಾರಿಗೂ ಕಾಣಿಸದೇ ಇದ್ರೂ, ನನಗೆ ಹೊಸ ಬಟ್ಟೆ ಕೊಡಿಸುವ ಮೂಲಕ ಹುರಿದುಂಬಿಸ್ತಾ ಇದ್ರು. ಅಲ್ಲದೆ, ರಾಬಿನ್ ಸ್ಯಾಂಡ್‍ವಿಚ್ ಹಾಗೂ ಚರ್ಚ್‍ನ ಮೂಲೆ ಅಂಗಡಿಯಲ್ಲಿ ಸಿಗುತ್ತಿದ್ದ ಅರ್ಧ ಗ್ಲಾಸ್ ವೈನ್, ಶೋಗಾಗಿ ನನ್ನನ್ನು ಪ್ರೇರೇಪಿಸುತ್ತಿದ್ದವು. ಸ್ಟೇಜ್ ಮೇಲೇರಲು ನನ್ನನ್ನ ಹುರಿದುಂಬಿಸುತ್ತಿತ್ತು.

image


ಗೋವಾ ಹಾಗೂ ಬಾಂದ್ರಾ ಎರಡೂ ಕಡೆಯೂ ಸಾಕಷ್ಟು ಚರ್ಚ್‍ಗಳು ಹಾಗೂ ಗುಡಿಗಳಿದ್ದವು. ಹಾಗಾಗಿ ನನ್ನ ಪ್ರತಿಭೆಯನ್ನ ಅನಾವರಣಗೊಳಿಸಲು ನನಗೆ ಸದಾಕಾಲ ಅವಕಾಶ ಸಿಗ್ತಾ ಇತ್ತು. ಬದುಕು ಸುಂದರವಾಗಿ ಸಾಗುತ್ತಿರುವಾಗ ನನ್ನ ತಂದೆಯ ಸಾವು ನನ್ನ ಕುಟುಂಬಕ್ಕೆ ಬರಸಿಡಿಲಂತೆ ಬಂದೆರಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ನನಗೂ ಅಪರೂಪದ ಎಲುಬುರೋಗ ಕಾಣಿಸಿಕೊಂಡಿತು. ದಿನಕಳೆದಂತೆ ಮೂಳೆಗಳು ಸಡಿಲಗೊಂಡವು. ದೇಹ ಕ್ಷೀಣಗೊಂಡಿತು. ನಾನು ಶಾಲೆಗೂ ಹೋಗದಂತಾಯಿತು. ಕೊನೆಪಕ್ಷ ನನಗೆ ಸಂಗೀತ ಪರೀಕ್ಷೆಯನ್ನೂ ಬರೆಯಲು ಸಾಧ್ಯವಾಗಲಿಲ್ಲ. ನನ್ನ ಕೈಗಳು ಬಲಹೀನಗೊಂಡಿದ್ದರಿಂದ ಹಲವು ತಿಂಗಳುಗಳ ಕಾಲ ನನಗೆ ಪಿಯಾನೋ ನುಡಿಸುವುದೂ ಕಷ್ಟಸಾಧ್ಯವಾಯಿತು.

ನಾನು ನನ್ನ ತಾಯಿಯಿಂದ ಪ್ರ್ರೇರೇಪಿತಳಾದವಳು. ಚಿಕ್ಕ ವಯಸಿನಲ್ಲೇ ತಂದೆಯನ್ನ ಕಳೆದುಕೊಂಡ ನಂತ್ರ ನನ್ನ ತಾಯಿಗೆ ನಾಲ್ಕು ಮಕ್ಕಳನ್ನ ಬೆಳೆಸುವ ಜವಾಬ್ದಾರಿ ಹೆಗಲೇರಿತು. ಎರಡುಬಾರಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾದ್ರೂ, ನನ್ನ ತಾಯಿ ವೃತ್ತಿ ಬದುಕನ್ನ ಮುಂದುವರಿಸಿದ್ರು. ಶಾಲೆಯ ಪ್ರಾಂಶುಪಾಲರಾದರು. ನನ್ನ ತಾಯಿಗೆ ಇದೆಲ್ಲಾ ಸಾಧ್ಯವಾಗತ್ತೆ.. ನನಗೇಕೆ ಸಾಧ್ಯವಿಲ್ಲ ..?ಅನ್ನೋ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿತು.

ನೀನು ಹುಟ್ಟಿನಿಂದಲೇ ಹಲವು ಸವಾಲುಗಳನ್ನ ಎದುರಿಸಿದವಳು. ದೇವರು ಕೊಟ್ಟಿರುವ ಈ ಜೀವನದಲ್ಲಿ ಏನನ್ನಾದ್ರೂ ಸಾಧಿಸಿತೋರಿಸು ಅಂತಿದ್ರು ನನ್ನ ತಾಯಿ. ಆದ್ರೆ, ಸಂಗೀತವಲಯದಲ್ಲಿ ಭವಿಷ್ಯವಿಲ್ಲ ಅಂತಿದ್ದ ಹಲವರ ಮಾತು ನನ್ನ ವೃತ್ತಿ ಬದುಕನ್ನ ಸಾರ್ವಜನಿಕ ಸಂಪರ್ಕ ವಲಯದಲ್ಲಿ ಆರಂಭಿಸುವಂತೆ ಮಾಡಿತು. ಆದ್ರೆ , ನನ್ನ ತಾಯಿಗೆ ಅದು ಇಷ್ಟವಿರಲಿಲ್ಲ. ನನ್ನ ಸಂಗೀತದ ಬಗ್ಗೆ ಆಕೆಗೆ ಸಂಪೂರ್ಣ ನಂಬಿಕೆಯಿತ್ತು. ಹಾಗಾಗಿ, ತಿರುಗಿ ಸಂಗೀತವಲಯಕ್ಕೆ ತೆರಳುವಂತೆ ತಾಯಿ ತಾಕೀತು ಮಾಡಿದ್ರು.

ಬಾಲಿವುಡ್ ಕೈಬೀಸಿ ಕರೆದಿತ್ತು

ಮರ್ಲಿನ್ ಸ್ನೇಹ ಸಂಬಂಧ ಆಕೆಯನ್ನ ಬಾಲಿವುಡ್‍ನತ್ತ ಕರೆತಂದಿತ್ತು. 'ನಾನು ಚಿಕ್ಕವಳಿದ್ದಾಗಲೂ ಹಲವು ರಾಗಗಳನ್ನ ಒಟ್ಟುಗೂಡಿಸಿ ಹೊಸ ಪ್ರಯೋಗ ಮಾಡ್ತಾ ಇದ್ದೆ. ನನ್ನ ಆ ಹೊಸ ಸ್ಟೈಲ್ ಕೇಳುಗರಲ್ಲಿ ಹುಚ್ಚಿಡಿಸುವಂತೆ ಮಾಡ್ತಾ ಇದ್ವು. ಅದೇ ನನ್ನ ಹೊಸ ಶೈಲಿ-ವಲ್ಡ್ ಫ್ಯೂಷನ್, ಈ ಸಂಗೀತ ಶೈಲಿಯನ್ನ ಇಷ್ಟಪಟ್ಟಿದ್ದ ನನ್ನ ಸ್ನೇಹಿತ ಸಂದೇಶ್ ಚಂಡೇಲಿಯಾರಿಂದ ಕರೆ ಬಂದಿತ್ತು. ಕಭಿ ಖುಷಿ ಕಭಿ ಗಮ್ ಚಿತ್ರದ ಹಾಡೊಂದಕ್ಕೆ ರಾಗ ಸಂಯೋಜನೆಗಾಗಿ. ಆಗ ಶುರುವಾಯ್ತು ಸಿದ್ದತೆ.

ನಲವತ್ತು ಗಾಯಕರೊಂದಿಗೆ ಕೆಹ್‍ದೋನಾ ಸೋನಿಯಾ ಹಾಡನ್ನ ಡಬ್ ಮಾಡಲಾಯ್ತು. ಹೊಸ ಶೈಲಿ ಎಲ್ಲರ ಮನಗೆದ್ದಿತ್ತು. ಅದೆ ಗೆಲುವು ನನ್ನನ್ನ ರೋಡ್, ಸೋಚಾ ನಾ ಥಾ ಸೇರಿದಂತೆ ಹಲವು ಹಾಡುಗಳನ್ನ ನೀಡುವಂತೆ ಮಾಡ್ತು.

ಬಾಲಿವುಡ್‍ಗಷ್ಟೇ ಸೀಮಿತರಲ್ಲ ಮರ್ಲಿನ್

ಮರ್ಲಿನ್ ಜೊತೆ ಐದು ನಿಮಿಷ ಮಾತನಾಡಿದ್ರೆ ಸಾಕು ಆಕೆ ಕೇವಲ ಬಾಲಿವುಡ್‍ಗಷ್ಟೇ ಸೀಮಿತರಲ್ಲ, ಆಕೆಯ ಪ್ರತಿಭೆ ಎಲ್ಲಾ ವಲಯಗಳಲ್ಲೂ ಪಸರಿಸಿದೆ ಅನ್ನೋದು ತಿಳಿಯತ್ತೆ.

ಬಾಲಿವುಡ್ ರೇಸ್‍ನಿಂದ ಆಗಾಗಾ ವಿರಾಮ ತೆಗೆದುಕೊಂಡು ಜಾಹೀರಾತು ವಿಭಾಗದಲ್ಲಿ, ಸ್ಟೇಜ್ ಶೋಗಳಲ್ಲಿ ಹಾಗೂ ಕಾರ್ಪೋರೇಟ್ ಟ್ಯೂನ್‍ಗಳನ್ನೂ ಹಾಕುವ ಮೂಲಕ ನನ್ನೆಲ್ಲ ಕನಸುಗಳನ್ನೂ ನನಸು ಮಾಡಿಕೊಂಡೆ ಅಂತಾರೆ ಮರ್ಲಿನ್.

ಫೋನ್ ರಿಂಗಣಿಸುತ್ತಲೇ ಇತ್ತು. ಅವಕಾಶಗಳ ಸುರಿಮಳೆಗೈದಿತ್ತು. ಇಷ್ಟು ಸಾಕಿತ್ತು ಆಕೆಗೆ ತನ್ನ ಸ್ವಂತ ಸ್ಟುಡಿಯೊ ತೆರೆಯುವ ಕನಸು ಕೊನೆಗೂ ನನಸಾಗಿತ್ತು. ರಾತ್ರಿ ಹಗಲು ಎನ್ನದೆ, ದಿನದ 24 ಗಂಟೆಯೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹೃದಯಪೂರ್ವಕವಾಗಿ ಕಟ್ಟಿದ ಸ್ಟುಡಿಯೋ ದಿನೇ ದಿನೇ ಯಶಸ್ಸಿನ ಉತ್ತುಂಗಕೇರಿತ್ತು. ನನ್ನ ಸಂಗೀತದ ಅರಮನೆಯಲ್ಲೇ ನಾನು ಜೀವಿತಿಸುತ್ತಿದ್ದೇನೆ, ನನ್ನ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ ಅನ್ನೋ ಮಾತು ಮರ್ಲಿನ್​​ಳದ್ದು.

ತೋಳಗಳ ಗುಂಪಿನಲ್ಲಿ ಒಂಟಿ ಕುರಿ..!

ಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು ಆದ್ರೆ, ಮುಂದಿನ ದಾರಿ ಅಷ್ಟು ಸುಲಭವಾಗಿರಲಿಲ್ಲ. ನಮ್ಮ ದೇಶದಲ್ಲಿ ಪುರುಷರೊಂಗೆ ಸರಿಸಮನಾಗಿ ನಿಂತು ಗೆಲ್ಲುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಜಾಹೀರಾತು ವಿಭಾಗದಲ್ಲಂತೂ ಶೇಕಡಾ 90ರಷ್ಟು ನಿರ್ಮಾಪಕರು, ಆಯೋಜಕರು ಪುರುಷರೇ. ಮಹಿಳಾ ಸಂಗೀತಗಾರರಿದ್ರೂ, ಸಂಗೀತದೆಡೆಗಿನ ಸಂಪೂರ್ಣ ಒಲವು ಬದ್ದತೆ ಇದ್ರೆ ಮಾತ್ರ ಹೆಚ್ಚಿನ ಗೌರವ. ವಿದೇಶಗಳಲ್ಲಿ ಒಬ್ಬ ಕಲಾವಿದನಿಗೆ ಸಂಪೂರ್ಣ ಕಲೆಯನ್ನ ಅರಿಯಲು ಹೆಚ್ಚಿನ ಅವಕಾಶವಿರುವಂತೆ. ಕೇವಲ ಬಾಲಿವುಡ್‍ಗೆ ರಾಗ ಸಂಯೋಜನೆ ಮಾಡುವುದು ನಿಮಗೆ ಸಂತಸತರಬಹುದು ಆದ್ರೆ, ನೀವು ಒಬ್ಬ ಸಂಗೀತಗಾರನಾಗಿದ್ರೆ, ನಿಮ್ಮ ವ್ಯಾಪ್ತಿ ಇನ್ನೂ ದೊಡ್ಡಗಾತ್ತೆ. ಇನ್ನೂ ಒಳ್ಳೆಯ ಅವಕಾಶಗಳು ಕೈಬೀಸಿ ಕರೆಯುತ್ತವೆ.

ರಂಗಭೂಮಿಯೆಂಬ ನೈಜ ಯುದ್ಧಭೂಮಿ..

ರಂಗಭೂಮಿಯಲ್ಲಿ ಕೆಲಸ ಮಾಡುವುದು ವಿಭಿನ್ನವಾಗಿರತ್ತಾ...?ಪ್ರಶ್ನೆ ಕೇಳಿದ ಮರ್ಲಿನ್ ಉದ್ಘರಿಸುತ್ತಾರೆ. ಬಾಲಿವುಡ್ ಅಂದ್ರೆ ಹಣ, ಬ್ಯಾಂಕ್ ಅಂದ್ರೆ ಖುಷಿ. ಆದ್ರೆ, ರಂಗಭೂಮಿ ಅಂದ್ರೆ ಆರ್ಥಿಕ ಸಂಕಷ್ಟ ಅಂತಾರೆ. ಏನೇ ಆದ್ರೂ ನಾಟರರಂಗ ಯುದ್ಧಭೂಮಿಯಿದ್ದಂತೆ, ಇಲ್ಲೇ ನಿಮ್ಮ ಪ್ರತಿಭೆಯನ್ನ ಓರೆಗೆ ಹಚ್ಚಲು ಸಾದ್ಯ. ದೊಡ್ಡ ಸ್ಟಾರ್‍ಗಳು ಕೂಡ, ಆಗಾಗ ರಂಗಭೂಮಿಗೆ ಹಿಂತಿರುಗಿ ಬರುತ್ತಾರೆ, ತಮ್ಮ ಕಲೆಯನ್ನ ಪರೀಕ್ಷೆಗೊಳಪಡಿಸುತ್ತಾರೆ. ಈ ಕ್ರಿಯೆ ಅವರಿಗೆ ವೈಯುಕ್ತಿಕವಾಗಿ ಸಂತೋಷ ತರುತ್ತದೆ. ಈಗಲೂ ರಂಗಬೂಮಿಯಲ್ಲಿ ಕಾಣಿಸಿಕೊಳ್ಳುವ ನಸೀರುದ್ದಿನ್ ಷಾ, ನೋಯಲ್ ಗೋರ್ಡನ್‍ರಂತ ಅನುಭವಿಗಳ ಜೊತೆ ಕೆಲಸ ಮಾಡುವುದು ತೃಪ್ತಿ ತರುತ್ತದೆ.

ದೊ.. ರೆ ..ಮಿಫಾ.. , ಪ ದ ನಿ ಸಾ. . .!

ಮರ್ಲಿನ್ ತಾನು ಗೋವಾದವಳು ಅಂತಾ ಹೇಳಲು ಇಷ್ಟ ಪಡೋದಿಲ್ಲ, ಬದಲಾಗಿ ನಾನೊಬ್ಬ ಭಾರತೀಯಳು ಅಂತಾರೆ. ಭಾರತದಂತ ಕಲಾ ಶ್ರೀಮಂತ ದೇಶದಲ್ಲಿ ನಾಲ್ಕು ಜೀವಮಾನಗಳಷ್ಟು ಕಲಿಯುವುದಿದೆ. ಆಕೆ ತನ್ನ ಶ್ರಮದ ಮೂಲಕ ತನ್ನ ಹೊಸತನವನ್ನ ರೂಪಿಸುವ ಪ್ರಯತ್ನ ಮಾಡುತ್ತಾರೆ. ‘ಯಾತ್ರಾ’ ಮರ್ಲಿನ್‍ನ ಸ್ವಂತ ಅನುಭವದ ಆಲ್ಬಮ್. ಎರಡು ಆಲ್ಬಮ್‍ನ ಭಾಗಗಳಲ್ಲಿ ಮರ್ಲಿನ್ ಜಾದುವನ್ನೇ ಸೃಷ್ಟಿಸುತ್ತಾರೆ.

ಮರ್ಲಿನ್‍ರ ‘ಸುನೋ’ ಎನ್ನುವ ಮತ್ತೊಂದು ಹಾಡು ಆಕೆಯನ್ನ ಲೈಮ್‍ಲೈಟ್‍ಗೆ ತಂದು ನಿಲ್ಲಿಸಿತು. ಡಿಸೆಂಬರ್ 16ರ ಗ್ಯಾಂಗ್ ರೇಪ್ ಪ್ರಕರಣದ ನಂತ್ರ, ಅವರ ಮಹಿಳಾ ತಂಡ ‘ಇಂದೀವಾ’ದ ಮೂಲಕ ಮಹಿಳೆ ಅಬಲೆಯಲ್ಲ, ಆಕೆಗೆ ಸಮಾಜವನ್ನೂ ಬದಲಿಸುವ ಶಕ್ತಿಯಿದೆ. ಹೆಣ್ಣು ಸಬಲೆ ಅಂತಾ ಹೆಣ್ಣುಮ್ಕಕಳಿಗೆ ಪ್ರೇರಣೆ ನೀಡುವಂತ ಹಾಡಾಗಿತ್ತು. ಈ ಹಾಡು ಎಷ್ಟು ಪ್ರಸಿದ್ಧಿ ಪಡೆದಿತ್ತು ಅಂದ್ರೆ, ಲಂಡನ್ ಹಾಗೂ ಬರ್ಲಿನ್‍ನಿಂದ ಕರೆಗಳು ಬರತೊಡಗಿದ್ದವು. ಕಾರ್ಯಕ್ರಮ ನೀಡಲು ಹಾಗೂ ಹಾಡನ್ನ ತರ್ಜುಮೆ ಮಾಡುವಂತೆ ಬೇಡಿಕೆಗಳು ಬಂದಿತ್ತು.

ಭಾರತದ ಮತ್ತೊಬ್ಬ ಪ್ರಸಿದ್ಧ ತುಮರಿ ಗಾಯಕಿ ಧನುಶ್ರೀ ಪಂಡಿತ್ ರೈ ಜೊತೆ ಸೇರಿ ಹುಟ್ಟು ಹಾಕಿದ ಮತ್ತೊಂದು ಗೀತೆ ‘ದೊರೆ ಮಿಫಾ, ಸೋ ಲಾ, ತಿ ದೊ’ ಆಲ್ಬಮ್ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಇಷ್ಟು ಪ್ರಸಿದ್ಧಿ ಪಡೆದ ಮೇಲೂ ಸಂಗೀತ ವಲಯದಲ್ಲಿ ಮತ್ತಷ್ಟು ಸಾಧಿಸಬೇಕು ಎನ್ನುವ ಹಂಬಲ ಮಾತ್ರ ಕಡಿಮೆಯಾಗಲಿಲ್ಲ.

ನಾನು ಮರ್ಲಿನ್ "ದಿ ಮ್ಯೂಸಿಷಿಯನ್" ಆಗಬೇಕು..!

ಮರ್ಲಿನ್​​​ ಸಾಧನೆಗೆ ಅವಾರ್ಡ್‍ಗಳು, ಪ್ರಶಸ್ತಿ ಹಾಗೂ ಪ್ರಶಂಸೆಯ ಸುರಿಮಳೆಯಾಗಿದೆ. ನಂಬಲಸಾದ್ಯವಾದ, ಹಾಗೂ ಅತ್ಯಂತ ಗೌರವಯುತ ಪ್ರಶಂಸೆ ಅಂದ್ರೆ ಆಕೆಯನ್ನ ಭಾರತದ ಲೇಡಿ ರೆಹಮಾನ್ ಅಂತಾ ಕರೆದಿದ್ದು. ‘ ನಾನು ಹಾಗೂ ರೆಹಮಾನ್ ಜರ್ನಿಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ನಾವಿಬ್ಬರೂ ಕೇವಲ ಸಂಗೀತ ಸಂಯೋಜನೆ ಎನ್ನುವ ಒಂದು ಕೆಲಸಕ್ಕೆ ಮಾತ್ರ ಸೀಮಿತರಾಗಿಲ್ಲ. ನಾನು ದೇವರ ಕೃಪೆಗೆ ಪಾತ್ರಳಾದವಳು, ಅತ್ಯಂತ ವಿನಯವಾದವಳು. ಆದ್ರೂ, ನಾನು ನನ್ನನ್ನ ನಾನಾಗೇ ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ, ಸಂಗೀತ ಲೋಕದಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಮೂಡಿಸಿ, ಮರ್ಲಿನ್ ದಿ ಮ್ಯೂಸಿಷಿಯನ್ ಎನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಇಂದಿನ ಮಕ್ಕಳು

ಮರ್ಲಿನ್ ತನ್ನ ಸಂಗೀತ ಕಲೆಯನ್ನ ಮಕ್ಕಳಿಗೂ ಹೇಳಿಕೊಡ್ತಾರೆ. ಈಗಾಗ್ಲೇ ಸಾಕಷ್ಟು ಮಕ್ಕಳನ್ನ ಭವಿಷ್ಯದ ಕಲಾವಿದರನ್ನಾಗಿ ಸಿದ್ದಮಾಡಿದ್ದಾರೆ. ‘ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅಂದ್ರೆ ಈಗಿನ ಮ್ಕಕಳು ತಮ್ಮ ಬೆರಳ ತುದಿಯಲ್ಲೇ ಇಡೀ ವಿಶ್ವವನ್ನ ನೋಡ್ತಿದ್ದಾರೆ.’

ನಾವು ಎಲ್ಲವನ್ನೂ ಬೇರಿನಿಂದಲೇ ಅರ್ಥ ಮಾಡಿಕೊಳ್ಳಬೇಕು. ಸ್ಟುಡಿಯೋ ಬಾಗಿಲಿಗೆ ಅಲೆಯಬೇಕು. ಆದ್ರೆ ಈಗ ಕೆಲಸ ಎಷ್ಟು ಸುಲಭವಾಗಿದೆ ಅಂದ್ರೆ, ಕೈಯಲ್ಲೊಂದು ಲ್ಯಾಪ್‍ಟಾಪ್ ಅದಕ್ಕೆ ಬೇಕಾದ ಸಾಫ್ಟ್​​ವೇರ್ ಎಲ್ಲವೂ ಸಿದ್ದವಾಗಿರತ್ತೆ. ಸ್ವಲ್ಪ ನಮ್ಮ ಕಲೆಯನ್ನ ಅದ್ರಲ್ಲಿ ಹರಿಯಬಿಟ್ರೆ ಸಾಕು, ಈಗಿನ ಸಾಮಾಜಿಕ ತಾಣದ ಮೂಲಕ ಪ್ರಪಂಚವೇ ನಮ್ಮತ್ತ ತಿರುಗಿ ನೋಡತ್ತೆ.

‘ಯಹೀಹೆ ರೈಟ್ ಚಾಯ್ಸ್’ ಎನ್ನುವ ಪೆಪ್ಸಿ ಜಾಹೀರಾತಿನ ಮೂಲಕ ಖ್ಯಾತಿ ಪಡೆದಿರುವ ಹುಡುಗಿಯನ್ನ ಸಿದ್ದಗೊಳಿಸಿದ್ದು ಮರ್ಲಿನ್. ಇಂತಾ ಅರಳು ಪ್ರತಿಭೆಗಳಿಗೆ ವರ್ಕ್‍ಶಾಪ್ ಹಾಗೂ ತರಭೇತಿ ನೀಡುವುದು ಅಂದ್ರೆ ಮರ್ಲಿನ್‍ಗೆ ಎಲ್ಲಿಲ್ಲದ ಖುಷಿ. ‘ಮಕ್ಕಳು ಗೊತ್ತಿಲ್ಲದರ ಹಿಂದೆ ಬೀಳುವ ಬದಲು ಧ್ವನಿ ವಿಜ್ಞಾನ ಹಾಗೂ ನೈಜ ಸಂಗೀತವನ್ನ ಕಲಿಯುವುದು ಒಳಿತು’. ಗಿಟಾರ್ ಹಿಡಿದು ಮೈಕ್ ಮುಂದೆ ಹಾಡುವುದೂ ಸಂಗೀತದ ಮತ್ತೊಂದು ಸುಂದರ ಮಗ್ಗುಲು.

image