ನಷ್ಟದಲ್ಲಿದ್ದ ಉದ್ಯಮವನ್ನು ಲಾಭದ ಉದ್ಯಮವನ್ನಾಗಿ ಮಾಡಿದ ಯುವ ತಂಡ

ಉಷಾ ಹರೀಶ್​​

ನಷ್ಟದಲ್ಲಿದ್ದ ಉದ್ಯಮವನ್ನು ಲಾಭದ ಉದ್ಯಮವನ್ನಾಗಿ ಮಾಡಿದ ಯುವ ತಂಡ

Tuesday January 05, 2016,

2 min Read

ಒಂದು ಉದ್ಯಮವನ್ನು ಆರಂಭ ಮಾಡುವುದು ಎಷ್ಟು ಕಷ್ಟವೋ ಅದನ್ನು ಲಾಭದತ್ತ ಕೊಂಡೊಯ್ಯವುದು ಅಷ್ಟೇ ಕಷ್ಟ. ಅದಕ್ಕಾಗಿ ಸಾಕಷ್ಟು ಹಣ ಸುರಿಯಬೇಕು, ಪ್ರಚಾರಕ್ಕಾಗಿ ವಿನೂತನ ತಂತ್ರಗಳನ್ನು ಬಳಸಬೇಕು ಆದರೆ ಮಾರುಕಟ್ಟೆ ಲೆಕ್ಕಾಚಾರಗಳು ಸ್ವಲ್ಪ ತಲೆಕೆಳಗಾದರೂ ನಷ್ಟ ಅನುಭವಿಸಬೇಕಾಗುತ್ತದೆ. ಕಷ್ಟಪಟ್ಟು ಇಷ್ಟಪಟ್ಟು ಆರಂಭಿಸಿದ ಉದ್ಯಮವೊಂದು ನಷ್ಟದ ಹಾದಿ ಹಿಡಿದಾಗ ಅದನ್ನು ಅಸಂಖ್ಯ ಕನಸುಗಳೊಂದಿಗೆ ಆರಂಭಿಸಿದ ಯುವಕ ರ ತಂಡವೊಂದು ತಮ್ಮ ಉದ್ಯಮವನ್ನು ಮತ್ತೆ ಸರಿದಾರಿಗೆ ತಂದು ಇಂದು ಅದನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ದೆಹಲಿ, ಮುಂಬೈ ಮತ್ತು ಬೆಂಗಳೂರು ಮಹಾನಗರಗಳು ಇಂದು ಸ್ಟಾರ್ಟ್ಅಪ್ ಹಬ್​​ಗಳಾಗಿ ಪರಿವರ್ತನೆಯಾಗುತ್ತಿವೆ. ಬಹುತೇಕ ಯುವಕರು ಒಂದು ಸ್ಟಾರ್ಟ್ಅಪ್ ಆರಂಭಿಸಬೇಕಾದರೆ ಲಾಭದ ಲೆಕ್ಕಾಚಾರ ಹಾಕದೆ ಇರುವುದಿಲ್ಲ. ಆದರೂ ಕೆಲವೊಮ್ಮೆ ಮಾರುಕಟ್ಟೆ ಲೆಕ್ಕಾಚಾರಗಳು ತಲೆಕೆಳಗಾಗಿ ನಷ್ಟವನ್ನು ಅನುಭವಿಸುತ್ತಾರೆ ಅದೇ ರೀತಿ ದೆಹಲಿ ಮೂಲದ ಆಯುಶ್, ವಿಶುತಾ ಹಾಗೂ ಗೆಳೆಯರು ಸೇರಿಕೊಂಡು ಈಸಿ ಖಾನ (easykhaana) ಎಂಬ ಉದ್ಯಮ ಆರಂಭಿಸುತ್ತಾರೆ. ಮನೆಯಿಂದ ಹೊರಗುಳಿದ ದೆಹಲಿ ಮತ್ತು ಗುರ್ಗಾಂವ್​​ನಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಈ ಉದ್ಯಮ ಪ್ರಾರಂಭ ಮಾಡುವ ಈ ಗೆಳೆಯರ ಈಸಿ ಖಾನಾ ಆನ್ಲೈನ್ ಫುಡ್ ವೆಬ್ಸೈಟ್. ಈ ವೆಬ್ಸೈಟ್​​ನಲ್ಲಿ ಊಟ ಬುಕ್ ಮಾಡಿದರೆ ಬುಕ್ ಮಾಡಿದ ಹತ್ತು ನಿಮಿಷದಲ್ಲೆ ಗ್ರಾಹಕರಿರುವಲ್ಲಿಗೆ ಊಟ ತಲುಪಿಸುವುದು ಈ ಕಂಪನಿಯ ಮೂಲ ಉದ್ದೇಶ.

image


ಬುಕ್ ಆಗಿದ್ದು ಕೇವಲ ನಾಲ್ಕು ಊಟ ಮಾತ್ರ..!

ಆಯುಶ್ ಮತ್ತವರ ಗೆಳೆಯರ ದುರದೃಷ್ಟವೆಂಬಂತೆ ಅವರ ಉದ್ಯಮ ಆರಂಭದಲ್ಲೇ ಹಳಿ ತಪ್ಪಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಜಾಹಿರಾತು ನೀಡಿದರು, ಕಂಡ ಕಂಡಲ್ಲಿ ಪೋಸ್ಟರ್ ಹಚ್ಚಿದರೂ, ಸಿಕ್ಕ ಸಿಕ್ಕವರಿಗೆ ಕರಪತ್ರ ಹಂಚಿದರೂ ಏನೇ ಮಾಡಿದರೂ ಊಹೂಂ ಅವರ ಉದ್ಯಮ ಮೇಲೇರಲೇ ಇಲ್ಲ ಬದಲಿಗೆ ಅವರಿಗೆ ಊಟವನ್ನು ಆರ್ಡರ್ ಮಾಡಿದ್ದು ಮಾತ್ರ ಕೇವಲ ನಾಲ್ಕು ಜನ. ಗ್ರಾಹಕರ ಸಂಖ್ಯೆ ಮಾತ್ರ ಹೆಚ್ಚಾಗಲೇ ಇಲ್ಲ. ಈ ಹಂತದಲ್ಲಿ ತಮ್ಮ ಉದ್ಯಮ ಎಲ್ಲಿ ಹಳಿ ತಪ್ಪುತ್ತಿದೆ ಎಂಬುದನ್ನು ಅರಿಯಲು ಕುಳಿತು ಯೋಚಿಸಿದರು ಹೇಗಾದರೂ ಮಾಡಿ ತಮ್ಮ ಉದ್ಯಮವನ್ನು ಲಾಭದತ್ತ ಕೊಂಡೊಯ್ಯಲೇ ಬೇಕು ಎಂದು ತೀರ್ಮಾನಿಸಿದ ಈ ಯುವಕರು ಕೆಲವೇ ದಿನಗಳಲ್ಲಿ ವಿಭಿನ್ನವಾದ ಪ್ರಚಾರ ಹಾಗು ಕಾರ್ಯತಂತ್ರವನ್ನು ಕೈಗೊಂಡರು.

ಮನೆಯ ಟೇಸ್ಟ್​ಗೆ ಮಹತ್ವದ ಕೊಟ್ಟ ಯುವಕರು..

ತಾವು ತಯಾರಿಸುವ ಊಟದಲ್ಲಿ ಮನೆ ರುಚಿ, ಶುಚಿತ್ವ , ಮತ್ತು ಆಹಾರದ ಗುಣಮಟ್ಟಕ್ಕೆ ಆದ್ಯತೆ ಸಮಯ ಪಾಲನೆಗೆ ಮಹತ್ವ ನೀಡಿದರು. ಪಡೆದ ಆರ್ಡರ್ಗಳನ್ನು ಸಮಯಕ್ಕೆ ಸರಿಯಾಗಿ ಉತ್ತಮ ಫುಡ್ ಸಪ್ಲೈ ಮಾಡಿ ಹೆಸರು ಗಳಿಸಿದರು. ಈ ಮೂಲಕ ತಮ್ಮ ಉದ್ಯಮವನ್ನು ಸರಿ ದಾರಿಗೆ ತಂದರು. ಈಗ ಈಸಿ ಖಾನ ಒಂದು ಉತ್ತಮ ವ್ಯಾಪಾರ ಇರುವ ಆನ್ ಲೈನ್ ಫುಡ್ ಆರ್ಡರ್ ವೆಬ್ ಸೈಟ್ ಆಗಿ ಚೇತರಿಕೆ ಕಂಡಿದೆ. ಹೀಗೆ ದೂರದೃಷ್ಟಿ ಮತ್ತು ಭಿನ್ನ ಆಲೋಚನೆ ಫಲದಿಂದ ನಷ್ಟದಲ್ಲಿದ್ದಾಗ ಕೈಚೆಲ್ಲುವ ಬದಲು ಎಲ್ಲಿ ನಷ್ಟವಾಗುತ್ತದೆ ಎಂಬುದನ್ನು ಕುಳಿತು ಯೋಚಿಸಿ ಅದನ್ನು ಸರಿದಾರಿಗೆ ತಂದರೆ ಯಾರು ಬೇಕಾದರೂ ಯಶಸ್ಸಾಗಬಹುದು ಎಂಬುದಕ್ಕೆ ಆಯುಶ್ ಮತ್ತವರ ಗೆಳೆಯರು ಜ್ವಲಂತ ಉದಾಹರಣೆಯಾಗಿದ್ದಾರೆ.