ಸಂಗೀತ ನನಗೆ ದೇವರು ಕೊಟ್ಟ ವರ..!

ಕೃತಿಕಾ

ಸಂಗೀತ ನನಗೆ ದೇವರು ಕೊಟ್ಟ ವರ..!

Wednesday December 02, 2015,

3 min Read

ಡಿ.ಜೆ. ಅನ್ನೋ ಪದ ಕಾಸ್ಮೊಪಾಲಿಟನ್ ಸಿಟಿ ಬೆಂಗಳೂರಿಗರಿಗೆ ಬೇಗ ಅರ್ಥವಾಗಿಬಿಡುತ್ತೆ. ಆದ್ರೆ ಜನಸಾಮಾನ್ಯರಿಗೆ ಡಿಜೆ ಅಂದ್ರೆ ಏನಪ್ಪ ಅನ್ನುವಷ್ಟು ಡೌಟು..! ಕಳೆದ ಒಂದು ದಶಕದ ಅವದಿಯಲ್ಲಿ ಈ ಡಿಜೆ ಟ್ರೆಂಡ್ ನಮ್ಮಲ್ಲಿ ಹುಟ್ಟಿಕೊಂಡಿತು. ಪಾರ್ಟಿಗಳು, ಕ್ಲಬ್ ಗಳು, ಇವೆಂಟ್ ಗಳಲ್ಲಿ ಮ್ಯೂಸಿಕ್ ಪ್ಲೇ ಮಾಡುವವರನ್ನು ಡಿಜೆಗಳು ಅಂತಾರೆ. ಡಿಜೆ ಅಂದ್ರೆ ಡಿಸ್ಜ್ ಜಾಕಿ ಅಂತ. ಬರೀ ಹಾಡು ಹಾಕುವವರು ಅದೇನು ಸಾಧನೆ ಮಾಡೋಕೆ ಸಾಧ್ಯ ಅನ್ಕೊಬೇಡಿ. ಡಿಜೆ ಆಗೋದಿಕ್ಕೂ ಕೆಲವು ಅರ್ಹತೆಗಳಿರಲೇ ಬೇಕು. ಡಿಜೆಯಾಗಿ ಕೆಲಸ ಮಾಡಿದವರು ಸಂಗೀತ ಲೋಕದಲ್ಲಿ ಹೆಸರು ಮಾಡಿದ ಹಲವರಿದ್ದಾರೆ. ಅಂತಹ ಹೆಸರೇ ಅನೂಪ್. ಕೇವಲ.ಅನೂಪ್ ಅಂದ್ರೆ ಇವರ ಪರಿಚಯ ಯಾರಿಗೂ ಆಗೋದಿಲ್ಲ. ಡಿಜೆ ಅನೂಪ್ ಅಂದ್ರೆ ಹಲವರಿಗೆ ಇವರ ನೆನಪು ಬರುತ್ತೆ. ಸದ್ದಿಲ್ಲದೇ ಸಂಗೀತ ಲೋಕದಲ್ಲಿ ಸಾಧನೆ ಮಾಡುತ್ತಿರುವ ಅನೂಪ್ ಮೂಲತಃ

image


ರಾಜಸ್ತಾನದ ಜೋಧ್ಪುರದವರು. ತಮ್ಮ ಐದನೆಯ ವಯಸ್ಸಿನಲ್ಲಿ ತಂದೆಯ ವ್ಯವಹಾರದ ಕಾರಣದಿಂದ ಅವರು ಬಂದು ನೆಲೆಸಿದ್ದು ಚೆನ್ನೈನಲ್ಲಿ. ನಂತರ ಕುಟುಂಬ ಸಮೇತ ಬೆಂಗಳೂರಿಗೆ ಶಿಫ್ಟ್ ಆದ್ರು. ಆಗ ಅನೂಪ್ ಎಂಟನೆ ತರಗತಿಯ ವಿದ್ಯಾರ್ಥಿ. ಈ ಅನೂಪ್ ಗೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಮತ್ತು ರಾಜಸ್ಥಾನಿ ಭಾಷೆಗಳನ್ನ ಮಾತಾಡೋದಷ್ಟೇ ಅಲ್ಲ, ಓದಿ, ಬರೆಯುತ್ತಾರೆ.

ಅನೂಪ್ ಗೆ ಸಂಗೀತ ವ್ಯಾಮೋಹ ಚಿಕ್ಕಂದಿನಿಂದಲೇ ಆವರಿಸಿಕೊಂಡಿತ್ತು. ಮನೆಯಲ್ಲಿದ್ದ ಹಳೇ ಕೀ ಬೋರ್ಡ್ ಅನೂಪ್ ರನ್ನ ಸಂಗೀತದೆಡೆಗೆ ಸೆಳೆದಿತ್ತು. ಚಿಕ್ಕ ವಯಸ್ಸಿನಲ್ಲೇ ತಮ್ಮ ಮನೆಯಲ್ಲಿದ್ದ ಹಳೆಯ ಕೀಬೋರ್ಡ್​ನಲ್ಲಿ ಯಾವುದೇ ಹಾಡು ಕೇಳಿದರೂ ನುಡಿಸುವಷ್ಟು ಪರಿಣತಿ ಹೊಂದಿದ್ದರು. ಯಾವುದೇ ಸಂಗೀತದ ಕ್ಲಾಸ್ ಗೆ ಹೋಗದೇ ತಾವಾಗಿಯೇ ಸಂಗೀತವನ್ನು ಕಲಿಯತೊಡಗಿದ್ದರು. ಆದ್ರೆ ಕಾಲೇಜಿಗೆ ಹೋಗುತ್ತಿದ್ದಂತೆ ಸಂಗೀತವೇ ಇವರ ಜೀವನದ ಮುಂದಿನ ಹಾದಿಯಾಯ್ತು. ಕಾಲೇಜಿನಲ್ಲಿ ಬ್ಯಾಂಡ್ ಕಟ್ಟಿಕೊಂಡು ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಅನೂಪ್ ಗೆ ಇವತ್ತು ಸಂಗೀತವೇ ಜೀವಾಳ. ಸಂಗೀತ ತನಗೆ ದೇವರು ಕೊಟ್ಟ ವರ ಅಂತಾರೆ ಅನೂಪ್.

‘ನಾನು ಕಾಲೇಜಿನಲ್ಲಿ ಓದುವಾಗ ಸ್ಹೇಗಿತರೊಂದಿಗೆ ಸೇರಿ ಮ್ಯೂಸಿಕಲ್ ಬ್ಯಾಂಡ್ ನಡೆಸುತ್ತಿದ್ದೆ. ಆದ್ರೆ ಕೆಪ ಸ್ನೇಹಿತರು ನಿರಾಸಕ್ತಿಯಿಂದಲೋ ಅಥವಾ ಬೇರೆ ಕಾರಣಕ್ಕೋ ಬ್ಯಾಂಡ್ ಬಿಟ್ಟು ಹೀಗ್ತಿದ್ರು. ಇದು ಆಗುವ ಕೆಲಸ ಅಲ್ಲ ಅನ್ನಿಸುತ್ತುತ್ತು. ಆಗಿನ್ನೂ ಬೆಂಗಳೂರಿನಲ್ಲಿ ಡಿಜೆ ಸಂಸ್ಕೃತಿ ಹುಟ್ಟಿಕೊಳ್ಳುತ್ತಿದ್ದ ಕಾಲ. ನನಗೆ ಸಂಗೀತದ ಮೇಲೆ ಒಲವಿದ್ದಿದ್ದರಿಂದ ಸಹಜವಾಗಿಯೇ ಡಿಜೆ ಆಗುವ ಹಂಬಲ ಬೆಳೆಯಿತು. ನಾನು ನನ್ನ ಸ್ನೇಹಿತರಿಗೆ ಹೇಳಿ ಲಂಡನ್ನಿಂದ ಕೆಲವು ಸಂಗೀತ ಉಪಕರಣಗಳನ್ನು ತರಿಸಿಕೊಂಡೆ. ಹಂತಹಂತವಾಗಿ ಅವುಗಳನ್ನು ಬಳಸಿಕೊಳ್ಳುವುದನ್ನು ಕಲಿತುಕೊಂಡೆ’ ಅಂತ ತಾವು ಡಿಜೆಯಾಗಬೇಕೆಂದುಕೊಂಡ ದಿನಗಳನ್ನು ಮೆಲುಕುಹಾಕುತ್ತಾರೆ ಅನೂಪ್.

ಹೀಗೆ ಡಿಜೆಯಾಗಬೇಕೆಂದುಕೊಂಡು ಸಂಗೀತ ಕ್ಚೇತ್ರದೆಡೆಗೆ ಆಸಕ್ತಿ ಹೆಚ್ಚಿಸಿಕೊಂಡ ಅನೂಪ್ ಮೊದ ಮೊದಲು ಬೆಂಗಳೂರಿನ ಪಬ್,ಕ್ಲಬ್ ಗಳಲ್ಲಿ ಡಿಜೆ ಆಗಿ ಕೆಲಸ ಮಾಡ್ತಿದ್ರು. ಇದಾದ ನಂತರ ಬೆಂಗಳೂರಿನಲ್ಲಿ ನಡೆಯುವ ಪ್ರಮುಖ ಸಂಗೀತ ಕಾರ್ಯಕ್ರಮಗಳು, ಪ್ರತಿಷ್ಠಿತ ಪಾರ್ಟಿಗಳಲ್ಲಿ ಅನೂಪ್ ಡಿಜೆಯಾಗಿ ಕಾರ್ಯ ನಿರ್ವಹಿಸದ್ರು. ಇದಾದ ನಂತರ ಅನೂಪ್ ಇವತ್ತಿನವರೆಗೆ ಹಿಂತಿರುಗಿ ನೋಡಿಯೇ ಇಲ್ಲ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅನೂಪ್ ಡಿಜೆ ಆಗಿ ಕೆಲಸ ಮಾಡಿದ್ದಾರೆ. ಅನೂಪ್ ಅವರ ಸಂಗೀತದ ಮೇಲಿನ ಮೋಹ ಕೇವಲ ಡಿಜೆ ಯಾಗಷ್ಟೇ ಅವರನ್ನ ಸೀಮಿತಗೊಳಿಸಿಕೊಂಡಿಲ್ಲ. ಅನೂಪ್ ಅನೇಕ ಹಾಡುಗಳನ್ನು ರಿಮಿಕ್ಸ್ ಮಾಡಿ ಆಲ್ಬಂಗಳನ್ನು ಹೊರತಂದಿದ್ದಾರೆ.. ಕನ್ನಡ, ಹಿಂದಿ ಮತ್ತು ಕೆಲವು ತಮಿಳು ಸಿನಿಮಾ ಹಾಡುಗಳನ್ನು ಅನೂಪ್ ರೀಮಿಕ್ಸ್ ಮಾಡಿದ್ದಾರೆ. ರೀಮಿಕ್ಸ್ ಮಾಡುವವರಿಗೆ ಸೃಜನಶೀಲತೆಯ ಕೊರತೆ ಇರುತ್ತದೆ ಅನ್ನೋದನ್ನ ಅನೂಪ್ ಸುಳ್ಳು ಮಾಡಿದ್ದಾರೆ. ರೀಮಿಕ್ಸ್ ಮಾಡಿದ ಹಾಡುಗಳನ್ನು ಮೂಲ ಸಂಗೀತಗಾರರಿಗೆ ಕೇಳಿಸಿ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ ಅನೂಪ್.

image


ಒಬ್ಬ ಉತ್ತಮ ಡಿಜೆ ಗೆ ಸಂಗೀತದ ಬಗ್ಗೆ ಸ್ಪಷ್ಟ ಜ್ಞಾನ ಇರಬೇಕು. ಸಂಗೀತವನ್ನು ಪ್ಲೇ ಮಾಡಿದರೆ ಖಂಡಿತ ಅದರಲ್ಲಿ ಸೃಜನಶೀಲತೆ ಇರಬೇಕು. ಎಷ್ಟೋ ಹಾಡುಗಳಿರುತ್ತವೆ. ಅವುಗಳ ಮಧ್ಯೆ ಯಾವುದನ್ನು ಆಯ್ದುಕೊಳ್ಳಬೇಕು, ಯಾವುದರಿಂದ ಆರಂಭಿಸಬೇಕು, ಹೇಗೆ ಮುಂದುವರಿಸಬೇಕು, ಯಾವುದು ಆದಮೇಲೆ ಯಾವುದನ್ನು ಸೇರಿಸಬೇಕು ಎನ್ನುವುದೆಲ್ಲ ತುಂಬ ಮುಖ್ಯ. ಡಿಜೆ ಆದವನಿಗೆ ಸಂಗೀತ ಜ್ಞಾನ, ಲಯ–ತಾಳ ಜ್ಞಾನ, ಶ್ರುತಿಯ ತಿಳಿವಳಿಕೆ ಅತ್ಯಗತ್ಯ ಎನ್ನುವುದು ಅನೂಪ್ ಅವರ ಅನುಭವದ ಮಾತು.

ಇನ್ನು ಕನ್ನಡದ ಹಲವು ಹಾಡುಗಳನ್ನು ಡಿಜೆ ಸಂಗೀತಕ್ಕೆ ಹೊಂದುವಂತೆ ಅನೂಪ್ ರೀಮಿಕ್ಸ್ ಮಾಡಿದ್ದಾರೆ. ಇದರಿಂದ ಕ್ಲಬ್, ಪಬ್ ಗಳಲ್ಲಿ, ಪ್ರತಿಷ್ಟಿತರ ಪಾರ್ಟಿಗಳಲ್ಲೂ ಕನ್ನಡದ ಹಾಡುಗಳು ಕೇಳುವಂತೆ ಮಾಡಿದ್ದಾರೆ. ಕನ್ನಡದ ಖ್ಯಾತ ಸಂಗೀತನಿರ್ದೇಶಕ ಮನೋಮೂರ್ತಿ ಅವರ ಹಾಡುಗಳನ್ನೆಲ್ಲ ‘ಮನೋ ರಿಮಿಕ್ಸ್’ ಎಂಬ ಹೆಸರಿನಲ್ಲಿ ರಿಮಿಕ್ಸ್ ಮಾಡಿ ಯಸ್ವಿಯೂ ಆಗಿದ್ದಾರೆ. ಇದರ ಜೊತೆಗೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೆಸರಾಂತ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವೂ ಅನೂಪ್ ಅವರಿಗಿದೆ. ಯಾವುದೇ ತರಬೇತಿಯಿಲ್ಲದೇ, ಶಾಸ್ತ್ರೀಯವಾದ ಸಂಗೀತದ ಕಲಿಕೆಯಿಲ್ಲದೇ ತಮ್ಮ ಸ್ವಂತ ಸಾಮರ್ಥ್ಯದಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅನೂಪ್ ಗೆ ಸಂಗೀತ ನಿರ್ದೇಶಕನಾಗಬೇಕೆಂಬ ಕನಿಸಿದೆ. ಅದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ಛಲವೂ ಅವರಲ್ಲಿದೆ. ಅನೂಪ್ ಅವರ ಕಲಸು ನನಸಾಗಲಿ ಅನ್ನೋದು ನಮ್ಮ ಹಾರೈಕೆ.