ತೂಗುವ ತೊಟ್ಟಿಲಿಗೆ ಲಕ್ಷ ಲಕ್ಷ ರೂಪಾಯಿ..!

ಆರಾಧ್ಯ

ತೂಗುವ ತೊಟ್ಟಿಲಿಗೆ ಲಕ್ಷ ಲಕ್ಷ ರೂಪಾಯಿ..!

Sunday March 20, 2016,

2 min Read

ಸಾಮಾನ್ಯವಾಗಿ ಹುಟ್ಟುವ ಮಗುವಿಗೆ ತೊಟ್ಟಿಲುಗಳನ್ನು ಮುಂಚೆಯೇ ಮಾಡಿಸುವುದು ಅಥವಾ ಕೊಂಡುಕೊಳ್ಳುವುದು ಕಾಮನ್.. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲುಗಳನ್ನು ಕೊಂಡುಕೊಳ್ಳತ್ತಾರೆ.. ಈಗೆಲ್ಲ ಜನ ಸುಂದರ ಕಲಾಕೃತಿಗಳ ಮೂಲಕ ತೊಟ್ಟಿಲುಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.. ಇದಕ್ಕೆ ಸಾಕ್ಷಿ ಚಿತ್ರಕಲಾ ಪರಿಷತ್‍ನಲ್ಲಿ ಸಾಗುವಾನಿ ಮರದಿಂದ ಮಾಡಿರೋ ತೊಟ್ಟಿಲಿಗೆ ಲಕ್ಷ ಲಕ್ಷ ಬೆಲೆ ಇದೆ..

image


ಹೌದು ಇತ್ತೀಚಿಗೆ ಜನ ಹೆಚ್ಚು ಹೆಚ್ಚು ಸಾಂಪ್ರದಾಯಿಕ ವಸ್ತುಗಳತ್ತ ಮುಖ ಮಾಡುತ್ತಿದ್ದಾರೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ತೊಟ್ಟಿಲುಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.. ಮರದಿಂದ ಮಾಡಿರುವ ಸುಂದರ ಕಲಾಕೃತಿಗಳ ತೊಟ್ಟಿಲು ಎಲ್ಲರನ್ನು ಆಕರ್ಷಿಸುತ್ತಿದೆ.. ಚಿತ್ರಕಲಾ ಪರಿಷತ್‍ನಲ್ಲಿ ಸುಂದರ ಕಲಾಕೃತಿಗಳ ತೊಟ್ಟಿಲುಗಳಿವೆ.. ಇದ್ರ ಬೆಲೆ ಕೇಳಿದ್ರೆ ನೀವು ಆಶ್ಚರ್ಯಗೊಳ್ತಿರಾ.. ಯಾಕೆಂದ್ರೆ ಈ ಸುಂದರ ತೊಟ್ಟಿಲ ಬೆಲೆ 2 ಲಕ್ಷದ 25 ಸಾವಿರ ರೂಪಾಯಿ.. ಇದ್ರ ಬೆಲೆ ಅಬ್ಬಾಬ್ಬ ಅಂತ ಇದ್ರೂ, ಇದ್ರ ಮೇಲಿನ ಸುಂದರ ಕೆತ್ತನೆ, ಕಲಾಕೃತಿಗಳು ಎಲ್ಲವೂ ಆಕರ್ಷಿಸುತ್ತಿದೆ.

ಇದನ್ನು ಓದಿ: ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!

ತೊಟ್ಟಿಲಿನ ಹಿಂದೆ ಸಾಗರದ ಗಣೇಶ್‍ರವರ ಕೈವಾಡವಿದೆ.. ಮೂಲತಃ ಸಾಗರದವರಾದ ಗಣೇಶ, ಇರೋದು ರಾಜಧಾನಿ ಬೆಂಗಳೂರಿನಲ್ಲಿ.. ಇವರ ಉದ್ಯಮವೇ ಕ್ರಾಫ್ಟ್‍ಗಳನ್ನು ಮಾಡುವುದು.. ಅಂದ್ರೆ ಮರಗಳನ್ನು ಬಳಸಿ ಸುಂದರ ಕಲಾಕೃತಿಗಳನ್ನು ಕೆತ್ತುವುದು.. ಸ್ಯಾಂಡಲ್‍ವುಡ್ ಕ್ರಾಫ್ಟ್ ಹೆಸರಿನಲ್ಲಿ ಕಲಾಕೃತಿಗಳನ್ನು ಕೆತ್ತನೆ ಮಾಡತ್ತಾರೆ.. ಇವರೇ ಈ ಸುಂದರ ತೂಗುವ ತೊಟ್ಟಿಲಿಗೆ ಮಾಲೀಕರು..

ಯಾವುದೇ ಮೇಳಗಳು, ಹಬ್ಬಗಳು ಆಯೋಜನೆ ಮಾಡಿದ್ದಾರೆ. ಅಲ್ಲಿ ಇವ್ರು ಹಾಜಾರಿತ್ತಾರೆ.. ಈ ತೊಟ್ಟಿಲು ನಿರ್ಮಾಣಕ್ಕೆ ಇವ್ರು 1 ವರ್ಷಗಳ ಶ್ರಮ ಪಟ್ಟಿದ್ದಾರೆ.. ಸಾಗುವಾನಿ ಮರದಿಂದ ನಿರ್ಮಾಣ ಮಾಡಿರೋ ಕಾರಣ ಇದಕ್ಕೆ ಲಕ್ಷ ರೂಪಾಯಿ ಮೌಲ್ಯ ತಗುಲುತ್ತೆ.. ಸುಮಾರು ಸಾಗುವಾನಿಯ ಸಂಪೂರ್ಣ ಒಂದು ಮರವನ್ನು ಬಳಸಿ ಈ ತೊಟ್ಟಿಲು ನಿರ್ಮಾಣ ಮಾಡಲಾಗಿದೆ. 15 ಅಡಿ ಎತ್ತರದ ಈ ತೊಟ್ಟಿಲು ಎಲ್ಲರ ಗಮನ ಸೆಳೆಯುತ್ತಿದೆ..

ಇನ್ನು ಈಗಾಗಲೇ ಈ ರೀತಿಯ ಸಾಗುವಾನಿ ಮರದಿಂದ ಮೂಡಿ ಬಂದ 3 ತೊಟ್ಟಿಲುಗಳನ್ನು ಮಾರಾಟ ಮಾಡಿದ್ದಾರೆ. ಈಗ ಇದು ನಾಲ್ಕನೇದು.. ಇವ್ರ ಒಂದು ವರ್ಷದ ಪರಿಶ್ರಮದಿಂದ ತೊಟ್ಟಿಲು ನಿರ್ಮಾಣವಾಗಿದೆ. ಇನ್ನು ಸಾಗುವಾನಿ ಮರ ಹೆಚ್ಚು ಹೊಳಪಿನಿಂದ ಕೂಡಿದ್ದು, ಆರೋಗ್ಯದ ದೃಷ್ಟಿಯಿಂದ ಅಂದ್ರೆ ಮಗುವಿನ ಚರ್ಮಕ್ಕೆ ಸಾಕಷ್ಟು ಉಪಯೋಗವಾಗಿದೆ ಅಂತಾರೆ ಗಣೇಶ್..

ಈ ಚೆಂದದ ತೊಟ್ಟಿಲ ಬಗ್ಗೆ ಏನ್ ಹೇಳತ್ತಾರೆ ಜನ್ರು..?

ಸಾಗುವಾನಿ ಮರದಿಂದ ರೆಡಿ ಮಾಡಿರೋ ಈ ತೊಟ್ಟಿಲು ನಿಜಕ್ಕೂ ನೋಡೊಕ್ಕೆ ಸೂಪರ್ ಆಗಿದೆ.. ಸಿಂಪ್ಲಲ್ ಆಗಿರೋ ಸೂಕ್ಷ್ಮ ಕಲಾಕೃತಿಗಳು ಇಷ್ಟ ಆಯ್ತು.. ಇನ್ನು ನಮ್ಮ ಮಗುವನ್ನ ಅದ್ರಲ್ಲಿ ಮಲಗಿಸಿದ್ರೆ ಎಷ್ಟು ಚೆಂದ ಅಂತ ಯೋಚನೆ ಮಾಡ್ತೀನಿ ಅಂತಾರೆ ಶ್ವೇತಾ.. ಸಾಮಾನ್ಯವಾಗಿ ಚಿತ್ರಕಲಾ ಪರಿಷತ್‍ಗೆ ಬರುತ್ತಿನಿ, ಆದ್ರೆ ಈ ಬಾರಿ ಈ ತೊಟ್ಟಿಲು ನೋಡಿ ಆಶ್ಚರ್ಯ ಆಯ್ತು ಅಂತಾರೆ..

image


ಎರಡು ಕಡೆಗಳಲ್ಲಿ ಚಿಕ್ಕದಾಗಿ ನವಿಲಿನ ಕಲಾಕೃತಿಗಳು ನಿಜಕ್ಕೂ ಅದ್ಭತವಾಗಿದೆ.. ಸಣ್ಣ ಸಣ್ಣ ಚಿತ್ರಗಳು ಹೆಚ್ಚು ಇಷ್ಟವಾಗುತ್ತೆ ಅಂತಾರೆ ಮತ್ತೊಬ್ಬ ಗೃಹಿಣಿ ಶಿಲ್ಪಾ.. ಸಾಕಷ್ಟು ಅಗಲವಾದ ದೊಡ್ಡದಾದ ಈ ತೊಟ್ಟಿಲು ಮಗುವಿಗೆ ಹೆಚ್ಚು ಸೂಕ್ತವಾಗಿರುತ್ತೆ.. ಕಬ್ಬಿಣದ ತೊಟ್ಟಿಲು ಬೇಗ ಹಾಳಾಗುತ್ತೆ.. ಆದ್ರೆ ಮರದಿಂದ ಮಾಡಿದ ಅದ್ರಲ್ಲೂ ಸಾಗುವಾನಿ ಮರದಿಂದ ಮಾಡಿದ ತೊಟ್ಟಿಲು ವರ್ಷಗಳ ಬಳಿಕೆ ಬರುತ್ತೆ.. ಆಗಾಗಿ ಹೆಚ್ಚು ಇಷ್ಟವಾಗುತ್ತೆ ಅಂತಾರೆ ಅವ್ರು.

ಒಟ್ಟನ್ನಲ್ಲಿ ಸುಂದರ ಕಲಾಕೃತಿಗಳ, ವಿನ್ಯಾಸದ ಈ ತೊಟ್ಟಿಲುನ್ನು ಕೊಂಡುಕೊಳ್ಳೋಕ್ಕೆ ಸಾಮಾನ್ಯ ಜನಕ್ಕೆ ಆಗದಿದ್ರು.. ಅದನ್ನು ಮುಟ್ಟುತ್ತಾ, ಅದ್ರ ಮುಂದೆ ಫೋಟೋಗಳನ್ನು ಕ್ಲಿಕಿಸಿಕೊಂಡರು.. ಲಕ್ಷ ಲಕ್ಷ್ಷ ಬೆಲೆ ಎಲ್ಲ ಆ್ಯಂಟಿಕ್ ಪೀಸ್‍ಗಳಿಗೆ ಮಾತ್ರ ಇವೆ ಅಂತ ಅಂದುಕೊಂಡವರಿಗೆ, ಈ ತೊಟ್ಟಿಲಿನ ಬೆಲೆ ಕೇಳಿ ಆಶ್ಚಯಾವಾಗದೇ ಇರೋದು.. ತೂಗುವ ತೊಟ್ಟಿಲಿನ ಬೆಲೆ ಲಕ್ಷ ರೂಪಾಯಿ ಇದ್ರೂ ಎಲ್ಲರನ್ನು ಆಕರ್ಷಸಿದ್ದಂತೂ ಸುಳ್ಳಲ್ಲ ಬಿಡಿ.

ಇದನ್ನು ಓದಿ:

1. ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

2. ಬೇಟಿ-ಬಚಾವೊ-ಬೇಟಿ ಪಡಾವೋ: ಪ್ರಧಾನಿ ಮೋದಿ ಕನಸಿಗೆ ಬಣ್ಣ ತುಂಬುತ್ತಿರುವ ಬನಾರಸ್ ವೈದ್ಯೆ

3. ನ್ಯೂ ಲುಕ್‍ನಲ್ಲಿ, ನ್ಯೂ ಆರ್ಯ ಭವನ್ ಸ್ವೀಟ್ಸ್