ನ್ಯೂ ಇಯರ್ ಪಾರ್ಟಿಯಿಂದ ಡಸ್ಟ್ ಬಿನ್ ಆ್ಯಪ್ ಅಭಿವೃದ್ಧಿ

ಉಷಾ ಹರೀಶ್​

ನ್ಯೂ ಇಯರ್ ಪಾರ್ಟಿಯಿಂದ ಡಸ್ಟ್ ಬಿನ್ ಆ್ಯಪ್ ಅಭಿವೃದ್ಧಿ

Thursday March 24, 2016,

3 min Read

ಸಾಮಾನ್ಯವಾಗಿ ಬೆಂಗಳೂರು,ಕೋಲ್ಕತ್ತಾ, ಮುಂಬೈನಂತಹ ಮಹಾನಗರಗಳಿಗೆ ಬಹುದೊಡ್ಡ ಶಾಪವಾಗಿರುವುದು ಅಲ್ಲಿನ ಕಸ. ಆ ಕಸದಿಂದ ಮಹಾನಗರಗಳು ವಿಶ್ವಮಟ್ಟದಲ್ಲಿ ತಮ್ಮ ಹೆಸರನ್ನು ಕೆಡಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ಈ ಕಸ ಹಾಕಲು ಜನರಿಗೆ ಅನುಕೂಲವಾಗಲಿ ಎಂದು ಬೀದಿಯಲ್ಲಿ ನಾಲ್ಕೈದು ಕಸದ ಡಬ್ಬಿಯನ್ನು ಅಂದರೆ ಡಸ್ಟ್ ಬಿನ್​ನ್ನು ಇಡುವ ಪ್ರತೀತಿ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಅವು ಎಲ್ಲಿವೆ ಎಂದು ಕೆಲ ಬಾರಿ ಕೆಲವರಿಗೆ ಗೊತ್ತೆ ಇರದೆ ಎಲ್ಲೆಂದರಲ್ಲಿ ಕಸ ಹಾಕಿ ಹೋಗುತ್ತಾರೆ. ಅದಕ್ಕೆಂದೆ ಮುಂಬೈನ ಒಬ್ಬ ಯುವಕ ಈ ಡಸ್ಟ್ ಬಿನ್ ಹುಡುಕುವ ತಾಪಾತ್ರಯಕ್ಕೆ ಅಂಕಿತ ಹಾಕುವ ದೃಷ್ಟಿಯಿಂದ ಡಸ್ಟ್ ಬಿನ್ ಹುಡುಕುವ ಒಂದು ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ.  ಮುಂಬೈನ ಬಾಂದ್ರದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವರುಣ್ ಎಂಬ ಯುವಕ ಈ ಸಂಶೋಧನೆ ಮಾಡಿದ್ದಾನೆ.

ಇದನ್ನು ಓದಿ: ಸಾವಯವ ಕೃಷಿಗೂ ಬಂತು ಮೊಬೈಲ್ ಆ್ಯಪ್...!

image


ಐಡಿಯಾ ಬಂದಿದ್ದೆ ವಿಚಿತ್ರ ಸನ್ನಿವೇಶದಲ್ಲಿ

2015ರ ಡಿಸೆಂಬರ್ ೩೧ ರಂದು ಮುಂಬೈನ ಬಾಂದ್ರಾದಲ್ಲಿರುವ ವರುಣ್ ಮನೆಯಲ್ಲಿ ಆತನ ಪಾಲಕರು ತಮ್ಮ ಹತ್ತಿರದ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ದೆಹಲಿಗೆ ತೆರಳುವ ಸಿದ್ಧತೆಯಲ್ಲಿದ್ದರು. ಪೊಷಕರಿಗೆ ದೆಹಲಿಗೆ ಹೋಗುವ ಖುಷಿಯಿದ್ದರೆ ಇತ್ತ ವರುಣ್​ಗೆ ತಂದೆ ತಾಯಿ ಇರುವುದಿಲ್ಲ ಮನೆಯಲ್ಲಿ ಫುಲ್ ಪಾರ್ಟಿ ಮಾಡಬಹುದು ಎಂಬ ಆಲೋಚನೆ ತಲೆಯಲ್ಲಿ ಬಂದು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದ. ವರುಣ್ ಮುಖದಲ್ಲಿರುವ ಸಂತಸವನ್ನು ಗಮನಿಸಿದ್ದ ಅವರ ತಂದೆ, ಹೊಸ ವರ್ಷ ಅಂತ ಗೆಳೆಯರನ್ನು ಮನೆಗೆ ಕರೆದುಕೊಂಡು ಬಂದು ಪಾರ್ಟಿ-ಗೀರ್ಟಿ ಮಾಡಬೇಡ ಎಂದ ಎಚ್ಚರಿಕೆ ನೀಡಿದರು. ಹಾಗೆನಾದರೂ ಮಾಡಿದರೆ ನಾಳೆ ನಿನಗೆ ಶಿಕ್ಷೆ ಕೊಡಲಾಗುವುದು ಎಂದು ಹೇಳಿ ದೆಹಲಿಗೆ ವಿವಾಹ ಕಾರ್ಯಕ್ರಮಕ್ಕೆ ತೆರಳಿದರು. ಆದರೆ ಅಪ್ಪನ ಎಚ್ಚರಿಕೆಯನ್ನು ನಿರ್ಲಕ್ಷ್ಯಸಿದ ವರುಣ್ ತನ್ನ ಪಟಾಲಂನ್ನು ಮನೆಗೆ ಕರೆತಂದು ಬಯರ್ ಬಾಟಲಿಗಳನ್ನು ತಂದು ವರ್ಷದ ಕೊನೆಯ ದಿನದ ಪಾರ್ಟಿಯನ್ನು ಬಹಳ ಜೋರಾಗಿಯೇ ಮಾಡಿ ಮುಗಿಸಿದರು. ಆದರೆ ಮಾರನೇ ದಿನ ಅಂದರೆ ಜನವರಿ ೧ ರಂದು ಕುಡಿದ ಬಾಟಲಿಗಳನ್ನು ಬಿಸಾಡಿ ಮನೆಯನ್ನೆಲ್ಲಾ ಶುಚಿಗೊಳಿಸಿ ಆ ಕಸವನ್ನು ಮುಂಜಾನೆ ಐದು ಗಂಟೆಗೆ ಎದ್ದು ತನ್ನ ಇನ್ನೊಬ್ಬ ಗೆಳೆಯ ಅರುಣ್ ಜೊತೆಗೆ ಮನೆಯ ಸಮೀಪದಲ್ಲಿ ಡಸ್ಟ್​ಬಿನ್ ಇದೆಯೆ ಇದ್ದರೆ ಅದರಲ್ಲಿ ಹಾಕೋಣ ಎಂದು ಹುಡುಕತೊಡಗಿದರು. ವರುಣ್ ಮತ್ತು ಅರುಣ್ ಮನೆಯಿಂದ ಎರಡು ಕಿ.ಮೀ ದೂರ ಕ್ರಮಿಸಿದರೂ ಮುಂಬೈ ಮಹಾನಗರ ಪಾಲಿಕೆಯ ಒಂದೇ ಒಂದು ಡಸ್ಟ್​ಬಿನ್ ಅವರ ಕಣ್ಣಿಗೆ ಬೀಳಲಿಲ್ಲ. ನಂತರ ತಮ್ಮ ಮನೆಯಿಂದ ಒಂದೆರಡು ಕಿಲೋ ಮೀಟರ್ ದೂರದ ಕಾರ್ಪೊರೇಶನ್ ತೊಟ್ಟಿಯಲ್ಲಿ ಕಸವನ್ನು ಬಿಸಾಡಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯವರನ್ನು ಶಪಿಸುತ್ತ ಮನೆಗೆ ಮರಳಿದ್ದರು. ಆಗ ವರುಣ್ ಅವರ ತಲೆಯಲ್ಲಿ ಡಸ್ಟ್​ಬಿನ್ ಪತ್ತೆ ಹಚ್ಚುವ ಆ್ಯಪ್ ರೂಪಿಸಿದರೆ ಹೇಗೆ ಎಂಬ ಐಡಿಯಾ ಹೊಳೆಯಿತು. ಈ ಬಗ್ಗೆ ಗೆಳೆಯ ಅರುಣ್ ಜೊತೆ ಚರ್ಚಿಸಿದಾಗ ಅವರಿಗೂ ಇಂತಹ ಯೋಜನೆ ಯಶಸ್ವಿಯಾಗುವ ಸೂಚನೆ ದೊರೆಯಿತು. ಅವರು ಅದಕ್ಕೆ ಕೈಜೋಡಿಸಿದರು.

image


ಟಿಡ್ಡಿ ಆ್ಯಪ್

ವರುಣ್ ಮೊದಲು ಮಾಡಿದ ಕೆಲಸವೆಂದರೆ ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟು ಮುಂಬೈನ ಗರದಲ್ಲಿ ಎಷ್ಟು ಡಸ್ಟ್​ಬಿನ್ಗಳಿವೆ ಎಂದು ವಿಚಾರಿಸಿದರು. ಅಲ್ಲಿನ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಿಂದ ಮುಂಬೈನಲ್ಲಿ ಒಟ್ಟು ೨೨ ಸಾವಿರ ಡಸ್ಟ್ ಬಿನ್ಗಳಿವೆ ಎಂಬ ಮಾಹಿತಿ ಇವರಿಗೆ ದೊರೆಯಿತು. ಆಗ ವರುಣ್ ಮತ್ತವರ ಗೆಳೆಯರು ಸಮೀಕ್ಷೆಗೆಂದು ಹೊರಟಾಗ ಅವರಿಗೆ ಸಿಕ್ಕಿದ್ದು ೪೦೦ ಕಿಲೋಮೀಟರ್​ಗೆ ಕೇವಲ ೭೦೦ ಡಸ್ಟ್ ಬಿನ್ಗಳು ಮಾತ್ರ. ಇದನ್ನೆಲ್ಲಾ ಮನಗಂಡ ವರುಣ್ ಮತ್ತವರ ಗೆಳೆಯರು ಸೇರಿಕೊಂಡು ಈ ಟಿಡ್ಡಿ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದರು.

image


ಈ ಆ್ಯಪ್ ಕೆಲಸ ಹೇಗೆ

ಈ ಆ್ಯಪ್​ನ್ನು ನಿಮ್ಮ ಸ್ಮಾರ್ಟ್​ಫೋನ್ ನಲ್ಲಿ ಡೌನ್​ಲೋಡ್ ಮಾಡಿಕೊಂಡು ನೀವು ಇರುವ ಏರಿಯಾವನ್ನು ಅದರಲ್ಲಿ ಸೇರಿಸಿದರೆ ನಿಮ್ಮ ಹತ್ತಿರದ ಡಸ್ಟ್ ಬಿನ್ ನಿಮಗೆ ಗೊತ್ತಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಭಿವೃದ್ಧಿ ಪಡಿಸಿರುವ ಈ ಆ್ಯಪ್​ನಲ್ಲಿ ಸಾರ್ವಜನಿಕರ ತಾವು ವಾಸವಾಗಿರುವ ಪ್ರದೇಶದ ಹತ್ತಿರದ ಸುತ್ತ ಮುತ್ತ ಇರುವ ಡಸ್ಟ್ ಬಿನ್ನ್ನು ಫೋಟೊ ತೆಗೆದು ತಾವೆ ಅಪ್ರೂ ಮಾಡುವ ತಂತ್ರಜ್ಞಾನ ಸಹ ಇದರಲ್ಲಿ ಇದೆ. ಈ ಆ್ಯಪ್ ಮೂಲಕ ಜನರು ತಮ್ಮ ಮನೆ ಹತ್ತಿರದ ಡಸ್ಟ್ ಬಿನ್ಗಳನ್ನು ಹುಡುಕಿ ತ್ಯಾಜ್ಯವನ್ನು ಎಸೆಯಬಹುದು. ಹೊಸ ವರ್ಷದ ಮೋಜು ಕೂಟ ವರುಣ್ ಜೀವನದ ಪಥವನ್ನೇ ಬದಲಿಸಿದ್ದಲ್ಲದೆ ಮುಂಬೈನಂತಹ ಮಹಾನಗರಗಳ ಕಸ ಎಲ್ಲೆಂದರಲ್ಲಿ ಬೀಳುವುದು ತಪ್ಪುವಂತ ಸಂಶೋಧನೆಗೆ ದಾರಿ ಮಾಡಿಕೊಟ್ಟಿತು.ವರುಣ್ ಅವರ ಈ ಆ್ಯಪ್​ನ್ನು ಕೊಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರ ಮಾತ್ರವಲ್ಲದೆ ಕೆಲ ಸಾಫ್ಟ್​​ವೇರ್ ಕಂಪೆನಿಗಳು ಮುಂದೆ ಬಂದಿರುವುದು ವಿಶೇಷ.  

ಇದನ್ನು ಓದಿ

1. ಸೌಂದರ್ಯ-ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮಗಾಗಿಯೇ ಇದೆ ಫಿಟ್ನೆಸ್ ಗುರು `ಬುಕ್ ಯುವರ್ ಗೇಮ್' ಆ್ಯಪ್

2. ಇಲ್ಲಿ ಗೃಹಣಿಯರಿಂದ ತಯಾರಾಗುತ್ತೆ ವೆರೈಟಿ ವೆರೈಟಿ ಚಾಕಲೇಟ್...!

3. ಈ ಕಾರ್​ ತಗೊಂಡ್ರೆ ಡ್ರೈವರ್​ ಬೇಡ್ವೇ ಬೇಡ..!