ಜೂನಿಯರ್ಸ್​ಗೆ ಸಹಾಯ ಮಾಡಲೆಂದು ಹುಟ್ಟಿದ ಫ್ರಾಟ್ಮಾರ್ಟ್

ಟೀಮ್​​ ವೈ.ಎಸ್​​.

 ಜೂನಿಯರ್ಸ್​ಗೆ ಸಹಾಯ ಮಾಡಲೆಂದು ಹುಟ್ಟಿದ ಫ್ರಾಟ್ಮಾರ್ಟ್

Friday July 17, 2015,

2 min Read

 ಸೈಟ್​​ವೊಂದರಲ್ಲಿ ಜಾಹೀರಾತು ನೀಡಲು ಅವಕಾಶ ಸಿಕ್ತು. ಆದ್ರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಅಂತ ಗೊತ್ತಿರಲಿಲ್ಲ. ಅದ್ಯಾರೋ ಕಿಡಿಗೇಡಿಗಳು ಒಸಾಮಾ ಬಿನ್ ಲಾಡೆನ್ ಹೆಸರಿನಲ್ಲಿ ಒಂದು ಎಕೆ 47 ನ್ನು ಮಾರಾಟಕ್ಕಾಗಿ ಹಾಕಿದ್ದರು. ತಮಾಷೆಗಾಗಿ ಮಾಡಿದ್ದ ಆಟವನ್ನು ನಾವು ಸಹಿಸಿಕೊಳ್ಳಲಿಲ್ಲ. ಅದನ್ನು ತಕ್ಷಣ ಗಮನಿಸಿ ಕಿತ್ತು ಹಾಕಿದೆವು. ಈ ಕಥೆಯನ್ನು ನಗುತ್ತಾ ಹೇಳಿದ್ದು ಬೇರಾರು ಅಲ್ಲ.ಫ್ರಾಟ್ಮಾರ್ಟ್ ಸ್ಥಾಪಕ ಹರ್ಷಗುಪ್ತಾ



image


ಅಂದಹಾಗೇ ಫ್ರಾಟ್ಮಾರ್ಟ್​ ಕಾಲೇಜ್​ ವಿದ್ಯಾರ್ಥಿಗಳ ಸಹಾಯಕ್ಕೆಂದು ಇರೋ ಉಚಿತ ಜಾಹೀರಾತು ಸೈಟ್​​. ಕೆಲವು ವರ್ಷಗಳ ಹಿಂದೆ ಹರ್ಷ ವಿದ್ಯಾರ್ಥಿಯಾಗಿದ್ದಾಗ ಸೆಮಿಸ್ಟೆರ್ ನಂತರ ಎಲ್ಲವೂ ಸಾಮಾನ್ಯವಾಗಿತ್ತು. ಎಲ್ಲ ವಿದ್ಯಾರ್ಥಿಗಳ ತರಹ ಪ್ರತಿ ಸೆಮಿಸ್ಟೆರ್ ನಂತರ ಪುಸ್ತಕಗಳ ರಾಶಿ ಇರುತ್ತಿತ್ತು. ಇದನ್ನು ನೋಡಲು ಹರ್ಷಗೆ ಇಷ್ಟವಾಗುತ್ತಿರಲಿಲ್ಲ. ವ್ಯಾಪಾರಿಗಳಿಗೆ ಮಾರಾಟ ಮಾಡಿದ್ರೆ ಎಷ್ಟೋ ಹಣ ನಷ್ಟವಾಗುತ್ತಿತ್ತು. ಶೇಕಡಾ 30, 40 ಬೆಲೆಗೆ ವಸ್ತುಗಳನ್ನು ತೆಗೆದುಕೊಂಡು ವ್ಯಾಪಾರಿಗಳು ಅದನ್ನು ಶೇಕಡಾ 60 ಕ್ಕೆ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳ ಕೈಯಿಂದ ತೆಗೆದುಕೊಂಡ ಪುಸ್ತಕಗಳನ್ನು ಆ ವ್ಯಾಪಾರಿಗಳು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು.

ಇದನ್ನು ಅರಿತ ಹರ್ಷ ಇದಕ್ಕಾಗಿ ಹೊಸದಾಗಿ ಯಾವುದಾದರೂ ಒಂದು ವೇದಿಕೆ ಆರಂಭಿಸಿ ಅಲ್ಲಿ ವಸ್ತುಗಳನ್ನು ತಕ್ಕ ಬೆಲೆಗೆ ಮಾರಾಟ ಮಾಡಲು ವೇದಿಕೆ ಒದಗಿಸಬೇಕು ಅಂತ ನಿರ್ಧರಿಸಿದ್ರು. ಪ್ರತಿಯೊಬ್ಬ ಸೀನಿಯರ್​​ ವಿದ್ಯಾರ್ಥಿಗಳಿಗೆ ಜೂನಿಯರ್ಸ್​ ಇದ್ದೇ ಇರುತ್ತಾರೆ. ಅವರು ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ಹಣವನ್ನು ವ್ಯರ್ಥ ಮಾಡುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಒಂದು ವೇದಿಕೆ ಆರಂಭಿಸಿ ಅಲ್ಲಿ ಅವರಿಗೆ ತಕ್ಕ ಬೆಲೆಯಲ್ಲಿ ಪುಸ್ತಕಗಳನ್ನು ದೊರಕಿಸಬೇಕು ಅನ್ನೋ ಹರ್ಷ ಕನಸಾಗಿತ್ತು.

2014 ರಲ್ಲಿ ಡೆಲ್ಲಿಯ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪದವಿ ಪಡೆದ ಹರ್ಷ ಸ್ವಲ್ಪ ಸಮಯ ಆನಲಿಸ್ಟ್ ಆಗಿ ಕೆಲಸ ಮಾಡಿದ್ರು. ತನ್ನ ಕನಸಿನ ಫ್ರಾಟ್ಮಾರ್ಟ್ ಆರಂಭಿಸಲು ಬೇಕಾಗುವಷ್ಟು ಹಣವನ್ನು ಸಂಪಾದಿಸಿದರು. ಟೆಕ್ನಿಕಲ್ ಟೀಮ್ ನ್ನು ಮೊದಲು ಹುಡುಕಿದ್ರು . ಫ್ರಂಟ್ ಎಂಡ್ ಬ್ಯಾಕ್ ಎಂಡ್ ಅದ್ಯಾವುದರ ಬಗ್ಗೆ ಸ್ವಲ್ಪವೂ ಜ್ಞಾನವಿರಲಿಲ್ಲ. ಸಹ ಸಂಸ್ಥಾಪಕ ಸಾತ್ವಿಕ್ ಜೊತೆ ಸೇರಿಕೊಂಡು ಎಲ್ಲವನ್ನು ಕಲಿತುಕೊಂಡ್ರು. 2015 ಏಪ್ರಿಲ್ ನಲ್ಲಿ ಫ್ರಾಟ್ಮಾರ್ಟ್ ತನ್ನ ಸೇವೆ ಆರಂಭಿಸಿತು.

ಫ್ರಾಟ್ಮಾರ್ಟ್ ಕಾಲೇಜ್ ನ ವಿದ್ಯಾರ್ಥಿಗಳನ್ನು ಸಂಪರ್ಕಿಸುವಂತೆ ಮಾಡುವ ಆನ್‌ಲೈನ್ ಆಧಾರಿತ ವೇದಿಕೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಶೈಕ್ಷಣಿಕ ವಸ್ತುಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ಜಾಹೀರಾತು ಹಾಕಬಹುದು. ಹೌಸ್ಮೆಟ್ ಮತ್ತು ಸೌಕರ್ಯಗಳು, ರೈಡ್ಶೇರ್ ಪಾರ್ಟ್ನರ್ಸ್ ಮುಂತಾದವುಗಳನ್ನು ಕೂಡ ಫ್ರಾಟ್ಮಾರ್ಟ್​ನಲ್ಲಿ ಹುಡುಕಬಹುದು.

ಫ್ರಾಟ್ಮಾರ್ಟ್​ ಪ್ರತಿ ಕಾಲೇಜ್​ನಲ್ಲೂ​​ ತನ್ನದೇ ಆದ ಮಾರುಕಟ್ಟೆ ಹೊಂದಿದೆ. ಅಲ್ಲಿ ನಿರ್ದಿಷ್ಟ ಕಾಲೇಜಿನ ವಿದ್ಯಾರ್ಥಿಗಳು, ಖರೀದಿ ಮಾರಾಟ, ಪಾಲು, ಮತ್ತು ತಮ್ಮ ಗೆಳೆಯರೊಂದಿಗೆ ಸಂಪರ್ಕ ಮಾಡಬಹುದು. ಇಡೀ ಪರಿಕಲ್ಪನೆಗೆ ಒಂದು ವೈಯಕ್ತಿಕ ಭಾವನೆ ಇದೆ. ಒಂದೇ ಕಾಲೇಜ್ ನ ವಿದ್ಯಾರ್ಥಿಗಳನ್ನು ಅವರ ಕಾಲೇಜ್ ನಲ್ಲಿ ಸಂಪರ್ಕಿಸುವಂತೆ ಮಾಡುವುದು ಇದರ ಹಿಂದಿನ ಉದ್ದೇಶ.

ಬೈಯರ್ಸ್ ಮತ್ತು ಸೆಲ್ಲರ್ಸ್ ನೈಜ ಸಮಯದಲ್ಲಿ ಫೋನ್ ನಂಬರ್ ಮತ್ತು ಅಡ್ರೆಸ್ಸ್ ಯಾವುದನ್ನು ಶೇರ್ ಮಾಡದೆ ಚಾಟ್ ಮಾಡಬಹುದು. ನಮ್ಮ ಸುತ್ತಮುತ್ತಲ ಕಾಲೇಜ್ ನ ಜಾಹೀರಾತುಗಳನ್ನು ಕೂಡ ವಿದ್ಯಾರ್ಥಿಗಳು ವೀಕ್ಷಿಸಬಹುದು. ಫ್ರಾಟ್ಮಾರ್ಟ್​ ಆರಂಭವಾಗಿ ಕೇವಲ ಮೂರು ತಿಂಗಳಾಗಿದೆ. ಆದ್ರೆ ಆದಾಗಲೇ 320 ಕಾಲೇಜ್ ಗಳು ಈ ಸೇವೆಯ ಜೊತೆ ಕೈ ಜೋಡಿಸಿವೆ. 1000 ಕ್ಕೂ ಹೆಚ್ಚು ಜಾಹೀರಾತುಗಳು ಫ್ರಾಟ್ಮಾರ್ಟ್​ ಸೈಟ್ ನಲ್ಲಿವೆ.

ಫ್ರಾಟ್ಮಾರ್ಟ್​ನಲ್ಲಿ ವಿವಿಧ ಪ್ರವೇಶ ಪರೀಕ್ಷೆಗಳ ಸ್ಟಡೀ ಮೆಟೀರಿಯಲ್ಸ್, ಕೋರ್ಸ್ ಮೆಟೀರಿಯಲ್ಸ್ ಮತ್ತು ನಾವೆಲ್ಸ್, ಯುಎಸ್​​ಬಿ ಮೋಡೇಮ್ಸ್, ಎಲ್ಇಡಿ ಲೈಟ್, ಕ್ಯಾಲ್ಕ್ಯುಲೇಟರ್ ಮುಂತಾದ ಎಲೆಕ್ಟ್ರಾನಿಕ್ ಸಾಮಾನುಗಳನ್ನು ಕೂಡ ವಿದ್ಯಾರ್ಥಿಗಳು ಮಾರಾಟ ಮಾಡಬಹುದು.

ಫ್ರಾಟ್ಮಾರ್ಟ್ ಬೇರೆ ಯಾವುದೇ ಆನ್‌ಲೈನ್ ಪೋರ್ಟಲ್ ಗಳ ಜೊತೆ ಪೈಪೋಟಿ ನಡೆಸುತ್ತಿಲ್ಲ. ಬಿಗ್ ಪೋರ್ಟಲ್ ಆದ ಓಎಲ್ಎಕ್ಸ್ ಮತ್ತು ಕ್ವಿಕರ್ ಜೊತೆ ಸ್ಪರ್ಧಿಗಳಿದಿಲ್ಲ. ಏಕಂದರೆ ಉನ್ನತ ವ್ಯಾಸಂಗ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳು ಮಾತ್ರ ತಮ್ಮ ವಾರ್ಷಿಕ ಶೈಕ್ಷಣಿಕ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಕೊಳ್ಳಲು ಈ ವೇದಿಕೆಗಳನ್ನು ಉಪಯೋಗಿಸುತ್ತಿದ್ದಾರೆ.

ವಾರ್ಷಿಕ ಶೈಕ್ಷಣಿಕ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಕೊಳ್ಳುವ ಕಲ್ಪನೆಯ ಫ್ರಾಟ್ಮಾರ್ಟ್ ಜನರಿಗೆ ಅಷ್ಟೊಂದು ಪರಿಚಯವಿಲ್ಲ. ಅದಕ್ನಾಕಾಗಿ ಯಾವುದೇ ಸಾಹಸ ಮಾಡುತ್ತಿಲ್ಲ. ಕಾಲೇಜ್​​ಗಳಲ್ಲಿ ಒಂದು ಸಂಸ್ಕೃತಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸಹಾಯವಾಗೋದೇ ಇದರ ಉದ್ದೇಶ.

    Share on
    close