ಪಕ್ಷಿಗಳ ಪಾಲಿಗೆ ಅನ್ನದಾತ...!

ಪೂರ್ವಿಕಾ​.

ಪಕ್ಷಿಗಳ ಪಾಲಿಗೆ ಅನ್ನದಾತ...!

Monday November 09, 2015,

2 min Read

ಪಕ್ಷಿಗಳ ಕಲರವವನ್ನೇ ಕೇಳದ ಕಿವಿಗಳಿಗೆ ಇಲ್ಲಿ ಬೆಳ್ಳಿಗ್ಗೆ ಸಂಜೆ ಗಿಳಿಗಳ ಕೂಗಿನ ಸಂಗೀತ ಕೇಳುತ್ತೆ..ಗಿಳಿ ಅಂದ್ರೆ ಹೇಗಿರುತ್ತೆ ಅಂತ ಕೇಳೋ ಮಕ್ಕಳಿಗೆ ಇಲ್ಲಿ ಕಣ್ತುಂಬೋ ಅಷ್ಟು ಗಿಳಿಗಳ ಹಿಂಡೇ ಸಿಗುತ್ತೆ. ಪ್ರಾಣಿ, ಪಕ್ಷಿಗಳ ಪ್ರೀತಿ ಎಲ್ಲರಿಗೂ ಇರುತ್ತೆ. ಹೆಚ್ಚು ಅಂದ್ರೆ ಒಂದೆರೆಡುಪ್ರಾಣಿಗಳು, ಐದಾರು ಪಕ್ಷಿಗಳನ್ನ ಸಾಕೋದು ಸರ್ವೇ ಸಾಮಾನ್ಯ. ಆದ್ರೆ ಚೆನೈನ ಈ ವ್ಯಕ್ತಿ ಪ್ರತಿ ನಿತ್ಯ 4 ಸಾವಿರ ಪಕ್ಷಿಗಳಿಗೆ ಎರಡು ಹೊತ್ತು ಅನ್ನದಾತ. ತಾನು ಒಂದು ಹೊತ್ತು ಊಟ ಮಾಡದೇ ಇದ್ದರೂ ಕೂಡ ಆತ ಪಕ್ಷಿಗಳಿಗೆ ಅನ್ನ ಊಟ ಬಡಿಸೋದು ಮರೆಯೊಲ್ಲ.

image


ಭಾರತದ ಬರ್ಡಮ್ಯಾನ್ ಅಂತಾನೇ ಫೇಮಸ್ ಆಗಿರೋದು ಚೆನೈನ ಸೇಖರ್. ಸುಮಾರು 25 ವರ್ಷಗಳ ಹಿಂದೆ ಚೆನೈಗೆ ಬಂದು ವಾಸವಾಗಿದ್ದಾರೆ. ವೃತ್ತಿಯಲ್ಲಿ ಕ್ಯಾಮೆರಾ ಮ್ಯಾಕಾನಿಕ್ ಆಗಿರೋ ಸೇಖರ್ ತನ್ನ ಆದಾಯದಲ್ಲಿ ಬರೋ ಶೆಕಡಾ 40 ರಷ್ಟು ಭಾಗವನ್ನ ಪ್ರತಿನಿತ್ಯ ಈ ಪಕ್ಷಿಗಳಿಗಾಗಿ ಮೀಸಲಿಡುತ್ತಾರೆ. ಸುಮಾರು ಹತ್ತು ವರ್ಷದ ಹಿಂದೆ ಸುನಾಮಿ ಬಂದ ಸಂದರ್ಭದಲ್ಲಿ ಎರಡು ಗಿಳಿಗಳು ಸೇಖರ್ ಮನೆಯ ಬಳಿ ಆಹಾರ ಹುಡುಕುತ್ತಾ ಬಂದಿದ್ದವು. ಅವುಗಳಿಗೆ ಕಾಳು ಹಾಗೂ ನೀರನ್ನ ಇಟ್ಟ ಸೇಖರ್ ನಂತ್ರ ಈಗ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

image


ಮೊದಮೊದಲಿಗೆ ಎರಡು ಗಿಳಿಗಳು ಮಾತ್ರ ಬೇಟಿ ನೀಡುತಿದ್ದವು. ಆದ್ರೆ ದಿನ ಕಳೆದಂತೆ ಐವತ್ತು ನೂರು ಇನ್ನೂರು ನಂತ್ರ ಸಾವಿರಗಟ್ಟಲೇ ಪಕ್ಷಿಗಳು ಊಟಕ್ಕಲೆ ಬರಲು ಶುರುಮಾಡಿದವು. ಈಗ ಸೇಖರ್ ಪ್ರತಿನಿತ್ಯ 4000 ಪಕ್ಷಿಗಳಿಗೆ ಹೊಟ್ಟೆ ತುಂಬಿಸೋ ಜವಾಬ್ದಾರಿಯನ್ನ ಹೊಂದಿದ್ದಾರೆ. ಹತ್ತುವರ್ಷಗಳಿಂದ ಇದನ್ನೆ ನಿತ್ಯಕಾಯಕವನ್ನಾಗಿ ಕೊಂಡಿರೋ ಸೇಖರ್ ಇಲ್ಲಿಯವರೆಗೂ ಒಂದು ದಿನ ಕೂಡ ಮನೆಬಿಟ್ಟು ಯಾವ ಊರಿಗೂ ಹೋಗಿಲ್ಲ. ಕಾರಣ ಇವರನ್ನೆ ನಂಬಿಕೊಂಡಿರೋ ಪಕ್ಷಿಗಳು. ಹಾಗಂತ ಸೇಖರ್ ಆ ಪಕ್ಷಿಗಳನ್ನ ಗೂಡು ಕಟ್ಟಿ ಕೂಡಿ ಹಾಕಿಲ್ಲ ಬೆಳ್ಳಿಗ್ಗೆ ಸಂಜೆಯ ಊಟಕ್ಕೆ ಮಾತ್ರ ಪ್ರತಿನಿತ್ಯ 4000 ಪಕ್ಷಿಗಳು ಸೇಖರ್ ಮನೆಗೆ ಅಥಿತಿಯಾಗಿ ಹಾಜರ್ ಆಗುತ್ತವೆ.

image


ಪಕ್ಷಿಗಳಿಗಾಗಿ ಸೇಖರ್ ಪ್ರತಿನಿತ್ಯ ಬೆಳ್ಳಿಗ್ಗೆ 4,30 ಎದ್ದು 6-30 ರ ವರೆಗೆ ಆಹಾರವನ್ನ ತಯಾರಿ ಮಾಡಿ ಮನೆಯ ಮುಂದೆ ಮರದ ಪಟ್ಟಿಗಳನ್ನ ಜೋಡಿಸಿ ಪಕ್ಷಿಗಳಿಗೆ ತಿನ್ನಲು ಸುಲಭವಾಗುವಂತೆ ಆಹಾರ ಹಾಕುತ್ತಾರೆ. ಪ್ರತಿನಿತ್ಯ ಪಕ್ಷಿಗಳಿಗಾಗಿಯೇ 65 ಕೆಜಿ ಅಕ್ಕಿಯನ್ನ ಕೊಂಡು ತರುತ್ತಾರೆ. ಬೆಳ್ಳಿಗ್ಗೆ ಮಾತ್ರವಲ್ಲದೆ ಸಂಜೆ ಕೂಡ ಇದೇ ರೀತಿ ಪಕ್ಷಿಗಳಿಗೆ ಸೇಖರ್ ಮನೆಯಲ್ಲಿ ಔತಣ ಇದ್ದೇ ಇರುತ್ತೆ.

ಸೀಸನ್​​ಗೆ ತಕ್ಕಂತೆ ಪಕ್ಷಿಗಳು ಬಂದು ತಮ್ಮ ಹೊಟ್ಟೆ ತುಂಬಿಸಿಕೊಂಡು ಹೋಗುತ್ತವೆ. ಅಷ್ಟೇ ಅಲ್ಲದೆ ಇಲ್ಲಿ ವಲಸೆ ಹಕ್ಕಿಗಳು ಕೂಡ ಬಂದು ಗಿಳಿಗಳ ಜೊತೆಯಲ್ಲಿ ಪಾರಿವಾಳಗಳು ಕೂಡ ಊಟಕ್ಕೆ ಎರಡು ಹೊತ್ತು ಹಾಜರ್ ಆಗುತ್ತವೆ. ಒಂಟಿಯಾಗಿರೋ ಸೇಖರ್ ಪಾಲಿಗೆ ಗಿಳಿಗಳೇ ಎಲ್ಲವೂ ಆದ್ರಿಂದ ಇಲ್ಲಿಂದ ಎಲ್ಲೂ ಹೋಗಲು ಮನಸ್ಸಿಲ್ಲ ಅಂತಾರೆ. ಹತ್ತು ವರ್ಷದಿಂದ ಪಕ್ಷಿಗಳ ಜೊತೆಯಲ್ಲಿ ಸಂಬಂಧ ಗಟ್ಟಿಯಾಗಿದ್ದು ಅವುಗಳೇ ತಮ್ಮ ಜೀವನ ಅಂತಾರೆ ಸೇಖರ್. ಪ್ರತಿ ನಿತ್ಯ 500ರಿಂದ 600 ವರೆಗೂ ಪಕ್ಷಿಗಳಿಗಾಗಿ ಖರ್ಚು ಮಾಡೋ ಸೇಖರ್ ಮನೆಯ ಮುಂದೆ ಬೆಳ್ಳಿಗ್ಗೆ ಸಂಜೆ ಆಯ್ತು ಅಂದ್ರೆ ಪಕ್ಷಿಗಳ ಜಾತ್ರೆ ಹೆಚ್ಚಾಗಿರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಸೇಖರ್ ಮನೆ, ಚೆನೈನಲ್ಲಿ ಪ್ರವಾಸಿ ತಾಣದಂತಾಗಿದೆ. ಸಾವಿರಾರು ಗಟ್ಟಲೆ ಗಿಳಿಗಳು ಹಾಗೂ ಪಾರಿವಾಳಗಳನ್ನ ಕಣ್ತುಂಬಿಕೊಳ್ಳಲು ಜನರ ಹಿಂಡು ಸಾಲುಗಟ್ಟುತ್ತೆ.

image


ಸೇಖರ್ ಅವರಿಗೆ ಈಗ ವಯಸ್ಸಾಗಿದ್ದು ಪಕ್ಷಿಗಳಿಗೆ ಆಹಾರ ತಿನ್ನಲು ಸಹಾಯವಾಗಲಿ ಅಂತ ಆಹಾರ ಇಡುವ ಮರಗಳನ್ನ ಏರಲು ಕಷ್ಟವಾಗ್ತಿದೆಯಂತೆ. ಆದ್ರೂ ಕೂಡ ಸೇಖರ್ ಮಾತ್ರ ಪಕ್ಷಿಗಳಿ ಹೊಟ್ಟೆ ತುಂಬಿಸೋ ಕೆಲಸವನ್ನ ಮಾತ್ರ ಕೈಬಿಟ್ಟಿಲ್ಲ. ಇಲ್ಲಿಯ ವರೆಗೂ ಸೇಖರ್ ತಾನು ಉಪವಾಸವಿದ್ದರೂ ಕೂಡ ಒಂದು ದಿನ ಪಕ್ಷಿಗಳಿಗೆ ಊಟ ಇಡೋದನ್ನ ಮರೆತಿಲ್ಲ. ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ರಿಪೇರಿ ಮಾಡಿಸುವವರು ಕಡಿಮೆ ಆಗ್ತಿದ್ದಾರೆ. ಆದ್ರೆ ಸೇಖರ್ ಮನೆಯ ಅಥಿತಿಗಳು ಮಾತ್ರ ಹೆಚ್ಚಾಗ್ತಿದ್ದಾರೆ. ವಯಸ್ಸಾದ ಹಾಗೇ ಸೇಖರ್ ಅವ್ರಿಗೂ ಕೆಲಸ ಮಾಡಲು ಕಷ್ಟ ಆಗ್ತಿದೆ..ಆದ್ರಿಂದ ಸೇಖರ್ ಅವ್ರಿಗೆ ಈಗ ಪಕ್ಷಿಗಳ ಹೊಟ್ಟೆ ತುಂಬಿಸೋಕೆ ಸಹಾಯ ಬೇಕಿದೆ..ಭೂಮಿ ಮೇಲೆ ಸಾಕಷ್ಟು ಜನರು ಪಕ್ಷಿ ಪ್ರೇಮಿಗಳು ಇದ್ದಾರೆ ನನಗೆ ಸಾಧ್ಯವಾಗೋ ತನಕ ಇವರುಗಳಿಗೆ ಆಹಾರ ಹಾಕುತ್ತೇನೆ, ನಂತ್ರ ಯಾರಾದ್ರು ಇವುಗಳ ಸೇವೆ ಮಾಡೇ ಮಾಡ್ತಾರೆ ಅನ್ನೋದು ಸೇಖರ್ ಅವ್ರ ಭರವಸೆ..ಒಂದೆರೆಡು ಪ್ರಾಣಿಗಳನ್ನ ಸಾಕೋದಕ್ಕೆ ಹಿಂದು ಮುಂದು ನೋಡೋ ನಮ್ಮ ಮಧ್ಯದಲ್ಲಿ ಈ ರೀತಿಯೊಬ್ಬ ವಿಷಿಷ್ಠವಾದ ಪಕ್ಷಿಪ್ರೇಮಿಯೊಬ್ಬರು ಇದ್ದಾರೆ ಅನ್ನೋದೇ ಹೆಮ್ಮೆ.