ಇಳಿವಯಸ್ಸಿನ ಉತ್ಸಾಹಕ್ಕೆ ಉಡುಗೊರೆಯಾಯ್ತು Ask Chitvish

ನೀಲಾ ಶಾಲು

ಇಳಿವಯಸ್ಸಿನ ಉತ್ಸಾಹಕ್ಕೆ ಉಡುಗೊರೆಯಾಯ್ತು Ask Chitvish

Friday January 01, 2016,

2 min Read

image


ವಯಸ್ಸಾಗುತ್ತಿದಂತೆ ಎಲ್ಲದರ ಮೇಲೆ ಆಸಕ್ತಿ ಕಡಿಮೆಯಾಗಿ, ಸುಮ್ಮನೆ ಹಳೇ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತಿರುವವರೇ ಹೆಚ್ಚು. ಇನ್ನು ಕೆಲವು ವೃದ್ಧರು ವಯಸ್ಸು ಕೇವಲ ದೇಹಕ್ಕೆ, ಮನಸ್ಸಿಗೆ ಅಲ್ಲ ಎಂದು ತಮ್ಮನ್ನು ಯಾವುದಾದರು ಕೆಲಸದಲ್ಲಿ ತೊಡಗಿಸಿಕೊಂಡು ಸದಾ ಕಾಲ ಲವಲವಿಕೆ, ಉತ್ಸಾಹದಿಂದ ಇರುತ್ತಾರೆ. ಅಂಥವರ ಪಟ್ಟಿಯಲ್ಲಿ ತಮಿಳುನಾಡಿನ ಚಿತ್ರಾ ವಿಶ್ವನಾಥನ್ ಎಂಬುವವರು ಇದ್ದಾರೆ.

image


ತಮಿಳುನಾಡಿನ ಮೈಲಾಪುರ್ ನಿವಾಸಿಯಾಗಿರುವ ಚಿತ್ರಾ ವಿಶ್ವನಾಥನ್ ರವರಿಗೆ 76ರ ಹರೆಯ. ಮೈಲಾಪುರದಲ್ಲಿ ಇವರಿಗೆ ವಿಶಿಷ್ಟ ಸ್ಥಾನವಿದೆ. ಮಾಮಿ ಎಂದೇ ಪ್ರಸಿದ್ಧಿಯಾಗಿರುವ ಚಿತ್ರಾ ರವರು ಇಂಟರ್ ನೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಫೇಸ್ ಬುಕ್, ವಾಟ್ಸ್​ಆ್ಯಪ್​ನಲ್ಲಿ ಆ್ಯಕ್ಟಿವ್ ಆಗಿರ್ತಾರ…? ಎಂದು ಯೋಚಿಸಬೇಡಿ. ಈಕೆ ಆಕ್ಟಿವ್ ಆಗಿರುವುದು ಮೊಬೈಲ್ ಆ್ಯಪ್​ನಲ್ಲಿ . ಹೌದು, ಚಿತ್ರಾ ವಿಶ್ವನಾಥನ್ ರವರಿಗೆ ತಮ್ಮದೇ ಆದ ಒಂದು ಮೊಬೈಲ್ ಆ್ಯಪ್ ಇದೆ. ಅದ್ಯಾವ ಆ್ಯಪ್ ಅಂತೀರಾ…?

Ask Chitvish

ಅಡುಗೆಯ ರೆಸಿಪಿ ಹೊಂದಿರುವ ಈ ಆ್ಯಪ್​ನ ಹೆಸರು Ask Chitvish. ಈ ಆ್ಯಪ್ ಮೂಲಕ ನಿಮಗೆ ಬೇಕಾದ ಎಲ್ಲ ಬಗೆ ಅಡುಗೆಗಳನ್ನು ಬಹಳ ಸುಲಭವಾಗಿ ಕಲಿಯಬಹುದು. ಹಳೆಯ ಕಾಲದ ಅಡುಗೆಯಿಂದ ಹಿಡಿದು ಈಗಿನ ಪೀಡ್ಜಾ, ಬರ್ಗರ್​​ವರೆಗೂ ಎಲ್ಲಾ ಬಗೆಯ ತಿಂಡಿ ತಿನ್ನಿಸುಗಳನ್ನ ಮಾಡುವ ವಿಧಾನವನ್ನು ಈ ಆ್ಯಪ್ ನಲ್ಲಿ ಚಿತ್ರ ಹಾಗೂ ವಿಡಿಯೋ ಗಳ ಮೂಲಕ ತಿಳಿಯಬಹುದಾಗಿದೆ.

image


ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್​ಗಳಲ್ಲಿ ಲಭ್ಯವಾಗುವ ಈ ಆ್ಯಪ್​ನಲ್ಲಿ ಸುಮಾರು 3,000ಕ್ಕಿಂತಲೂ ಹೆಚ್ಚು ರೆಸಿಪಿಗಳಿವೆ. ಬಗೆ ಬಗೆಯ ಪಾಯಸ, ಕಡುಬು, ಜಿಗರ್ ತಂಡಾ, ರವೆ ದೋಸೆ, ಬಗೆ ಬಗೆಯ ಇಡ್ಲಿಗಳು, ಎಲ್ಲಾ ಬಗೆಯ ರೈಸ್ ಬಾತ್ ಗಳು ಅಷ್ಟೇ ಅಲ್ಲದೇ ಬೇಕರಿ ತಿನ್ನಿಸುಗಳಾದ ಕುಕ್ಕಿಸ್, ಬ್ರೇಡ್ ಸೇರಿದಂತೆ ಬಹುತೇಕ ಎಲ್ಲ ತಿಂಡಿ ತಿನ್ನಿಸುಗಳ ಮಾಹಿತಿಯನ್ನ ಈ ಆ್ಯಪ್ ನಲ್ಲಿ ಪಡೆಯಬಹುದಾಗಿದೆ..

2003ರಲ್ಲಿ ಚಿತ್ರಾ ವಿಶ್ವನಾಥನ್ ರವರು ಹಾಸಿಗೆ ಹಿಡಿದಿದ್ದರು. ಆ ಸಮಯದಲ್ಲಿ ಮಗಳು , ನನಗೆ ಇಂಟರ್ ನೆಟ್ ಸಂಪರ್ಕ ಕೊಡೊಸಿದ್ರು. ಓದಲು ಬರೆಯಲು ಬರುತ್ತಿದ್ದ ಚಿತ್ರಾರವರಿಗೆ ಕಂಪ್ಯೂಟರ್ ಹಾಗೂ ಇಂಟರ್ ನೆಟ್ ಉಪಯೋಗ ಮಾಡುವುದನ್ನು ಕಲಿಯಬೇಕು ಎಂದು ಆಸಕ್ತಿ ಹುಟ್ಟಿತ್ತು. ಹೀಗಾಗಿ ಮೊಮ್ಮಕ್ಕಳ ಬಳಿ ಕಂಪ್ಯೂಟರ್ ಹೇಗೆ ಉಪಯೋಗಿಸಬೇಕು ಹಾಗೂ ಗೂಗಲ್ ನ ಉಪಯೋಗವೇನು ಎಂದು ಮಾಹಿತಿಯನ್ನು ಪಡೆದ್ರು. ಹೀಗೆ ನೆಟ್ ನಲ್ಲಿ ಹೆಚ್ಚಿನ ವಿಷಯಗಳನ್ನು ತಿಳಿಯಯಲು ಚಿತ್ರಾ ರವರು ಪ್ರಾರಂಭ ಮಾಡಿದ್ರು. ಕಲಿಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ತಿಳಿದಿದ್ದ ಇವರು, ಇಂಟರ್ ನೆಟ್ ಮೂಲಕ ಬಹಳಷ್ಟು ಮಾಹಿತಿಯನ್ನು ತಿಳಿಯುತ್ತಿದ್ರು..

ಇನ್ನು ಇವರ ಮಕ್ಕಳಿಗಾಗಿ ಪ್ರತಿದಿನ ನಾನಾ ಬಗೆ ರೆಸಿಪಿಗಳನ್ನು ಬರೆದು ಅದನ್ನ ಪ್ರಯೋಗ ಮಾಡುತ್ತಿದ್ದ ಇವರ ಉತ್ಸಾಹವನ್ನು ನೋಡಿದ ಇವರ ಮಗಳು ಇವರ 50ನೇ ಹುಟ್ಟುಹಬ್ಬಕ್ಕೆ Ask Chitvish ಆ್ಯಪ್ ನನ್ನು ಉಡುಗೊರೆಯಾಗಿ ಕೊಟ್ರು.

image


ಆ ಉಡುಗೊರೆಯೇ ಇವರಿಗೆ ಈ ದಿನ ಇಷ್ಟು ದೊಡ್ಡ ಮಟ್ಟಿನ ಹೆಸರು ತಂದು ಕೊಟ್ಟಿದೆ. ಸದಾ ಕಾಲ ಬ್ಯೂಸಿಯಾಗಿರುವುದಕ್ಕೆ ಇಷ್ಟ ಪಡುವ ಚಿತ್ರಾ ರವರು ಪ್ರತಿದಿನ ಕನಿಷ್ಠ 6 ರಂದಿ 8 ಗಂಟೆಗಳ ಕಾಲ ಬ್ರೌಸಿಂಗ್ ನಲ್ಲಿ ಕಾಲ ಕಳೆಯುತ್ತಾರೆ. ಇನ್ನು ಈ ಆ್ಯಪ್ ನ ಬಳಕೆದಾರರು ಎಸ್​ಎಂಎಸ್​​, ವಾಟ್ಸ್​ಆ್ಯಪ್​ , ಫೇಸ್​ಬುಕ್, ಇಮೇಲ್ ಅಥವಾ ಫೋನ್ ಮೂಲಕ ಪ್ರಶ್ನೆಗಳನ್ನು ಕೇಳಿದರೆ ಅವರಿಗೆ ತಕ್ಷಣವೇ ಉತ್ತರಿಸುತ್ತಾರೆ. ಇವರ ಆ್ಯಪ್ ನಲ್ಲಿ ಯಾವುದೇ ಬಗೆಯ ಅಡುಗೆಯಾಗಲಿ, ಅದನ್ನು ಕಲಿಯುವವರಿಗೆ ಉಪಯೋಗವಾಗಲಿ ಎಂದು ಹಂತ ಹಂತವಾಗಿ ಅಡುಗೆ ಮಾಡುವ ವಿಧಾನವನ್ನು ತಿಳಿಸಿದ್ದಾರೆ.

ಹೆಚ್ಚಿನ ಜನ ಅಡುಗೆ ಪುಸ್ತಕವನ್ನು ಬರೆದು ಮಾರಾಟ ಮಾಡುತ್ತಾರೆ. ಆದ್ರೆ ಇವರು ಪುಸ್ತಕ ಬರೆದ್ರೆ ಪ್ರಕಾಶಕರನ್ನು ಹುಡುಕುವ ಕಷ್ಟ. ಅಡುಗೆ ಪುಸ್ತಕಗಳನ್ನು ಬರೆಯುವ ಯೋಚನೆ ಮಾಡುವ ಬದಲು ಈ ರೀತಿ ಆ್ಯಪ್ ಬಳಸುವುದು ಬಹಳ ಉಪಯೋಗಕಾರಿಯಾಗುತ್ತದೆ. ಇನ್ನು ರುಚಿ ರುಚಿಯಾದ ಅಡುಗೆ ಮಾಡುವ ಚಿತ್ರಾ ತನ್ನ ಪಾಕ ವಿಧಾನವನ್ನೂ ಮುಂದಿನ ಜನಾಂಗಕ್ಕೆ ದಾಟಿಸಲು ಆ್ಯಪ್ ಸಹಾಯ ಪಡೆದುಕೊಂಡಿದ್ದಾರೆ. ತಂತ್ರಜ್ಞಾನವನ್ನು ಯುವ ಜನಾಂಗ ಮಾತ್ರ ನೆಚ್ಚಿಕೊಂಡಿದೆ ಎಂಬ ಊಹೆಯನ್ನು ಬದಲಿಸಿ, ಆ್ಯಪ್ ಮೂಲಕ ಅಡುಗೆ ಕಲಿಸುವ ಚಿತ್ರಾ ಮಾಮಿ ಎಲ್ಲರ ಗಮನ ಸೆಳೆದಿದ್ದಾರೆ.