ರೀಡ್ ಮೋರ್.. ಪುಸ್ತಕ ಓದುವ ಹವ್ಯಾಸ ಬೆಳೆಸಲು ಹೊಸ ಅಭಿಯಾನ..!

ಉಷಾ ಹರೀಶ್​

ರೀಡ್ ಮೋರ್.. ಪುಸ್ತಕ ಓದುವ ಹವ್ಯಾಸ ಬೆಳೆಸಲು ಹೊಸ ಅಭಿಯಾನ..!

Tuesday March 22, 2016,

2 min Read

ಜಗತ್ತಿನಲ್ಲಿ ಪ್ರತಿಯೊಬ್ಬರು ಓದುವುದನ್ನು ರೂಡಿಸಿಕೊಳ್ಳಬೇಕು ಅದಕ್ಕಾಗಿ ಜನರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವ ದೇಶದ ಸಾಂಸ್ಕೃತಿಕ ಪ್ರಂಪರೆ ಸಾಹಿತಗಳ ಬಗ್ಗೆ ಅರಿವು ಮೂಡಿಸಿ ಅವರ ಕೃತಿಗಳನ್ನು ಎಲ್ಲರಿಗೂ ಪರಿಚಯಿಸುವ ಸಲುವಾಗಿ ಇಬ್ಬರು ಗೆಳಯರು ಸೇರಿಕೊಂಡು ದೇಶಾದ್ಯಂತ ಪುಸ್ತಕ ಅಭಿಯಾನ ಮಾಡುತ್ತಿದ್ದಾರೆ.

image


ಹೌದು ಒಡಿಶಾ ಮೂಲಕ ಯುವತಿ ಅಕ್ಷಯ ರೌತಾರೇ ಮತ್ತು ಯುವಕ ಶತಾಬ್ದಿ ಮಿಶ್ರಾ ಎಂಬ ಇಬ್ಬರು ಗೆಳೆಯರು ಸೇರಿಕೊಂಡು ರೀಡ್ ಮೋರ್ ಇಂಡಿಯಾ-2015 ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಅದರ ಮೂಲಕ ಪುಸ್ತಕ ಅಭಿಯಾನವನ್ನು ಆರಂಭಿಸಿ ಅದನ್ನು ಯಶಸ್ವಿಯಾಗಿ ಪೂರೈಸಿ ಲಕ್ಷಾಂತರ ಓದುಗರ ಮನದಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿದ್ದಾರೆ.

ಇದನ್ನು ಓದಿ: ಗಾರ್ಡನ್​ ಸಿಟಿಯಲ್ಲಿ ಇ-ಟಾಯ್ಲೆಟ್​​ ಮ್ಯಾಜಿಕ್​​

ಅಭಿಯಾನದ ಉದ್ದೇಶ

ಈ ರೀಡ್ ಮೋರ್ ಇಂಡಿಯಾ-2015 ಅಭಿಯಾನದ ಮೂಲ ಉದ್ದೇಶ ಪುಸ್ತಗಳನ್ನು ಓದುವಂತೆ ಜನರನ್ನು ಪ್ರೇರೇಪಿಸುವುದು, ಭಾರತ ಎಂದರೆ ಸಂಸ್ಕೃತಿಯ ಕಣಜ ಅದು ಈಗಿನ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ ಆ ಸಾಂಸ್ಕೃತಿಕ ಪರಂಪರೆಯನ್ನು ಜೊತೆ ಜೊತೆ ಭಾರತದ ಅತ್ಯುತ್ತಮ ಲೇಖಕರನ್ನು ಜನರಿಗೆ ಅವರ ಪುಸ್ತಕಗಳ ಮೂಲಕ ಪರಿಚಯಿಸುವುದು.

image


ಅಭಿಯಾನ ಹೇಗೆ..?

ಅಕ್ಷಯ್​ ಮತ್ತು ಮಿಶ್ರಾ ಇಬ್ಬರು ಸಣ್ಣ ಟ್ರಕ್ ಒಂದನ್ನು ಕೊಂಡು ಅದರಲ್ಲಿ ಕೆಲ ಲೇಖಕರ ಪುಸ್ತಕಗಳನ್ನು ತುಂಬಿಕೊಂಡರು. ನಂತರ ಆ ಟ್ರಕ್​ನ್ನು ಸಣ್ಣ ಸಣ್ಣ ಪಟ್ಟಣಗಳಲ್ಲಿ ನಿಲ್ಲಿಸಿಕೊಂಡು ಜನರಿಗೆ ಪುಸ್ತಕ ಓದುವುದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಆನಂತರ ಅವರಿಗೆ ಪುಸ್ತಕಗಳನ್ನು ಓದಲು ಕೊಟ್ಟು ದೇಶದ ಮಾಹಿತಿ ನೀಡಿತ್ತಿದ್ದರು.

ಈಗ ದೇಶದಲ್ಲಿ ಸಾಕಷ್ಟು ದೊಡ್ಡ ಪುಸ್ತಕ ಮಳಿಗೆಗಳು ಇದ್ದರೂ ಅವು ಕೇವಲ ಪಠ್ಯಪುಸ್ತಕ ಮಾರಾಟ ಕೇಂದ್ರಗಳಾಗಿವೆಯೇ ವಿನಾ ಅಲ್ಲಿ ಸಾಹಿತ್ಯಿಕ ಪುಸ್ತಕಗಳು ದೊರೆಯುವುದ ತೀರಾ ಕಡಿಮೆ. ಇನ್ನು ವರ್ಷಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ನಡೆಯುವ ಸಾಹಿತ್ಯ ಉತ್ಸವ, ಪುಸ್ತಕ ಮೇಳಗಳು ಸಂಪೂರ್ಣವಾಗಿ ವಾಣಿಜ್ಯ ರೂಪ ತಾಳಿದ್ದು, ಹೊಸ ಓದುಗರನ್ನು ಆಕರ್ಷಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಜನರಲ್ಲಿ ಅದರಲ್ಲೂ ಯುವ ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಈ ಅಭಿಯಾನ ನಡೆಸುತ್ತಿದ್ದಾರೆ ಇಬ್ಬರು ಗೆಳೆಯರು.

image


ಓದುವ ಹವ್ಯಾಸದಿಂದ ಭ್ರಷ್ಟಾಚಾರ ತಡೆಗಟ್ಟಬಹುದು

ಇವರ ಈ ಅಭಿಯಾನದಿಂದಾಗಿ ಯುವಕರು ಹೆಚ್ಚು ಓದಿಕೊಳ್ಳುತ್ತಾರೆ. ಹೆಚ್ಚೆಚ್ಚು ಓದಿಕೊಂಡಷ್ಟು ಪ್ರಶ್ನೆ ಮಾಡುವ ಮತ್ತು ವಿವೇಚಿಸುವ ಸಾಮರ್ಥ್ಯ ಬೆಳೆಯುತ್ತದೆ ಇದರಿಂದ ಭ್ರಷ್ಟಚಾರದಂತಹ ಕೃತ್ಯಗಳು ಕಡಿಮೆ ಆಗುತ್ತವೆ ಎನ್ನುವುದು ಒಂದು ವಿಶ್ವಾಸ ಈ ಗೆಳೆಯರದು.

ಲಿಮ್ಕಾ ದಾಖಲೆಗೆ ಅಭಿಯಾನ

ಒಂದು ಚಿಕ್ಕ ಟ್ರಕ್ನಲ್ಲಿ ನಾಲ್ಕು ಸಾವಿರ ಪುಸ್ತಕಗಳನ್ನು ತುಂಬಿಕೊಂಡು ಹೊರಟ ಈ ರೀಡ್ ಮೋರ್ ಇಂಡಿಯಾ-2015 ಅಭಿಯಾನದ ಮೂಲಕ ಈ ಗೆಳೆಯರು 90 ದಿನಗಳಲ್ಲಿ 20 ರಾಜ್ಯಗಳನ್ನು ಸುತ್ತಿ ಓದಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ಅಭಿಯಾನದ ಮೂಲಕ 20 ರಾಜ್ಯಗಳಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಹೊಸ ಓದುಗರನ್ನು ಸೃಷ್ಟಿಸಿದ್ದಾರೆ. ಇವರ ಈ ಪ್ರಯತ್ನ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. 

ಇದನ್ನು ಓದಿ:

1. ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

2. ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

3. "ಪೂನಂ ಫ್ಲೂಟ್ಸ್" - ಅದ್ಭುತ ಕಲಾವಿದ ಕುಶಲಕರ್ಮಿಯಾದ ಕಥೆ...