ಕಾರ್ಪೋರೇಟ್ ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!

ಟೀಮ್​ ವೈ.ಎಸ್​. ಕನ್ನಡ

ಕಾರ್ಪೋರೇಟ್  ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!

Sunday April 03, 2016,

3 min Read

ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಗೊತ್ತಾಗಿರುವ ಸತ್ಯ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ನಾವೇನು ಮಾಡಬಹುದು?. ಕೆಲವರು ಈ ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಷ್ಟೇ ಇಟ್ಟುಕೊಂಡಿದ್ರೆ, ಇನ್ನು ಕೆಲವರು ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನಷ್ಟೇ ಮಾಡುತ್ತಾರೆ. ಆದ್ರೆ ಇನ್ನೂ ಕೆಲವರು ಇದರಲ್ಲೇ ಸಾಧ್ಯವಾಗಬಲ್ಲ ಉದ್ಯಮದ ಕಡೆಗೂ ಗಮನ ಹರಿಸುತ್ತಾ, ಪರಿಸರದ ಬಗ್ಗೆ ಕಾಳಜಿಯನ್ನೂ ವಹಿಸುತ್ತಾ ಸಾಗುತ್ತಾರೆ. ಅಂತಹದಕ್ಕೊಂದು ಉದಾಹರಣೆ ‘ಗಿವಿಂಗ್ ಟ್ರೀ.. ’

image


“ ಕಳೆದ 15 ವರ್ಷಗಳಿಂದ ಹಸಿರಿನಲ್ಲೇ ಗಿಫ್ಟ್ ಗಳನ್ನ ನೀಡುವ ಮೂಲಕ ಸಂಭ್ರಮ ಪಟ್ಟಿದ್ದೇವೆ. ಹಾಗೇ ನಮ್ಮ ಉದ್ದೇಶಗಳ ಮೂಲಕ ಹೆಸರನ್ನೂ ಗಳಿಸಿದ್ದೇವೆ. ನಮ್ಮ ಗಿಫ್ಟ್ ಗಳಿಂದ ಅದೆಷ್ಟೋ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಿವೆ. ” 
- ಮಾಲಾ ಸತ್ಯನಾರಾಯಣನ್ , ಲೀನಾ ಮೌಂಟ್, ದಿ ಗಿವಿಂಗ್ ಟ್ರಿ

ಪರಿಸರದ ಬಗ್ಗೆ ಅಪೂರ್ವ ಕಾಳಜಿ ವಹಿಸುತ್ತಾ ಅದ್ರಲ್ಲೇ ಬ್ಯುಸಿನೆಸನ್ನೂ ನಡೆಸುತ್ತಾ ಗಮನ ಸೆಳೆದಿರುವ ಮಾಲಾ ಹಾಗೂ ಲೀನಾ ಅವರನ್ನ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ದಿ ಗಿವಿಂಗ್ ಟ್ರಿ ಕಂಪನಿಯ ಕಚೇರಿಯಲ್ಲಿ ಭೇಟಿ ಮಾಡಿತ್ತು. ಈ ವೇಳೆ ಮಾತಿಗಿಳಿದ ಯುವರ್ ಸ್ಟೋರಿ ಅವರ ಸಕ್ಸಸ್ ಸ್ಟೋರಿಗಳನ್ನ ಕೇಳಿ ಅಚ್ಚರಿ ವ್ಯಕ್ತಪಡಿಸಿತು. ಯಾಕಂದ್ರೆ ದಿ ಗಿವಿಂಗ್ ಟ್ರಿ ತಯಾರಿಸುವ ಉಡುಗೊರೆ ವಸ್ತುಗಳನ್ನ ಪುನರ್ ಬಳಕೆ ಮಾಡಬಹುದಾದ ಹಾಗೂ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಅದ್ರಲ್ಲೂ ಹ್ಯಾಂಡ್ ಮೇಡ್ ಗಿಫ್ಟಿಂಗ್ ಪೇಪರ್ ಗಳು ದಿ ಗಿವಿಂಗ್ ಟ್ರಿನ ಅತ್ಯಂತ ಪ್ರಸಿದ್ಧ ಪ್ರಾಡಕ್ಟ್.

image


ಇದನ್ನು ಓದಿ: ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

ಹ್ಯಾಂಡ್ ಮೇಡ್ ಕ್ರಾಫ್ಟಿಂಗ್ ಮತ್ತು ಗಿಫ್ಟಿಂಗ್ ವಸ್ತುಗಳನ್ನ ಕಾರ್ಪೋರೇಟ್ ವಲಯವನ್ನ ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆ. ಆದ್ರೆ ಇದ್ರಲ್ಲಿ ಭಾರತದ ವರ್ಲಿ, ಮಧುಬನಿ ಮತ್ತು ಕಲಮ್ ಕಾರಿಗಳಂತಹ ಜಾನಪದ ಕಲೆಗಳನ್ನ ಇದ್ರಲ್ಲಿ ಬಿಂಬಿಸಲಾಗುತ್ತಿದೆ. ಅಲ್ಲದೆ ಬ್ಲಾಕ್ ಪ್ರಿಂಟ್ ಗಳು ಗಳಂತಹ ಡಿಸೈನ್ ಗಳನ್ನ ಇಲ್ಲಿ ಚಿತ್ರಿಸಲಾಗುತ್ತಿದೆ. ಮಾಲಾ ಹಾಗೂ ಲಿನಾ ಭಾರತದ ಕಲೆಗಳು ಹಾಗೂ ಸಂಸ್ಕೃತಿಗಳ ಬಗ್ಗೆ ಅಪಾರ ಒಲವು ಹೊಂದಿರುವವರು. ಅಲ್ಲದೆ ಇಕೋ ಫ್ರೆಂಡ್ಲಿಯಾಗಿ ಇರಲು ಬಯಸುವವರು. ಜೊತೆಗೆ ಹಾಳಾಗುತ್ತಿರುವ ಪರಿಸರ ಹಾಗೂ ವಾತಾವರಣದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಸ್ನೇಹಿತೆಯರು ಹಾಗೂ ಬ್ಯುಸಿನೆಸ್ ಪಾರ್ಟನರ್ ಗಳು. ಇನ್ನು ಭಾರತದ ಪಾರಂಪರಿಕತೆ ಹಾಗೂ ಸಾರ್ವಭೌಮತೆ ಹಾಗೂ ದೇಶದ ಹಲವು ಪ್ರಸಿದ್ಧತೆಗಳನ್ನ ಪ್ರಚಾರ ಮಾಡಲು ಬಯಸುವವರು. ಆದ್ರೆ ಇದಕ್ಕಾಗಿ ಅವರು ಬಳಸುವುದು ಕೇವಲ ಸ್ಕೆಚ್ ಹಾಗೂ ವಾಟರ್ ಕಲರ್ ಗಳನ್ನ ಮಾತ್ರ. ಇನ್ನು ಇವರು ಕೊಡುವ ನಿಸರ್ಗ ಪ್ರೇಮಯುಕ್ತ ವಿಶೇಷ ಗಿಫ್ಟ್ ಐಟಂಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಅದೆಷ್ಟೋ ಮಂದಿ ಇದೇ ಗಿಫ್ಟ್ ಗಳನ್ನ ತಮ್ಮ ಆತ್ಮೀಯರಿಗೆ ನೀಡಿ ತಮ್ಮ ಬಾಂಧವ್ಯಗಳನ್ನ ಗಟ್ಟಿ ಮಾಡಿಕೊಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಅತ್ಯಂತ ಹೆಚ್ಚು ಕ್ರಿಯೇಟಿವ್ ಆಗಿ ಗಿಫ್ಟ್ ಗಳನ್ನ ನೀಡುತ್ತಿರುವ ಇವರು ಬೆಂಗಳೂರಿನಲ್ಲಿ ಈಗಾಗಲೇ ಮನೆ ಮಾತಾಗಿದ್ದಾರೆ.

image


ವಿಶೇಷ ಅಂದ್ರೆ ದಿ ಟ್ರಿ ಅಪ್ ನಲ್ಲಿ ಕೆಲವೊಂದು ವಿಶೇಷ ಕಾನ್ಸೆಪ್ಟ್ ಗಳಿಗೆ ಒತ್ತು ನೀಡಲಾಗಿದೆ. ಅದ್ರಲ್ಲೂ ಗೋಲ್ಸ್ ಮಂತ್ರ, ಗೋಲ್ ಅಚೀವ್ ಮೆಂಟ್ ಗಳು ಸಾಕಷ್ಟು ಮೆಚ್ಚಿಗೆ ಪಡೆದಿವೆ. ಇಂತಹ ವಸ್ತುಗಳನ್ನ ಬಳಸುವುದರಿಂದ ಹಾಗೂ ತಯಾರಿಸುವುದರಿಂದ ಬದುಕಿನಲ್ಲಿ ಯೋಚಿಸುವ ರೀತಿಯೂ ಬದಲಾಗುತ್ತಿದೆ. ಬದುಕನ ತಾಂತ್ರಿಕತೆಗಳನ್ನ ಕಲಿಸುವುದರ ಜೊತೆಗೆ ಕನಸುಗಳನ್ನ ಬೆಳೆಸಿಕೊಳ್ಳಲು ಅದು ಮಾನ್ಯ ಮಾಡುತ್ತದೆ ಅಂತಾರೆ ಕಂಪನಿಯ ಸಹ ಸಂಸ್ಥಾಪಕಿ ಲೀನಾ..

ಕೆಲಸ ಮಾಡುವ ಶೈಲಿ ಮತ್ತು ಸಂಪ್ರದಾಯ

ಮಾಲಾ ಮತ್ತು ಮೀನಾ ಸಂಪೂರ್ಣವಾಗಿ ಹ್ಯಾಂಡ್ ಸ್ಕಿಲ್ ಗಳ ಮೊರೆ ಹೋಗಿದ್ದಾರೆ. ತರಬೇತಿ ಪಡೆದ ಐದು ಮಂದಿ ಪೇಪರ್ ಗಳಲ್ಲೇ ವಸ್ತುಗಳನ್ನ ತಯಾರಿಸಲು ಸಹಕಾರ ನೀಡುತ್ತಾರೆ. ಅದ್ರಲ್ಲೂ ಇವರು ತಯಾರಿಸುವ ನೋಟ್ ಬುಕ್, ಡೈರಿಗಳು, ಕ್ಯಾಲೆಂಡರ್ ಗಳು, ಬ್ಯಾಗ್ ಗಳು ಮತ್ತು ಗಿಫ್ಟ್ ಹ್ಯಾಂಪರ್ ಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಠಿಯಾಗಿದೆ. ಇವರ ಈ ಸಾಹಸಕ್ಕೆ ಹಾಗೂ ಯಶಸ್ಸಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿರೋದು ವಿಶೇಷ. 2002 ಹಾಗೂ 2010ರಲ್ಲಿ ಬೆಸ್ಟ್ ಬ್ಯುಸಿನೆಸ್ ಪ್ಲಾನ್ ಅವಾರ್ಡ್, ಬಿಎನ್ ಐ ಪ್ರಶಸ್ತಿಗಳು ಸೇರಿದಂತೆ ಹಲವು ಪುರಸ್ಕಾರಗಳು ಇವರ ದಿ ಟ್ರಿ ಅಪ್ ಗೆ ಸಿಕ್ಕಿರೋದು ವಿಶೇಷ. ಹೀಗೆ ಬ್ಯುಸಿನೆಸ್ ಜೊತೆಗೆ ಪರಿಸರ ಕಾಳಜಿ, ಭಾರತೀಯ ಸಂಸ್ಕೃತಿಯನ್ನ ಪಸರಿಸುತ್ತಿರುವ ದಿ ಟ್ರಿ ಅಪ್ ಭವಿಷ್ಯದಲ್ಲಿ ದೊಡ್ಡ ಕನಸನ್ನ ಹೊಂದಿದೆ.

ಲೇಖಕರು – ಮೋನಿಕಾಎಲಿಜಬೆತ್ ಜೆನಿವೀವ್ ರಾಬಿನ್ಸನ್

ಅನುವಾದ - ಸ್ವಾತಿ

ಇದನ್ನು ಓದಿ:

1. ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್

2. ಟೇಬಲ್ ಟೆನಿಸ್ ಟೂರ್ನಿಗಾಗಿ 10ನೇ ಕ್ಲಾಸ್ ಪರೀಕ್ಷೆಗೆ ಗೈರು... ಅರ್ಧದಲ್ಲೇ ಕಾಲೇಜು ಬಿಟ್ಟು ಉದ್ಯಮ ಆರಂಭಿಸಿದ ದಿಟ್ಟ ಯುವತಿ

3. ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!