ಸಂತೋಷಕ್ಕೂ ಇದೆ ಸೈನ್ಸ್ - ಖರಗ್ಪುರ ಐಐಟಿಯಲ್ಲಿ ಹೊಸ ಕೋರ್ಸ್

ಟೀಮ್ ವೈ.ಎಸ್.ಕನ್ನಡ 

ಸಂತೋಷಕ್ಕೂ ಇದೆ ಸೈನ್ಸ್ - ಖರಗ್ಪುರ ಐಐಟಿಯಲ್ಲಿ ಹೊಸ ಕೋರ್ಸ್

Thursday July 07, 2016,

2 min Read

ಸಂತೋಷ ಮನಸ್ಸಿನ ಒಂದು ಭಾವನೆ. ಅದು ತಾನಾಗಿಯೇ ನಮ್ಮಲ್ಲಿ ಅರಳಬೇಕು. ಸಂತಸವನ್ನು ಕೊಂಡುಕೊಳ್ಳಲು ಅಥವಾ ಸಾಧಿಸಲು ಸಾಧ್ಯವಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಸುಮಾರು 2500 ವರ್ಷಗಳ ಹಿಂದೆ ಸಾಕ್ರಟಿಸ್ ಹೊಸದೊಂದು ವಾದ ಮಂಡಿಸಿದ್ದ. ಸಂತೋಷವನ್ನು ಪ್ರಯತ್ನಪಟ್ಟು ಸಾಧಿಸಬಹುದು ಎನ್ನುವ ಮೂಲಕ ಸ್ಥಳೀಯ ನಿವಾಸಿಗಳಲ್ಲಿ ದಿಗಿಲು ಹುಟ್ಟಿಸಿದ್ದ. ಇದೀಗ ಭಾರತದ ಅತ್ಯಂತ ಪುರಾತನ ಐಐಟಿಯೊಂದು (ಖರಗ್ಪುರ) ಸಂತೋಷದ ಸಂಕೇತಗಳನ್ನು ಅನ್ವೇಷಿಸಿದೆ. ಹಳೆ ವಿದ್ಯಾರ್ಥಿ ಸತೀಂದರ್ ಸಿಂಗ್ ರೇಖಿ ಅವರ ಹೆಸರಲ್ಲಿ `ಸಂತೋಷ ವಿಜ್ಞಾನ ರೇಖಿ ಕೇಂದ್ರ'ವನ್ನು ಆರಂಭಿಸಲಾಗ್ತಿದೆ. ವಿದ್ಯಾರ್ಥಿಗಳಲ್ಲಿ ಸಂತೋಷ ಮತ್ತು ಧನಾತ್ಮಕ ಮನಃಶಾಸ್ತ್ರವನ್ನು ಮೂಡಿಸುವುದು ಅದರ ಉದ್ದೇಶ. ``ಸಂತೋಷಕರ ಹಾಗೂ ಯಶಸ್ವಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ಕೇಂದ್ರದ ಸಂಶೋಧನೆ ನೆರವಾಗಲಿದೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪರಿಣಾಮಕಾರಿ ನಾಯಕರಾಗಿ, ನವೀನ ಎಂಜಿನಿಯರ್ಗಳಾಗಿ, ಕಾಳಜಿಯುಳ್ಳ ಮಾಲೀಕರಾಗಿ, ಚತುರ ಮತ್ತು ಸೃಜನಶೀಲ ನೌಕರರಾಗಿ ರೂಪುಗೊಳ್ಳುತ್ತಾರೆ'' ಅನ್ನೋದು ಸತೀಂದರ್ ಸಿಂಗ್ ಅವರ ವಿಶ್ವಾಸ.

image


ವಿಶೇಷ ಅಂದ್ರೆ ಅವರು ಯಾರನ್ನು ಸ್ಪರ್ಷಿಸುತ್ತಾರೋ ಅವರಿಗೆ ಈ ಹಿತಾನುಭವ ವಿಸ್ತರಿಸುತ್ತದೆ. ಈ ಮೂಲಕ ಸಮಾಜ ಸುಧಾರಣೆ ಮಾಡುವುದು ಸತೀಂದರ್ ಸಿಂಗ್ ಅವರ ಉದ್ದೇಶ. ಸತಿಂದರ್ ಸಿಂಗ್​ರ ಈ ಹೊಸ ಪ್ರಯತ್ನಕ್ಕೆ ಪ್ರೇರಣೆಯಾದವರು ಐಐಟಿ ಕೆಜಿಪಿ ನಿರ್ದೇಶಕ ಪಾರ್ಥ ಪ್ರತಿಮ ಚಕ್ರವರ್ತಿ. ಮನಸ್ಥಿತಿಯನ್ನು ಅಳೆಯಬೇಕು ಮತ್ತು ಸಂತೋಷದ ಅರ್ಥವನ್ನು ಸುಧಾರಿಸಬೇಕು ಅನ್ನೋದು ಅವರ ಮುಂದಿರುವ ಗುರಿ. ಈ ಸಂತೋಷದ ವಿಜ್ಞಾನವನ್ನು ಉತ್ತೇಜಿಸಲೆಂದೇ ಕೇಂದ್ರವೊಂದನ್ನು ಸ್ಥಾಪಿಸಬೇಕೆಂಬ ಆಲೋಚನೆ ಹೊಳೆಯಲು ಕಾರಣವೂ ಇದೇ ಎನ್ನುತ್ತಾರೆ ಐಐಟಿ ಕೆಜಿಪಿ ನಿರ್ದೇಶಕ ಪಾರ್ಥ ಪ್ರತಿಮ ಚಕ್ರವರ್ತಿ. ವಿವಿಧ ರೀತಿಯ ಮಾನವ ಸಂಕೇತಗಳನ್ನು ಸಮಗ್ರ ಕಲಿಕೆಯ ಚೌಕಟ್ಟಿಗೆ ಒಳಪಡಿಸಲು ಬಯಸುವ ಮನಃಶಾಸ್ತ್ರಜ್ಞರು, ನರ ವಿಜ್ಞಾನಿಗಳು, ಅರಿವಿನ ವಿಜ್ಞಾನಿಗಳು, ನಿರ್ವಹಣೆ ತಜ್ಞರು, ಸಮಾಜಶಾಸ್ತ್ರಜ್ಞರು, ಮಾನವೀಯ ವಿಧ್ವಾಂಸರು, ಎಂಜಿನಿಯರ್ಗಳಿಗೆ ಬಹು ಆಯಾಮದ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯ ಅಗತ್ಯವಿದೆ. `ಸಂತೋಷ ವಿಜ್ಞಾನ ರೇಖಿ ಕೇಂದ್ರ'ದಲ್ಲಿ ಇವೆಲ್ಲವೂ ಸಾಧ್ಯ.

ಸತಿಂದರ್ ಸಿಂಗ್ ಅವರೇ `ಸಂತೋಷ ವಿಜ್ಞಾನ ರೇಖಿ ಕೇಂದ್ರ'ದ ಮುಖ್ಯಸ್ಥರಾಗಿರುತ್ತಾರೆ. ಈ ಕೇಂದ್ರವನ್ನು ಸ್ಥಾಪಿಸಲು ಕನಿಷ್ಠ ಮೂರು ವರ್ಷಗಳಾದ್ರೂ ಬೇಕು. ಇದಕ್ಕಾಗಿ ಸುಮಾರು ಒಂದು ಮಿಲಿಯನ್ ಡಾಲರ್ ಹಣ ವೆಚ್ಚವಾಗುತ್ತದೆ. ಈಗಾಗ್ಲೇ `ಸಂತೋಷ ವಿಜ್ಞಾನ ರೇಖಿ ಕೇಂದ್ರ'ಕ್ಕೆ ಬೇಕಾದ ಸ್ಥಳವನ್ನು ಗುರುತಿಸಲಾಗಿದೆ. ಅತಿ ಶೀಘ್ರದಲ್ಲಿ ನಿರ್ಮಾಣ ಕಾರ್ಯ ಕೂಡ ಆರಂಭವಾಗಲಿದೆ. 2016ರ ಆಗಸ್ಟ್ನಲ್ಲಿ ಮೊದಲ ಅಂತರಾಷ್ಟ್ರೀಯ `ಹ್ಯಾಪಿನೆಸ್ ಸೈನ್ಸ್' ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ. `ಸಂತೋಷ ವಿಜ್ಞಾನ ರೇಖಿ ಕೇಂದ್ರ'ದ ಒಳಗೆ ಹಾಗೂ ಹೊರಗೆ ಸಂಶೋಧನೆ ಮತ್ತು ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ. ಇದಕ್ಕಾಗಿಯೇ ವಿಶೇಷ ಕೋರ್ಸ್ ಕೂಡ ಇದೆ. ಒಟ್ನಲ್ಲಿ ಸಂತೋಷದ ಈ ಸೈನ್ಸ್ ಹೇಗೆ ವರ್ಕೌಟ್ ಆಗತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು. 

ಇದನ್ನೂ ಓದಿ..

ಜೈಲಿನಲ್ಲಿದ್ದುಕೊಂಡೇ ಐಐಟಿಯಲ್ಲಿ ತೇರ್ಗಡೆ : 18ರ ಯುವಕನ ಯಶೋಗಾಥೆ 

ಬಾಡಿಗೆಗೆ ಬೈಕ್​​ ತೆಗೆದುಕೊಳ್ಳಿ- ಸಿಲಿಕಾನ್​ ಸಿಟಿಯಲ್ಲಿ ಎಂಜಾಯ್​ ಮಾಡಿ