ಬಳಕೆಯಾದ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಸೇವೆ ಒದಗಿಸುತ್ತಿರುವ ಬೆಂಗಳೂರು ಮೂಲದ ಚೆಕ್‌ ಗಾಡಿ ಸಂಸ್ಥೆ

ಟೀಮ್​​ ವೈ.ಎಸ್​​.

ಬಳಕೆಯಾದ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಸೇವೆ ಒದಗಿಸುತ್ತಿರುವ ಬೆಂಗಳೂರು ಮೂಲದ ಚೆಕ್‌ ಗಾಡಿ ಸಂಸ್ಥೆ

Tuesday November 10, 2015,

3 min Read

ದೇಶದಲ್ಲಿ ಒಂದು ಹೊಸ ಕಾರು ಮಾರಾಟವಾಯಿತು ಎಂದರೆ ಅಲ್ಲಿ ಒಂದು ಹಳೆಯ ಕಾರು ಸಹ ಮಾರಲ್ಪಟ್ಟಿರುತ್ತದೆ ಎಂದು 2014ರಲ್ಲಿ ಫ್ರೋಸ್ಟ್ ಮತ್ತು ಸುಲೈವನ್ ವರದಿ ಮಾಡಿದೆ.

ಜಾಗತಿಕ ಮಾರುಕಟ್ಟೆಯ ಸಮೀಕ್ಷೆ ಮಾಡುವ ಜೆಡಿ ಪವರ್ ಎಂಬ ಸಂಸ್ಥೆಯ ಪ್ರಕಾರ, 2011ರಲ್ಲಿ ಶೇ.4ರಷ್ಟಿದ್ದ ಮೊದಲ ಬಾರಿಗೆ ಕಾರು ಖರೀದಿಸುವವರ ಸಂಖ್ಯೆ, 2014ರ ವೇಳೆಗೆ ಶೇ.17ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಬಳಕೆಯಾದ ಕಾರುಗಳ ಮಾರುಕಟ್ಟೆ ಆನ್‌ಲೈನ್ ಮಾರಾಟಗಾರರು, ಕಾರು ನಿರ್ಮಾಣಮಾಡುವ ಸಂಸ್ಥೆಯವರು, ಸ್ಥಳೀಯ ಡೀಲರ್‌ಗಳು ಮತ್ತು ಇತರ ಖಾಸಗಿ ವ್ಯಕ್ತಿಗಳಿಂದ ಆವೃತವಾಗಿದೆ. ಬಳಕೆಯಾದ ಕಾರುಗಳು ಕಾನೂನುಬದ್ಧವಾಗಿಯೇ ಮಾರಾಟವಾಗುತ್ತವೆ. ಈ ವಿಚಾರದಲ್ಲಿ ಕೆಲವೊಂದು ಹಗರಣಗಳೂ ಸಹ ನಡೆದಿರುವ ಉದಾಹರಣೆ ಇವೆ. ಇಂತಹ ಅಕ್ರಮಗಳು ಸ್ಥಳೀಯ ಮಾರಾಟದಲ್ಲಿಯೂ ಕಂಡುಬರುತ್ತದೆ. ಆದರೆ ಇಂತಹ ಅಕ್ರಮಗಳು ಆನ್‌ಲೈನ್‌ ಮೂಲಕ ನಡೆಯುವ ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಗೋಚರಸಾಧ್ಯವಾಗುತ್ತದೆ. 2010ರ ಅಮೆರಿಕಾ ಸರ್ಕಾರಿ ಏಜೆನ್ಸಿ ಇಂಟರ್‌ನೆಟ್ ಕ್ರೈಮ್ ಕಂಪ್ಲೈಂಟ್ ಸೆಂಟರ್ ನ ವರದಿಯ ಪ್ರಕಾರ ಇಂತಹ ಕಾರು ಮಾರಾಟ ಹಗರಣಗಳ ಬಗ್ಗೆ ಗ್ರಾಹಕರು ನೀಡಿರುವ ದೂರಿನಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಭಾರತದಲ್ಲೂ ಸಹ ಇಂತಹ ಕೆಲ ಹಗರಣಗಳು ಬೆಳಕಿಗೆ ಬಂದಿವೆ.

image


ಬಳಕೆಯಾದ ಕಾರುಗಳ ಮಾರಾಟಕ್ಕೂ ಮುನ್ನ ಕಾರುಗಳ ತಪಾಸಣೆ ನಡೆಸುವ ಚೆಕ್‌ಗಾಡಿ ಸಂಸ್ಥೆಯ ಸಂಸ್ಥಾಪಕ ಅಮಿತ್ ನಿಗಮ್‌ ಅವರ ಪ್ರಕಾರ, ಬಳಕೆಯಾದ ಕಾರುಗಳನ್ನು ಕೊಳ್ಳುವ ಹಾಗೂ ಮಾರಾಟ ಮಾಡುವವರ ಮಧ್ಯೆ ಮಾಹಿತಿ ವಿನಿಮಯದ ದೊಡ್ಡ ಅಂತರವಿದೆ. ಭಾರತದಲ್ಲಿ ಅಪಘಾತಕ್ಕೊಳಗಾದ ಅಥವಾ ಕಾಣೆಯಾದ ಕಾರುಗಳ ಹಿಂದಿನ ಇತಿಹಾಸ ಅಷ್ಟು ಸುಲಭವಾಗಿ ದೊರಕುವುದಿಲ್ಲ. ಹೀಗಾಗಿ ಬಳಕೆಯಾದ ಕಾರುಗಳನ್ನು ಕೊಳ್ಳುವ ಗ್ರಾಹಕರಿಗೆ ಕಾರಿನ ಕುರಿತು ಸರಿಯಾದ ಮಾಹಿತಿ ದೊರೆಯುವುದಿಲ್ಲ.

ಇಂತಹ ಪರಿಸ್ಥಿತಿಗಳಲ್ಲಿ ಗ್ರಾಹಕರು, ಉತ್ತಮ ಟೆಕ್ನಿಷಿಯನ್ ಸಹಾಯದಿಂದ ಬಳಕೆಯಾದ ಕಾರುಗಳನ್ನು ಕೊಳ್ಳಬೇಕೇ, ಬೇಡವೇ ಎಂಬುದರ ಕುರಿತು ನಿರ್ಧಾರಕ್ಕೆ ಬರುತ್ತಾರೆ. ಆದರೆ ಇಲ್ಲಿಯೂ ಸಮಸ್ಯೆ ಇದೆ. ಅದೇನೆಂದರೆ, ಉತ್ತಮ ಟೆಕ್ನಿಷಿಯನ್‌ಗಳು ಸದಾ ಕಾರ್ಯನಿರತರಾಗಿರುತ್ತಾರೆ ಮತ್ತು ಕೆಲವರು ತಮ್ಮ ಸ್ವಂತ ವರ್ಕ್‌ಶಾಪ್‌ಗಳ ಕೆಲಸದಲ್ಲಿ ನಿರತರಾಗಿರುವುದರಿಂದ ಅವರು ವರ್ಕ್‌ಶಾಪ್‌ ಬಿಟ್ಟುಬರುವುದು ಸಾಧ್ಯವಿರುವುದಿಲ್ಲ. ಇನ್ನೂ ಕೆಲವರು ನೀಡುವ ಪ್ರತಿಕ್ರಿಯೆ, ಮಾಹಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಇದಿಷ್ಟೇ ಸಮಸ್ಯೆಗಳಲ್ಲ. ಬಳಕೆಯಾದ ಕಾರಿನ ಪರಿಶೀಲನೆ ಪೂರ್ತಿಯಾದರೂ, ಕಾರುಗಳ ದರನಿಗದಿ ವಿಚಾರ ಮತ್ತೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಚೌಕಾಸಿ ವ್ಯಾಪಾರ ಮಾಡಬೇಕಾಗುತ್ತದೆ. ಎಷ್ಟೊಂದು ಸಲ ಗ್ರಾಹಕ ಮತ್ತು ಮಾರಾಟಗಾರರ ನಡುವೆ ಸೇತುವೆಯಾಗಿ ನಿಲ್ಲಬೇಕಾಗಿರುವ ಮಧ್ಯವರ್ತಿ ಮತ್ತು ಟೆಕ್ನಿಷಿಯನ್‌ಗಳು ಒಟ್ಟಿಗೆ ಸಿಗುವುದಿಲ್ಲ. ಇಂತಹ ಹಲವು ಸಮಸ್ಯೆಗಳೂ ಎದುರಾಗುತ್ತವೆ.

2000ನೇ ಇಸವಿಯಲ್ಲಿ ಅಮಿತ್, ವಾಹನಗಳ ವಿವಿಧ ಉಪವ್ಯವಸ್ಥೆಯ ವಿಷಯಗಳನ್ನು ಗುರುತಿಸುವ ವಾಹನ ಗುರುತಿಸುವಿಕೆ ಸಾಫ್ಟ್‌ ವೇರ್‌ ಅನ್ನು ಅಭಿವೃದ್ಧಿಪಡಿಸುವ ವೇಳೆಯಲ್ಲಿ ಇಂತಹ ಸಮಸ್ಯೆಗಳು ಅವರ ಗಮನಕ್ಕೆ ಬಂದಿತ್ತು. ಈ ಸಾಫ್ಟ್‌ ವೇರ್‌ ಮೂಲಕ ವಾಹನಗಳಲ್ಲಿ ಅಡಗಿರಬಹುದಾದ ಸಮಸ್ಯೆಗಳನ್ನು ಪತ್ತೆಹಚ್ಚಬಹುದಾಗಿತ್ತು. 2015ರ ಜನವರಿಯಲ್ಲಿ ಅವರು ಚೆಕ್‌ ಗಾಡಿ.ಕಾಮ್ ಎಂಬ ವೆಬ್‌ಸೈಟ್‌ ವೊಂದನ್ನು ಆರಂಭಿಸಿದರು. ಬಳಕೆಯಾದ ಕಾರುಗಳ ವಿಚಾರಗಳಲ್ಲಿ ಗ್ರಾಹಕರು ಎದುರಿಸಬೇಕಾಗಿ ಬರುವ ಸಮಸ್ಯೆಗಳನ್ನು ನಿವಾರಿಸಲು ಈ ವೆಬ್‌ಸೈಟ್ ಸಹಾಯಕವಾಗಿದೆ.

ಬಳಕೆಯಾದ ಕಾರುಗಳ ಮಾರಾಟಕ್ಕೂ ಮುನ್ನ ಎಲ್ಲಾ ಕಂಪನಿಗಳ ಕಾರುಗಳು ಮತ್ತು ದ್ವಿಚಕ್ರವಾಹನಗಳ ತಪಾಸಣೆ ನಡೆಸುವ ಭಾರತದ ಏಕೈಕ ಸಂಸ್ಥೆ ಇದಾಗಿದೆ ಎಂದು ಹೇಳಿಕೊಳ್ಳುತ್ತದೆ ಚೆಕ್‌ಗಾಡಿ. “ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿರುವ ಪ್ರಸ್ತಾಪ ಮಾದರಿಯನ್ನು ಬಳಸಿಕೊಂಡು ತಂತ್ರಜ್ಞಾನದ ಸಹಯೋಗದೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ. ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚು ದಕ್ಷತೆಯಿಂದ ಹಸ್ತಚಾಲಿತ ದೋಷಗಳನ್ನು ನಿವಾರಿಸಿಕೊಂಡು ಪ್ರಾಮಾಣಿಕವಾಗಿ ಗ್ರಾಹಕರಿಗೆ ಸೇವೆ ಒದಗಿಸಬಹುದೆಂದು ನಾವು ನಂಬುತ್ತೇವೆ. ನಮ್ಮ ಕಾರ್ಯವಿಧಾನವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಬಳಕೆಯಾದ ಕಾರು ಮಾರಾಟಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ತಿಳಿಸಲು ಮಿನಿ ಇಆರ್‌ಪಿ ತಂತ್ರಜ್ಞಾನವನ್ನೂ ಸಹ ಅಭಿವೃದ್ಧಿಪಡಿಸಿದ್ದೇವೆ ಎಂದು ಸಂಸ್ಥೆಯ ಕಾರ್ಯನೀತಿಯನ್ನು ವಿವರಿಸಿದ್ದಾರೆ ಅಮಿತ್.

ಬೆಳವಣಿಗೆ ಮತ್ತು ವಿಸ್ತರಣೆ

15ಸಾವಿರದಷ್ಟು ಹೂಡಿಕೆ ಮತ್ತು ಸಹ ಸಂಸ್ಥಾಪಕ ಸೇರಿ ಇಬ್ಬರು ಕೆಲಸಗಾರರೊಂದಿಗೆ ಆರಂಭವಾದ ಈ ವೇದಿಕೆ ಆರೋಗ್ಯಕರ ಬೆಳವಣಿಗೆಯನ್ನು ಕಂಡಿದೆ. ಜನವರಿ ತಿಂಗಳಿನಲ್ಲಿ ಆರಂಭವಾದ ಈ ಸಂಸ್ಥೆ ಆರಂಭದಲ್ಲೇ 10ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಸಿದೆ. ಆದರೆ ಈಗ ಈ ಚೆಕ್‌ ಗಾಡಿ.ಕಾಮ್ ವೇದಿಕೆಯಡಿ ಪ್ರತಿದಿನವೂ 100ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಯುತ್ತಿದೆ.

ಅಮಿತ್ ಹೇಳುವಂತೆ, ಮೇ ತಿಂಗಳಿನಲ್ಲಿ ಕ್ವಿಕರ್ ಕಾರ್ ಸಂಸ್ಥೆಯ ಸಹಯೋಗ ಪಡೆದ ನಂತರ ಬೆಳವಣಿಗೆಯ ಪ್ರಮಾಣ ಹೆಚ್ಚಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಬಳಕೆಯಾದ ಬೈಕ್‌ಗಳ ಜಾಹೀರಾತುಗಳನ್ನುನುಸರಿಸಿ ಚೆಕ್‌ ಗಾಡಿ ನಡೆಸಿದ ತಪಾಸಣೆಯ ಫಲವಾಗಿ ಕ್ವಿಕರ್ ಕಾರ್ ಸಂಸ್ಥೆಯ ಸಹಯೋಗ ದೊರಕಿತ್ತು. ಬೆಂಗಳೂರಿನಲ್ಲಿ ಆರಂಭವಾದ ಈ ಸೇವೆ ಈಗ ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲೂ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಇದಲ್ಲದೇ ಶೀಘ್ರದಲ್ಲೇ ಪುಣೆ, ಹೈದರಾಬಾದ್, ಲಕ್ನೋ, ಬರೋಡಾ ಮತ್ತು ಅಹಮದಾಬಾದ್‌ ಸೇರಿದಂತೆ 6 ನಗರಗಳಲ್ಲಿ ತನ್ನ ಸೇವೆ ಆರಂಭಿಸುವ ಕುರಿತು ಯೋಜನೆ ರೂಪಿಸಲಾಗಿದೆ.

ಮಾರುಕಟ್ಟೆ ಮತ್ತು ಸ್ಪರ್ಧೆ

ಭಾರತದಲ್ಲಿ ಕಳೆದ ವರ್ಷ 2.8 ಮಿಲಿಯನ್ ಬಳಕೆಯಾದ ಕಾರುಗಳ ಮಾರಾಟವಾಗಿದೆ. ಇದರ ಒಟ್ಟು ವಾಣಿಜ್ಯ ಪರಿಮಾಣ(ಜಿಎಂವಿ-ಗ್ರಾಸ್ ಮರ್ಚೆಂಡೈಸ್ ವಾಲ್ಯೂಮ್) 15 ಬಿಲಿಯನ್ ಯುಎಸ್ ಡಾಲರ್‌ಗಳು. 30 ಮಿಲಿಯನ್‌ಗೂ ಹೆಚ್ಚು ದ್ವಿಚಕ್ರವಾಹನಗಳ ಮಾರಾಟವಾಗಿದೆ. ಇನ್ನು ಐದು ವರ್ಷಗಳಲ್ಲಿ ಸಂಯುಕ್ತವಾರ್ಷಿಕ ಬೆಳವಣಿಗೆ ದರದಲ್ಲಿ(ಸಿಎಜಿಆರ್- ಕಾಂಪೌಂಡ್ ಆ್ಯನುವಲ್ ಗ್ರೋತ್ ರೇಟ್) ಶೇ.22ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಕ್ರೈಸಿಲ್ ಸಂಸ್ಥೆ ದೃಢೀಕರಿಸಿರುವಂತೆ 2020ರ ವೇಳೆಗೆ 8 ಮಿಲಿಯನ್ ಬಳಕೆಯಾದ ಕಾರುಗಳ ಮಾರಾಟವಾಗುತ್ತದೆ. ಈ ಸಂಸ್ಥೆ ಮಹೀಂದ್ರಾ ಎಂಡ್ ಮಹೀಂದ್ರಾ, ಆಟೋ ಇನ್ಸ್ ಪೆಕ್ಟ್ ಮತ್ತು ಇತರ ವಾಹನ ತಪಾಸಣಾ ವೇದಿಕೆಗಳ ಬೆಂಬಲವನ್ನೂ ಪಡೆದಿದೆ.

ಚೆಕ್‌ಗಾಡಿ ಸಂಸ್ಥೆಗೆ ಸ್ಪರ್ಧೆ ನೀಡುವಂತೆ ವೇರಿಕಾರ್ ಸೇರಿದಂತೆ ಬಹಳಷ್ಟು ವಾಹನ ತಪಾಸಣಾ ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಲ್ಲಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ನೀಡುವ ಸಂಸ್ಥೆಗಳು ಕಡಿಮೆ. ಅಂತಹ ಕೆಲವೇ ಕೆಲವು ಸಂಸ್ಥೆಗಳಲ್ಲಿ ಚೆಕ್‌ಗಾಡಿ ಸಂಸ್ಥೆ ಗ್ರಾಹಕರಿಗೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸೂಕ್ತರೀತಿಯಲ್ಲಿ, ವ್ಯವಸ್ಥಿತವಾಗಿ ಪರಿಹರಿಸಿಕೊಡುತ್ತದೆ ಎಂದು ಭರವಸೆ ನೀಡುತ್ತಾ ತಮ್ಮ ಮಾತು ಮುಗಿಸುತ್ತಾರೆ ಅಮಿತ್.