‘ಸಾಧನೆಗೆ ವಯಸ್ಸಿನ ಮಿತಿಯಿಲ್ಲ’ ಫ್ಯಾಷನ್ ಡಿಸೈನಿಂಗ್ ಲೋಕದ ಸ್ಟಾರ್ ಡಿಸೈನರ್- ಗೀತಾ ವಿಶ್ವನಾಥನ್

ಟೀಮ್​​ ವೈ.ಎಸ್​. ಕನ್ನಡ

‘ಸಾಧನೆಗೆ ವಯಸ್ಸಿನ ಮಿತಿಯಿಲ್ಲ’ ಫ್ಯಾಷನ್ ಡಿಸೈನಿಂಗ್ ಲೋಕದ ಸ್ಟಾರ್ ಡಿಸೈನರ್- ಗೀತಾ ವಿಶ್ವನಾಥನ್

Sunday December 20, 2015,

5 min Read

ಗೀತಾ ವಿಶ್ವನಾಥ್ ರವರು ತಮ್ಮ ಜೀವನದಲ್ಲಿ ಶಿಕ್ಷಣ ತಜ್ಞೆಯಾಗಿ, ವಸ್ತ್ರ ವಿನ್ಯಾಸಕರಾಗಿ, ಇಮೇಜ್ ಕನ್ಸಲ್ಟಂಟ್ ಮತ್ತು ಉದ್ಯಮಿಯಾಗಿ ಸಾಧನೆಗೈಯುತ್ತಾ, ತಮ್ಮ ಜೀವನದ ಮೂರು ದಶಕಗಳನ್ನ ಕಳೆದಿದ್ದಾರೆ. ಉದ್ಯಮದ ಕ್ರಿಯಾಶೀಲ ಪ್ರವರ್ತಕರಾಗಿ ಕರ್ನಾಟಕ, ತಮಿಳುನಾಡು ಮತ್ತು ದೇಶದ ಕೆಲವು 'ಐಐಟಿ' ಗಳಲ್ಲಿ ಭೋದನೆ ಮಾಡುತ್ತಾ ಯುವಜನತೆಯನ್ನ ತಮ್ಮ ಆರಾಮದ ಜೀವನದಿಂದ ಹೊರಬಂದು ಉದ್ಯಮಿಗಳಾಗುವಂತೆ ಅವರನ್ನು ಪ್ರೇರೇಪಿಸುತ್ತಿದ್ದಾರೆ. ಶಿಕ್ಷಣ ತಜ್ಞೆಯಾಗಿ ದೇಶಕ್ಕೆ ನೀಡಿದ ಮಹತ್ತರ ಕೊಡುಗೆಯನ್ನ ಗಮನಿಸಿ ಭಾರತ ಸರ್ಕಾರವು ಇವರಿಗೆ 2010ರ ಮೇ ತಿಂಗಳಲ್ಲಿ 'ಶಿಕ್ಷಭಾರತಿ ಪುರಸ್ಕಾರ' ಪ್ರಶಸ್ತಿಯನ್ನ ಕೊಟ್ಟು ಇವರನ್ನ ಸನ್ಮಾನಿಸಿದೆ.

1972ರಲ್ಲಿ ಗೀತಾ ಅವರು 'ಶ್ರೀಜಾತಿ ಇನ್ವೆಸ್ಟ್‍ಮೆಂಟ್ ಆಫ್ ಟೆಕ್ನಾಲಜಿ'ಯನ್ನ ಸ್ಥಾಪಿಸಿದ್ರು. ಇದೊಂದು ಪಿಜಿ ಡಿಪ್ಲೊಮೋ ಕೋರ್ಸ್ ಆಗಿದ್ದು, ಇಲ್ಲಿ ವಿಶೇಷ ರೀತಿಯ ತರಬೇತಿಯನ್ನ ಕೊಡಲಾಗುತ್ತದೆ. ಹಾಗೂ ಇವರು ಮಾರ್ಕೆಟಿಂಗ್ ಆರ್ಗನೈಜೇಷನ್ ಆಫ್ ವುಮನ್ ಎಂಟರ್‍ಟ್ರೈಸಸ್ ಎಂಬ ಸಂಸ್ಥೆಯನ್ನ ಕೂಡ ಸ್ಥಾಪಿಸಿದ್ದಾರೆ. ಇಲ್ಲಿ ಸುಮಾರು 600 ಯುವ ಉದ್ಯಮಿಗಳು ದೇಶದ ವಿವಿಧ ಕಡೆಗಳಿಂದ ಬಂದು ತರಬೇತಿ ಪಡೆಯುತ್ತಿದ್ದಾರೆ. ಇದನ್ನ ಗುರುತಿಸಿ 'ಟೈಡ್ ಲಿಬರೇಷನ್ ಅಂಡ್ ಇಟ್ಸ್ ಗ್ಲೋಬಲ್ ಇಂಪ್ಯಾಕ್ಟ್ ಆನ್ ವುಮನ್ ಎಂಟರ್‍ಪ್ರೈಸಸ್'ನ 12ನೇ ವಿಶ್ವ ಸಮ್ಮೇಳನದಲ್ಲಿ 'ಪ್ರಿಯದರ್ಶಿನಿ' ಪಶಸ್ತಿಯನ್ನ ಕೊಟ್ಟು ಪುರಸ್ಕರಿಸಿದ್ದಾರೆ.

image


ಗೀತಾ ಅವರು ಅಡಿಯಾಡರ್‍ನ್ಲಲಿರುವ 'ಪ್ರೇಯಸಿ' ಎಂಬ ಸಂಸ್ಥೆಯ ಮಾಲೀಕರು ಆಗಿದ್ದಾರೆ. ಈ ಸಂಸ್ಥೆಗೆ ಸುಮಾರು 60 ದೇಶಗಳ ಗ್ರಾಹಕರಿದ್ದಾರೆ. 1995ರಲ್ಲಿ 'ಬೆಸ್ಟ್ ವುಮನ್ ಆಫ್ ತಮಿಳುನಾಡು' ಪ್ರಶಸ್ತಿ ಸಹ ಇವರಿಗೆ ಲಭಿಸಿದೆ. ಹಾಗು ಇದೇ ವರ್ಷದಲ್ಲಿ 'ಮಾರ್ಕ್ ಅಂಡ್ ಸ್ಪೆನ್ಸರ್ಸ್' ರವರು ಲಂಡನ್‍ನಲ್ಲಿ ಆಯೋಜಿಸಿದ್ದ ಇಂಟರ್‍ನ್ಯಾಷನಲ್ ಅವಾರ್ಡ್ ಫಾರ್ ಬೆಸ್ಟ್ ಬ್ರೈಡಲ್ ವೇರ್ ಫ್ಯಾಷನ್ ಶೋನಲ್ಲಿ ಪ್ರೇಯಸಿ ಸಂಸ್ಥೆ ಪ್ರಶಸ್ತಿಯನ್ನ ಗಳಿಸಿತು.

ಜೀವನದಲ್ಲಿ ಕನಸು ಕಾಣಬೇಕು ಗುರಿ ಇದ್ದರೆ ನೀವು ಮುನ್ನುಗ್ಗಬೇಕು. ನನ್ನ ಜೀವನದಲ್ಲಿ ಮುಂದೆ ಬರಲು ನಾನು ಹಲವು ಅಡೆತಡೆಗಳನ್ನ ಮುರಿಯಬೇಕಾಯಿತು ಅಂತಾರೆ. ಗೀತಾ ಅವರ ಸಾಧನೆ ಹಾಗೂ ಅನುಭವ ದಿಗ್ಬ್ರಮೆಗೊಳಿಸುವಂತಿದೆ. ಆದ್ರೂ ಯುವ ಉದ್ಯಮಿಗಳನ್ನ ಪ್ರೋತ್ಸಾಹಿಸಿ ಅವರ ಏಳ್ಗೆಯನ್ನ ನೋಡಲು ಬಯಸುತ್ತಾರೆ. ಗೀತಾ ಜೀವನದ ಹತ್ತು ಪಾಠಗಳು ನಿಮಗಾಗಿ.

1. ಇರುವೆಡೆಯೇ ಹೆಮ್ಮೆರವಾಗಿ ಬೆಳೆಯಿರಿ

ನಾನು 1950ರಲ್ಲಿ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದೆ. 'ಚಿಕ್ಕ ವಯಸ್ಸಿನಲ್ಲೇ ಮದುವೆಯಾದ್ರೂ ಶಿಕ್ಷಣಕ್ಕೆ ಪ್ರೋತ್ಸಾಹ ಸಿಕ್ಕಿತ್ತು ಚಿನ್ನದ ಪಂಜರದಲ್ಲಿರುವ ಗಿಳಿಯಂತೆ ನನಗೆ ಭಾಸವಾಗ್ತಾಇತ್ತು. ನಾನು ಪಿ.ಟಿ ಉಷಾ ಅವರ ಸಾಧನೆಯನ್ನ ನೋಡಿ ಪ್ರೇರೇಪಿತಳಾಗಿ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಬೇಕೆಂದಿದ್ದೆನು'. 1972ರಲ್ಲಿ ಫೆಮಿನಾ ಮ್ಯಾಗಜೀನ್ ಮತ್ತು ಕ್ಯಾಮಲಿನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ದಿಸಿ ಅರ್ಹತಾ ಪತ್ರವನ್ನ ಪಡೆದುಕೊಂಡು, ಕ್ಯಾಮಲಿನ್ ಸಂಸ್ಥೆಯ ಸಹಯೋಗದೊಂದಿಗೆ ಕಲಾಶಾಲೆಯನ್ನ ಆರಂಭಿಸಿದ್ರು. ಇದರ ಜಾಹೀರಾತು ಹಾಗೂ ಅಗತ್ಯ ವಸ್ತುಗಳ ಜವಾಬ್ದಾರಿಯನ್ನ ಕ್ಯಾಮಲಿನ್ ಸಂಸ್ಥೆಯವರೇ ನಿರ್ವಹಿಸ್ತಾ ಇದ್ರು. 'ನನಗೆ ಇಲ್ಲಿ ಕೆಲಸವನ್ನ ಕಲಿಯಲು ಉತ್ತಮ ಅವಕಾಶ ಸಿಕ್ಕಿತ್ತು ನಂತ್ರ ನಾನು ಕ್ಯಾಮಲಿನ್ ಸಂಸ್ಥೆಗೆ ದೆಹಲಿಯಲ್ಲೂ ಕಲಾಶಾಲೆ ತೆರೆಯಲು ಮನವಿ ಮಾಡಿದೆನು.

2. ನಿನ್ನ ಸಾಮರ್ಥ್ಯವನ್ನ ಮೊದಲು ಸಾಭೀತುಪಡಿಸು

1985ರ ಹೊತ್ತಿಗೆ ನನ್ನ ಮ್ಕಕಳು ಬೆಳೆದು ದೊಡ್ಡವರಾಗಿದ್ದರು. ಚೆನ್ನೈನಲ್ಲಿ ನೆಲೆಸಿದ್ದ ನಾನು, ಮನೆಯಿಂ ದಲೇ ವ್ಯಾಪಾರ ಮಾಡಬೇಕು ಅಂತಾ ನಿರ್ಧರಿಸಿದ್ದೆ. ಆದ್ರೆ ನಾನು ವ್ಯಾಪಾರ ಮಾಡುವುದು ನನ್ನ ಪತಿಗೆ ಇಷ್ಟವಿರಲಿಲ್ಲ. ಆದ್ರೂ ನಾನು ಅವಕಾಶಗಳಿಗಾಗಿ ಕಾದಿರುತ್ತಿದ್ದೆ. ಒಮ್ಮೆ ನನ್ನ ಪತಿ ನನಗಾಗಿ ತಂದುಕೊಟ್ಟಿದ್ದ 13 ಸೀರೆಗಳನ್ನ ಮಾರಿದ್ದೆನು. ಈ ವಿಷಯ ತಿಳಿದ ನನ್ನ ಪತಿ ಆತಂಕಗೊಂಡಿದ್ದರು. ನಾನು ಅವರನ್ನ ಸಮಾಧಾನ ಮಾಡುತ್ತಲೇ ನನ್ನ ವ್ಯಾಪಾರವನ್ನ ಮುಂದುವರೆಸಿದ್ದೆನು. ಸೇಲ್ಸ್ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನನಗಿದ್ದ ಸಾಮರ್ಥ್ಯವನ್ನ ಅರಿತ ಅವರು ನನಗೆ ಸಹಾಯ ಮಾಡಲು ಶುರುಮಾಡಿದರು. ಅವರು ದೇಶದ ವಿಶೇಷ ಬಗೆಯ ಸೀರೆಗಳು ಹಾಗೂ ಬಟ್ಟೆಯನ್ನ ದೇಶದ ವಿವಿಧ ಸ್ಥಳಗಳಿಂದ ನನಗೆ ತಂದುಕೊಟ್ಟು ವ್ಯಾಪಾರ ಮಾಡುವಂತೆ ಉತ್ತೇಜಿಸಿದ್ರು.

ಅಂದಿನಿಂದ ನಮ್ಮ ಮೊದಲ ಉದ್ಯಮ 'ಪ್ರೇಯಸಿ' ಆರಂಭವಾಯ್ತು. ಆ ಸಮಯದಲ್ಲಿ ದೇಶದ ಬೇರೆ ಭಾಗಗಳಿಂದ ಬಟ್ಟೆಗಳನ್ನ ತರುವುದು ಸುಲಭವಾಗಿರಲಿಲ್ಲ. ಉತ್ತರ ಪ್ರಾಂತ್ಯದ ವಿವಿಧ ಪ್ರದೇಶಗಳಿಂದ ಸೆಲ್ವಾರ್ ಕಮೀಜ್ ಮತ್ತು ಸೀರೆಗಳನ್ನ ತಂದು ಸಂಗ್ರಹಿಸಿ, ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದೆವು.

3.ಉತ್ತಮರೊಡನೆ ಸಂಪರ್ಕದಿಂದ ವೈಯುಕ್ತಿಕ ಅಭಿವೃದ್ಧಿ ಹಾಗೂ ಇತರರಿಗೆ ಅವಕಾಶ ಕಲ್ಪಿಸಲು ಸಾಧ್ಯ

ನಾನು ಆಗಾಗ್ಗೆ ನಮ್ಮ ಉತ್ಪನ್ನಗಳನ್ನ ಪ್ರದರ್ಶನ ಮೇಳಗಳಲ್ಲಿ ಪ್ರದರ್ಶಿಸುತ್ತಿದ್ದೆನು. 1986ರ ಸುಮಾರಿನಲ್ಲಿ ಮನೆಯಿಂದ ಹೊರಗಡೆ ಕೆಲಸ ಮಾಡುವ ಮಹಿಳೆಯರನ್ನ ಕಳಂಕ ಹೊತ್ತವರಂತೆ ನೋಡುತ್ತಿದ್ದರು. ಪ್ರದರ್ಶನ ಮೇಳದಲ್ಲಿ ನನ್ನಂತ ಮನೋಭಾವವುಳ್ಳ ಕೆಲವು ಮಹಿಳೆಯರು ನನಗೆ ಪರಿಚಿತರಾದರು. ನಂತ್ರ ಸುಮಾರು ಎಂಟು ಮಂದಿ ಮಹಿಳೆಯರು ಸೇರಿಕೊಂಡು 'ಮೂವ್ಸ್'ಎನ್ನುವ ಸಂಸ್ಥೆಯ್ನನ ಸ್ಫಾಪಿಸಿದೆವು. ನಂತ್ರ ಬ್ಯಾಂಕ್‍ಗಳ ಮನವೊಲಿಸಿ ಅನುದಾನ ಪಡೆದು ಇನ್ನೂ ಹೆಚ್ಚು ಉದ್ದಿಮೆದಾರರನ್ನ ನಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದೆವು. ಸುಮಾರು 600 ಮಹಿಳೆಯರು ಈ ಸಂಸ್ಥೆಯ ಮೂಲಕ ತಮ್ಮ ಉದ್ದಿಮೆಯನ್ನ ಬೆಳೆಸಿದ್ದಾರೆ. ಕೆಲವು ಮಹಿಳೆಯರು ನಂತ್ರದ ದಿನಗಳಲ್ಲಿ ತಮ್ಮ ಉದ್ಯಮವನ್ನ ಮಕ್ಕಳಿಗೆ ಹಸ್ತಾಂತರಿದಿದ್ದಾರೆ. ಇದು ನಮಗೆ ಹೆಮ್ಮೆ ಎನಿಸುತ್ತದೆ.

4. ಗ್ರಾಹಕರು ಹಾಗೂ ಎದುರಾಳಿಯನ್ನ ಸರಿಯಾಗಿ ಅರ್ಥೈಸಿಕೊಳ್ಳಿ

1985ರಿಂದ 1991ರವೆಗೂ ಹಲವು ನಗರಗಳಲ್ಲಿ ಆಯೋಜಿಸಿದ್ದ ಪ್ರದರ್ಶನ ಮೇಳಗಳಿಂದ ನಾನು ಗ್ರಾಹಕರು ನಿರೀಕ್ಷಿಸಬಹುದಾದ ಹಲವಾರು ಅಂಶಗಳ ತಿಳಿದುಕೊಂಡೆನು. 1991ರಲ್ಲಿ ಚೆನ್ನೈನ ಸ್ಪೆನ್ಸರ್ ಪ್ಲಾಜಾದಲ್ಲಿ ಬೋಟಿಕ್ ಒಂದನ್ನ ಆರಂಭಿಸಿದೆವು. ಪ್ರೇಯಸಿ ಬೋಟಿಕ್‍ನಲ್ಲಿ ಸುಮಾರು 60 ದೇಶದ ಗ್ರಾಹಕರಿದ್ದಾರೆ. ಇದಕ್ಕೆ ಮುಖ್ಯಕಾರಣವೆಂದ್ರೆ, ಉನ್ನತ ಮಟ್ಟದ ಗ್ರಾಹಕರಿಗಾಗಿ ನಾವು ಹೊಸ ಆವಿಷ್ಕಾರಗಳನ್ನ ಮಾಡುತ್ತಲೇ ಕೆಲಸವನ್ನ ಸಂಪೂರ್ಣಗೊಳಿಸುತ್ತಿದ್ದೆವು. 24 ಗಂಟೆಗಳ ಕಾಲ ಟೈಲರಿಂಗ್ ವಸ್ತುಗಳನ್ನ ಮನೆ ಮನೆಗೆ ನೀಡುತ್ತಿದ್ದೆವು. ಮಧ್ಯರಾತ್ರಿಯವರೆಗೂ ಕೆಲಸ ಮಾಡಿದ ಉದಾಹರಣಗಳೂ ಉಂಟು.

5.ಪ್ರಯೋಗಗಳನ್ನ ಮಾಡುತ್ತಿರಬೇಕು

1997ರಲ್ಲಿ ಲೊಯೋಲಾ ಕಾಲೇಜಿನ ಪ್ರಾಂಶುಪಾಲರು ಫ್ಯಾಷನ್ ಡಿಸೈನಿಂಗ್ ತರಗತಿಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡರು. ಅದಕ್ಕೆ ಉತ್ತರಿಸುತ್ತಾ ನಾನು ಒಳ್ಳೆಯ ಫ್ಯಾಷನ್ ಡಿಸೈನರ್ ಆದ್ರೆ ಒಳ್ಳೆಯ ಶಿಕ್ಷಕಿಯಲ್ಲ ಅಂದಿದ್ದೆನು. ಇದಕ್ಕೆ ಪ್ರಾಂಶುಪಾಲರು ನೀವು ಉತ್ತಮ ಡಿಸೈನರ್ ಹಾಗೂ ನಾನು ಒಳ್ಳೆಯ ಶಿಕ್ಷಣ ತಜ್ಞ ನಾನು ನಿಮಗೆ ಬೋಧಿಸುವುದನ್ನ ಹೇಳಿಕೊಡುವೆನೆಂದು ಹೇಳಿದ್ದರು. ನಂತ್ರ ಲೋಯೋಲಾ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಂಡು ಮುಂದುವರೆದೆನು.

image


ಶ್ರಿಜಾತಿ ಇನ್ಸ್‍ಟ್ಯೂಟ್ ಎಂಬ ಹೊಸ ಫ್ಯಾಷನ್ ಡಿಸೈನಿಂಗ್ ಸಂಸ್ಥೆಯೊಂದನ್ನು ಕೇವಲ ಐದು ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದೆನು. ನನ್ನ ಪತಿ ನ್ಯಾಷನಲ್ ಟೆಕ್ಸ್‍ಟೈಲ್ಸ್ ಕಾರ್ಪೋರೇಷನ್ ಟೆಕ್ಸ್‍ಟೈಲ್ಸ್‍ನಲ್ಲಿ ನೌಕರಿ ಮಾಡುತ್ತಿದ್ದರು. ಅವರಿಗೆ ಆಗಿದ್ದಾಂಗೆ ದೇಶದ ನಾನಾ ಭಾಗಗಳಿಗೆ ವರ್ಗಾವಣೆಯಾಗುತ್ತಿತ್ತು. ಆದ್ದರಿಂದ ನನಗೆ ದೇಶದ ವಿವಿಧó ರಾಜ್ಯಗಳಲ್ಲಿ ನೆಲೆಸುವ ಅವಕಾಶ ಸಿಕ್ಕಿತ್ತು. ಆ ಅವಕಾಶವನ್ನು ಬಳಸಿಕೊಂಡ ನಾನು ನೇರವಾಗಿ ಕಂಪನಿಯ ಒಳಾಂಗಣಕ್ಕೆ ಹೋಗಿ ಕಲೆಗಾರರಿಂದ ಕೆಲಸವನ್ನು ಅಚ್ಚುಕಟ್ಟಾಗಿ ಕಲಿತೆನು.

6. ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕು

1999ರಲ್ಲಿ ಮಾಕ್ಸ್ ಅಂಡ್ ಸ್ಪೆನ್ಸರ್ಸ್ ಸಂಸ್ಥೆಯು ತಮ್ಮ ಬ್ರೈಡಲ್ ವೇರ್ ಕಲೆಕ್ಷನ್‍ನಲ್ಲಿ ಸ್ಪರ್ಧಿಸಲು ಕೇಳಿಕೊಂಡರು. ನಾನು ಕೇವಲ ಫೋಟೋಗಳನ್ನ ಮುಂದಿಟ್ಟುಕೊಂಡು ವಸ್ತ್ರ ವಿನ್ಯಾಸ ಮಾಡಿದ್ದೆನು. ಈ ಸ್ಪಧೆಯಲ್ಲಿ 70 ಮಂದಿ ಸ್ಪರ್ಧಾರ್ಥಿಗಳಿದ್ದರು. ನಾನು ವಿನ್ಯಾಸ ಮಾಡಿದ್ದ ವಸ್ತ್ರಗಳು ಯಾವುದೇ ರೀತಿಯಲ್ಲೂ ಬದಲಾವಣೆ ಮಾಡದೆ ಮಾಡೆಲ್‍ಗಳಿಗೆ ಸರಿಯಾಗಿ ಹೊಂದಿಕೊಂಡಿತ್ತು ಹಾಗೂ ನಮಗೆ ಬೆಸ್ಟ್ ಬ್ರೈಡಲ್ ವೇರ್ ಪ್ರಶ್ಸ್ತಿಯೂ ಲಭಿಸಿತ್ತು.

7. ಕಲಿಯುವುದು-ಕಲಿಸುವುದು ಸತತವಾಗಿರಬೇಕು

ತಮಿಳುನಾಡಿನ ಮುಕ್ತ ವಿವಿಯು ಬಿಎಸ್‍ಸಿ ಫ್ಯಾಷನ್ ಡಿಸೈನಿಂಗ್‍ಗೆ ಒಂದು ಪುಸ್ತಕವನ್ನ ಬರೆಯುವಂತೆ ಮನವಿ ಮಾಡಿತ್ತು. ಅಪ್ಯಾರೆಲ್ ಮ್ಯಾನೇಜ್‍ಮೆಂಟ್ ಎನ್ನುವ ಪುಸ್ತಕವನ್ನೂ ಸಹ ಮದ್ರಾಸ್ ವಿವಿಯ ಎಮ್‍ಬಿಎ ವಿದ್ಯಾರ್ಥಿಗಳಿಗೆ ಬರೆದಿದ್ದೇನೆ. ನಾನು ಬಿಎಸ್‍ಸಿ ಫ್ಯಾಷನ್ ಡಿಸೈನಿಂಗ್ ಮುಗಿಸಿದ್ದು, 2012ರಲ್ಲಿ ಎಮ್‍ಬಿಎಯನ್ನು ಕರೆಸ್ಪಾಂಡೆನ್ಸ್‍ನಲ್ಲಿ ತೆಗೆದುಕೊಂಡಿದ್ದೆನು. ಹೀಗೆ ಒಬ್ಬ ವಿದ್ಯಾರ್ಥಿನಿಯಾಗಿ, ಶಿಕ್ಷಕಿಯಾಗಿ , ಪುಸ್ತಕರ ಕರ್ತೃವಾಗಿ ಎಲ್ಲಾ ರೀತಿಯ ಅನುಭವಗಳೂ ನನಗಾಗಿದೆ.

8.ಟೀಕೆಗಳಗೆ ಎದೆಗುಂದಬೇಡಿ

ಮನೆಯಿಂದ ಹೊರಗಡೆ ಕೆಲಸ ಮಾಡಲು ಶುರುಮಾಡಿದ ಹೊಸದರಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಯ್ತು. ನಾನು ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವ ರೀತಿಯನ್ನು ಜನ ಟೀಕಿಸುತ್ತಿದ್ದರು. ಆದ್ರೆ, ಈಗ ನನ್ನ ಮೂವರು ಮಕ್ಕಳು ಕಲೆ ಮತ್ತು ಶಿಕ್ಷಣದಲ್ಲಿ ನಿಪುಣರಾಗಿದ್ದಾರೆ. ಅವರದ್ದೇ ಆದ ಗುರಿ ಹೊಂದಿದ್ದಾರೆ. ಅಂದು ಯಾರೋ ಮಾಡಿದ್ದ ಟೀಕೆಗಳು ನನ್ನ ಜೀವನದ ಮೇಲೆ ಯಾವ ಕೆಟ್ಟ ಪರಿಣಾಮವನ್ನೂ ಉಂಟುಮಾಡಲಿಲ್ಲ.

9.ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ

ನ್ನನ ಪತಿ ನನ್ನ ವೃತ್ತಿ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದರು. ಇಂದು ಕೂಡ ಅವರು ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಅವರ 74ರ ವಯಸಿನಲ್ಲಿ ಕರ್ನಾಟಿಕ್ ಎಂಬ ಶಾಲೆಯನ್ನು ತೆರೆದಿದ್ದು, ಅಲ್ಲಿ ಮೂವತ್ತೈದು ವಿದ್ಯಾರ್ಥಿಗಳಿದ್ದಾರೆ. ಹಾಗೂ ನಾನು ನನ್ನ ಎಮ್‍ಬಿಎಯನ್ನು 62ರ ವಯಸ್ಸಿನಲ್ಲಿ ಮುಗಿಸಿದೆನು.

10.ಸಾಧನೆ ನಿಮ್ಮ ಗುರಿಯಾಗಿರಲಿ

ಮೊದಲು ಉದ್ಯಮವನ್ನು ಶುರು ಮಾಡಲು ನನ್ನ ಪತಿಯ ಅನುಮತಿಯನ್ನು ಕೇಳಲು ನಾನು ಹೆದರುತ್ತಿದ್ದೆನು. 1995ರಲ್ಲಿ ನನಗೆ ಎಂಟರ್‍ಪ್ರೆನರ್ ಅವಾರ್ಡ್ ಬಂದ ನಂತ್ರ ಎಲ್ಲವೂ ಬದಲಾಯಿತು. ನೀನು ಯಶಸ್ಸನ್ನು ಹೇಗೆ ಸಾಧಿಸಿದೆ ಎಂಬುದು ನಿನಗೆ ತಿಳಿದಿರುತ್ತದೆ. ನಿನ್ನ ಜೀವನ ಮತ್ತು ಕುಟುಂಬವನ್ನ ನಿಭಾಯಿಸುವ ರೀತಿ ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದಲ್ಲಿ ಯಶಸ್ಸು ಖಂಡಿತ. ಒಬ್ಬ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಕಲಿತಾಗ ತನ್ನ ಮನಸ್ಥಿತಿ ಉತ್ತಮವಾಗಿ ಬೇರೆಯವರ ಬೇರೆಯವರ ಒಳಿತಿನ ಬಗ್ಗೆ ಯೋಚಿಸುತ್ತಾರೆ.

ಲೇಖಕರು: ಜೆಸ್ಸಿ ರುತ್​​ ಚೆರಿಯನ್​​

ಅನುವಾದಕರು: ಪಿ.ಅಭಿನಾಷ್​