ಹೂಡಿಕೆದಾರರ ಒತ್ತಡದ ಎಫೆಕ್ಟ್- ಉದ್ಯಮಗಳಲ್ಲಿ ನೌಕರರ ಕೆಲಸಕ್ಕೆ ಕುತ್ತು

ಟೀಮ್​​ ವೈ.ಎಸ್​​. ಕನ್ನಡ

ಹೂಡಿಕೆದಾರರ ಒತ್ತಡದ ಎಫೆಕ್ಟ್- ಉದ್ಯಮಗಳಲ್ಲಿ ನೌಕರರ ಕೆಲಸಕ್ಕೆ ಕುತ್ತು

Wednesday December 02, 2015,

3 min Read

ಹೂಡಿಕೆದಾರರ ಒತ್ತಡ ಉದ್ಯಮದಲ್ಲಿ ಎದುರಾಗುವ ಬಹುತೇಕ ಸಮಸ್ಯೆಗಳಿಗೆ ಮೂಲ. ಹೂಡಿಕೆದಾರರ ಒತ್ತಡದಿಂದಾಗಿ ಕಾರ್ಯಾಚರಣೆಯನ್ನು ಅತ್ಯಂತ ವೇಗವಾಗಿ ನಡೆಸಬೇಕಾದ ಅನಿವಾರ್ಯತೆಗೆ ಉದ್ಯಮಿಗಳು ಸಿಲುಕುತ್ತಾರೆ. ಇದು ಮೀಡಿಯಾ ಎಂಟರ್‍ಪ್ರೆನ್ಯೂರ್ ಹಾಗೂ ಯುಟಿವಿ ಗ್ರೂಪ್‍ನ ಸಂಸ್ಥಾಪಕ ರೋನಿ ಸ್ಕ್ರೂವಾಲಾ ಅವರ ಅಭಿಪ್ರಾಯ. ಕೆಲವೊಮ್ಮೆ ಉದ್ಯಮಿಗಳು ತಮ್ಮ ಕಾರ್ಯಾಚರಣೆಯನ್ನು ಮತ್ತೆ ಅಳೆಯುವ ಪರಿಸ್ಥಿತಿ ಬರಬಹುದು. ಇದು ಪರಿಸರ ವ್ಯವಸ್ಥೆಯಲ್ಲಿನ ಸಮಸ್ಯೆಯಲ್ಲ, ಮಲ್ಟಿ-ಸಿಟಿ ತಂತ್ರವನ್ನು ಅನುಸರಿಸಬೇಕೆಂಬ ಹೂಡಿಕೆದಾರರ ಒತ್ತಡದಿಂದ ಸೃಷ್ಟಿಯಾದ ಸಮಸ್ಯೆ ಎನ್ನುತ್ತಾರೆ ರೋನಿ. ಸದ್ಯ ರೋನಿ ಸ್ಕ್ರೂವಾಲಾ ಅವರು `ಯುನಿಲೇಝರ್ ವೆಂಚರ್ಸ್' ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

image


ಉದ್ಯಮ ವಲಯ, ಪಿಇ ಸಂಸ್ಥೆಗಳಿಂದ ಬಿಲಿಯನ್‍ಗಟ್ಟಲೆ ಹಣವನ್ನು ಆಕರ್ಷಿಸ್ತಾ ಇದೆ. ವಿದೇಶೀ ಹೂಡಿಕೆದಾರರಾದ ಜಪಾನ್‍ನ `ಸಾಫ್ಟ್ ಬ್ಯಾಂಕ್', ಚೀನಾದ ಆನ್‍ಲೈನ್ ರಿಟೇಲರ್ `ಅಲಿಬಾಬಾ'ದಂತಹ ಸಂಸ್ಥೆಗಳು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. 2015ರಲ್ಲಿ ದೇಶದ ಉದ್ಯಮ ಕ್ಷೇತ್ರಕ್ಕೆ 14 ಬಿಲಿಯನ್ ಅಮೆರಿಕನ್ ಡಾಲರ್ ಹರಿದು ಬಂದಿದೆ. ಆದ್ರೆ ಈ ಮೊತ್ತ ಇಳಿಕೆಯಾಗುತ್ತಿದ್ದು, 13 ಬಿಲಿಯನ್ ಡಾಲರ್‍ಗೆ ಬಂದು ತಲುಪುವ ಸಾಧ್ಯತೆ ಇದೆ.

ರೆಸ್ಟೋರೆಂಟ್ ಆವಿಷ್ಕಾರ ವೇದಿಕೆ `ಝೊಮೇಟೋ', ಆಹಾರ ಆದೇಶ ವೇದಿಕೆ `ಟಿನಿಔಲ್', ಆನ್‍ಲೈನ್ ರಿಯಲ್ ಎಸ್ಟೇಟ್ ಪೋರ್ಟಲ್ `ಹೌಸಿಂಗ್ ಡಾಟ್ ಕಾಮ್'ನಂತಹ ಕಂಪನಿಗಳು ಕಳೆದ ಕೆಲ ವಾರಗಳಲ್ಲಿ ನೂರಾರು ನೌಕರರನ್ನು ಕೆಲಸದಿಂದ ವಜಾಗೊಳಿಸಿವೆ. ಈ ಸಂಸ್ಥೆಗಳ ಕಾರ್ಯಾಚರಣೆಯಲ್ಲೂ ಹಿನ್ನಡೆಯಾಗಿದ್ದು ಪತ್ರಿಕೆಗಳ ಸುದ್ದಿಗಳಿಗೂ ಗ್ರಾಸವಾಗಿದೆ. `ಝೊಮೆಟೋ' ಕಳೆದ ತಿಂಗಳು 300 ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ರೆ, `ಹೌಸಿಂಗ್ ಡಾಟ್ ಕಾಮ್' 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. `ಟಿನಿಔಲ್' ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ, ಕೆಲ ನೌಕರರನ್ನು ಕೆಲಸದಿಂದ ಕಿತ್ತು ಹಾಕಿರೋದ್ರಿಂದ `ಟಿನಿಔಲ್' ಕಾರ್ಯಾಚರಣೆ ಕೂಡ ಕುಗ್ಗಿದೆ. ಸಂಸ್ಥೆಯ ದಿಢೀರ್ ನಿರ್ಧಾರದಿಂದ ಕುಪಿತರಾದ ಉದ್ಯೋಗಿಗಳು `ಟಿನಿಔಲ್'ನ ಮುಖ್ಯ ಕಾರ್ಯದರ್ಶಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ರು. ಬಾಕಿ ಇರುವ ವೇತನ ಪಾವತಿಸುವಂತೆ ಪಟ್ಟು ಹಿಡಿದಿದ್ರು.

ಬೆಳವಣಿಗೆಯ ಯೋಜನೆ ಮತ್ತು ಮಲ್ಟಿ ಸಿಟಿ ತಂತ್ರಗಳನ್ನು ಅರಿತು ಹೂಡಿಕೆದಾರರು ಒತ್ತಡ ಹೇರಲು ಆರಂಭಿಸ್ತಾರೆ. ಇದುವರೆಗೂ ಸಂಸ್ಥೆಯನ್ನು ಮುನ್ನಡೆಸದ 29ರ ಹರೆಯದ ಯುವಕರಿಂದ ಪ್ಯಾನ್ ಇಂಡಿಯಾ ಮಾದರಿಯನ್ನು ಹೂಡಿಕೆದಾರರು ನಿರೀಕ್ಷಿಸುತ್ತಾರೆ. ಇದನ್ನು ಸಾಧಿಸಲು `ಹಿಂದುಸ್ತಾನ್ ಲಿವರ್'ನಂತಹ ಕಂಪನಿಗೆ ಕೂಡ 50 ವರ್ಷಗಳೇ ಬೇಕಾಯ್ತು ಎನ್ನುತ್ತಾರೆ ರೋನಿ ಸ್ಕ್ರೂವಾಲಾ. ಇದು ಸಣ್ಣ ಸಮಸ್ಯೆಯಲ್ಲ, ಅಥವಾ ಪರಿಸರ ವ್ಯವಸ್ಥೆಯಲ್ಲಿನ ತೊಂದರೆಯೂ ಅಲ್ಲ. ಹಾಗಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಅನ್ನೋದನ್ನೂ ರೋನಿ ಒತ್ತಿ ಹೇಳಿದ್ದಾರೆ. ಇಂತಹ 25-50 ಕಂಪನಿಗಳ ಬಗ್ಗೆ ಇನ್ನು ಕೆಲವು ವರ್ಷಗಳಲ್ಲಿ ಇಂಥದ್ದೇ ಸುದ್ದಿ ಬರಬಹುದು. ಅದರ ಅರ್ಥ ಅವರು ಕಾರ್ಯಾಚರಣೆ ಚುರುಕುಗೊಳಿಸಿಲ್ಲ ಎಂದಲ್ಲ ಅನ್ನೋದು ರೋನಿ ಅವರ ಅಭಿಪ್ರಾಯ. ರೋನಿ ತಮ್ಮ `ಯುನಿಲೇಝರ್ ವೆಂಚರ್ಸ್' ಮೂಲಕ ಆನ್‍ಲೈನ್ ಶೈಕ್ಷಣಿಕ ಉದ್ಯಮ `ಅಪ್‍ಗ್ರಾಡ್'ನಲ್ಲಿ ಹೂಡಿಕೆ ಮಾಡಿದ್ದಾರೆ.

ಪ್ರಮಾಣೀಕರಣದ ಸಂದರ್ಭದಲ್ಲಿ ನೀವು ನಿಮ್ಮಲ್ಲಿರುವ ಐಡಿಯಾಗಳ ಬಗ್ಗೆ ಚಿಂತಿಸಿದ್ರೆ, ಅದು ಏಕಪಕ್ಷೀಯ ನೋಟವಾಗುತ್ತದೆ. ಅದರ ಅರ್ಥ ಒಂದು ಬುಟಿಕ್‍ನ ಕಾರ್ಯಾಚರಣೆ ಅದ್ಭುತವಲ್ಲ ಎಂದಲ್ಲ. ನೀವು ನಿಮ್ಮ ಪ್ರಮಾಣವನ್ನು ವ್ಯಾಖ್ಯಾನಿಸುವುದು ಅತ್ಯವಶ್ಯಕ. `ಝೊಮೆಟೋ' ಬಳಿ ಅಪೂರ್ವ ಮಾದರಿಯಿದೆ. ಅವರ ಚಿಂತನೆ ಕೂಡ ದೊಡ್ಡದೇ. ಆದ್ರೆ ಕೆಲ ಹೂಡಿಕೆದಾರರು ಮಲ್ಟಿಸಿಟಿ ಪ್ರಯತ್ನಗಳನ್ನು ಮಾಡುವಂತೆ ಒತ್ತಾಯಿಸಿದ್ರಿಂದ ಸಂಸ್ಥೆ ವೈಫಲ್ಯವನ್ನು ಎದುರಿಸುವಂತಾಯ್ತು ಅನ್ನೋದು ರೋನಿ ಅವರ ಸ್ಪಷ್ಟ ನುಡಿ.

ಆದ್ರೆ ಇದು ಕೆಲ ಉದ್ಯಮಗಳ ಪಾಲಿಗೆ ಕೆಟ್ಟ ಪ್ರಚಾರವನ್ನು ತಂದುಕೊಟ್ಟಿದೆ. ಇದು ಕಂಪನಿಗಳು ಸ್ಫೋಟಿಸಿಬಿಡಬಹುದು ಎಂಬ ಸಂಕೇತವೇನಲ್ಲ. ಹಾಗಾಗಿ ಗ್ರಾಹಕರಿಗೆ ಸೇವೆ ಮಾತ್ರ ಸಂಬಂಧಪಟ್ಟಿರುತ್ತದೆ. ಒಂದು ಸಂಸ್ಥೆ ನೌಕರರನ್ನು ಉಳಿಸಿಕೊಳ್ಳುವುದು ಅಥವಾ ಬಿಡುವುದು ಗ್ರಾಹಕರಿಗೆ ಸಂಬಂಧಿಸಿದ ವಿಚಾರವಲ್ಲ. ಇನ್ನು ಮೌಲ್ಯಮಾಪನದಲ್ಲಿ ಸದಾ ಏರಿಳಿತಗಳು ಇದ್ದೇ ಇರುತ್ತವೆ. ಸೀಮಿತವಾದದ್ದನ್ನು ಯಾವುದಾದರೂ ತಲುಪಿದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ. ಇ-ಕಾಮರ್ಸ್ ಉದ್ಯಮಗಳಲ್ಲಿ `ಅಮೇಝಾನ್' ಕಳೆದ 4 ತಿಂಗಳುಗಳಲ್ಲಿ ಮೌಲ್ಯಮಾಪನವನ್ನು ದುಪ್ಪಟ್ಟುಗೊಳಿಸಿದೆ. ಕಳೆದ 8 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು 4 ತಿಂಗಳಲ್ಲಿ ಮಾಡಿದೆ. ಅದರಲ್ಲಿರುವ ಲಾಜಿಕ್ ಏನು? ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ಮೂರ್ಖರೇ? ನನಗೆ ಹಾಗೇ ಅನ್ನಿಸುತ್ತೆ ಎನ್ನುತ್ತಾರೆ ರೋನಿ.

ಒಟ್ಟಿನಲ್ಲಿ ನೌಕರರು ಪ್ರತಿಷ್ಠಿತ ಕಂಪನಿಗಳಲ್ಲೂ ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ಪರೋಕ್ಷವಾಗಿ ಹೂಡಿಕೆದಾರರ ಒತ್ತಡವೇ ಕಾರಣ ಅನ್ನೋದು ರೋನಿ ಅವರ ಅಭಿಮತ. ಪ್ರಕ್ತ ಸ್ಥಿತಿಯನ್ನು ಅವಲೋಕಿಸಿದ್ರೆ ಇದು ಸುಳ್ಳಲ್ಲ. ಹೂಡಿಕೆದಾರರಲ್ಲಿ ನಿರೀಕ್ಷೆ ಹೆಚ್ಚಿದಂತೆಲ್ಲ ಉದ್ಯಮಿಗಳ ಮೇಲೆ ಒತ್ತಡವೂ ಹೆಚ್ಚುತ್ತದೆ. ಅದರ ನೇರ ಪರಿಣಾಮ ಆಗ್ತಿರೋದು ಅಮಾಯಕ ಉದ್ಯೋಗಿಗಳ ಮೇಲೆ ಅನ್ನೋದು ವಿಪರ್ಯಾಸ.

ಅನುವಾದಕರು: ಭಾರತಿ ಭಟ್​​​