ಹಲ್ಲು ನೋವೇ...? ಡೋಂಟ್​ವರಿ.. ಮನೆಗೆ ವೈದ್ಯರನ್ನು ಕರೆಸಿಕೊಳ್ಳಿ..!

ಟೀಮ್​ ವೈ.ಎಸ್​. ಕನ್ನಡ

ಹಲ್ಲು ನೋವೇ...? ಡೋಂಟ್​ವರಿ.. ಮನೆಗೆ ವೈದ್ಯರನ್ನು ಕರೆಸಿಕೊಳ್ಳಿ..!

Monday May 30, 2016,

3 min Read

ಸಿಲಿಕಾನ್ ಸಿಟಿ ಬೆಂಗಳೂರಿನಷ್ಟು ಬ್ಯುಸಿಯಾಗಿರುವ ಊರು ನಮ್ಮ ಕರ್ನಾಟಕದಲ್ಲಿ ಬೇರೆ ಯಾವುದು ಇಲ್ಲ. ಎಷ್ಟು ಬ್ಯುಸಿ ಎಂದರೆ ಕೆಲವು ಬಾರಿ ಊಟ ಮಾಡಲು ಕೂಡ ಸಮಯವಿಲ್ಲದೆ, ಆಫೀಸ್​ಗೆ ಹೋಗುವ ಕ್ಯಾಬ್​ನಲ್ಲೋ ಅಥವಾ ಬಸ್ಸಿನಲ್ಲೋ ತಿನ್ನುತ್ತಾ ಹೋಗುತ್ತಾರೆ. ಕೆಲಸ ಮತ್ತು ಜಂಜಾಟದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಮಯವಿರುವುದಿಲ್ಲ. ಇನ್ನು ಆರೋಗ್ಯದ ವಿಚಾರವಂತೂ ಮರೆತೇ ಹೋಗಿದೆ. ವೈದ್ಯರ ಬಳಿಗೆ ಹೋಗಿ ಹೆಲ್ತ್​​ ಚೆಕಪ್​ ಮಾಡಿಸಿಕೊಳ್ಳೋದಂತೂ ಸಾಧ್ಯವೇ ಇಲ್ಲ. ಕೇವಲ ತೀವ್ರ ತರಹದ ಕಾಯಿಲೆಗಳು ಬಂದಾಗ ಮಾತ್ರ ಡಾಕ್ಟರ್ ಬಳಿಗೆ ಹೋಗುವ ನಾವು, ಚಿಕ್ಕ ಪಟ್ಟ ಕಾಯಿಲೆಗಳನ್ನು ಕಡೆಗಣಿಸುತ್ತೇವೆ. ಅದರಲ್ಲಿ ಹಲ್ಲು ನೋವು ಕೂಡಾ ಒಂದು.

image


ಹಲ್ಲು ನೋವು ಬಂತು ಅಂದ್ರೆ ಸಾಕು ಪ್ರಾಣವೇ ಹಾರಿ ಹೋದಷ್ಟು ಫೀಲ್​ ಆಗುತ್ತದೆ. ಅಷ್ಟರ ಮಟ್ಟಿಗೆ ನೋವಿರುತ್ತದೆ. ಆದ್ರೆ ಸಿಲಿಕಾಲ್​ ಸಿಟಿ ಜನ ಹಲ್ಲುನೋವಿಗೆ ಪರಿಹಾರ ಕಂಡುಕೊಳ್ಳಲು ಡೆಂಟಿಸ್ಟ್​ ಬಳಿ ಹೋಗೋದಿಲ್ಲ. ಬದಲಾಗಿ ಯಾವುದೇ ಪೈನ್​ ಕಿಲ್ಲರ್​​ ಮಾತ್ರೆಗಳನ್ನು ತೆಗೆದುಕೊಂಡು ತಾತ್ಕಾಲಿಕ ಪರಿಹಾರದ ಮೊರೆ ಹೋಗ್ತಾರೆ. ಆದ್ರೆ ಇನ್ನು ಮುಂದೆ ನೀವು ಈ ಬಗ್ಗೆ ಚಿಂತಿಸಬೇಕಿಲ್ಲ. ಹಲ್ಲಿನ ಬಗ್ಗೆ ಕೇರ್​ ಮಾಡೋದಿಕ್ಕೆ ಡಾಕ್ಟರ್​ಗಳು ಇದ್ದಾರೆ. ಅವರೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಒಂದು ಕರೆ ಮಾಡಿ ನಿಮ್ಮ ಹೆಸರು ನೋಂದಾಯಿಸಿಕೊಂಡರೆ ಸಾಕು ದಂತ ವೈದ್ಯರು ನಿಮ್ಮ ಮನೆ ಬಾಗಿಲಿಗೇ ಬರುತ್ತಾರೆ.

ಹೌದು ಹಲ್ಲು ನೋವಿನಿಂದ ಬಳಲುವವರಿಗೆ ಮನೆಬಾಗಿಲಿನಲ್ಲಿಯೇ ಚಿಕಿತ್ಸೆ ನೀಡುವ ಉದ್ದೇಶದಿಂದ ವಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರವೂ ಮನೆಬಾಗಿಲಿಗೆ ತುರ್ತು ದಂತ ಆರೋಗ್ಯ ಸೇವೆ ಒದಗಿಸುತ್ತಿದೆ. ದೇಹವನ್ನು ಅತಿಯಾಗಿ ಭಾದಿಸುವ ನೋವುಗಳಲ್ಲಿ ಹಲ್ಲು ನೋವು ಕೂಡ ಒಂದು. ಹಲ್ಲುನೋವು ಕೆಲವೊಮ್ಮೆ ತಾನಾಗಿಯೇ ಗುಣ ಹೊಂದುತ್ತದೆ. ಕೆಲವೊಮ್ಮೆ ಡಾಕ್ಟರ್ ಬಳಿ ಹೋಗದೇ ನೋವು ನಿವಾರಣೆಯಾಗಲು ಸಾಧ್ಯವೇ ಇಲ್ಲ.

ಇದನ್ನು ಓದಿ: ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗಬೇಕು, ಸಂಜೆ ಟ್ರಾಫಿಕ್ ಕಿರಿಕಿರಿ ಒಮ್ಮೆ ಮನೆಗೆ ಸೇರಿದರೆ ಸಾಕು ಎನ್ನಿಸಿಬಿಡುತ್ತದೆ. ಆಸ್ಪತ್ರೆಗೆ ಹೋಗಲು ಸಮಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಬ್ಯುಸಿ ಇರುವವರಿಗಾಗಿಯೇ ವಾತ್ಸಲ್ಯ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಶ್ರೀವತ್ಸ ಭಾರದ್ವಾಜ್ ಈ ಸೇವೆಯನ್ನು ಆರಂಭಿಸಿದ್ದಾರೆ.

image


ಶ್ರೀವತ್ಸ ಭಾರಾಧ್ವಾಜ್ ಅವರು ಸ್ವತಃ ದಂತ ವೈದ್ಯರು. 1996ರಲ್ಲಿ ವಿದ್ಯಾರ್ಥಿಯಾಗಿದ್ದ ಶ್ರೀವತ್ಸ ಅವರಿಗೆ ಮನೆ ಬಾಗಿಲಿಗೆ ಹೋಗಿ ಹಲ್ಲಿನ ಚಿಕಿತ್ಸೆ ನೀಡಬೇಕು. ಅದರಲ್ಲೂಮುಖ್ಯವಾಗಿ ವಿಕಲಚೇತನರಿಗೆ ಸೇವೆಯನ್ನು ಆರಂಭಿಸಬೇಕು ಎಂಬ ಕನಸಿತ್ತು. ಆ ಕನಸನ್ನು ಶ್ರೀವತ್ಸ ಈಗ ನನಸು ಮಾಡಿದ್ದಾರೆ.

ವಿಕಲಚೇತನರು ಓಡಾಡುವುದು ಕಷ್ಟ. ವ್ಹೀಲ್ ಚೇರ್​ನಲ್ಲಿ ಬಂದರೂ ಮೊದಲನೇ ಮಹಡಿಯಲ್ಲಿ ಕ್ಲಿನಿಕ್ ಇದ್ದರೆ ಲಿಫ್ಟ್ ಹತ್ತಬೇಕು. ಇದು ಅವರಿಗೆ ಕಷ್ಟ ಎಂದು ಚಿಂತಿಸಿದ ಶ್ರೀವತ್ಸ, ಕ್ಲಿನಿಕ್​ಗೆ ಬರಲು ಸಾಧ್ಯವಿಲ್ಲದವರಿಗೆ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ನೀಡಬೇಕು ಎಂದುಕೊಂಡರು. ತಮ್ಮ ಕೋರ್ಸ್ ಮುಗಿದ ಬಳಿಕ ಮನೆ ಮನೆಗೆ ಹೋಗಿ ಹಲ್ಲು ನೋವಿಗೆ ಚಿಕಿತ್ಸೆ ನೀಡಿ ಪರಿಹಾರ ನೀಡಲಾರಂಭಿಸಿದರು.

ನಂತರದ ದಿನದಲ್ಲಿ ಇಂಟರ್ ನ್ಯಾಷನಲ್ ಆಸೋಸಿಯೇಷನ್ ಫಾರ್ ಡಿಸೆಬಿಲಿಟಿ ಆ್ಯಂಡ್ ಓರಲ್ ಹೆಲ್ತ್​ಗೆ ಭಾರತದ ಕೌನ್ಸಿಲ್ ಮೆಂಬರ್ ಆಗಿ ಆಯ್ಕೆಯಾದರು. ಆಗ ಬೇರೆ ಬೇರೆ ದೇಶಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಪದ್ಧತಿಯನ್ನು ನೋಡಿ ಬಂದರು. ಇತರ ದೇಶಗಳಲ್ಲಿ ತಾವು ಕಂಡ ಚಿಕಿತ್ಸಾ ಮಾದರಿಯನ್ನು ನೋಡಿದ ಶ್ರೀವತ್ಸ ಅವರಿಗೆ ಇದನ್ನು ನಮ್ಮ ಊರಿನಲ್ಲಿ ಆರಂಭ ಮಾಡಿ ನಮ್ಮವರಿಗೂ ಇಂತಹ ಸೇವೆ ನೀಡಬೇಕು ಎಂದುಕೊಂಡು ಅದನ್ನು ಇಲ್ಲಿಯೂ ತಮ್ಮ ಜೊತೆಗಿದ್ದ 25 ಜನರ ತಂಡದೊಂದಿಗೆ ಸೇವೆ ನೀಡಲು ಆರಂಭಿಸಿದರು. ನಗರದ ಯಾವುದೇ ಭಾಗದಲ್ಲಿದ್ದರೂ ನಿಮಗೆ ದಂತ ವೈದ್ಯಕೀಯ ಸೇವೆ ಒದಗಿಸಲು ಈ ತಂಡ ಸಿದ್ಧವಿದೆ.

ವೈಶಿಷ್ಟ್ಯಗಳು

ಸುಮಾರು 25 ಮಂದಿ ಇರುವ ಇವರ ತಂಡದಲ್ಲಿ 15 ವೈದ್ಯರು ಹಾಗೂ 10 ಸಹಾಯಕರಿದ್ದಾರೆ. 24/7 ಸರ್ವೀಸ್​​ ನೀಡುವ ವ್ಯಾತ್ಸಲ್ಯ ಕೇಂದ್ರದ ಈ ಸೇವೆಯಲ್ಲಿ ರಾತ್ರಿ 11.30ಕ್ಕೆ ಕರೆ ಮಾಡಿದರೂ ನಿಮ್ಮ ಮನೆ ಮುಂದೆ ವೈದ್ಯರು ಹಾಜರಾಗುತ್ತಾರೆ. ಹಲ್ಲಿನ ಚಿಕಿತ್ಸೆಗೆ ಬೇಕಾಗುವ ಉತ್ತಮ ದರ್ಜೆಯ ಹಾಗೂ ಮುಂಚೂಣಿಯಲ್ಲಿರುವ ತಂತ್ರಜ್ಞಾನವುಳ್ಳ ಉಪಕರಣಗಳು ಇವರ ಬಳಿ ಲಭ್ಯವಿದೆ.

image


ಶುಲ್ಕ ಎಷ್ಟು..?

ಡೆಂಚರ್ಸ್, ಕ್ಲಿನಿಂಗ್, ಫಿಲ್ಲಿಂಗ್, ರೂಟ್ ಕೆನಾಲ್​ನಂತಹ ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ. 100 ರೂಪಾಯಿ ನೋಂದಣಿ ಶುಲ್ಕ, 200 ರೂಪಾಯಿ ಕನ್ಸಲ್ಟೆನ್ಸಿ ಶುಲ್ಕ. ವಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರದ ಇನ್ನೊಂದು ವಿಶೇಷ ಎಂದರೆ ಡ್ರಿಲ್ಲಿಂಗ್ ಮಾಡದೇ, ಹನಿ ರಕ್ತ ಕೂಡ ಬರದಂತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಫಿಲ್ಲಿಂಗ್ ಮಾಡುವುದು. ಇಷ್ಟೇ ಅಲ್ಲದೆ 2500 ರೂಪಾಯಿಯ ವಾರ್ಷಿಕ ಸದಸ್ಯತ್ವ ಯೋಜನೆ ಕೂಡ ವಾತ್ಸಲ್ಯದಲ್ಲಿದೆ.

ಉತ್ತಮ ಪ್ರತಿಕ್ರಿಯೆ

ಬಹಳ ಹಿಂದೆ ಡಾಕ್ಟರ್​​ಗಳು ನಮ್ಮ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಚಿಕ್ಕ ಪುಟ್ಟ ಕಾಯಿಲೆಯಿಂದ ದೊಡ್ಡ ಕಾಯಿಲೆಯವರೆಗೂ ಚಿಕಿತ್ಸೆ ಪಡೆಯಲು ನಾವೇ ಆಸ್ಪತ್ರೆಗೆ ಹೋಗಬೇಕಿದೆ. ಹಿಂದಿನ ಆ ಪದ್ಧತಿ ಮತ್ತೆ ಮರುಕಳಿಸಬೇಕು ಎಂಬ ಉದ್ದೇಶದಿಂದ ಶ್ರೀವತ್ಸ ಅವರು ಈ ಯೋಜನೆ ಪ್ರಾರಂಭಿಸಿದ್ದಾರೆ. ಇವರ ವಾತ್ಸಲ್ಯ ಡೆಂಟಲ್ ಕ್ಲಿನಿಕ್ ವಿಶ್ವದ ಅತ್ಯುತ್ತಮ ಡೆಂಟಲ್ ಕ್ಲಿನಿಕ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈವರೆಗೆ ನಾವು ಚಿಕಿತ್ಸೆ ನೀಡಿದ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಹೋಮ್ ಸರ್ವೀಸ್ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವ ಇರಾದೆ ಇಟ್ಟುಕೊಂಡಿದ್ದಾರೆ. ಇನ್ನೇನು ನಿಮಗೆ ಹಲ್ಲು ನೋವೆ..? ಹಾಗಿದ್ದರೆ ತಡ ಮಾಡದೆ ವ್ಯಾತ್ಸಲ್ಯ ಬಾಯಿ ಆರೋಗ್ಯ ಕೇಂದ್ರದ ತಜ್ಞರು ನಿಮ್ಮ ಮನೆ ಬಾಗಿಲಿಗೆ ಬರಲು ಕರೆ ಮಾಡಿ.

ಇದನ್ನು ಓದಿ:

1"ವಿರಾಟ್"​ ರೂಪಕ್ಕೆ ಬೆಚ್ಚಿಬಿದ್ದ ಕ್ರಿಕೆಟ್​ಲೋಕ

2. ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

3. ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ ಮಹಿಳೆ ಸುನಿತಾ ಕೃಷ್ಣನ್