ಬಂಡವಾಳ ಹೂಡಿಕೆ ಹಬ್ಬಕ್ಕೆ ಅದ್ದೂರಿಯ ತೆರೆ..

ಟೀಮ್​ ವೈ.ಎಸ್​. ಕನ್ನಡ

ಬಂಡವಾಳ ಹೂಡಿಕೆ ಹಬ್ಬಕ್ಕೆ ಅದ್ದೂರಿಯ ತೆರೆ..

Friday February 05, 2016,

2 min Read

ರಾಜ್ಯದಲ್ಲಿ ನಡೆಸಲಾದ ಮೂರನೇ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ತೆರೆ ಬಿದ್ದಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ 121 ತಿಳುವಳಿಕೆ ಪತ್ರಕ್ಕೆ ಸಹಿ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲ್ಲಿ ಬರೋಬ್ಬರಿ 3.08 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಅದರಿಂದ 6.70 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಬಂಡವಾಳ ಹೂಡಿಕೆಯಲ್ಲಿ ಈ ಮೊದಲಿನ 1.75 ಕೋಟಿ ರೂ. ಹೂಡಿಕೆಯೂ ಸೇರಿದೆ. ಆಮೂಲಕ ‘ಇನ್ವೆಸ್ಟ್ ಕರ್ನಾಟಕ’ ಯಶಸ್ವಿಯಾದಂತಾಗಿದೆ.

ಇದನ್ನು ಓದಿ:

ಕೈಗಾರಿಕೆಗಳ ಅಭಿವೃದ್ಧಿಗೆ ನೂತನ ಕೈಗಾರಿಕಾ ನೀತಿ ಸಹಕಾರ

ಕಳೆದೆರಡು ಹೂಡಿಕೆದಾರರ ಸಮಾವೇಶದಷ್ಟೇ ಯಶ ಕಂಡಿರುವ ಇನ್ವೆಸ್ಟ್ ಕರ್ನಾಟಕದಲ್ಲಿ 30 ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯಾಗಿವೆ. ಇಂಧನ, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ, ಏರೋಸ್ಪೇಸ್‍ನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಿದ್ದು, ತ್ಯಾಜ್ಯ ನಿರ್ವಹಣೆ, ಆಟೋಮೊಬೈಲ್, ಸೇವಾ, ಕ್ರೀಡಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂದೇಟು ಹಾಕಿದ್ದಾರೆ. ಹಾಗೆಯೇ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಂಸ್ಥೆ 18,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಮೂಲಕ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಿರುವ ಸಂಸ್ಥೆ ಎನಿಸಿಕೊಂಡಿದೆ.

image


ಯಾವ ಸಂಸ್ಥೆ ಎಷ್ಟು ಬಂಡವಾಳ ಹೂಡುತ್ತಿದೆ?:

ಅದಾನಿ ಗ್ರೀನ್ ಎನರ್ಜಿ ಲಿ.: 18,500 ಕೋಟಿ ರೂ.

ಜೆಎಸ್‍ಡಬ್ಲ್ಯೂ ಸ್ಟೀಲ್ ಲಿ.: 12,396 ಕೋಟಿ ರೂ.

ಜಿಇಐಟಿಎಸ್‍ಒ ಗ್ರೀನ್ ಎನರ್ಜಿ ಪ್ರೈ.ಲಿ.: 10,000 ಕೋಟಿ ರೂ.

ಎಸ್ಸಿಲ್ ಇನ್ಫ್ರಾ ಪ್ರಾಜೆಕ್ಟ್ ಲಿ.: 7,200 ಕೋಟಿ ರೂ.

ಫಾಕ್ಸ್ ಪೆಟ್ರೋಲಿಯಂ ಲಿ.: 7,000 ಕೋಟಿ ರೂ.

ಶ್ರೀರಾಮ ಪ್ರಾಪರ್ಟಿ ಪ್ರೈ.ಲಿ.: 5,920 ಕೋಟಿ ರೂ.

ಅರಬ್ ಇನ್ವೆಸ್ಟ್‍ಮೆಂಟ್ ಗ್ರೂಪ್ ಆಂಡ್ ಸೋಲ್‍ಸ್ಪೇಸ್ ಪ್ರಾಜೆಕ್ಟ್ ಲಿ. 4,500 ಕೋಟಿ ರೂ.

ಎಸ್‍ಎಸ್‍ಎಸ್ ಆದಿತ್ಯಾ ಪವರ್ಸ್: 4,200 ಕೋಟಿ ರೂ.

ಎಸ್‍ಎಲ್‍ಆರ್ ಮೆಟಾಲಿಕ್ಸ್: 3,905 ಕೋಟಿ ರೂ.

ಸೋಲಾರ್‍ಜೈಸ್ ಇಂಡಿಯಾ ಪ್ರೈ.ಲಿ.: 3,900 ಕೋಟಿ ರೂ.

ರಾಮ್ಕೀ ಇನ್ಫ್ರಾಸ್ಟ್ರಕ್ಚರ್ ಲಿ.: 3,700 ಕೋಟಿ ರೂ.

ಟೆನಾಸಿಟಿ: 3,500 ಕೋಟಿ ರೂ.

ಪೈಪವಾವ್ ಎಲಕ್ಟ್ರಾನಿಕ್ ವರ್ಫೇರೆ ಸಿಸ್ಟಂ ಪ್ರೈ. ಲಿ.: 3,100 ಕೋಟಿ ರೂ.

ರೆಫೆಕ್ಸ್ ಎನರ್ಜಿ ಲಿ.: 3,000 ಕೋಟಿ ರೂ.

ಶ್ರೀ ವಿಷನ್ ಹೈಟೆಕ್: 3,000 ಕೋಟಿ ರೂ.

ರಿಲಯನ್ಸ್: 2,570 ಕೋಟಿ ರೂ.

ವೋಡಾಫೋನ್ ಇಂಡಿಯಾ ಲಿ.: 2,500 ಕೋಟಿ ರೂ.

ಕೆಐಒಸಿಎಲ್ ಲಿ.: 2,000 ಕೋಟಿ ರೂ.

ಜಪಾನೀಸ್ ಪಾರ್ಕ್: 2,000 ಕೋಟಿ ರೂ.

ಐಎಂಟಿಎಂಎ ಮೆಷಿನ್ ಟೂಲ್ ಪಾರ್ಕ್: 1,500 ಕೋಟಿ ರೂ.

ಕಂಣಗಲ ಇಂಡಸ್ಟಿಯಲ್ ಏರಿಯಾಅ ಬೆಳಗಾವಿ: 900 ಕೋಟಿ ರೂ.

ಹಾರೋಹಳ್ಳಿ ವುಮೆನ್ ಪಾರ್ಕ್: 300 ಕೋಟಿ ರೂ.

ಸಿಪೆಟ್ ಆರ್ ಆಂಡ್ ಡಿ ಸೆಂಟರ್: 90 ಕೋಟಿ ರೂ.

ರೀಜನಲ್ ಟೆಕ್ನಾಲಜಿ ಇನ್‍ಕಬೇಷನ್ ಸೆಂಟರ್: 40 ಕೋಟಿ ರೂ.

ಯಾವ ಕ್ಷೇತ್ರದಲ್ಲಿ ಎಷ್ಟು ಹೂಡಿಕೆ?:

ಏರೋಸ್ಪೇಸ್: 5,670 ಕೋಟಿ ರೂ.

ಬಯೋಟೆಕ್: 125 ಕೋಟಿ ರೂ.

ಸಿಮೆಂಟ್: 767 ಕೋಟಿ ರೂ.

ಕೆಮಿಕಲ್ಸ್: 87 ಕೋಟಿ ರೂ.

ಶಿಕ್ಷಣ: 50 ಕೋಟಿ ರೂ.

ಎಲೆಕ್ಟ್ರಾನಿಕ್ಸ್: 358 ಕೋಟಿ ರೂ.

ಎನರ್ಜಿ: 57,038 ಕೋಟಿ ರೂ.

ಇಂಜಿನಿಯರಿಂಗ್: 5 ಕೋಟಿ ರೂ.

ಆಹಾರ ಮತ್ತು ಕೃಷಿ: 4,093 ಕೋಟಿ ರೂ.

ಆರೋಗ್ಯ: 1,350 ಕೋಟಿ ರೂ.

ಇನ್ಪ್ರಾಸ್ಟ್ರಕ್ಚರ್: 500 ಕೋಟಿ ರೂ.

ಕೈಗಾರಿಕಾ ಇನ್ಪ್ರಾ: 5,240 ಕೋಟಿ ರೂ.

ಐಟಿ: 5,351 ಕೋಟಿ ರೂ.

ಯಂತ್ರೋಪಕರಣ: 510 ಕೋಟಿ ರೂ.

ಉತ್ಪಾದನೆ: 490 ಕೋಟಿ ರೂ.

ಗಣಿಗಾರಿಕೆ: 500 ಕೋಟಿ ರೂ.

ತೈಲ ಮತ್ತು ಅನಿಲ: 7,430 ಕೋಟಿ ರೂ.

ಔಷಧ: 300 ಕೋಟಿ ರೂ.

ರಿಯಲ್ ಎಸ್ಟೇಟ್: 8,860 ಕೋಟಿ ರೂ.

ರೀಟೆಲ್: 500 ಕೋಟಿ ರೂ.

ಸ್ಟೀಲ್: 17,834 ಕೋಟಿ ರೂ.

ಟೆಲಿಕಾಂ: 3,165 ಕೋಟಿ ರೂ.

ಟೆಕ್ಸ್‍ಟೈಲ್: 1,664 ಕೋಟಿ ರೂ.

ಪ್ರವಾಸೋದ್ಯಮ: 3,870 ಕೋಟಿ ರೂ.

ನಗರ ಮೂಲಸೌಲಭ್ಯ: 7,300 ಕೋಟಿ ರೂ.

ವೇರ್‍ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್: 120 ಕೋಟಿ ರೂ.

1201 ಯೋಜನೆಗಳು:

ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 1201 ಯೋಜನೆಗಳ ರೂಪುರೇಷೆ ಸಿದ್ಧಪಡಿಸಲಾಗಿದೆ. ಅದರಲ್ಲಿ 121 ಒಪ್ಪಂದಗಳಾಗಿವೆ. ಅಲ್ಲದೆ ರಾಜ್ಯ ಸರ್ಕಾರ ಕೈಗಾರಿಕೆ ಮತ್ತು ವಾಣಿಜ್ಯ, ಐಟಿ/ಬಿಟಿ, ಪ್ರವಾಸೋದ್ಯಮ ಹಾಗೂ ಇಂಧನ ಕ್ಷೇತ್ರದ 1080 ಯೋಜನೆಗಳಿಗೆ ಈ ಹಿಂದೆಯೇ ಒಪ್ಪಿಗೆ ನೀಡಿದೆ.

ಇದನ್ನು ಓದಿ:

1. ಇನ್ವೆಸ್ಟ್ ಕರ್ನಾಟಕದಿಂದ ಹೈಟೆಕ್ ಆಗಲಿದೆ ಬೆಂಗಳೂರು

2.ಬಂದು ನೋಡಿ... ಎಂಜಾಯ್​ ಮಾಡಿ- ಇನ್ವೆಸ್ಟ್​ ಕರ್ನಾಟಕದ ವಸ್ತು ಪ್ರದರ್ಶದಲ್ಲಿವೆ ಹಲವು ಅಚ್ಚರಿಗಳು

3.ಹೂಡಿಕೆ, ಆವಿಷ್ಕಾರ, ಉದ್ಯಮಶೀಲತೆ - ಇದು ಕರ್ನಾಟಕದ ಗರಿ