ಸ್ಯಾನಿಟರಿ ಪ್ಯಾಡ್​​ನ ಪವಾಡ ಮನುಷ್ಯ

ಟೀಮ್​​. ವೈ.ಎಸ್​​

ಸ್ಯಾನಿಟರಿ ಪ್ಯಾಡ್​​ನ ಪವಾಡ ಮನುಷ್ಯ

Tuesday September 15, 2015,

6 min Read

ಬದುಕು ಅದೆಂತಹ ಸಾಹಸಕ್ಕೆ ಬೇಕಾದ್ರೂ ದಾರಿ ತೋರಿಸುತ್ತೆ..ಬೀದಿ ಬದಿಯ ಹಣ್ಣಿನ ವ್ಯಾಪಾರಿಯನ್ನು ಆಡಳಿತದ ಸಿಂಹಸಾನದಲ್ಲಿ ಕುಳ್ಳಿರಿಸುತ್ತೆ.. ಅಪ್ಪಟ ಶ್ರೀಮಂತನನ್ನು ಬೀದಿ ಪಾಲಾಗಿಸುವ ಸಾಮರ್ಥ್ಯವನ್ನೂ ಹೊಂದಿದೆ..ಆದ್ರೆ ಈ ಕಥೆ ವಿಭಿನ್ನ..ತನಗೆ ಉಪಯೋಗವಿಲ್ದೇ ಇದ್ರೂ ಇನ್ನೊಬ್ಬರ ಉಪಯೋಗಕ್ಕಾಗಿ ಮಾಡಿದ ಸಾಹಸಗಾಥೆ..

ಹೆಸರು ಅರುಣಚಲಂ ಮುರುಗನಾಂತಮ್.. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡ್ತಿದ್ದ ಕುಟುಂಬದ ಯುವಕ.. ಸರಿಯಾದ ವಯಸ್ಸಿನಲ್ಲೇ ಶಾಂತಿ ಅನ್ನೋ ಯುವತಿಯ ಜೊತೆ ಮದುವೆ ಆಯಿತು.. ಆದ್ರೆ ಮನೆಯಲ್ಲಿ ಅನಿವಾರ್ಯತೆ ಇರೋ ವಸ್ತುಗಳನ್ನು ತರೋದಿಕ್ಕೂ ದುಡ್ಡಿಲ್ಲ.. ಅದೇನೇ ಮಾಡಿದ್ರೂ ಒಂದು ರೂಪಾಯಿ ಹುಟ್ತಾ ಇರ್ಲಿಲ್ಲ.. ಇಂತಹ ಸ್ಥಿತಿಯಲ್ಲಿದ್ದ ಮುರುಗನಾಂತಮ್ಗೆ ಅದೆನೋ ಕನಸು..

ಮುರುಗನಾಂತಮ್ ಕನಸಿಗೆ ಕಾರಣವಾಗಿದ್ದು ಮಡದಿ ಶಾಂತಿಯೇ.. ಅಂದಹಾಗೇ ಮುರುಗನಾಂತಮ್ ಮನೆಯಲ್ಲಿ ಇದ್ದಿದ್ದು ಮೂರೇ ಜನ.. ಗಂಡ ಹೆಂಡತಿ ಮತ್ತು ವಿಧವೆಯಾಗಿದ್ದ ಅಮ್ಮ.. ಒಂದು ದಿನ ಶಾಂತಿ ತನ್ನ ಗಂಡ ಮುರುಗನಾಂತಮ್​​ನಿಂದ ​​ ಅದೆನೆನ್ನೂ ಮುಚ್ಚಿಡುವ ಪ್ರಯತ್ನ ಮಾಡ್ತಿದ್ದಳು.. ಆದ್ರೆ ಮುರುಗನಾಂತಮ್ ಶಾಂತಿ ಏನು ಮುಚ್ಚಿಡ್ತಿದ್ದಳೆ ಅನ್ನೋದನ್ನ ತಿಳ್ಕೊಬೇಕಿತ್ತು..ಮಡದಿಯಾಗಿದ್ರೂ ಗದರಿಸಿ ಕೇಳುವ ಮನಸ್ಸಿರ್ಲಿಲ್ಲ. ಆದ್ರೆ ಶಾಂತಿ ಮುರುಗನಾಂತಮ್​​ನಿಂದ ಮುಚ್ಚಿಟ್ಟಿದ್ದು ಅಸಹ್ಯ ವಾಸನೆ ಬೀರುತ್ತಿದ್ದ ಮುಟ್ಟಿನ ಬಟ್ಟೆ ಅನ್ನೋದು ಗೊತ್ತಾಯಿತು..

image


ತನ್ನ ಸ್ಕೂಟರ್​​ನಲ್ಲಿ ಅಂಟಿದ್ದ ಧೂಳು ಒರೆಸೋದಿಕ್ಕೂ ನಾ ಲಾಯಕ್ ಆಗಿದ್ದ ಬಟ್ಟೆಯನ್ನು ನೋಡಿ ಮುರುಗನಾಂತಮ್ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ.. ಅದೆಷ್ಟು ಅನಾರೋಗ್ಯಕಾರಿ ಅನ್ನೋದು ಗೊತ್ತಾಗಿ ಬಿಡುತ್ತದೆ.. ತನ್ನ ಹೆಂಡತಿಗಾಗಿ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡೊದಿಕ್ಕೆ ಮುರುಗನಾಂತಮ್ ಮುಂದಾಗುತ್ತಾನೆ.. ಆದ್ರೆ ಆ ಕಾಟನ್ ಪ್ಯಾಕೆಟ್​​ನ ಬೆಲೆ ನೋಡಿ ಮುರುಗನಾಂತಮ್ ಕಂಗಾಲಾಗಿ ಬಿಡುತ್ತಾನೆ. 10ಗ್ರಾಂಗಿಂತಲೂ ಕಡಿಮೆ ತೂಕ ಹೊಂದಿದ್ದ ಆ ಹತ್ತಿಯ ಪ್ಯಾಕೆಟ್ 10 ಪೈಸೆಗೂ ಲಾಯಕ್ ಇರ್ಲಿಲ್ಲ.. ಆದ್ರೆ 40 ಪಟ್ಟು ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡುವ ಅನಿವಾರ್ಯತೆ..ಇದು ಮುರುಗನಾಂತಮ್​​ಗೆ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ತಯಾರಿಸುವ ಬಗ್ಗೆ ಹೊಸ ಯೋಚನೆ ಹುಟ್ಟು ಹಾಕುತ್ತೆ..

ಛಲ ಬಿಡದ ಮುರುಗನಾಂತಮ್ ತಾನೇ ಹತ್ತಿಯ ಸಹಾಯದಿಂದ ಸ್ಯಾನಿಟರಿ ಪ್ಯಾಡ್ ಮಾಡಿ ತನ್ನ ಅರ್ಧಾಂಗಿ ಶಾಂತಿ ಕೈಗೆ ನೀಡಿ ನಿನ್ನ ಅಭಿಮತ ತಿಳಿಸುವಂತೆ ಹೇಳ್ತಾನೆ..ಆದ್ರೆ ಶಾಂತಿ ಇದನ್ನು ಉಪಯೋಗಿಸಿ ರಿಸಲ್ಟ್ ಹೇಳ್ಬೇಕಾದ್ರೆ ಇನ್ನೂ ಒಂದು ತಿಂಗಳು ಕಾಯಬೇಕು ಅನ್ನುತ್ತಾಳೆ.. ಆದ್ರೆ ಮುರುಗನಾಂತಮ್ ಅಷ್ಟು ದಿನ ಕಾಯೋದಿಕ್ಕೆ ಸಿದ್ಧವಿರಲಿಲ್ಲ.. ಅಷ್ಟೇ ಅಲ್ಲ ಎರಡು ದಶಕಗಳನ್ನು ಕಳೆದ್ರೂ ಇದು ಆಗೋ ಹೋಗೊ ಕೆಲಸ ಅಲ್ಲ ಅಂತ ನಿರ್ಧಾರ ಮಾಡುತ್ತಾನೆ.. ಹೀಗಾಗಿ ಸ್ವಯಂ ಸೇವಕರ ಮೊರೆ ಹೋಗೋದಿಕ್ಕೆ ಮುರುಗನಾಂತಮ್ ನಿರ್ಧಾರ ಮಾಡುತ್ತಾರೆ..

ಈ ಮಧ್ಯೆ ಮುರುಗನಾಂತಮ್​​ಗೆ ಭಾರತದ ಹಳ್ಳಿಗಳಲ್ಲಿ ಕೇವಲ 10% ಮಹಿಳೆಯರು ಮಾತ್ರ ಆರೋಗ್ಯಕಾರಿ ಸ್ಯಾನಿಟರಿ ಪ್ಯಾಡ್ ಬಳಸ್ತಾರೆ ಅನ್ನೋದು ಗೊತ್ತಾಗಿ ಬಿಡುತ್ತದೆ.. 2011ರ ಎ.ಸಿ ನೀಲ್ಸನ್ ಮತ್ತು ಭಾರತ ಸರ್ಕಾರ ನಡೆಸಿದ ಸಮೀಕ್ಷೆಯಲ್ಲೂ ಕೇವಲ 12% ಮಹಿಳೆಯರು ಮಾತ್ರ ಭಾರತದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸ್ತಾರೆ ಅನ್ನೋ ಫಲಿತಾಂಶ ಸಿಗುತ್ತದೆ. ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಋತುಮತಿಯಾದಾಗ ಅನಾರೋಗ್ಯಕಾರಿ ಬಟ್ಟೆಗಳನ್ನು, ಮರದ ಎಲೆಗಳನ್ನು ಅಷ್ಟೇ ಅಲ್ಲ ಮರಳು ಮತ್ತು ಬೂದಿಗಳನ್ನು ಬಳಸುತ್ತಿದ್ದಾರೆ ಅನ್ನೋದು ಮುರುಗನಾಂತಮ್ ಮತ್ತಷ್ಟು ಶಾಕ್ ನೀಡುತ್ತದೆ.. ಭಾರತದಲ್ಲಿ 70% ಮಹಿಳೆಯರು ಅನಾರೋಗ್ಯಕಾರಿ ಬಟ್ಟೆಗಳ ಬಳಕೆಯಿಂದ ಸಮಸ್ಯೆಗೆ ಒಳಪಡುತ್ತಾರೆ ಅನ್ನೋ ಸತ್ಯವೂ ಮುರುಗನಾಂತಮ್ ಮನಸ್ಸನ್ನು ಕಾಡುತ್ತದೆ..

image


ಮುರುಗನಾಂತಮ್ ತಯಾರಿಸಿದ್ದ ಸ್ಯಾನಿಟರಿ ಪ್ಯಾಡ್ ಬಳಕೆಗೆ ಮನೆಯಲ್ಲಿದ್ದ ಸಹೋದರಿಯೇ ಮನಸ್ಸು ಮಾಡೋದಿಲ್ಲ.. ವರ್ಕ್ ಶಾಪ್ ಕೆಲಸಗಾರನೊಬ್ಬ ಕಾಲೇಜು ಹುಡುಗೀರ ಬಳಿ ತಾನು ತಯಾರು ಮಾಡಿರುವ ಕಚ್ಚಾ ಹತ್ತಿಯ ಸ್ಯಾನಿಟರಿ ಪ್ಯಾಡ್ ಬಳಸಿ ಅಂತ ಕೇಳಿಕೊಳ್ಳುವ ಹಾಗೂ ಇಲ್ಲ.. ಹಾಗೂ ಹೀಗೂ ಒಂದಿಪ್ಪತ್ತು ಹುಡುಗೀರಿಗೆ ಮುರುಗನಾಂತಮ್ ತನ್ನ ಅನ್ವೇಷಣೆ ಬಗ್ಗೆ ಮನದಟ್ಟು ಮಾಡಿಕೊಟ್ಟು ಅಭಿಪ್ರಾಯ ತಿಳಿಸಲು ಹೇಳಿಬಡುತ್ತಾನೆ.. ಆದ್ರೆ ಅದ್ರ ಫಲಿತಾಂಶ ಮುರುಗನಾಂತಮ್ ಅನ್ವೇಷಣೆಗೆ ಸಹಕಾರಿ ಆಗಲಿಲ್ಲ.. ಹೀಗಾಗಿ ತಾನೇ ಸ್ಯಾನಿಟರಿ ಪ್ಯಾಡ್​​ನ್ನು ತೊಟ್ಟುಕೊಂಡು ಪ್ರಯೋಗ ಮಾಡಲು ನಿರ್ಧಾರ ಮಾಡುತ್ತಾನೆ..

ಒಬ್ಬಂಟಿಯಾಗಿದ್ದ ಮುರುಗನಾಂತಮ್ ಒಂದು ಚಿಕ್ಕ ಸಹಾಯ ಮಾಡಲು ಗೆಳೆಯನೊಬ್ಬ ಸಿಗುತ್ತಾನೆ..ಮಾಂಸದ ವ್ಯಾಪಾರಿ ಆಗಿದ್ದ ಆತ ಮುರುಗನಾಂತಮ್ ಮನೆಯ ಮುಂದೆ ಬಂದು ಸೈಕಲ್ ಬೆಲ್ ಹೊಡಯುತ್ತಾನೆ..ಅಷ್ಟೇ ಅಲ್ಲ ಮೇಕೆಯನ್ನು ಕಡಿದು ಅದ್ರ ರಕ್ತವನ್ನು ಒಂದು ಬಾಟಲ್​​ನಲ್ಲಿ ಹಾಕಿ ಮುರುಗನಾಂತಮ್ ಕೈಗೆ ನೀಡುತ್ತಿದ್ದ.. ಇಲ್ಲಿಂದ ಮುರುಗನಾಂತಮ್ ಪ್ರಯೋಗ ಮೊದಲ ಹೆಜ್ಜೆ ಇಡುತ್ತದೆ.. ಫುಟ್ಬಾಲ್​​ನ ಟ್ಯೂಬ್ ಒಂದಕ್ಕೆ ಎರಡುಮೂರು ತೂತು ಮಾಡಿ ಮೇಕೆಯ ರಕ್ತವನ್ನು ಮತ್ತು ಅದಕ್ಕೆ ಸಂಯೋಜನೆ ಆಗೋ ಧ್ರವವನ್ನು ತುಂಬಿ ತನ್ನದೇ ಸ್ಯಾನಿಟರಿ ಪ್ಯಾಡ್​​ನ ಪ್ರಯೋಗಕ್ಕೆ ಮುಂದಾಗುತ್ತಾನೆ.. ಅಷ್ಟೇ ಅಲ್ಲ ಪ್ರಯೋಗಿಕ ಬಟ್ಟೆ ಯಾವುದೇ ಕಾರಣಕ್ಕೂ ಒದ್ದೆಯಾಗದಂತೆ ಮತ್ತು ವಾಸನೆ ಬಾರದಂತೆ ಟೆಸ್ಟಿಂಗ್ ಆರಂಭಿಸುತ್ತಾನೆ..

ತನ್ನ ಪ್ರಾಯೋಗಿಕ ಸ್ಯಾನಿಟರಿ ಪ್ಯಾಡ್​​ನ್ನು ಬಳಸಿಕೊಂಡು ಮುರುಗನಾಂತಮ್ ವಾಕಿಂಗ್, ಸೈಕ್ಲಿಂಗ್ ಮತ್ತು ಓಟವನ್ನು ಪೂರೈಸುತ್ತಾನೆ.. ಒಂದೆರಡು ದಿನಗಳ ವೈಫಲ್ಯಗಳ ಬಳಿಕ ಮುರುಗನಾಂತಮ್ ಅದನ್ನು ಸರಿಪಡಿಸಿಕೊಳ್ಳುತ್ತಾನೆ.. ಅನಾರೋಗ್ಯಕಾರಿ ಬಟ್ಟೆಗಳ ಬದಲು ತನ್ನದೇ ಸ್ಟೈಲ್​​ನ ಡಿಸೈನ್​​ನ ಸ್ಯಾನಿಟರಿ ಪ್ಯಾಡ್​​ನ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳುತ್ತಾನೆ.. ಪ್ರಯೋಗಕ್ಕೆ ಬಳಸಿದ ಬಟ್ಟೆಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಒಗೆದು ಒಣಗಿಒಸುತ್ತಾನೆ. ಮುರುಗನಾಂತಮ್​​ನ ಈ ಅವತಾರಗಳನ್ನು ಗಮನಿಸಿದ ಗೆಳೆಯರೆಲ್ಲರೂ ಈತನೊಬ್ಬ ಸೆಕ್ಸುವಲ್ ಸೈಕೋ ಅಂತ ನಿಂದಿಸುತ್ತಾರೆ.. ಅಷ್ಟೇ ಅಲ್ಲ ವಿಕೃತಕಾಮಿ ಅನ್ನೋ ಪಟ್ಟವೂ ಇತರರಿಂದ ಸಿಗುತ್ತದೆ.

ಈ ಮಧ್ಯೆ ಮದುವೆಯಾಗಿ ಕೇವಲ 18 ತಿಂಗಳು ಮಾತ್ರ ಆಗಿತ್ತು.. ಶಾಂತಿಗೆ ಗಂಡನ ಈ ಹುಚ್ಚಾಟ ತಡೆಯೋಕೆ ಆಗದೆ ತವರು ಮನೆ ಸೇರಿಕೊಳ್ಳುತ್ತಾಳೆ.. ಅಮ್ಮ ಕೂಡ ದೂರವಾಗುತ್ತಾರೆ.. ಆದ್ರೆ ಮುರುಗನಾಂತಮ್ ಸ್ಯಾನಿಟರಿ ಪ್ಯಾಡ್ ಪ್ರಯೋಗದ ಕನಸು ದೂರವಾಗೋದಿಲ್ಲ.. ಅಷ್ಟೇ ಅಲ್ಲಈ ಪ್ರಯೋಗಕ್ಕೆ ಮತ್ತೊಂದು ಆ್ಯಂಗಲ್ ಕೂಡ ಸಿಗುತ್ತದೆ.. ಬಳಕೆಯಾದ ಸ್ಯಾನಿಟರಿ ಪ್ಯಾಡ್​​​​ನ ಉಪಯೋಗದ ಬಗ್ಗೆಯ ಕಲಿಕೆ, ಮೊದಲ ಪ್ರಯೋಗಕ್ಕಿಂತಲೂ ಅನಾಹುತಕಾರಿಯಾಗಿತ್ತು..ಹಳ್ಳಿ ಹೆಂಗಸರ ಕೂದಲು ಕೇಳಿದ್ರೆ ಅದೇನೋ ಮಾಟ ಮಾಡ್ತಾನೆ ಅನ್ನೋ ಮನಸ್ಥಿತಿಯಲ್ಲಿದ್ದವರು ಮುರುಗನಾಂತಮ್​​ನ ಪ್ರಯೋಗಕ್ಕೆ ಸಾಥ್ ನೀಡೋದಿಕ್ಕೆ ಸಿದ್ಧವಿರಲಿಲ್ಲ..

ಆದ್ರೆ ಹಿಡಿದ ಕೆಲಸವನ್ನು ಬಿಡುವ ಮನಸ್ಥಿತಿ ಮುರುಗನಾಂತಮ್​ ನಲ್ಲಿರಲಿಲ್ಲ.. ಮೆಡಿಕಲ್ ಕಾಲೋಜ್ ಒಂದರ ಸಹಾಯದಿಂದ ಬಳಕೆಯಾಗಿದ್ದ ಸ್ಯಾನಿಟರಿ ಪ್ಯಾಡ್ ಮುರುಗನಾಂತಮ್ ಕೈ ಸೇರುತ್ತದೆ.. ಆದ್ರೆ ಏಕಾಂಗಿಯಾಗಿದ್ದ ಮುರುಗನಾಂತಮ್ ತನ್ನ ಆಹಾರವನ್ನು ತಾನೇ ಬೇಯಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ಬಿಟ್ಟಿರುತ್ತಾನೆ.. ಆದ್ರೆ ಮುರುಗನಾಂತಮ್ ವಾಸವಾಗಿದ್ದ ಹಳ್ಳಿಯ ಪರಿಸ್ಥಿತಿ ವಿಕೋಪಕ್ಕೆ ಹೋಗಿರುತ್ತದೆ.. ಅದ್ಯಾವುದೋ ದುಷ್ಟ ಶಕ್ತಿಯ ಪ್ರಭಾವಕ್ಕೆ ಒಳಗಾಗಿರುವ ಮುರುಗನಾಂತಮ್​ನನ್ನು ತಲೆಕೆಳಗೆ ಮಾಡಿ ಮರಕ್ಕೆ ಕಟ್ಟಿಹಾಕಿದ್ರೆ ಈ ರೋಗ ಗುಣವಾಗುತ್ತೆ ಅನ್ನೋದು ಹಳ್ಳಿಯವ್ರ ವಾದವಾಗಿತ್ತು.. ಇದು ಗೊತ್ತಾಗಿದ್ದೇ ತಡ ಮುರುಗನಾಂತಮ್ ಹಳ್ಳಿ ಬಿಡಲು ನಿರ್ಧಾರ ಮಾಡಿದ.. ಅಲ್ಲಿಗೆ ಪ್ರೀತಿಸಿದ್ದ ಹೆಂಡತಿ, ವಾತ್ಸಲ್ಯ ನೀಡಿದ್ದ ಅಮ್ಮ.. ಕೊನೆಗೆ ಹುಟ್ಟಿ ಬೆಳೆದ ಹಳ್ಳಿ ಕೂಡ ಮುರುಗನಾಂತಮ್ ಪಾಲಿಗೆ ಮುಗಿದ ಅಧ್ಯಾಯವಾಗಿತ್ತು..

ಇಷ್ಟೆಲ್ಲಾ ಆದ್ರೂ ಮುರುಗನಾಂತಮ್ ತನ್ನ ಗುರಿಯನ್ನು ಕೈ ಬಿಟ್ಟಿರಲಿಲ್ಲ.. ಸಾಧ್ಯವಿದ್ದ ಎಲ್ಲಾ ಲ್ಯಾಬ್ ಟೆಸ್ಟ್​​ಗಳನ್ನು ನಡೆಸಿದ.. ಕೊನೆಗೆ ತಾನು ಬಳಸುತ್ತಿದ್ದ ಕಾಟನ್ ಉಪಯೋಗಕ್ಕೆ ಬರೋದಿಲ್ಲ ಅನ್ನೋ ಸತ್ಯ ಗೊತ್ತಾಗುತ್ತದೆ.. ಮಲ್ಟಿ ನ್ಯಾಷನಲ್ ಕಂಪನಿಗಳನ್ನು ಸಂಪರ್ಕಿಸುವ ದಾರಿ ಗೊತ್ತಿರಲಿಲ್ಲ..ಅಷ್ಟೇ ಅಲ್ಲ ತನ್ನಉದ್ದೇಶ ತಿಳಿಸಿದ್ರೂ ಅದು ಉಪಯೋಗಕ್ಕೆ ಬರ್ತಾ ಇರ್ಲಿಲ್ಲ.. ಆದ್ರೆ ಮುರುಗನಾಂತಮ್ ನೆರವಿಗೆ ಕಾಲೇಜ್ ಪ್ರೊಫೆಸರ್ ಒಬ್ರು ಸಿಗುತ್ತಾರೆ.. ಇಂಗ್ಲೀಷ್ ಬಾರದ ಮುರುಗನಾಂತಮ್​ಗೆ ಸಹಾಯ ಮಾಡುತ್ತಾರೆ.. ಎಂಎನ್​ಸಿ ಗಳ ಜೊತೆ ಫೋನ್ ಮೂಲಕ ಸಂಪರ್ಕಿಸಿ ಸಹಾಯ ಕೇಳುತ್ತಾರೆ.. ಮುರುಗನಾಂತಮ್ ಫೋನ್ ಬಿಲ್ 7000 ರೂಪಾಯಿಗಳ ಗಡಿ ದಾಟಿದ್ರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕಟ್ಟ ಕಡೆಗೆ ಮುರುಗನಾಂತಮ್ ಸಾಹಸಕ್ಕೆ ದೇವರು ಕೂಡ ಒಲಿದು ಬಿಟ್ಟ.. ಮುರುಗನಾಂತಮ್ ಕನಸಿನ ಪ್ರಾಜೆಕ್ಟ್ ಪ್ಲಾಂಟ್​ಗೆ ಏನೇನು ಬೇಕು ಅನ್ನೋದು ಗೊತ್ತಾಗಿ ಹೋಯಿತು..

ಈ ಮಧ್ಯೆ ಕೊಯಮತ್ತೂರಿನ ಟೆಕ್ಸ್​​ಟೈಲ್​​​ ಮಾಲೀಕನೊಬ್ಬ ತನ್ನ ಬ್ಯುಸಿನೆಸ್​​ನ್ನು ಇಂಪ್ರೂ ಮಾಡುವ ಯೋಚನೆಯಲ್ಲಿದ್ದ.. ಆತನನನ್ನು ಬೇಟಿ ಮಾಡಿದ ಮುರುಗನಾಂತಮ್ ತನ್ನ ಪ್ರಯೋಗ ಮತ್ತು ಅನ್ವೇಷಣೆಗಳ ಬಗ್ಗೆ ತಿಳಿಸಿಬಿಟ್ಟ.. ಆದ್ರೆ ಅವನಿಂದಲೂ ಪಾಸಿಟಿವ್ ರಿಪ್ಪೈ ಬರಲಿಲ್ಲ.. ಆದ್ರೆ ಕೆಲ ದಿನಗಳ ನಂತ್ರ ತನ್ನ ಎರಡೂವರೆ ವರ್ಷದ ಅನ್ವೇಷಣೆಗೆ ಉತ್ತರ ಸಿಕ್ಕಿತ್ತು.. ಬಾರ್ಕ್ ಮರದ ಸೆಲ್ಯುಲಸ್ ಸ್ಯಾನಿಟರಿ ಪ್ಯಾಡ್ ಹಿಂದಿನ ಅತೀ ದೊಡ್ಡ ರಹಸ್ಯ ಅನ್ನೋದು ಗೊತ್ತಾಗಿತ್ತು.. ಆದ್ರೆ ಇದನ್ನು ತಯಾರಿಸ ಬೇಕಾದ್ರೆ ದೊಡ್ಡ ದೊಡ್ಡ ಮೆಷಿನ್​​ಗಳ ಅಗತ್ಯ ಇದೆ ಅನ್ನೋದು ಮತ್ತೊಂದು ಸಮಸ್ಯೆಯಾಗಿ ಕಾಣಿಸಿಕೊಂಡಿತ್ತು.. ಹೀಗಾಗಿ ಮುರುಗನಾಂತಮ್ ತನ್ನದೇ ಆದ ಮೆಷನರಿಗಳ ಅನ್ವೇಷಣೆಗೆ ಮುಂದಾಗಿ ಬಿಡುತ್ತಾನೆ.

ನಾಲ್ಕೂವರೆ ವರ್ಷಗಳ ಪರಿಶ್ರಮದ ನಂತ್ರ ಮುರುಗನಾಂತಮ್ ಕಡಿಮೆ ಖರ್ಚಿನ ಸ್ಯಾನಿಟರಿ ಟವೆಲ್​ಗಳ ಪ್ರೊಡಕ್ಷನ್​​ನಲ್ಲಿ ಯಶಸ್ಸು ಕಾಣುತ್ತಾನೆ.. ಗ್ರೈಂಡರ್​​ನಂತಹ ಯಂತ್ರವೊಂದು ಸಾಮಗ್ರಿಗಳನ್ನು ಚಿಕ್ಕದಾಗಿ ಕತ್ತರಿಸುತ್ತದೆ.. ಮತ್ತೊಂದು ಯಂತ್ರ ಆಯತಾಕಾರದಲ್ಲಿ ಕೇಕ್ ರೀತಿಯಲ್ಲಿ ಅದನ್ನು ಸಿದ್ಧಪಡಿಸುತ್ತದೆ.. ಈ ಕೇಕ್ ಬಟ್ಟೆಯ ಪದರದ ಮೂಲಕ ಆಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ನೀಡುವ ಮೂಲಕ ಸ್ಯಾನಿಟರಿ ಪ್ಯಾಡ್​​ನ ನಿರ್ಮಾಣವಾಗುತ್ತದೆ.. ಈ ಎಲ್ಲಾ ಪ್ರೊಸೆಸ್​​ಗೆ ಬೇಕಾಗಿರೋದು ಕೇವಲ ಒಂದು ಗಂಟೆ ಮಾತ್ರ..

image


ಮುರುಗನಾಂತಮ್ ತನ್ನ ಆವಿಷ್ಕಾರದ ಬಳಿಕ ಮಹಿಳೆಯರಿಗೆ ಕೆಲಸ ಕೊಡುವ ಯೋಚನೆ ಮಾಡುತ್ತಾನೆ. ಸ್ಯಾನಿಟರಿ ಪ್ಯಾಡ್ ಬಳಕೆಯಲ್ಲಿ ಹೆಚ್ಚಳ ಮಾಡೋದಲ್ಲದೆ, ಮಹಿಳೆಯರಿಗೆ ಕೆಲಸ ಸಿಗಬೇಕು ಅನ್ನೋದು ಮುರುಗನಾಂತಮ್ ಯೋಚನೆ ಆಗಿರುತ್ತದೆ.. ತನ್ನ ಅಮ್ಮ ರಸ್ತೆ ಅಪಘಾತದಲ್ಲಿ ಮಡಿದ ಗಂಡನಿಂದಾಗಿ ಪಟ್ಟ ಕಷ್ಟ, ಮುರುಗನಾಂತಮ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು.. ಹೀಗಾಗಿ ಗ್ರಾಮೀಣ ಮಹಿಳೆಯರಿಗೆ ಕೆಲಸದ ಅನಿವಾರ್ಯತೆ ಎಷ್ಟಿರುತ್ತೆ ಅನ್ನೋದು ಗೊತ್ತಾಗಿತ್ತು.. 14ನೇ ವರ್ಷದಲ್ಲಿ ಮುರುಗನಾಂತಮ್ ಶಾಲೆಗೆ ಗುಡ್ ಬೈ ಹೇಳಿದ್ರೂ ಕನಸು ದೊಡ್ಡದಾಗಿ ಬೆಳೆದಿತ್ತು..

ಮುರುಗನಾಂತಮ್ ಕನಸಿನ ಮೆಷಿನ್​​ಗಳು ಮಹಿಳೆಯರು ಬಳಸುವಂತೆಯೇ ಸಿಂಪಲ್ ಆಗಿ ಇತ್ತು..ರೈಟ್ ಸಹೋದರರು ಮೊತ್ತ ಮೊದಲ ವಿಮಾನ ತಯಾರಿಸಿ ಹಾರಿಸಿದಷ್ಟೇ ಖುಷಿ ಮುರುಗನಾಂತಮ್​ಗೆ ಆಗಿತ್ತು.. ಮರದಿಂದ ತಯಾರಿಸಿದ ಮೊದಲ ಯಂತ್ರಗಳನ್ನು ಮದ್ರಾಸ್​ನ ಐಐಟಿಯಲ್ಲಿ ಪ್ರದರ್ಶನಕ್ಕಿಟ್ರೂ ಯಾರಿಗೂ ಧೈರ್ಯ ಬರಲಿಲ್ಲ.. ಅಷ್ಟೇ ಅಲ್ಲ ಈ ಮನುಷ್ಯ, ಎಂಎನ್​ಸಿಗಳ ಜೊತೆ ಅದು ಹೇಗೆ ಸ್ಪರ್ಧೆ ನಡೆಸಬಲ್ಲ ಅನ್ನೋ ಪ್ರಶ್ನೆ ಹುಟ್ಟುಹಾಕಿದ್ರು..

ಮುರುಗನಾಂತಮ್ ಆತ್ಮವಿಶ್ವಾಸ ದೊಡ್ಡದಿತ್ತು..ನೇಕಾರನ ಮಗನಾಗಿದ್ದಿದ್ದು ಮತ್ತೊಂದು ಎಡ್ವಾಂಟೇಜ್ ಆಗಿತ್ತು.. ತಾನಿದ್ದ ಪ್ರದೇಶದಲ್ಲಿ 446 ಯಾಂತ್ರಿಕ ನೇಯ್ಗೆ ಮೆಷಿನ್​ಗಳಿದ್ರೂ ತನ್ನ ತಂದೆ ಕೈ ಮಗ್ಗದ ಮೂಲಕ ಹೇಗೆ ಬದುಕಿದ್ರು ಅನ್ನೋದು ಗೊತ್ತಿತ್ತು.. ಹೀಗಾಗಿ ಎಂಎನ್​ಸಿಗಳ ಜೊತೆ ಸ್ಪರ್ಧೆಗೆ ಇಳಿಯದೇ ಇದ್ರೂ ಹೊಸ ಮಾರುಕಟ್ಟೆಯನ್ನು ಹುಡುಕುವ ಮತ್ತು ಅದ್ರಿಂದ ಸುಲಭವಿರುವ ಕೆಲಸ ಮಾಡಲು ಆರಂಭಿಸಿಬಿಟ್ರು..

ಈ ಮಧ್ಯೆ ಐಐಟಿ ಮದ್ರಾಸ್ ಮುರುಗನಾಂತಮ್ ಯಂತ್ರಗಳನ್ನು ನ್ಯಾಷನಲ್ ಇನ್ನೊವೇಷನ್ ಅವಾರ್ಡ್​ಗೆ ಕಳುಹಿಸಿಬಿಟ್ಟಿದ್ರು. 943 ಎಂಟ್ರಿಗಳ ಪೈಕಿ ಮುರುಗನಾಂತಮ್ ಯಂತ್ರ ಮೊದಲ ಸ್ಥಾನ ಪಡೆದಿತ್ತು..ಅನಿವಾರ್ಯ ಕಾರಣಗಳಿಂದ ಕಲಿಕೆಗೆ ಗುಡ್ ಬೈ ಹೇಳಿದ್ದ ಮುರುಗನಾಂತಮ್ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್​ರಿಂದ ಪ್ರಶಸ್ತಿ ಪಡೆಯುತ್ತಾ ಇದ್ದಂತೆ ದೊಡ್ಡ ಸುದ್ದಿಯಾದ್ರು..ಟಿವಿ ಪರದೆಯಲ್ಲಿ ಮುರುಗನಾಂತಮ್ ಸೆಲೆಬ್ರಿಟಿ ಆಗಿ ಬಿಟ್ಟಿದ್ದರು..

ಮುರುಗನಾಂತಮ್​​ನಿಂದ ದೂರವಾಗಿದ್ದವರು ಎಲ್ಲರೂ ವಾಪಾಸ್ ಆದ್ರು.. ಮಡದಿ ಶಾಂತಿ ಗಂಡನ ಆಸಕ್ತಿಯ ಬಗ್ಗೆ ಹೊಂದಿದ್ದ ಅಸಮಧಾನ ದೂರವಾಗಿತ್ತು..ಆದ್ರೆ ಮುರುಗನಾಂತಮ್ ಸುತ್ತಲಿದ್ದವರು ಈ ವ್ಯಕ್ತಿಗೆ ಅನೈತಿಕ ಸಂಬಂಧವಿದೆ ಅನ್ನೋ ಮಾತನಾಡಿದ್ರು. ಶಾಂತಿ ಮತ್ತೆ ತವರು ಸೇರಿಕೊಂಡಳು.. ಅಮ್ಮ ಕೂಡ ಕೂಡ ದೂರವಾದಳು.. ಆದ್ರೆ ಮುರುಗನಾಂತಮ್ ಮಾತ್ರ ತನ್ನ ಗುರಿಯನ್ನು ಬದಲಿಸಿರಲಿಲ್ಲ.. ಮುರುಗನಾಂತಮ್ ತಯಾರಿಸಿದ್ದ ಯಂತ್ರಕ್ಕೆ ಪೇಟೆಂಟ್ ಕೂಡ ಸಿಕ್ಕಿತ್ತು..ಯಾವುದಾದರೂ ಇನ್ವೆಷ್ಟರ್ ಮೂಲಕ ಲಾಭ ಗಳಿಸುವ ಯೋಚನೆ ಮಾಡಬಹುದಿತ್ತು.. ಆದ್ರೆ ಬಡತನದಲ್ಲಿ ಬೆಂದ ಅನುಭವಿದ್ದ ಮುರುಗನಾಂತಮ್ ಲಾಭದ ಯೋಚನೆಯನ್ನು ದೂರ ಇಟ್ರು..

ಮುಂದಿನ 18 ತಿಂಗಳುಗಳಲ್ಲಿ ಮುರುಗನಾಂತಮ್ 250 ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡಿದ್ರು..ಉತ್ತರ ಭಾರತದ ಬಿಹಾರ, ಉತ್ತರಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನದಂತಹ ಹಿಂದುಳಿದ ರಾಜ್ಯಗಳಿಗೆ ಈ ಯಂತ್ರಗಳನ್ನು ಮಾರಾಟಮಾಡಿದ್ರು..ಈ ಮೂಲಕ ಮಹಿಳೆಯರ ಋತುಚಕ್ರದ ಬಗ್ಗೆ ಇದ್ದ ಸಮಸ್ಯೆಗಳನ್ನು ನಿವಾರಿಸೋದಿಕ್ಕೆ ಪ್ರಯತ್ನ ಮಾಡಿದ್ರು.. ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಇದ್ದ ಸುಳ್ಳುಗಳನ್ನು ದೂರ ಮಾಡಿದ್ರು.. ಸದ್ಯಕ್ಕೆ 23 ರಾಜ್ಯಗಳ 1300ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮುರುಗನಾಂತಮ್ ಸ್ಯಾನಿಟರಿ ಪ್ಯಾಡ್ ಯಂತ್ರ ಬಳಕೆಯಲ್ಲಿದೆ..

image


ಮುರುಗನಾಂತಮ್ ಸಾಧನೆಯ ಹಿಂದೆ ಸದ್ಯ ಹಲವು ಎನ್​​ಜಿಒಗಳು ಕೂಡ ಕೈ ಜೋಡಿಸಿವೆ..ಒಂದು ಮ್ಯಾನ್ಯುವಲ್ ಮೆಷಿನ್ 75000 ರೂಪಾಯಿಗಳಿಗೆ ಕೈಗೆ ಸಿಕ್ಕಿದ್ರೆ, ಸೆಮಿ ಆಟೋಮೆಟೆಡ್ ಮೆಷಿನ್ ಕೊಂಚ ದುಬಾರಿ ಆಗಿದೆ.. ಪ್ರತೀ ಮೆಷಿನ್​ಗಳು 10 ಹೆಂಗಸರಿಗೆ ಉದ್ಯೋಗ ಕಲ್ಪಿಸಿದ್ರೆ, 200ರಿಂದ 250 ಪ್ಯಾಡ್​ಗಳು ಪ್ರತಿದಿನ ನಿರ್ಮಾಣವಾಗುತ್ತದೆ.. ಇದ್ರ ಬೆಲೆಯೂ ಅತ್ಯಂತ ಕಡಿಮೆ.. ಸರಿಸುಮಾರು 2.50 ರೂಪಾಯಿಗೆ ಈ ಪ್ಯಾಡ್​ಗಳು ಕೈಗೆಟಕುತ್ತಿವೆ..

ಮುರುಗನಾಂತಮ್ ಸಾಧನೆ ಬಗ್ಗೆ ಸರ್ಕಾರ ಕೂಡ ಗಮನ ಕೊಟ್ಟಿದೆ.. ಅದ್ಯಾವುದೋ ಎಂಎನ್​ಸಿ ಅಕೌಂಟ್​​ಗೆ ದುಡ್ಡು ಜಮಾಯಿಸುವ ಬದಲು ನಮ್ಮದೇ ಸ್ಯಾನಿಟರಿ ಪ್ಯಾಡ್ ಘಟಕದ ಲಾಭ ಪಡೆದ್ರೆ ಅದೆಷ್ಟು ಲಾಭ ಆಗಲಿದೆ ಅನ್ನೋದನ್ನ ನಾವೂ ಅರಿತುಕೊಂಡ್ರೆ ಅದೆಷ್ಟೋ ಮುರುಗನಾಂತಮ್​​ಗಳು ನಮ್ಮಲ್ಲೂ ಕಾಣಸಿಗಬಹುದು.