ರಿಂಗ್ ರೋಡ್ ಸುಗಮ ಸಂಚಾರಕ್ಕೆ 25 ಸ್ಟೈವಾಕರ್​

ಎನ್​ಎಸ್​ಆರ್​

ರಿಂಗ್ ರೋಡ್ ಸುಗಮ ಸಂಚಾರಕ್ಕೆ   25 ಸ್ಟೈವಾಕರ್​

Thursday March 03, 2016,

2 min Read

ರಿಂಗ್ ರೋಡ್​​ನಲ್ಲಿ ಸವಾರಿ ಹೋಗುವುದೇ ಉದ್ಯಮನಗರದ ನಿವಾಸಿಗಳಿಗೆ ಅಚ್ಚು ಮೆಚ್ಚಿನ ವಿಷಯ. ಯಾವುದೇ ತೊಂದರೆಯಿಲ್ಲದೆ. ಟ್ರಾಫಿಕ್ ಸಿಗ್ನಲ್ ಕಿರಿಕಿರಿಯಿಲ್ಲದೆ ಒಂದೇ ಸಮನೆ ರಸ್ತೆಯಲ್ಲಿ ಸಾಗಬಹುದು. ನೆಮ್ಮದಿ, ನಿಟ್ಟುಸಿರಿನ ಸುಗಮ ಸಂಚಾರಕ್ಕೆ ರಿಂಗ್ ರೋಡ್ ತುಂಬಾ ಫೇಮಸ್. ಆದ್ರೆ , ರಿಂಗ್ ರೋಡ್​​ನಲ್ಲಿ ರಸ್ತೆ ದಾಟೊ ಪಾದಚಾರಿಗಳಿಗೆ ಮಾತ್ರ ಕೊಂಚ ಕಿರಿಕಿರಿಯಾಗುತ್ತದೆ. ಸದ್ಯ ರಿಂಗ್ ರೋಡ್ ಪಾದಚಾರಿಗಳಿಗೂ ಖುಷಿ ಆಗಲಿದೆ. ನಗರದ ರಿಂಗ್ ರಸ್ತೆಯಲ್ಲೇ ಬರೋಬ್ಬರಿ 25 ಸ್ಕೈವಾಕಗಳು ತಲೆಯೆತ್ತುತ್ತಿವೆ. ಹಾಗಾಗಿ ಪಾದಾಚಾರಿಗಳು ಕೂಡ ಇನ್ಮುಂದೆ ಸುಗಮವಾಗಿ ರಸ್ತೆ ದಾಟಬಹುದಾಗಿದೆ.

image


ಬೆಂಗಳೂರಿನ ರಿಂಗ್ ರೋಡ್​​ಗಳಲ್ಲಿ ವಾಹನಗಳದೇ ಅವಾಜ್, ಕಣ್ಣು ಮೀಟುಕಿಸುವುದರೊಳಗೆ ಕಿಲೋಮೀಟರ್ ದೂರ ಸಾಗುವಂತಹ ವಾಯುವೇಗದಲ್ಲಿ ಸಾಗೊ ವಾಹನಗಳು ನಮ್ಮಗೆ ಕಾಣುತ್ತವೆ. ಇಂತಹ ರಸ್ತೆಗಳಲ್ಲಿ, ವೇಗದ ವಾಹನಗಳಿಗೆ ಚಾಲೆಂಜ್ ಮಾಡಿ ರಸ್ತೆ ದಾಟೋದು ನಿಜಕ್ಕೂ ಸವಾಲಿನ ಸಂಗತಿ. ಹಲವರಿಗೆ ಇದು ಪ್ರತಿನಿತ್ಯ ಒಂದು ಚಾಲೆಂಜಿಂಗ್ ಕೆಲಸವಾಗಿಬಿಟ್ಟಿದೆ. ರಸ್ತೆ ದಾಟಲು ಹೋಗಿ ಪ್ರಾಣ ಬಿಟ್ಟವರು, ಆಸ್ಪತ್ರೆ ಸೇರಿದವರು, ಸಣ್ಣಪುಟ್ಟ ಗಾಯಕ್ಕೆ ಒಳಗಾದವರು ಅದೇಷ್ಟು ಜನರು ಲೆಕ್ಕವಿಲ್ಲ. ಆದರೆ ಈಗ ಪಾದಚಾರಗಳಿಗೂ ಒಂದು ಸಂತಸದ ಸಂಗತಿ ಇಲ್ಲಿದೆ. ರಸ್ತೆ ದಾಟುವವರ ಒತ್ತಡವನ್ನು ಕಡಿಮೆ ಮಾಡಲು ನಗರದ ರಿಂಗ್ ರೋಡ್ನಲ್ಲಿ 25 ಸ್ಕೈವಾಕ್​ಗಳು ತಲೆಯೆತ್ತುತ್ತಿವೆ.

ಹೊರವರ್ತುಲ ರಸ್ತೆಯ ಮೊದಲ ಸ್ಕೈವಾಕ್ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಶೇ.95 ರಷ್ಟು ಕೆಲಸವನ್ನ ಮುಗಿಸಿ ರೆಡಿಯಾಗಿದೆ. ಬಿಡಿಎ ಹಾಗೂ ಮಾನ್ಯತಾ ಟೆಕ್ ಪಾರ್ಕ್ ಸಹಭಾಗಿತ್ವದಲ್ಲಿ 60 ಲಕ್ಷ ವೆಚ್ಚದಲ್ಲಿ ಈ ಸ್ಕೈವಾಕ್ ರೆಡಿಯಾಗುತ್ತಿದೆ. ಉಳಿದಂತೆ ದೇವರಬೀಸನಹಳ್ಳಿಯ ಇಕೋಸ್ಪೇಸ್ ಮುಂಭಾಗ , ಇಬ್ಬಲೂರು ಜಂಕ್ಷನ್, ಮಾರತ್‌ಹಳ್ಳಿಯ ಇನ್ನೋವೇಟಿವ್ ಮಲ್ಟಿಪೆಕ್ಸ್ ಬಳಿ, ಕಾಡುಬೀಸನಹಳ್ಳಿಯ ನ್ಯೂ ಹೊರೈಜನ್ ಕಾಲೇಜ್ , ಮಾರತ್‌ಹಳ್ಳಿಯ ಕಲಾ ಮಂದಿರ , ಎಚ್‌ಎಸ್‌ಆರ್ ಲೇಔಟ್ಯ ಸ್ವಾತಿ ರೆಸ್ಟೋರೆಂಟ್ ಬಳಿ , ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣ, ಬಿಇಎಲ್ ಕೆಳಸೇತುವೆ, ಕಂಠೀರವ ಸ್ಟುಡಿಯೋ ಜಂಕ್ಷನ್, ನಾಗರಬಾವಿ 1ನೇ ಹಂತದ ಐಟಿಐ ಬಡಾವಣೆ , ಬಾಬುಸಾಬ್‌ ಪಾಳ್ಯ, ಕಮ್ಮನಹಳ್ಳಿ ಜಂಕ್ಷನ್ ಸಮೀಪದ ಕಲ್ಯಾಣ ನಗರ, ಕೃಷ್ಣರಾಜಪುರಂದ ಸಂತೆ ಮೈದಾನ , ರಾಮಮೂರ್ತಿನಗರ, ಕಸ್ತೂರಿ ನಗರ, ದೇವಿನಗರ ಕ್ರಾಸ್, ಹೆಬ್ಬಾಳ ಬಳಿ ಯೋಗೇಶ್ ನಗರ ಕ್ರಾಸ್, ಲುಂಬಿನಿ ಗಾರ್ಡ್‌ನ್, ಎಚ್‌ಬಿಆರ್ ಬಡಾವಣೆಯ ಅಂಬೇಡ್ಕರ್ ಮೈದಾನ ಬಳಿ, ಬಾಣಸವಾಡಿ ಕೆಳಸೇತುವೆ, ವಿಜಯಾ ಬ್ಯಾಂಕ್ ಕಾಲೋನಿ, ನಾಗರಬಾವಿ 2ನೇ ಹಂತದ ರವಿ ಜಿಮ್ ಬಳಿ ಮತ್ತು ಸುಮನಹಳ್ಳಿ ಸ್ಕೈವಾಕ್ಗಳು ಬರಲಿದೆ.. ಹಲವು ವರ್ಷಗಳು ಬೆಂಗಳೂರಿನ ಸುತ್ತಲು ಇರೊ 65 ಕಿಮೀ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ಪಾದಚಾರಿಗಳು ರಸ್ತೆ ದಾಟಲು ಒದಾಡುತ್ತಿದ್ರು, ರಿಂಗ್ ರಸ್ತೆ ದಾಟುವುದೆ ಒಂದು ಹರಸಾಹಸವಾಗಿತ್ತು. ಸದ್ಯ ರಿಂಗ್ ರೋಡ್​​ನಲ್ಲಿ ಸ್ಕೈವಾಕ್​ಗಳು ಬರುತ್ತಿರುವುದರಿಂದ, ಪಾದಚಾರಿಗಳು ಮತ್ತು ವಾಹನ ಸವಾರರು ಕೂಡ ಸಂತಸಗೊಂಡಿದ್ದಾರೆ..

image


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2016ರ ಸಾಲಿನಲ್ಲಿ ಈ ಎಲ್ಲ ಸ್ಕೈವಾಕ್​ಗಳನ್ನ ಮುಗಿಸಲು ಡೆಡ್​ಲೈನ್ ಹಾಕಿಕೊಂಡಿದೆ. ಎಲ್ಲರೂ ಸಹಕರಿಸಿದ್ದಲ್ಲಿ ಆದಷ್ಟೂ ಬೇಗ ನಾವು ಅಂದುಕೊಂಡಂತೆ, ಎಲ್ಲ ಸ್ಟೈವಾಕ್​​ಗಳನ್ನು ಮುಗಿಸಲಿದ್ದೇವೆ ಎಂತಾರೆ. ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ. ಸ್ಕೈವಾಕ್​​ಗಳನ್ನು ನಿರ್ಮಿಸಲು ಜನರ ಸಹಕಾರ ಕೂಡ ಅತ್ಯಗತ್ಯ. ಜನರ ಸ್ಪಂದನೆಯಿದ್ದಲ್ಲಿ ಎಲ್ಲವೂ ಬಹುಬೇಗ ಮುಗಿಯಲಿದೆ. ಈ ಎಲ್ಲ ಸ್ಕೈವಾಕ್ ಕಾಮಗಾರಿ ಮುಗಿದ್ರೆ ರಿಂಗ್ ರೋಡ್​​ನಲ್ಲಿ ಅಪಘಾತಗಳ ಸಂಖ್ಯೆ ಸಂಪೂರ್ಣವಾಗಿ ಇಳಿಮುಖವಾಗಗುವ ನಿರೀಕ್ಷೆಯಿದೆ ಅಂತಾರೆ ಮೇಯರ್.