ಗೋ ವೆಜ್, ಗೋ ಗ್ರೀನ್ ಮೂಲಮಂತ್ರ..!

ವಿಸ್ಮಯ

ಗೋ ವೆಜ್, ಗೋ ಗ್ರೀನ್ ಮೂಲಮಂತ್ರ..!

Friday February 12, 2016,

3 min Read

ಮಸಾಲೆದೋಸೆ.. ಮುಳುಬಾಗಿಲದೋಸೆ.. ಬಾಂಬೆ ಜಿಲೇಬಿ.. ಹನಿ ಜಿಲೇಬಿ ಹಾಹ.. ಹೆಸರು ಕೇಳಿದ್ರೆ ಬಾಯಲ್ಲಿ ನೀರೂರದೇ ಇರೊಲ್ಲ ಬಿಡಿ. ತಿನ್ನೋದು ಅಂದ್ರೆ ಯಾರಿಗೆ ಇಷ್ಟ ಹೇಳಿ..?ಎಲ್ಲರಿಗೂ ಬಲು ಪ್ರೀತಿ..ತಿನ್ನುವ ತಿಂಡಿ ಪೋತರಿಗಾಗಿಯೇ ಆಯೋಜಿಸಿದ್ದು ರುಚಿ ಸಂತೆ.. ಉತ್ತರದಿಂದ ಹಿಡಿದು ದಕ್ಷಿಣ ಭಾಗದವರೆಗೂ ವಿವಿಧ ಬಗೆಯ ಖ್ಯಾದಗಳು ಜನರನ್ನು ಆಕರ್ಷಿಸಿತ್ತು. ಮೂರು ದಿನಗಳ ಕಾಲ ನಡೆದ ರುಚಿಸಂತೆಯಲ್ಲಿ ಲಕ್ಷಾಂತರ ಜನ ಬಗೆ ಬಗೆಯ ತಿಂಡಿಗಳನ್ನು ಸವಿದ್ರು.

image


ಯುನಿಕ್ 360 ಕನಸಿನ ಕೂಸಾದ ರುಚಿಸಂತೆ, 3ದಿನಗಳ ಕಾಲ ಜಾತ್ರೆಯ ಸಂಭ್ರಮವನ್ನು ಆಚರಿಸಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕನ್ನಡ ಸ್ನೇಹಿತರು ಫೇಸ್‍ಬುಕ್ ಮೂಲಕ ಪರಿಚಿತರಾಗಿ ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸ ಮಾಡುವ ದಿಸೆಯಲ್ಲಿ, ಯಾವುದೇ ಹೆಸರು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜಕ್ಕಾಗಿ ದುಡಿಯುವ ಧ್ಯೇಯದೊಂದಿಗೆ ಯುನಿಕ್ 360 ಇತ್ತೀಚೆಗೆ ಸ್ಥಾಪನೆಯಾಗಿದೆ. ಈ ಸಂಸ್ಥೆ ಸೇರಿ ರುಚಿ ಸಂತೆಯನ್ನ ಆಯೋಜಿಸಿತ್ತು. ಸುಮಾರು 170ಕ್ಕೂ ಅಧಿಕ ಸ್ಟಾಲ್‍ಗಳು ನಿರ್ಮಾಣವಾಗಿತು.

ಇದನ್ನು ಓದಿ

ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !

ಇಲ್ಲಿ ಎಲ್ಲಾ ತರಹದ ಸಸ್ಯಾಹಾರಿ ಆಹಾರಗಳು ಲಭ್ಯವಿತ್ತು. ಇಂಡಿಯನ್ ಇಂದ ವೆಸ್ಟರ್ನ್​ ಫುಡ್‍ವರೆಗೂ ಎಲ್ಲ ಬಗೆಬಗೆಯ ತಿಂಡಿಗಳ ಸವಿಯನ್ನ ಜನ ಸವಿದ್ರು. ಪಡ್ಡು, ವಿವಿಧ ಬಗೆಯ ದೋಸೆ, ಇಟಲಿಯನ್ ತವಾ ಇಡ್ಲಿ, ಪಲಾವ್, ಅವರೆಕಾಳಿನ ತಿಂಡಿ ಎಲ್ಲವೂ ಲಭ್ಯವಿತ್ತು. ಬೇರೆ ಬೇರೆ ಊರುಗಳಿಂದ ಬಂದ ಮಾರಾಟಗಾರರು ಸಂತೆಯ ಕೊನೆಯ ದಿನ ನಗು ಮುಖದಿಂದ ಸಂಭ್ರಮಸಿದ್ದರು. ಆಯಾ ಸ್ಟಾಲ್‍ಗಳು ತಿಂಡಿಗೆ ಯಾವ ಬೆಲೆ ಎಂಬ ಬೋರ್ಡ್‍ನ್ನು ನೇತು ಹಾಕಿದ್ದಾರು.

image


ವಿವಿಧ ಭಕ್ಷ್ಯಗಳನ್ನು ಸವಿಯಲು ಜನಸಾಗರವೇ ಹರಿದು ಬಂದಿತ್ತು. ರುಚಿ ಸಂತೆಯಲ್ಲಿ ಸಿಗುವ ರುಚಿ ರುಚಿಯಾದ ಖಾದ್ಯಗಳಿಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಜನರಿಂದ ಸಂತೆಗೆ ಅಭೂತಪೂರ್ವ ಸ್ವಾಗತ ಸಿಕ್ಕಿದಂತು ಸುಳ್ಳಲ್ಲ. ಇಷ್ಟದ ಬೇಕಾದ ತಾಜಾ ತಿಂಡಿಗಳನ್ನು ಸ್ಥಳದಲ್ಲೇ ಸವಿದು ಮೆಚ್ಚುಗೆ ಸೂಚಿಸಿ ತೆರಳಿದ್ದಾರು.

ಜನ ಏನು ಹೇಳುತ್ತಾರೆ..?

ಒಂದೇ ಸೂರಿನಡಿ 100ಕ್ಕೂ ಹೆಚ್ಚು ಬಗೆಯ ತಿಂಡಿಗಳ ಸವಿದು ಖುಷಿಯಾಯ್ತು. ಪ್ರತಿದಿನ ಮನೆಯ ಊಟ ತಿಂದು ತಿಂದು ಬೇಜಾರಾಗಿತ್ತು.. ಹೀಗಾಗಿ ರುಚಿ ಸಂತೆಯಲ್ಲಿ ಹೇಗಿದೆ ಅಂತ ನೋಡೊಕ್ಕೆ ಬಂದ್ವಿ. ಆದ್ರೆ ಇಲ್ಲಿನ ತಿಂಡಿಗಳಿಗೆ ನಾವಂತೂ ಫುಲ್‍ಫಿದಾ ಆಗಿದ್ದಿವಿ ಅಂತಾರೆ ಗೃಹಿಣಿ ನವ್ಯಾ. ಅಷ್ಟೇಅಲ್ಲದೇ ಮಂಗಳೂರು, ಮುಳಬಾಗಿಲು, ಧಾರವಾಡ ಸೇರಿದಂತೆ ವಿವಿಧ ಭಾಗದ ಆಹಾರದ ಸವಿಯನ್ನ ಸವಿಯೋ ಒಳ್ಳೆ ಅವಕಾಶ ಸಿಕ್ತು ಅಂತಾರೆ ನವ್ಯಾ.

ಇನ್ನು ರುಚಿ ಸಂತೆಯ ಹೆಸರು ಕೇಳಿ ಆಂಧ್ರಪ್ರದೇಶದಿಂದ, ತಮಿಳುನಾಡುನಿಂದಲ್ಲೂ ಭೋಜನ ಪ್ರಿಯರು ಬಂದಿದ್ರು.. ಇದೇ ರೀತಿ ತಿಂಗಳಿಗೊಮ್ಮೆ ಇಂತಹ ಆಹಾರ ಮೇಳಗಳು ನಡುತ್ತಿದ್ದಾರೆ ಚೆಂದ ಅನ್ನೋದು ಜನರ ಅಭಿಪ್ರಾಯ. ಮಂಗಳೂರಿನ ತರೇವಾರಿ ತಿಂಡಿಗಳಾದ ನೀರುದೋಸೆ, ಗೋಲಿ ಬಜ್ಜಿ, ಬನ್ಸ್, ಕಡುಬು ಹಾಗೂ ಉತ್ತರ ಕರ್ನಾಟಕದ ಸ್ಪೇಶಲ್ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕಾಳು ಪಲ್ಯ, ರಾಗಿ ರೊಟ್ಟಿ ಹೀಗೆ ಎಲ್ಲವೂ ಒಂದೇ ಕಡೆ ಲಭ್ಯವಿದ್ದು ಜನ್ರಲ್ಲಿ ಖುಷಿ ತಂದಿತ್ತು..

ಹೇಗಿತ್ತು ರುಚಿಸಂತೆಗೆ ಪ್ರತಿಕ್ರಿಯೆ..?

image


ಮೂರು ದಿನಗಳ ಕಾಲ ನಡೆದ ರುಚಿ ಸಂತೆಗೆ ಜನಸಾಗರವೇ ಹರಿದು ಬಂದಿತ್ತು. ಯೂನಿಕ್360 ಸಂಸ್ಥೆಯ ಮೊದಲ ಪ್ರಯತ್ನಕ್ಕೆ ಜನರು ಅದ್ಭುತ ಪ್ರತಿಕ್ರಿಯೆ ಸಿಕ್ಕಿದಂತು ಸುಳ್ಳಲ್ಲ.. ಬಹುತೇಕ ಮಂದಿ ಹೊಸ ಹೊಸ ಬಗೆಯ ತಿನಿಸುಗಳನ್ನು ಸವಿಯಲು ಆಸೆಯಿಂದ ಕೌಂಟರ್‍ಗಳನ್ನು ಹುಡುಕಿ ಮುಗಿಬೀಳುತ್ತಿದ್ದ ದೃಶ್ಯ ಕಂಡು ಬಂತು ಅಂತಾರೆ ಯೂನಿಕ್ ಸಂಸ್ಥೆಯ ಸದಸ್ಯರು. ಚಾಟ್ಸ್, ಐಸ್‍ಕ್ರೀಂಗಳತ್ತ ಮಕ್ಕಳು ಮಹಿಳೆಯರು ಮುಗಿಬಿದ್ದರೆ, ಕಾಲೇಜು ಹುಡುಗ ಹುಡುಗಿಯರ ದಂಡು ಚಾಟ್ಸ್, ಕೇಕ್‍ಅತ್ತ ಇತ್ತು. ಗೋ ವೆಜ್ ಗೋ ಗ್ರೀನ್ ಮೇಳವಾದ ಇದರಲ್ಲಿ ಸಸ್ಯಾಹಾರ ಮಾತ್ರ ಇತ್ತು. ವೈವಿದ್ಯಮಯ ರುಚಿ ಸಂತೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. 3 ದಿನಗಳ ಕಾಲ ಜನರನ್ನು ಕಂಟ್ರೋಲ್ ಮಾಡೋದೆ ದೊಡ್ಡ ಸವಾಲಾಗಿತ್ತು ಅಂತಾರೆ ಸಂಸ್ಥೆಯ ಸದಸ್ಯ ಜೀವನ್. ರುಚಿ ಸಂತೆಯ ಪ್ರವೇಶಕ್ಕೆ ದರವನ್ನು ನಿಗಧಿ ಮಾಡಲಾಗಿತ್ತು. ಇದರಿಂದ ಬಂದ ಹಣವನ್ನು ಅಂಧರ ಕಲ್ಯಾಣಕ್ಕಾಗಿ ಬಳಸಲಾಗುವುದು ಅಂತಾರೆ ವಿತರಣೆ ವ್ಯವಸ್ಥಾಪಕರಲ್ಲಿ ಒಬ್ಬರಾದ ನರೇಶ್‍ಬಾಬು.

ತಿಂಡಿಪ್ರಿಯರಿಗಾಗಿ ಆಯೋಜಿಸಿದ್ದ ರುಚಿ ಸಂತೆಗೆ ಮಹಾಪೂರವೇ ಹರಿದು ಬಂದಿತ್ತು. ಭಾನುವಾರ ಅಂತ್ಯವಾದ ಈ ಆಹಾರ ಮೇಳದಲ್ಲಿ ಯುನಿಕ್360 ಎಂಬ ಸೋಷಿಯಲ್ ನೆಟ್‍ವರ್ಕ್ ಗ್ರೂಪ್‍ನ ಸದಸ್ಯರ ಮೂಲಮಂತ್ರ ಗೋ ವೆಜ್, ಗೋ ಗ್ರೀನ್ ನಿಜಕ್ಕೂ ಸಾರ್ಥಕವಾಯಿತು. ಒಟ್ಟನ್ನಲ್ಲಿ ಮೂರು ದಿನಗಳ ಕಾಲ ನಡೆದ ಈ ಆಹಾರ ಮೇಳದಿಂದ ಮತ್ತೊಬ್ಬರ ಕಲ್ಯಾಣಕ್ಕೆ ಹಣವನ್ನು ಬಳಸುತ್ತಿರೋದು ಮೆಚ್ಚುವಂತದ್ದೇ.

ಇದನ್ನು ಓದಿ

ಕಿತ್ತು ತಿನ್ನುವ ಬಡತನದಲ್ಲೂ ಕಲಾವಿದನಾದ ಕಥೆ..!

ಸೆಲೆಬ್ರಿಟಿಗಳ ದಿಲ್ ಕದ್ದ ಹಾಜಿ ಪಾನ್ ಬೀಡಾ...

ಎತ್ತಿನ ಗಾಡಿ ಚಲಾಯಿಸಲು ಲೈಸೆನ್ಸ್ ಕೊಡ್ತಾರೆ !