'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಯಶಸ್ಸಿನ ಮಂತ್ರ

ಟೀಮ್ ವೈ.ಎಸ್. ಕನ್ನಡ

'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಯಶಸ್ಸಿನ ಮಂತ್ರ

Thursday February 11, 2016,

5 min Read

ಯೆಸ್ ಬ್ಯಾಂಕ್, ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್. ಸ್ಥಾಪನೆಯಾಗಿ 12 ವರ್ಷಗಳಲ್ಲೇ ಗ್ರಾಹಕರ ಮನಗೆದ್ದಿದೆ. ಈ ಕಥೆಯ ಹೀರೋ ಕನಸುಗಳಲ್ಲಿ ನಂಬಿಕೆ ಇಟ್ಟಿರುವ ರಾಣಾ ಕಪೂರ್. ಅವರ ವೃತ್ತಿ ಜೀವನದ ಪಯಣ ಆರಂಭವಾಗಿದ್ದು 1980ರಲ್ಲಿ. `ದಿ ಬ್ಯಾಂಕ್ ಆಫ್ ಅಮೆರಿಕ'ದಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಕರ್ತವ್ಯ ನಿರ್ವಹಿಸ್ತಾ ಇದ್ರು. 2003ರಲ್ಲಿ ಭಾರತಕ್ಕೆ ಮರಳಿದ ಅವರು ಯೆಸ್ ಬ್ಯಾಂಕ್ ಆರಂಭಿಸಿದ್ರು. ಬ್ಯಾಂಕಿಂಗ್ ವಲಯದ ಇತರರಂತೆ ಯೆಸ್ ಬ್ಯಾಂಕ್ ಕೂಡ ಉದ್ಯಮ ಜಗತ್ತಿನ ಜೊತೆಗೆ ಒಡನಾಟ ವಿಸ್ತರಿಸಲು ಕಸರತ್ತು ನಡೆಸ್ತಾ ಇದೆ. ಇತ್ತೀಚೆಗಷ್ಟೆ ಫ್ರೀಚಾರ್ಜ್ ಜೊತೆ ಒಪ್ಪಂದ ಮಾಡಿಕೊಂಡಿದೆ.

image


ಇ-ಸೆಲ್-ಐಐಟಿ ಬಾಂಬೆಯಲ್ಲಿ ನಡೆದ `ದಿ ಎಂಟರ್​ಪ್ರೆನ್ಯೂರ್​ಶಿಪ್ ಸಮಿಟ್ - 2016' ಕಾರ್ಯಕ್ರಮದಲ್ಲಿ ಯುವರ್​ಸ್ಟೋರಿ ಜೊತೆ ಮಾತನಾಡಿದ ಯೆಸ್ ಬ್ಯಾಂಕ್ ಎಂಡಿ ಮತ್ತು ಸಿಇಓ ರಾಣಾ ಕಪೂರ್, ತಮ್ಮ ಉದ್ಯಮ ಪಯಣ, ದೇವರ ಮೇಲಿನ ನಂಬಿಕೆ ಮತ್ತು ಕನಸಿನ ಶಕ್ತಿಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ..

ಬಿಲಿಯನ್ ಡಾಲರ್ ಲೇಡಿಸ್ ಕ್ಲಬ್

ಪ್ರಶ್ನೆ: ನಿಮ್ಮ ಉದ್ಯಮ ಪಯಣದ ಬಗ್ಗೆ ಹೇಳಿ.

ಆರ್​ಕೆ: ಉದ್ಯಮಶೀಲತೆಯಲ್ಲಿ ನೀವು ದೇವರ ಮೇಲೆ ಮತ್ತು ಕನಸಿನ ಮೇಲೆ ನಂಬಿಕೆ ಇಡಬೇಕು. ಕನಸು ವಾಸ್ತವವಾಗಿ ಪರಿವರ್ತನೆಯಾದರೆ ಅದು ಉದ್ಯಮಶೀಲತೆಯಾಗುತ್ತದೆ. ಅದರಲ್ಲಿ ಇನ್ನೂ ಒಂದು ಹಂತವಿದೆ. ನಿಮ್ಮನ್ನು ನೀವು ನಾಯಕನಾಗಿ ಕಲ್ಪಿಸಿಕೊಳ್ಳಬೇಕು, ಮೊದಲು ತಂತ್ರಗಾರಿಕೆ ನಂತರ ಅದರ ವಾಸ್ತವೀಕರಣ. ಮೂರನೆಯದಾಗಿ ನಿಮ್ಮ ಉದ್ಯಮ ಅತ್ಯಂತ ಭಾವನಾತ್ಮಕ ಲಬ್ಧತೆಯನ್ನು ಹೊಂದಿರಬೇಕು, ಅದು ಸಣ್ಣದಾಗಿರಲಿ, ಮಧ್ಯಮ ಗಾತ್ರದ್ದಾಗಿರಲಿ ಅಥವಾ ದೊಡ್ಡ ಉದ್ಯಮವೇ ಆಗಿರಲಿ. ಈ ಮೂಲಕ ನೀವು ಅದ್ಭುತ ಸಂಸ್ಥೆಯನ್ನು ಕಟ್ಟಿ ಬೆಳೆಸಬಲ್ಲಿರಿ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಪ್ರಶ್ನೆ: ಕನಸು ಮತ್ತು ನಾಯಕನ ದೃಶ್ಯೀಕರಣವನ್ನು ಸಂಸ್ಥೆಯ ಪ್ರತಿಯೊಬ್ಬ ಸದಸ್ಯನಿಗೂ ಹೇಗೆ ಅನುವಾದಿಸುತ್ತೀರಾ?

ಆರ್​ಕೆ : ಇದು ಸಂಸ್ಥೆಯ ಜೆನೆಟಿಕ್ಸ್​ಗೆ ಸಂಬಂಧಿಸಿದ್ದು, ಸಂಸ್ಥೆಯೊಂದರಲ್ಲಿ ಡಿಎನ್ಎಯನ್ನು ನೀವು ಹೇಗೆ ಸೃಷ್ಟಿಸುತ್ತೀರಾ ಅನ್ನೋದು ಅತ್ಯಂತ ಪ್ರಮುಖವಾದದ್ದು. ಇದು ವೇತನದಿಂದ ಸಾಧ್ಯವಾಗುವುದಿಲ್ಲ, ಇದನ್ನು ಮಾಲೀಕರು, ವ್ಯವಸ್ಥಾಪನೆ ಮತ್ತು ಪಾಲುದಾರರ ಪರಿಕಲ್ಪನೆ ಮೂಲಕ ಮಾಡಬಹುದು. ನೌಕರರ ಪಾಲುದಾರರ ಪ್ರತಿ ಹಂತ ಮತ್ತು ಮಾಲೀಕತ್ವ ನಿರ್ಮಾಣಕ್ಕೆ ಎಚ್ಆರ್ ಕಾರ್ಯತಂತ್ರಗಳು ಮಹತ್ವದ ಅಸ್ತ್ರವಿದ್ದಂತೆ. ಇದು ಕೆಳಕ್ಕಿರಲಿ ಅಥವಾ ಮಧ್ಯಮದಲ್ಲಿರಲಿ, ವಿಶೇಷವಾಗಿ ನೀವು ಪರಿವರ್ತನೆಯ ವಿಷಯದಲ್ಲಿ ತೊಡಗಿಕೊಂಡಾಗ ಸಂಸ್ಥೆಯಲ್ಲಿ ಒಳ್ಳೆಯ ಜೆನೆಟಿಕ್ಸ್ ಹೊಂದಿರುವುದು ಅತ್ಯವಶ್ಯ. ಜನರು ಸಂಸ್ಥೆ ಬಗ್ಗೆ ಹೆಮ್ಮೆಪಡಬೇಕು. ಯೆಸ್ ಬ್ಯಾಂಕ್ ಕೂಡ ಭಾರತದ ಬ್ಯಾಂಕ್ ಎಂದೇ ಕರೆಸಿಕೊಳ್ತಿದೆ. ಜನರೆಲ್ಲ ಒಗ್ಗಟ್ಟಾಗಿ ಈ ಸಂಸ್ಥೆ ನಮ್ಮದು ಎಂದು ವಿಶ್ವಾಸ ಬೆಳೆಸಿಕೊಳ್ಳುವಂತೆ ಮಾಡಲು ಜೆನೆಟಿಕ್ಸ್​ಗಳನ್ನು ಒಟ್ಟುಗೂಡಿಸಿ ಅವರನ್ನು ಪ್ರೇರೇಪಿಸಬೇಕು.

ಪ್ರಶ್ನೆ: ಉದ್ಯಮಗಳು ಮಾನವ ಸಂಪನ್ಮೂಲ ಕಾರ್ಯತಂತ್ರಗಳ ಮೇಲೆ ಹೆಚ್ಚು ಗಮನಹರಿಸುತ್ತವೆ ಎಂದು ನಿಮಗನಿಸುತ್ತದೆಯೇ?

ಆರ್​ಕೆ : ನಾನು ಬಹಳ ಸಮಯದಿಂದ ಇದನ್ನೇ ಅನುಸರಿಸುತ್ತಿದ್ದೇನೆ. ನಮ್ಮ ಸ್ಟಾರ್ಟ್ಅಪ್ಗಳೆಲ್ಲ ಉದ್ಯಮಶೀಲತಾ ಮನಸ್ಸನ್ನು ಹೊಂದಿವೆ. ಆದ್ರೆ ಮಾರಾಟ, ವಿತರಣೆ, ಆಪರೇಟಿಂಗ್ ವ್ಯವಸ್ಥೆಯ ನಿಯಂತ್ರಣ ಮುಂತಾದ ವಿಷಯಗಳಲ್ಲಿ ಮೊದಲು ಬೆನ್ನೆಲುಬನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಬಂಡವಾಳ ಸಂಗ್ರಹಣೆ ಕೇವಲ ಮಿಷನ್ ಅಲ್ಲ, ಅದನ್ನು ಸದಾ ಅನುಸರಿಸಬೇಕು. ಆದಾಯ ಸಂಗ್ರಹಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಲಾಭದ ದೃಷ್ಟಿಯಿಂದ ಇದು ಅತ್ಯಂತ ಅವಶ್ಯಕ. ನಿರ್ದಿಷ್ಟ ಸಮಯದಲ್ಲಿ ಲಾಭ ಗಳಿಸುವಿಕೆ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿರಬೇಕು. ಯಾಕಂದ್ರೆ ಹೂಡಿಕೆದಾರರು ಸದಾ ಜೊತೆಗಿರುತ್ತಾರೆ.

ಪ್ರಶ್ನೆ: ಇತ್ತೀಚೆಗಷ್ಟೆ ಪ್ರಧಾನಿ ಬಿಡುಗಡೆ ಮಾಡಿದ ಉದ್ಯಮ ನೀತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಆರ್​ಕೆ : ಹಲವು ಬಾರಿ ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೇನೆ, ನಿಜಕ್ಕೂ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಇದು ಭಾರತದ ಯುವ ಜನತೆಯಲ್ಲಿರುವ ಸುಪ್ತ ಕೌಶಲ್ಯಗಳನ್ನು ಹೊರತರುವ ಯೋಜನೆ. ದೇಶದಲ್ಲಿ ಲಕ್ಷಾಂತರ ಉದ್ಯಮಿಗಳ ಸೃಷ್ಟಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆ. ಇ-ಕಾಮರ್ಸ್, ಹಣಕಾಸು ಸೇವೆ, ತಂತ್ರಜ್ಞಾನ ಆಧಾರಿತ ಪರಿಕಲ್ಪನೆಗಳನ್ನು ವ್ಯವಸ್ಥೆಯಲ್ಲಿ ಸೋಸಿ ತೆಗೆಯಲಾಗ್ತಿದೆ. ಇದೊಂದು ದೀರ್ಘಕಾಲದ ಹಾಗೂ ಯಶಸ್ವಿಯಾಗಬಲ್ಲ ಐಡಿಯಾ ಎಂಬ ನಂಬಿಕೆ ಯುವಕರಲ್ಲಿ ಬರಬೇಕು. ಅವರ ವೃತ್ತಿ ಬದುಕು ಮತ್ತು ದೇಶದ ಉನ್ನತ ಭವಿಷ್ಯಕ್ಕೆ ಇದು ನಾಂದಿಯಾಗಲಿದೆ. ತಮ್ಮ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಪೋಷಕರಿಗೆ ನಾನು ಪ್ರೋತ್ಸಾಹ ನೀಡುತ್ತೇನೆ. ನನ್ನ ಪ್ರಕಾರ ಅಮೆರಿಕದಲ್ಲಿ ವಾಯುಮಂಡಲದ ಸ್ಥಳಾಂತರ ನಡೆಯುತ್ತಿದೆ. ಆರ್ಥಿಕ ದೌರ್ಬಲ್ಯದ ಹೊರತಾಗಿಯೂ ಅದ್ಭುತ ಯುನಿವರ್ಸಿಟಿಗಳು ಹಾಗೂ ಕಾಲೇಜುಗಳು ಇನ್ಕ್ಯುಬೇಟರ್​ಗಳಂತೆ , ಆರ್ಥಿಕತೆಯ ವೇಗವರ್ಧಕಗಳಂತೆ ಕೆಲಸ ಮಾಡುತ್ತಿವೆ. ಭಾರತಕ್ಕೂ ಅಂತಹ ವ್ಯವಸ್ಥೆಗಳ ಅಗತ್ಯವಿದೆ. ಐಐಟಿ ಮುಂಬೈ ಕೇವಲ ಬುದ್ಧಿವಂತ ಮನಸ್ಸುಗಳನ್ನು ಮಾತ್ರ ಸೃಷ್ಟಿ ಮಾಡಿಲ್ಲ, ಬದಲಾಗಿ ತಮ್ಮ ತಾಯ್ನಾಡಿನಲ್ಲಿ ಹೂಡಿಕೆ ಮಾಡಲು ಬರುವ ರಾಯಭಾರಿಗಳನ್ನು ನಿರ್ಮಾಣ ಮಾಡಿದೆ. `ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ, ರನ್ ಇಂಡಿಯಾ' ಇದು ಪ್ರಧಾನಿ ಮೋದಿ ಅವರ ಗೇಮ್ ಪ್ಲಾನ್.

ಪ್ರಶ್ನೆ: ಯೆಸ್ ಬ್ಯಾಂಕ್​ಗೆ ಕೇವಲ 12ರ ಹರೆಯ. ಈಗಾಗ್ಲೇ ಅದು ಉದ್ಯಮ ಕ್ಷೇತ್ರದ ಯುನಿಕಾರ್ನ್ ಎಂದೇ ಜನಪ್ರಿಯವಾಗಿದೆ. ಈ ಬಗ್ಗೆ ನಿಮಗೇನು ಅನಿಸುತ್ತೆ?

ಆರ್​ಕೆ: ಹೌದು, 36 ವರ್ಷಗಳ ಹಿಂದೆ ನಾನು ಅಮೆರಿಕದಿಂದ ಮರಳಿದ್ದೆ. ಎಂಬಿಎ ಮುಗಿಸಿ ಬ್ಯಾಂಕ್ ಆಫ್ ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದೆ. ವಿಶೇಷವಾಗಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಂಕ್ರಾಮಿಕ ಧನಾತ್ಮಕ ಶಕ್ತಿಯ ಅನುವಾದ ಇದು. ಸತತವಾಗಿ ಷೇರುದಾರರು, ಸ್ಟೇಕ್ಹೋಲ್ಡರ್ಗಳು, ಉದ್ಯೋಗಿಗಳು ಮತ್ತು ನಿರ್ದೇಶಕ ಮಂಡಳಿಯನ್ನು ತಲುಪುವ ಪ್ರಯತ್ನ. ನೀವು ನಿಜವಾಗಿಯೂ ಕನಸು ಕಂಡ್ರೆ ಅದನ್ನು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ. `ತಂತ್ರಗಾರಿಕೆ, ವಾಸ್ತವೀಕರಣ ಮತ್ತು ದೃಶ್ಯೀಕರಣ'ಗಳೇ ನಿಮ್ಮ ಯಶಸ್ಸಿನ ರಹಸ್ಯ ಮಂತ್ರಗಳು.

ಪ್ರಶ್ನೆ: ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ಮುನ್ನಡೆಯಲು ಬಯಸುವ ಉದ್ಯಮಿಗಳಿಗೆ ನಿಮ್ಮ ಸಲಹೆ ಏನು?

ಆರ್​ಕೆ : ಪ್ರತಿಯೊಂದು ಪ್ರತಿಕೂಲ ಸಂದರ್ಭಗಳೂ ಒಂದೊಳ್ಳೆ ಅವಕಾಶವಿದ್ದಂತೆ. ಇದು ಬಹಳ ವಿರುದ್ಧವಾದ ನೋಟ. 2008ರಲ್ಲಿ ಯೂರೋಝೋನ್ ಬಿಕ್ಕಟ್ಟು ದುಪ್ಪಟ್ಟಾಗಿದ್ದಂತಹ ಸಂದರ್ಭದಲ್ಲಿ ಯೆಸ್ ಬ್ಯಾಂಕ್ನಲ್ಲಿ ನಮ್ಮಿಂದ ಭರಿಸಲಾಗದ ಮೂಲಸೌಕರ್ಯ, ಬ್ರಾಂಡ್ ಮತ್ತು ಜಾಹೀರಾತಿನ ಕಡೆಗೆ ಹೆಚ್ಚು ಗಮನಹರಿಸಿದ್ದೆವು. ಇನ್ನಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡೆವು. ಯಾಕಂದ್ರೆ ಅದೇ ನಮ್ಮ ಜೀವನಚಕ್ರದ ರೂಪನಿಷ್ಪತ್ತಿ ಬಿಂದುವಾಗಿತ್ತು. ವಿರುದ್ಧವಾಗಿರುವುದೇನನ್ನಾದ್ರೂ ಮಾಡಲು ನಾವು ಬಯಸಿದ್ದೆವು. ಭಾರತ ಅದ್ಭುತ ಬೆಳವಣಿಗೆಯ ಕಥೆಯನ್ನು ಹೊಂದಿದೆ. ನೀವು ಅದರೊಂದಿಗೆ ತಪ್ಪಾಗಿ ನಡೆದುಕೊಳ್ಳುವುದು ಅಸಾಧ್ಯ. ಕೆಟ್ಟ ಕಲೆಗಳು, ಸ್ಪೀಡ್ ಬ್ರೇಕರ್​ಗಳಿದ್ರೂ ನಾವು ಎಕ್ಸಲರೇಟರ್​ಗಳನ್ನು ಬಳಸಿ ಉದ್ಯಮ ಮುನ್ನಡೆಸಬೇಕು.

ಪ್ರಶ್ನೆ: ನೀವು ತವರಿಗೆ ಮರಳಿದಾಗ ತುಂಬಾ ಖುಷಿಯಾಗಿರಬೇಕಲ್ವಾ? ನಿಮ್ಮ ಬದುಕಿನ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳಿ.

ಆರ್​ಕೆ : ನಾನು ಪ್ರತಿದಿನ ಯೆಸ್ ಬ್ಯಾಂಕ್ನಲ್ಲಿ ಸಂತೋಷವಾಗಿರುತ್ತೇನೆ, ಯಾಕಂದ್ರೆ ಅದು ನನಗೆ ಪ್ರೇರಣೆ ನೀಡುತ್ತದೆ. ಯೆಸ್ ಬ್ಯಾಂಕ್​ನಂತಹ ಒಂದು ಸಂಸ್ಥೆಯನ್ನು ಕಟ್ಟಿ ಮುನ್ನಡೆಸುತ್ತಿರುವುದು ನಿಜಕ್ಕೂ ಖುಷಿ ಕೊಡುವಂತಹ ವಿಚಾರ. ಭಾರತದಲ್ಲೇ ನಾವು ಕಟ್ಟಿ ಬೆಳೆಸಿದಂತಹ ಸಂಸ್ಥೆ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವುದು ಹೆಮ್ಮೆ ಉಂಟುಮಾಡುತ್ತದೆ. ಕೇವಲ ಹಣಕಾಸು ವ್ಯವಹಾರ ಮಾತ್ರವಲ್ಲ, ಸಿಎಸ್ಆರ್, ಅಪಾಯ ನಿರ್ವಹಣೆ, ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳಿಂದ ಯೆಸ್ ಬ್ಯಾಂಕ್ ಹೆಸರು ಮಾಡಿದೆ. ನನ್ನ ಪಾಲಿಗೆ ಇದು ತೃಪ್ತಿದಾಯಕ ಅಂಶ, ಮತ್ತು ಪ್ರತಿ ದಿನವೂ ಅತ್ಯಂತ ಮಹತ್ವದ್ದು.

ಪ್ರಶ್ನೆ: ಸ್ಟಾರ್ಟ್ಅಪ್ ಸಮುದಾಯದ ಜೊತೆ ಯೆಸ್ ಬ್ಯಾಂಕ್ ಏನು ಮಾಡುತ್ತಿದೆ? ಪ್ರತಿ ಬ್ಯಾಂಕ್ಗಳೂ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ.

ಆರ್​ಕೆ : ನಮ್ಮದು ಸಮಕಾಲೀನ ಬ್ಯಾಂಕ್, ಇದನ್ನು ಒಂದು ಬಾಸ್ಕೆಟ್ ಅಥವಾ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಲಾಗುತ್ತದೆ. ಈ ಎಂಜಿನ್​ನ ಬೆಳವಣಿಗೆಗೆ ನಾವು ತಟಸ್ಥತೆಯನ್ನು ಗುರುತಿಸಬೇಕು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಮತ್ತು ಭಿನ್ನವಾಗಿರುವವರನ್ನು ಗುರುತಿಸಬೇಕು. ಭಾರತದಲ್ಲಿ ವಿಭಜನೆ ಮತ್ತು ಉದ್ಯಮ ವಿಶೇಷತೆ ನಾಟಕೀಯ ಬದಲಾವಣೆ ಕಂಡಿದೆ. ನೀವೊಬ್ಬ ತಜ್ಞರಾಗಿರಬೇಕು. ನಿಮ್ಮ ಸಂಗ್ರಾಹಕ ವ್ಯಾಪಾರ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ನೀವು ತಿಳಿದುಕೊಂಡಿರಬೇಕು. ಉದ್ಯಮ ಶೀಲತೆ ವಿಷಯದಲ್ಲಿ ವಿಭಜನೆ ಬಹುಮುಖ್ಯ. ಬ್ಯಾಂಕ್ಗಳು ಬದಲಾವಣೆಯ ಬಹುದೊಡ್ಡ ರೂಪಾಂತರದ ಏಜೆಂಟ್​ಗಳು. ಆರ್ಥಿಕತೆಯ ಈ ಬಾಸ್ಕೆಟ್​ನಲ್ಲಿ ನೀವು ಅದ್ಭುತಗಳನ್ನು ಸೃಷ್ಟಿಸಬಹುದು. ನನ್ನ ಬ್ಯಾಂಕ್​ನಂತೆ ನಿಮಗೆ ನೀವು ಬದ್ಧರಾಗಿದ್ದರೆ, ತಂಡ ಹಾಗೂ ನಾಯಕತ್ವ ಎಲ್ಲ ವಲಯದಲ್ಲೂ ಬದಲಾವಣೆಗಳನ್ನು ತರಲು ಸಾಧ್ಯ. ಸಾಂಪ್ರದಾಯಿಕ ವಲಯಗಳಲ್ಲಿ ನಾವು ಅನುಯಾಯಿಗಳು, ಆದ್ರೆ ಸೂರ್ಯೋದಯ ಕ್ಷೇತ್ರದಲ್ಲಿ ನಾವೊಂದು ವಿಶೇಷ ಅಂಶ. 2020ರ ವೇಳೆಗೆ ನಾವು ಭಾರತದ ನಂಬರ್ 1 ಬ್ಯಾಂಕ್ ಆಗಿ ಗುರುತಿಸಿಕೊಳ್ಳಲಿದ್ದೇವೆ.

ಪ್ರಶ್ನೆ: ನಿಮ್ಮ ಯಶಸ್ಸನ್ನು ಹೇಗೆ ವಿವರಿಸುತ್ತೀರಾ?

ಆರ್​ಕೆ: ನನ್ನ ಪ್ರಕಾರ ಯಶಸ್ಸು ದೇಶ ನಿರ್ಮಾಣದಂತೆ, ಒಬ್ಬ ಬ್ಯಾಂಕರ್ ಆಗಿ ನಿಯಮಗಳನ್ನು ರೂಪಿಸುವ ಮೂಲಕ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದು ನನ್ನ ನಂಬಿಕೆ. ನಾವು ಅತ್ಯುತ್ತಮ ಬ್ಯಾಂಕರ್ ಹಾಗೂ ಸಂಸ್ಥೆಯಾಗಿರಬೇಕು, ರಾಷ್ಟ್ರ ಕಟ್ಟುವಲ್ಲಿ ನೆರವಾಗಬೇಕು. ದೆಹಲಿಯಲ್ಲಿ ನಮಗೆ ಒಳ್ಳೆಯ ನಾಯಕತ್ವವಿದೆ. ಒಳ್ಳೆಯ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಅವರಿಗೆ ನೆರವಾಗುವುದು ನಮ್ಮ ಕರ್ತವ್ಯ.

ಲೇಖಕರು: ಡೋಲಾ ಸಮಂತಾ

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ..

ಆರೋಗ್ಯ ಕ್ಷೇತ್ರದ ಗರಿಮೆ, ಉದ್ಯಮ ಲೋಕದ ಹಿರಿಮೆ - ನಿತ್ಯ 600 ರೋಗಿಗಳಿಗೆ ಸೇವೆ ನೀಡುತ್ತಿರೋ ಗರಿಮಾ ತ್ರಿಪಾಠಿ

ಎದೆಹಾಲು ಸಂಗ್ರಹಿಸುವ ವಿಶಿಷ್ಟ ಬ್ಯಾಂಕ್​ - 1900 ಕಂದಮ್ಮಗಳಿಗೆ ಜೀವದಾನ

ಕೇವಲ 10 ಸಾವಿರ ರೂ.ಗೆ ಎಸಿ, ವಿದ್ಯುತ್​ ಬಳಕೆ 10 ಪಟ್ಟು ಕಮ್ಮಿ - ಇದು ರಾಜಸ್ತಾನದ ಯುವಕನ ಸಾಧನೆ