ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

ಟೀಮ್​ ವೈ.ಎಸ್​. ಕನ್ನಡ

ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

Thursday July 07, 2016,

2 min Read

ಬೆಂಗಳೂರು ಬೆಳೆಯುತ್ತಾ ಬೆಳೆಯುತ್ತಾ ಸಿಲಿಕಾನ್ ಸಿಟಿ ಜನರ ಆಹಾರ ಶೈಲಿಯೂ ಬದಲಾಗಿದೆ. ಹೆಚ್ಚಾಗಿ ಸಸ್ಯಹಾರಿಗಳಾಗಿದ್ದ ಬೆಂಗಳೂರಿಗರು ಈಗ ಮಾಂಸಹಾರಿಗಳಾಗಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಬಿರಿಯಾನಿ ಕಾರ್ನರ್‍ಗಳು ಸಾಲು ಸಾಲಾಗಿ ತಲೆಯೆತ್ತಿದೆ. ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡು ಕೈರುಚಿಯನ್ನೇ ಜೀವನಾಧಾರವಾಗಿ ಮಾಡಿಕೊಂಡು ಇಂದು ತಮ್ಮದೇ ಆದ ಐಡೆಂಟಿಟಿಯನ್ನ ಬೆಳೆಸಿಕೊಂಡಿರೋರು ಮಂಡ್ಯದ ಮೂಲದ ನವೀನ್ ಗೌಡ. 20 ವರ್ಷದ ಹಿಂದೆ ಬೆಂಗಳೂರಿಗೆ ಬಂದ ನವೀನ್ ಮತ್ತು ಅವ್ರ ಸಹೋದರ ಯೋಗೇಶ್ ಬೆಂಗಳೂರಿನಲ್ಲಿ ಏನು ಮಾಡೋದು ಅನ್ನೋದನ್ನ ಯೋಚನೆ ಮಾಡುವಾಗ ನಮ್ಮಲ್ಲಿರೋ ಟ್ಯಾಲೆಂಟ್‍ ಉಪಯೋಗ ಮಾಡಿಕೊಂಡು ಏನಾದ್ರು ಮಾಡೋಣ ಅಂದುಕೊಂಡು ದೊನ್ನೆ ಬಿರಿಯಾನಿ ಮನೆಯನ್ನ ಆರಂಭ ಮಾಡಿದ್ರು

image


ಕಿಚ್ಚನ ಸಾತ್‍ ಜೀವನಕ್ಕಾಯ್ತು ದಾರಿ

ನವೀನ್ ಕೆಲವು ವರ್ಷಗಳಿಂದ ನಟ ಕಿಚ್ಚ ಸುದೀಪ್‍ ಅವ್ರ ಅಭಿಮಾನಿ . ಕೆಲ ಕಾಲ ಕಳೆದ ನಂತ್ರ ಸುದೀಪ್‍ ಅವ್ರ ಜೊತೆಯಾಗ್ತಾರೆ. ದೊನ್ನೆ ಬಿರಿಯಾನಿ ಮನೆ ಮಾಡ್ಬೇಕು ಅಂತ ಸುದೀಪ್‍ ಅವ್ರ ಬಳಿ ಹೇಳಿಕೊಳ್ತಾರೆ. ಇದಕ್ಕೆ ಸಾಥ್ ನೀಡೋ ಕಿಚ್ಚ ನವೀನ್‍ ಅವ್ರ ಪ್ರತಿಔಟ್​ಲೆಟ್​ನ್ನು ಅನ್ನ ಉದ್ಘಾಟನೆ ಮಾಡಿಕೊಡುತ್ತಾರೆ. ಇದು ನವೀನ್‍ ಅವ್ರಿಗೆ ಉದ್ಯಮದಲ್ಲಿ ಪ್ಲಸ್ ಪಾಯಿಂಟ್‍ ಆಗುತ್ತದೆ. ಯಾವುದೇ ಪಬ್ಲಿಸಿಟಿ ಇಲ್ಲದೆ ಜನರಿಗೆ ದೊನ್ನೆ ಬಿರಿಯಾನಿ ಬಗ್ಗೆ ಪರಿಚಯ ಆಗುತ್ತದೆ. ಅಷ್ಟೇ ಅಲ್ಲದೆರೆ ಸ್ಪಾನ್ಸರ್​ಗಾಗಿ ಕಾಯೋ ಅವಶ್ಯಕತೆ ಬರೋದೇ ಇಲ್ಲ. ಆರಂಭ ಆದ ಮೊದಲ ದಿನವೇ ದೊನ್ನೆ ಬಿರಿಯಾನಿ ರುಚಿಗೆ ಜನರು ಮಾರು ಹೋಗಿದ್ದರು ಅಂತ ನವೀನ್​ ತನ್ನ ಹಿಂದಿನ ಕಥೆಗಳನ್ನು ಮೆಲುಕು ಹಾಕುತ್ತಾರೆ.

ಇದನ್ನು ಓದಿ: ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

ಎಲ್ಲೂ ಸಿಗಲ್ಲ ಈ ಟೇಸ್ಟ್ ..ಯಾರು ಕದಿಯೋಕೆ ಆಗಲ್ಲ..!

ಬೆಂಗಳೂರು ಹಾಗೂ ಹೈದ್ರಾಬಾದ್ ಸೇರಿದಂತೆ ಇಂದಿಗೆ ದೊನ್ನೆ ಬಿರಿಯಾನಿಯ 9 ಔಟ್​​ಲೆಟ್​ಗಳನ್ನ ಓಪನ್ ಮಾಡಿರೋ ನವೀನ್‍ ಎಲ್ಲಾ ಔಟ್​ಲೆಟ್​ನಲ್ಲೂ ಒಂದೇ ಕ್ವಾಲಿಟಿ ಮತ್ತು ಒಂದೇ ಟೇಸ್ಟ್​ ಅನ್ನ ಮೇಂಟೈನ್ ಮಾಡುತ್ತಾ ಬಂದಿದ್ದಾರೆ. 8 ವರ್ಷಗಳಿಂದ ನಡೆಸುತ್ತಿರೋ ಈ ದೊನ್ನೆ ಬಿರಿಯಾನಿ ಟೇಸ್ಟ್​ ಅನ್ನ ನೀವು ಬೇರೆಲ್ಲೂ ಪಡಿಯೋದಕ್ಕೆ ಸಾಧ್ಯವಿಲ್ಲ. ಕಾರಣ ಇಂದಿಗೂ ಇದ್ರ ರೆಸಿಪಿ ತಯಾರಾಗೋದು ನವೀನ್‍ ಅವ್ರ ಮನೆಯಲ್ಲೇ. ಪ್ರತಿ ನಿತ್ಯ ಅಂದಿಗೆ ಬೇಕಾದ ಮಸಾಲೆ ಪದಾರ್ಥಗಳನ್ನ ತಮ್ಮ ಮನೆಯಲ್ಲೇ ಅವ್ರ ಸಹೋದರ ಯೋಗೇಶ್‍ ತಯಾರು ಮಾಡ್ತಾರೆ. ಇದೇ ಕಾರಣದಿಂದ ಪ್ರತಿ ಅಂಗಡಿಯಲ್ಲೂ ಒಂದೇ ಟೇಸ್ಟ್. ಇದ್ರ ಜೊತೆಗೆ ಇವ್ರ ರೆಸಿಪಿಯನ್ನ ಯಾರು ಕಾಪಿ ಮಾಡಲು ಸಾಧ್ಯವಾಗಿಲ್ಲ. ಸ್ವತಃದೊನ್ನೆ ಬಿರಿಯಾನಿ ಮನೆಯಲ್ಲಿ 8 ವರ್ಷದಿಂದ ಕೆಲಸ ಮಾಡುತ್ತಿರೋ ಅಡುಗೆಯವ್ರಿಗೆ ಈ ರೆಸಿಪಿ ಐಡಿಯಾ ಕೂಡ ಇಲ್ಲ..!

image


ಸಖತ್ ಟೇಸ್ಟಿ ಕ್ಷತ್ರಿಯಾ ಕಬಾಬ್..!

ನವೀನ್‍ ಗೌಡ ಅವ್ರ ದೊನ್ನೆ ಬಿರಿಯಾನಿ ಮನೆಯಲ್ಲಿ ಬಿರಿಯಾನಿಯಂತೆಯೇ ಕಬಾಬ್‍ ಕೂಡ ಸಖತ್ ಫೇಮಸ್. ಎಲ್ಲೂ ಸಿಗದ ಕ್ಷತ್ರಿಯಾ ಕಬಾಬ್‍ ಅನ್ನ ಇಲ್ಲಿ ಬರೋ ಜನರ ತುಂಬಾ ಇಷ್ಟು ಪಟ್ಟು ತಿನ್ನುತ್ತಾರೆ. 8 ವರ್ಷದಿಂದ ಕ್ವಾಲಿಟಿ ಅಂಡ್​ ಕ್ವಾಂಟಿಟಿಯನ್ನ ಮೈಂಟೇನ್ ಮಾಡಿಕೊಂಡು ಬರ್ತಿರೋ ದೊನ್ನೆ ಬಿರಿಯಾನಿ ಮನೆ ಟೀಂ ಇಂದಿಗೂ ಬಿರಿಯಾನಿ ಹಾಗೂ ಕಬಾಬ್ ಮಾಡೋದ್ರಲ್ಲಿ ಸಖತ್ ಫೇಮಸ್. ಬೆಲೆ ಕೂಡ ಕಡಿಮೆಯಲ್ಲೇ ಇದ್ದು 90 ರೂಪಾಯಿಯಿಂದ ಬಿರಿಯಾನಿ ಆರಂಭ ಆಗುತ್ತದೆ. ಸದ್ಯ ನವೀನ್‍ ಅವ್ರ ಜೊತೆಯಲ್ಲಿ 50 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ರಾಂಚ್‍ ಅನ್ನ ಓಪನ್ ಮಾಡೋ ಐಡಿಯಾ ನವೀನ್‍ ಅವರದ್ದು. ದುಡಿಯೋದಕ್ಕೆ ಇಂತದ್ದೆ ಅನ್ನೋ ಆಯ್ಕೆಗಳಿಲ್ಲ. ಅವಕಾಶಗಳು ಸಾಕಷ್ಟಿರುತ್ತವೆ. ಅವುಗಳನ್ನ ಹೇಗೆ ಉಪಯೋಗ ಮಾಡಿಕೊಳ್ತಿವಿ ಅನ್ನೋದು ಮುಖ್ಯಅನ್ನೋದು ನವೀನ್‍ಗೌಡ ಮಾತು. ಕೈ ರುಚಿ ಇಷ್ಟರ ಮಟ್ಟಿಗೆ ಕೈ ಹಿಡಿದಿರೋವಾಗ ತನ್ನ ಹುಟ್ಟೂರಿನಲ್ಲೂ ದೊನ್ನೆ ಬಿರಿಯಾನಿ ಮನೆಯನ್ನ ಅಲ್ಲಿಯ ಜನರಿಗೆ ಪರಿಚಯಿಸಬೇಕು ಅನ್ನೋ ಆಸೆಯನ್ನು ಕೂಡ ನವೀನ್​ ಹೊಂದಿದ್ದಾರೆ. ಆದಷ್ಟು ಬೇಗ ಮಂಡ್ಯದ ಜನರು ಕೂಡ ದೊನ್ನೆ ಬಿರಿಯಾನಿ ಟೇಸ್ಟ್ ಸವಿಯುವಂತಾಗಲಿ.

ಇದನ್ನು ಓದಿ:

1. "ಕಬಾಲಿ’’ಗೆ ಮೆಗಾ ಬ್ರಾಂಡಿಂಗ್: ಅಧಿಕೃತ ಪಾಲುದಾರನಾದ ಏರ್ ಏಷ್ಯಾ : ಚಿತ್ರದ ಪ್ರಮೋಷನ್​​ಗೆ ಸಖತ್ ಪ್ಲಾನ್

2. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!

3. ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!