ಭಾರತದ ಆರ್ಥಿಕತೆ....ಅಂದು..ಇಂದು

ಟೀಮ್ ವೈ.ಎಸ್.ಕನ್ನಡ 

ಭಾರತದ ಆರ್ಥಿಕತೆ....ಅಂದು..ಇಂದು

Friday July 22, 2016,

4 min Read

ನಾನು ವಿಶ್ವವಿದ್ಯಾನಿಲಯವೊಂದರಲ್ಲಿ ಓದುತ್ತಿದ್ದೆ, ಅದು ತನ್ನ ಎಡಪಂಥೀಯ ಸಿದ್ಧಾಂತಗಳಿಂದ ಜನಪ್ರಿಯವಾಗಿತ್ತು. ನಾನು ಪ್ರವೇಶ ಪಡೆದ ಸಂದರ್ಭದಲ್ಲಿ ಮಾರ್ಕ್ಸ್​​ವಾದ ಹಾಗೂ ಲೆನಿನ್​ ಸಿದ್ಧಾಂತವನ್ನು ಪುಷ್ಠೀಕರಿಸುತ್ತಿತ್ತು. ತನ್ನ ಕುಸಿತದ ಬಗ್ಗೆ ಸಾಕಷ್ಟು ಸುಳಿವು ಇದ್ದರೂ ಸೋವಿಯತ್ ಒಕ್ಕೂಟ ಪ್ರಧಾನ ಜಾಗತಿಕ ಶಕ್ತಿಯಾಗಿತ್ತು. ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದ ಮಿಖೈಲ್ ಗೋರ್ಬಚೇವ್, ಸೋವಿಯತ್ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ಮರುನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದ. ಆದ್ರೆ ಪೂರ್ವ ಯುರೋಪ್ನ ಇತರ ಕಮ್ಯೂನಿಸ್ಟ್ ಬ್ಲಾಕ್​ಗಳಂತೆ ಸೋವಿಯತ್ ಯೂನಿಯನ್ ಕೂಡ ಕುಸಿತ ಕಾಣಲಿದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಭಾರತದಲ್ಲಿ ಕೂಡ ಖಾಸಗೀಕರಣ ಮತ್ತು ಮಾರುಕಟ್ಟೆ ಆರ್ಥಿಕತೆ ಬಗ್ಗೆ ಚರ್ಚೆ ನಡೆದಿತ್ತು. ಭಾರತ ಹೆಮ್ಮೆಯಿಂದ ಮಿಶ್ರ ಆರ್ಥಿಕ ವ್ಯವಸ್ಥೆಗೆ ಒತ್ತು ನೀಡುತ್ತಿತ್ತು. 1994ರಲ್ಲಿ ನಾನು ಜೆಎನ್​ಯು ತೊರೆದೆ, ಆಗ ರಾಷ್ಟ್ರೀಯ ಪ್ರವಚನ ಬದಲಾಗಿತ್ತು. ಮಾರುಕಟ್ಟೆಯಲ್ಲಿ ಖಾಸಗಿ ತೊಡಗುವಿಕೆಯನ್ನು ಪ್ರೇರೇಪಿಸಲಾಗಿತ್ತು. ಪರವಾನಗಿ ಅನುಮತಿಯ ಹಿಡಿತದಿಂದ ಉದ್ಯಮ ಮತ್ತು ಆರ್ಥಿಕತೆಯನ್ನು ಮುಕ್ತಗೊಳಿಸುವ ಕಾರ್ಯ ಆರಂಭವಾಗಿತ್ತು. ಆರ್ಥಿಕತೆ ಕೂಡ ಚೇತರಿಕೆಯ ಹಂತದಲ್ಲಿತ್ತು.

image


ನಾನು 80ರ ದಶಕದ ಅಂತ್ಯದಲ್ಲಿ ಯೂನಿವರ್ಸಿಟಿ ಸೇರಿದಾಗ ಎಸ್​ಟಿಡಿ ಫೋನ್ ಬೂತ್ಗಳು ಆಗಿನ್ನೂ ಹೊಸದು. ದೆಹಲಿಯ ಮೂಲೆಮೂಲೆಯಲ್ಲೂ ಎಸ್ಟಿಡಿ ಬೂತ್ಗಳು ರಾರಾಜಿಸುತ್ತಿದ್ವು. ರಾತ್ರಿ 11ರ ನಂತರ ಎಸ್ಟಿಡಿ ಕರೆಗಳ ದರ ಕಡಿಮೆ ಇದ್ದಿದ್ರಿಂದ ಕ್ಯಾಂಪಸ್ನಲ್ಲಿ ಎಲ್ಲರೂ ಆ ಸಮಯಕ್ಕಾಗಿ ಕಾಯುತ್ತಿದ್ರು. ಅಲ್ಲಿ ದೊಡ್ಡ ಕ್ಯೂ ಇರ್ತಾ ಇತ್ತು. ಅದು ಮೊಬೈಲ್ ಹಾಗೂ ವಾಟ್ಸ್ಆ್ಯಪ್​ಗೂ ಮೊದಲಿನ ಯುಗ. ಕೇವಲ ಒಂದು ಸ್ಪರ್ಷದ ಮೂಲಕ ಜಗತ್ತಿನ ಯಾವ ಮೂಲೆಯಲ್ಲಿರುವವರೊಂದಿಗಾದ್ರೂ ಈಗ ಸ್ಮಾರ್ಟ್ ಫೋನ್​ನಲ್ಲಿ ಮಾತನಾಡಬಹುದು, ಆದ್ರೆ ಆಗ ಹಾಗಿರಲಿಲ್ಲ. ಆಗ ಸ್ಥಿರ ದೂರವಾಣಿ ಮೂಲಕ ಪರಸ್ಪರ ಎರಡು ನಗರಗಳನ್ನು ಸಂಪರ್ಕಿಸುವುದು ಅಂದ್ರೆ 2-3 ಗಂಟೆ ಟೈಮ್ ವೇಸ್ಟ್ ಮಾಡಬೇಕಿತ್ತು. ಟ್ರಂಕ್ ಕಾಲ್ ಬುಕ್ ಮಾಡಿ ನಮ್ಮ ಪ್ರೀತಿಪಾತ್ರರ ಧ್ವನಿ ಕೇಳಲು ಗಂಟೆಗಟ್ಟಲೆ ಕಾಯಬೇಕಿತ್ತು.

ಆ ಸಮಯದಲ್ಲಿ ಕೆಲವೇ ಕೆಲವು ವಿಮಾನ ನಿಲ್ದಾಣಗಳಿದ್ದವು, ಅವು ಕೂಡ ಪಾದಚಾರಿ. ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ ರೈಲ್ವೆ ನಿಲ್ದಾಣಕ್ಕಿಂತ ಕೊಂಚ ಚೆನ್ನಾಗಿತ್ತಷ್ಟೆ. ವಿಮಾನ ಪ್ರಯಾಣ ಮಧ್ಯಮ ವರ್ಗದವರ ಪಾಲಿಗೆ ಗಗನ ಕುಸುಮ. ಇದು ಕೇವಲ ಸಮಾಜದ ಶ್ರೀಮಂತ ವರ್ಗಕ್ಕೆ ಮೀಸಲಾಗಿದ್ದ ಐಷಾರಾಮಿ ಪ್ರಯಾಣ. ಆದ್ರೆ ಈಗ ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳು ಪೈಪೋಟಿಗಿಳಿದು ಮಧ್ಯಮವರ್ಗದವರಿಗೂ ವಿಮಾನ ಪ್ರಯಾಣದ ಅವಕಾಶ ಕಲ್ಪಿಸಿಕೊಟ್ಟಿವೆ. ಆ ಸಮಯದಲ್ಲಿ ಮಲ್ಟಿಪ್ಲೆಕ್ಸ್ ಅನ್ನೋ ಪದವನ್ನೇ ನಾವು ಕೇಳಿರಲಿಲ್ಲ. ಸಿಂಗಲ್ ಸ್ಕ್ರೀನ್ನ ಸಿನಿಮಾ ಹಾಲ್ಗಳೇ ಏಕೈಕ ಆಯ್ಕೆಯಾಗಿತ್ತು. 12-3, 3-6, 6-9, 9-12 ಹೀಗೆ ನಾಲ್ಕು ಶೋಗಳಿತ್ತು. ಆಗ ಸಿನಿಮಾ ನೋಡಿ ಬಂದ್ರೆ ಅದೇ ದೊಡ್ಡ ಔಟಿಂಗ್ ಇದ್ದಂತೆ. ಕೇಬಲ್ ಟಿವಿ ಇರಲಿಲ್ಲ, ಕೇವಲ ದೂರದರ್ಶನವಿತ್ತು. ವಾರದಲ್ಲಿ ಒಂದು ದಿನ ಭಾನುವಾರ ಮಾತ್ರ ಸಿನಿಮಾ ಪ್ರಸಾರ ಮಾಡಲಾಗ್ತಿತ್ತು. ಇನ್ನು ಸರ್ಕಾರದ ಪರವಾಗಿದ್ದ ದೂರದರ್ಶನದ ನ್ಯೂಸ್ ಮಾತ್ರ ವೀಕ್ಷಿಸುವ ಅವಕಾಶವಿತ್ತಷ್ಟೆ. ಖಾಸಗಿ ಸುದ್ದಿ ವಾಹಿನಿಗಳಿರಲ್ಲಿಲ್ಲ, ಪ್ರೈಮ್ ಟೈಮ್ ಚರ್ಚೆಯಿರಲಿಲ್ಲ. ಒಂದು ಜಾತಿಯ ನಿರೂಪಕರೆಲ್ಲ ಹುಟ್ಟಿಕೊಂಡಿದ್ದು ನಂತರ. ಸುದ್ದಿ ವಾಚಕರೇ ಟಿವಿಯ ಜೀವಾಳ, ಟಿಆರ್ಪಿಗಾಗಿ ಆಗ ಹಪಹಪಿಕೆ ಇರಲಿಲ್ಲ. ಮೊದಲ ಗಲ್ಫ್ ಯುದ್ಧದ ಸಮಯದಲ್ಲಿ ನಾನು ಕೇಳಿದ ಮೊದಲ ಕೇಬಲ್ ಸುದ್ದಿ ವಾಹಿನಿ ಸಿಎನ್ಎನ್. ಅದೇ ಮೊದಲ ಬಾರಿಗೆ ಭಾರತ ನೇರಪ್ರಸಾರಕ್ಕೆ ಸಾಕ್ಷಿಯಾಯ್ತು.

ಭಾರತದಲ್ಲಿ ಉತ್ಕರ್ಷ ಆರ್ಥಿಕ ಸ್ಥಿತಿ ಇರಲಿಲ್ಲ. ಇದೊಂದು ಬಡ ರಾಷ್ಟ್ರ. ರಸ್ತೆಗಳಲ್ಲಿನ ಹಾವಾಡಿಗರು, ಸಾಧುಗಳು, ಹಸುಗಳಿಗೆ ಫೇಮಸ್ ಆಗಿತ್ತು. ಸೋವಿಯತ್ ಯೂನಿಯನ್ ಹಾಗೂ ಅಮೆರಿಕದ ನಡುವೆ ಸಿಕ್ಕಿಹಾಕಿಕೊಂಡಿತ್ತು. ಕಮ್ಯೂನಿಸ್ಟ್ ಮತ್ತು ಬಂಡವಾಳಶಾಹಿ ಎಂಬ ಎರಡು ಸೈದ್ಧಾಂತಿಕ ಬಣಗಳ ನಡುವೆ ಜಗತ್ತು ಹಂಚಿಹೋಗಿತ್ತು. ಭಾರತದಲ್ಲಿ ಕೂಡ ಭ್ರಷ್ಟಾಚಾರ ತುಂಬಿತ್ತು. ಭೂಫೋರ್ಸ್ ಹಗರಣದಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಆಗಿತ್ತು. 1991ರಿಂದ ಬದಲಾವಣೆ ಆರಂಭವಾಗಿತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶ ದಿವಾಳಿತನದ ಅಂಚಿನಲ್ಲಿತ್ತು. ಅಂತರಾಷ್ಟ್ರೀಯ ಪಾವತಿಯಲ್ಲಿ ಪ್ರಮಾದವಾಗಿತ್ತು. ಕಮ್ಯೂನಿಸ್ಟ್ ಮಾದರಿ ಆಕರ್ಷಣೀಯವಾಗಿ ಉಳಿದಿರಲಿಲ್ಲ. ಭಾರತದ ಮಿಶ್ರ ಆರ್ಥಿಕ ಪ್ರಯೋಗ ವಿಫಲವಾಗಿತ್ತು. ಭಾರತದ ಆರ್ಥಿಕತೆ ಸುಧಾರಣೆಗೆ ಲೈಸೆನ್ಸ್ ಪರ್ಮಿಟ್ ರಾಜ್ ಅನಿವಾರ್ಯವಾಗಿತ್ತು. ಲಾಭ ಗಳಿಕೆ ಮತ್ತು ಸ್ಪರ್ಧೆಯನ್ನು ಪರಿಚಯಿಸಲೇಬೇಕಾಯ್ತು. ಪ್ರಬಲ ರಾಷ್ಟ್ರೀಯ ಪ್ರವಚನದ ಭಾಗವಾಗಿದ್ದ ವ್ಯವಸ್ಥೆಯನ್ನು ಕೆಡವುವುದು ಸುಲಭವಾಗಿರಲಿಲ್ಲ. ಅದೃಷ್ಟವಶಾತ್ ಮಾಕ್ರ್ಸ್ ಭವಿಷ್ಯದಂತೆ ಕಮ್ಯೂನಿಸ್ಟ್ ವ್ಯವಸ್ಥೆ ಒಣಗಿ ಹೋಗಿತ್ತು. ನರಸಿಂಹ ರಾವ್ ದೃಢ ಹೆಜ್ಜೆ ಇಟ್ಟರು. ಟೆಕ್ನೋಕಾರ್ಟ್ ಒಬ್ಬರನ್ನು ದೇಶದ ಹಣಕಾಸು ಸಚಿವರನ್ನಾಗಿ ಮಾಡುವುದು ಅವರು ಕಂಡುಕೊಂಡ ಪರಿಹಾರ. ಸ್ವಾತಂತ್ರ್ಯದ ಬಳಿಕ ದೇಶದ ಗತಿಯನ್ನೇ ಬದಲಾಯಿಸಿದ ನಿರ್ಧಾರ ಅದು.

ನರಸಿಂಹ ರಾವ್ ಅವರ ಪಾಲಿಗೆ ಇದು ಸುಲಭದ ಕೆಲಸವಾಗಿರಲಿಲ್ಲ. ನಾನಾಗ ಒಬ್ಬ ಯುವ ಪತ್ರಕರ್ತ, ಎಲ್ಲರೂ ಆಗ ದೇಶದ ಕಂಪ್ಯೂಟರ್ಗಳಿಗೆ ಹೇಗೆ ಪ್ರಬಲ ಪ್ರತಿರೋಧ ಒಡ್ಡಿದ್ದರು ಅನ್ನೋದು ನನಗಿನ್ನೂ ನೆನಪಿದೆ. ಜನರಿಂದ ಉದ್ಯೋಗ ಕಸಿಯುವ ಸಾಧನವಾಗಿತ್ತದು. ಕಂಪ್ಯೂಟರ್ಗಳು ನಿರುದ್ಯೋಗ ಸೃಷ್ಟಿಸುತ್ತವೆ ಅನ್ನೋ ಅರಿವು ಎಲ್ಲರಿಗೂ ಇತ್ತು. ಭಾರತದ ಮರು ವಸಾಹತು ಸೃಷ್ಟಿಗೆ ಐಎಂಎಫ್, ವಿಶ್ವಬ್ಯಾಂಕ್ ಹಾಗೂ ಡಬ್ಲ್ಯೂಟಿಓಗಳನ್ನು ಬಂಡವಾಳಶಾಹಿ ವಿನ್ಯಾಸದ ಭಾಗವಾಗಿ ಪ್ರಚಾರ ಮಾಡಲಾಯ್ತು. ಮಾರುಕಟ್ಟೆ ಕೆಲವೇ ಶ್ರೀಮಂತರ ಪೂರೈಕೆಗೆ ಇದ್ದ ರಾಕ್ಷಸನೆಂದು ಗ್ರಹಿಸಲಾಗಿತ್ತು. ಬುದ್ಧಿಜೀವಿಗಳ ಒಂದು ದೊಡ್ಡ ವಿಭಾಗವೇ ಇತ್ತು. 300 ವರ್ಷಗಳ ಹಿಂದೆ ಈಸ್ಟ್ ಇಂಡಿಯಾ ಕಂಪನಿ ಮಾಡಿದಂತೆ ಭಾರತವನ್ನು ಗುಲಾಮಗಿರಿಗೆ ತಳ್ಳಲು ಬಹುರಾಷ್ಟ್ರೀಯ ಕಂಪನಿಗಳು ಸಜ್ಜಾಗಿದ್ದವು. ಆದ್ರೆ ನರಸಿಂಹ ರಾವ್ ಅದಕ್ಕೆ ಅಡ್ಡಿಯಾದ್ರು. ತಾವೇ ಸ್ವತಃ ರಾಜಕೀಯ ನಿರ್ವಹಣೆಯ ಹೊಣೆ ಹೊತ್ತ ಅವರು ಮನಮೋಹನ್ ಸಿಂಗ್ ಅವರಿಗೆ ಹಣಕಾಸು ನಿರ್ವಹಣೆಯ ಜವಾಬ್ಧಾರಿ ಹೊರಿಸಿದ್ರು. ಇದು ಅದ್ಭುತಗಳ ಸೃಷ್ಟಿಗೆ ಕಾರಣವಾಯ್ತು. ನರಸಿಂಹ ರಾವ್ ಅವರ ಪಕ್ಷ ಜನಾದೇಶ ಕಳೆದುಕೊಂಡರೂ, ಭಾರತದ ಆರ್ಥಿಕತೆ ಹಳಿಯೇರಿತ್ತು.

ಖಾಸಗೀಕರಣ ವಿರೋಧಿಸುವ, ಕಮ್ಯೂನಿಸ್ಟ್ ಪಕ್ಷಗಳ ಬೆಂಬಲಿತ ನೀತಿಯನ್ನೇ ಎಚ್.ಡಿ.ದೇವೇಗೌಡ ಹಾಗೂ ಐ.ಕೆ.ಗುಜ್ರಾಲ್ ಸರ್ಕಾರಗಳು ಅನುಸರಿಸಿದ್ವು. ವಾಜಪೇಯಿ ಸರ್ಕಾರ ಕೂಡ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು. 2004ರಲ್ಲಿ ವಾಜಪೇಯಿ ಜನರ ನಂಬಿಕೆ ಕಳೆದುಕೊಂಡ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಉತ್ತಮ ಸ್ಥಿತಿ ತಲುಪಿತ್ತು. ಆಗ ಭಾರತದ ಆರ್ಥಿಕ ಬೆಳವಣಿಗೆ ಶೇ.9ರಷ್ಟಿತ್ತು, 2008ನ್ನು ಹೊರತುಪಡಿಸಿ 2011ರವರೆಗೂ ಇದೇ ದರ ಮುಂದುವರಿದಿದೆ. ಇದೀಗ ಭಾರತದ ಆರ್ಥಿಕತೆ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆ ಎನಿಸಿಕೊಂಡಿದೆ. ಭಾರತ ಮುಂದಡಿ ಇಟ್ಟಾಗಲೆಲ್ಲ ವಿಶ್ವದಲ್ಲಿ ಹೊಸ ಅಲೆಯೇ ಸೃಷ್ಟಿಯಾಗುತ್ತಿದೆ.

ಭಾರತ ಆರ್ಥಿಕ ಉದಾರೀಕರಣದ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಕಳೆದ 25 ವರ್ಷಗಳಿಂದ ಬದಲಾಗುತ್ತಿರುವ ಭಾರತವನ್ನು ನಾನು ಗಮನಿಸಿದ್ದೇನೆ. ಭಾರತ ಈಗ ಬಡ ರಾಷ್ಟ್ರವಲ್ಲ. ಭವಿಷ್ಯದ ಸೂಪರ್ ಪವರ್. ಜನಸಾಮಾನ್ಯರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಹೊಸ ಮಧ್ಯಮವರ್ಗ ಹುಟ್ಟಿಕೊಂಡಿದೆ. ಹೊರಗಡೆ ತಿನ್ನುವುದು ಕೆಲವರ ಪಾಲಿಗೆ ಐಷಾರಾಮಿಯಲ್ಲ, ಹಲವರ ಪಾಲಿಗೆ ಸರ್ವೇಸಾಮಾನ್ಯವಾಗಿದೆ. ಪ್ರತಿನಿತ್ಯ ಹೊಸ ಮಾಲ್ ನಿರ್ಮಾಣವಾಗುತ್ತಿದೆ. ಭಾರತ ಈಗ ಅತಿ ದೊಡ್ಡ ಗ್ರಾಹಕ ತಾಣ. ಭಾರತದ ಕಂಪನಿಗಳು ವಿದೇಶಗಳಲ್ಲೂ ನೆಲೆಯೂರಿವೆ, ಅಂತರಾಷ್ಟ್ರೀಯ ಬ್ರಾಂಡ್ಗಳಿಗೆ ಪ್ರಬಲ ಪೈಪೋಟಿ ಒಡ್ಡುತ್ತಿವೆ. ಗೂಗಲ್, ಮೈಕ್ರೋಸಾಫ್ಟ್, ಪೆಪ್ಸಿಕೋನಂತಹ ದೊಡ್ಡ ಕಂಪನಿಗಳಲ್ಲಿ ಭಾರತದ ಸಿಇಓಗಳೇ ರಾರಾಜಿಸುತ್ತಿರುವುದು ವಿಶೇಷ. ಸಿಲಿಕಾನ್ ವ್ಯಾಲಿ ಕ್ರಾಂತಿಯಲ್ಲೂ ಭಾರತ ಮಹತ್ವದ ಪಾತ್ರ ವಹಿಸಿದೆ.

1991ರಲ್ಲಿ ನಮ್ಮ ನೆರೆಹೊರೆಯ ಕೆಲವರ ಬಳಿ ಮಾತ್ರ ಕಾರ್ ಇತ್ತು. ಈಗ ಪ್ರತಿಯೊಬ್ಬರ ಬಳಿಯೂ ಇದೆ. ಭಾರತ ಅತ್ಯಂತ ಆತ್ಮವಿಶ್ವಾಸವುಳ್ಳ ದೇಶ. ಪೈಪೋಟಿಯ ಭಯ ಅದಕ್ಕಿಲ್ಲ, ಭಾರತ ಎಂಎನ್ಸಿಗಳ ಗುಲಾಮ ಎಂಬ ಚರ್ಚೆ ನಡೆಯುತ್ತಿಲ್ಲ. ಜಗತ್ತಿನೆಲ್ಲೆಡೆ ಭಾರತೀಯರಿಗೆ ಗೌರವ ಸಿಗುತ್ತಿದೆ. ವಿದೇಶೀ ಹೂಡಿಕೆದಾರರಿಗೆ ಭಾರತ ಅತ್ಯಂತ ಪ್ರಶಸ್ತವಾದ ಸ್ಥಳ. ಮಾರುಕಟ್ಟೆ ಅನ್ನೋದು ಕೆಟ್ಟ ಪದವಾಗಿ ಉಳಿದಿಲ್ಲ. ಮಿತಿಮೀರಿದ ಭ್ರಷ್ಟಾಚಾರವಿಲ್ಲ. ಶ್ರೀಮಂತರು-ಬಡವರ ನಡುವಣ ವಿಭಜನೆ ಅಗಲವಾಗುತ್ತಿದೆ. ಮೂಲಸೌಕರ್ಯ ಮಾತ್ರ ಕಳಪೆ. ವಿಶ್ವವನ್ನು ಜಯಿಸಬೇಕೆಂದರೆ ಭಾರತ ತನ್ನ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳತ್ತ ಇನ್ನಷ್ಟು ಗಮನಹರಿಸಬೇಕು. ಆದ್ರೆ ನಮ್ಮ ಪ್ರಜಾಪ್ರಭುತ್ವ ಇನ್ನೂ ಅಸ್ತವ್ಯಸ್ತವಾಗಿದೆ. ಅದೇನೇ ಆದ್ರೂ ಕಳೆದ 25 ವರ್ಷಗಳನ್ನು ಭರವಸೆ ಮತ್ತು ವಿಶ್ವಾಸದ ಯುಗ ಎಂದು ಬಣ್ಣಿಸಬಹುದು. ನಾನು ಆಶಾವಾದಿ, ಪ್ರಕ್ಷುಬ್ಧ ಪ್ರಸ್ತುತದ ಹೊರತಾಗಿಯೂ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿದ್ದೇನೆ.

ಲೇಖಕರು: ಆಶುತೋಷ್, ಎಎಪಿ ನಾಯಕ 

ಇದನ್ನೂ ಓದಿ...

ಪ್ರಚಾರ ಸಿಕ್ಕಿದ್ದು ಕಬಾಲಿಯಿಂದ- ಬೇಡಿಕೆ ಇರುವುದು ಗಣಪತಿಗೆ..!

ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ 

    Share on
    close