ನಿಮ್ಮ ಮನೆಗೆ ಫಿಟ್ನೆಸ್ ಟ್ರೈನರ್ ಬರ್ತಾರೆ..!

ಆರಾಧ್ಯ

ನಿಮ್ಮ ಮನೆಗೆ ಫಿಟ್ನೆಸ್ ಟ್ರೈನರ್ ಬರ್ತಾರೆ..!

Sunday February 28, 2016,

2 min Read

ಫಿಟ್ನೆಸ್, ಫಿಟ್ನೆಸ್, ಈಗ ಯಾರ ಬಾಯಲಿ ಕೇಳಿದ್ರು ಫಿಟ್ನೆಸ್​ದೇ ಜಪ .. ಎಲ್ಲರೂ ಬಾಡಿನ ಮೈನ್​ಟೇನ್ ಮಾಡಬೇಕು ಅಂತಾರೆ.. ಅದಕ್ಕೆ ಅಂತ ಯೋಗ ಕ್ಲಾಸ್, ಜಿಮ್, ಏರೋಬಿಕ್ಸ್ ಹೀಗೆ ಸಾಕಷ್ಟು ಕ್ಲಾಸ್ ಗೆ ಹೋಗಿ ತಮ್ಮ ಮೈಮಾಟ ಕಾಪಾಡಿ ಕೊಳ್ತಾರೆ.. ಆದ್ರೆ ಬೆಳಗ್ಗೆ ಬೇಗ ಎದ್ದು ಕ್ಲಾಸ್ ಗೆ ಹೋಗಬೇಕು ಅಂದ್ರೆ ಕಷ್ಟ, ಇನ್ನು ಸಂಜೆ ಕೆಲಸ ಮುಗಿಸಿ ಹೋಗೋಣ ಅಂದ್ರೆ ಮನೆಯಿಂದ ಹೊರಗಡೆ ಹೋಗಲು ಮನಸ್ಸು ಕೇಳಲ್ಲ, ಹಾಗೋ ಹೀಗೋ ಮಾಡಿ ವಾರದಲ್ಲಿ ಎರಡು ದಿನ ಹೋದ್ರೆ ಅದೇ ಹೆಚ್ಚು .. ಇಂತಹವರಿಗೆ ಮನೆಗೆ ಬಂದು ಫಿಟ್ ನೆಸ್ ಟ್ರೈನಿಂಗ್ ಕೊಡವಂತ ಸಂಸ್ಥೆಯೊಂದು ಸಿಲಿಕಾನ್ ಸಿಟಿಯಲ್ಲಿ ಪ್ರಾರಂಭವಾಗಿದೆ ಅದರ ಹೆಸರು ಫಿಟ್ ನೆಸ್ ಜಾಯ್..

image


ಫಿಟ್ ನೆಸ್ ಕಾಪಾಡಿಕೊಳ್ಳಬೇಕು ಅನ್ನೋ ಆಸೆ ನಿಮಗೆ ಇದ್ರೆ, ನಿಮ್ಮ ಮನೆಗೆ ಟ್ರೈನರ್ ಬಂದು ಹೇಗೆ ಫಿಟ್ ನೆಸ್ ಕಾಪಾಡಿಕೊಳಬೇಕು ಎಂದು ಸಲಹೆ ನೀಡ್ತಾರೆ.. ಕಳೆದ ಒಂದು ವರ್ಷದಿಂದ ಈ ಸೇವೆಯನ್ನ ಪ್ರಾರಂಭ ಮಾಡಿರೋ ಸಂಸ್ಥೆ ಮನೆಗೆ ಟ್ರೈನರ್ ನ ಕಳಿಸಿ ಹೇಗೆ ಫಿಟ್ ನೆಸ್ ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಡ್ತಾರೆ.. ಒಂದು ಫೋನ್ ಮಾಡಿದ್ರೆ ಸಾಕು ಟ್ರೈನರ್ ನಿಮ್ಮ ಮನೆಗೆ ಬರ್ತಾರೆ.. ಫೋನ್ ಮಾಡೋದು ಬೋರ್ ಅನ್ನಿಸಿದ್ರೆ ವಾಟ್ಸ್ಆ್ಯಪ್‌ನಲ್ಲಿ ಒಂದು ಮೆಸೇಜ್ ಕಳಿಸಬಹುದು..

ಇದನ್ನು ಓದಿ: ಸಾಫ್ಟ್​ವೇರ್ ಬೋರಾಯ್ತು, ಫೋಟೋಗ್ರಫಿ ಇಷ್ಟವಾಯ್ತು

ಕೇವಲ ಫಿಟ್‌ನೆಸ್‌ ಟ್ರೈನರ್‌ಗಳಷ್ಟೇ ಅಲ್ಲ, ನಿಮಗೆ ಯೋಗ ಕಲಿಯುವ ಆಸೆ ಇದ್ದು, ಯಾರಾದರೂ ಯೋಗ ಕಲಿಸುವವರು ಮನೆಗೆ ಬಂದು ಕಲಿಸಿದರೆ ಚೆನ್ನಾಗಿರುತ್ತದೆ ಅಂತನ್ನಿಸಿದರೂ ನೀವೂ ಫಿಟ್‌ನೆಸ್‌ ಜಾಯ್‌ಗೆ ಫೋನ್‌ ಮಾಡಬಹುದು. ಫಿಟ್‌ನೆಸ್‌ ಜಾಯ್‌ ತಂಡದಲ್ಲಿ ನುರಿತ ಯೋಗಪಟುಗಳೂ ಕೂಡಾ ಇದ್ದಾರೆ.

image


ಈ ಐಟಿ ಸಿಟಿ ಉದ್ಯಾನ ನಗರಿಯಲ್ಲಿ ಜನರಿಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ . ಈ ನಿಟ್ಟಿನಲ್ಲಿ ಎಲ್ಲ ವಯಸ್ಸಿನ ಜನ್ರು ಜಿಮ್, ಯೋಗ, ವಾಕ್ ಅಂತ ತೆರಳ್ತಾರೆ.. ಆದ್ರೆ ಕೆಲವರಿಗೆ ಫಿಟ್ನೆಸ್ ಮೈನ್ಟೇನ್ ಮಾಡಬೇಕು ಅಂತ ಮನಸ್ಸಿರುತ್ತೆ, ಆದ್ರೆ ಸೋಮಾರಿತನ ಜಾಸ್ತಿ, ಇದನ್ನ ಮನಸ್ಸಿನಲ್ಲಿಟ್ಟು ಕೊಂಡು ವಿಶ್ವನಾಥ್‌ ಮನೆಗೆ ಹೋಗಿ ಟ್ರೈನಿಂಗ್ ಕೊಟ್ರೆ ಹೇಗೆ ಎಂದು ತಮ್ಮ ಜಿಮ್ ನ ಜೊತೆ ಈ ಫಿಟ್ ನೆಸ್ ಜಾಯ್ ಪ್ರಾರಂಭ ಮಾಡಿದ್ದಾರೆ..

ಇನ್ನು ಈ ಸಂಸ್ಥೆಯ ವಿಶೇಷತೆ ಅಂದ್ರೆ ಕೆಲವು ದಿನಗಳ ಕಾಲ ನಿಮಗೆ ಫಿಟ್ನೆಸ್ ಟ್ರೇನಿಂಗ್ ಉಚಿತವಾಗಿ ದೊರಕಲಿದೆ.. ಇದು ಇವರು ತಮ್ಮ ಗ್ರಾಹಕರಿಗೆ ನೀಡಲಿರುವ ವಿಶೇಷ ಆಫರ್.. ಮನೆಗೆ ಬಂದ ಫಿಟ್‌ನೆಸ್‌ ಟ್ರೈನರ್‌ ಹೇಳಿಕೊಟ್ಟದ್ದು ನಿಮಗೆ ತೃಪ್ತಿದಾಯಕ ಅಂತನ್ನಿಸಿದರೆ ಮಾತ್ರ ನೀವು ಆ ಫಿಟ್‌ನೆಸ್‌ ಟ್ರೈನರ್‌ ಅನ್ನು ಬುಕ್‌ ಮಾಡಬಹುದು. ಇಲ್ಲದಿದ್ದರೆ ಬಿಟ್ಟು ಬಿಡಲೂ ಬಹುದು. ಪರಿಣತ ಫಿಟ್‌ನೆಸ್‌ ಟ್ರೈನರ್‌ ವಿಶ್ವನಾಥ್‌ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈಗ ಫಿಟ್‌ನೆಸ್‌ ಜಾಯ್‌ನಲ್ಲಿ ಫಿಟ್‌ನೆಸ್‌ ಟ್ರೈನಿಂಗ್‌, ಯೋಗ, ಥೆರಪಿ ಯೋಗ, ನ್ಯೂಟ್ರಿಷನಿಸ್ಟ್‌ಗಳು ಲಭ್ಯವಿದ್ದಾರೆ..

image


ಒಂದೊಂದು ಟ್ರೈನಿಂಗ್ ಕೂಡ ಪ್ರತ್ಯೇಕ ಹಣವನ್ನ ನಿಗದಿ ಮಾಡಿದ್ದಾರೆ.. ಜೊತೆಗೆ ಎಷ್ಟು ದೂರ ಹೋಗಿ ಟ್ರೈನ್ ಮಾಡಬೇಕು, ಎಷ್ಟು ದಿನ ಅವರಿಗೆ ಟ್ರೈನ್ ಮಾಡಬೇಕು ಎಂದು ವಿವರವನ್ನ ಪಡೆದು ಅದಕ್ಕೆ ಪ್ರತ್ಯೇಕವಾಗಿ ಹಣ ನಿಗದಿ ಮಾಡ್ತಾರೆ.. ಮುಂದಿನ ದಿನಗಳಲ್ಲಿ ಫಿಟ್ ನೆಸ್ ಜಾಯ್ ಸಂಸ್ಥೆ ಝುಂಬಾ, ಏರೋಬಿಕ್‌ ಕಲಿಸೋ ಉದ್ದೇಶವನ್ನ ಸಹ ಹೊಂದಿದೆ.. 

ಇದನ್ನು ಓದಿ

ಗೋ ವೆಜ್, ಗೋ ಗ್ರೀನ್ ಮೂಲಮಂತ್ರ..!

ಎರಡು ಬಾರಿ ಕ್ಯಾನ್ಸರ್ ಗೆದ್ದ ಗಟ್ಟಿಗಿತ್ತಿ ನೀಲಂ ಕುಮಾರ್

ಕರಾವಳಿಯಲ್ಲಿ ಬಯಲು ಸೀಮೆಯ ರುಚಿಗೆ ಡಿಮ್ಯಾಂಡ್!