ಸ್ಮಾರ್ಟ್ ಜಮಾನದ ಸ್ಮಾರ್ಟ್ ಸ್ಕೂಟರ್ ಎಸ್340

ಅಗಸ್ತ್ಯ

ಸ್ಮಾರ್ಟ್ ಜಮಾನದ ಸ್ಮಾರ್ಟ್ ಸ್ಕೂಟರ್ ಎಸ್340

Wednesday March 02, 2016,

2 min Read

ಒಂದು ಕಾಲದಲ್ಲಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಬಳಸುತ್ತಿದ್ದ ಮೊಬೈಲ್‍ಗಳಿಗೆ ನಾನಾ ಅಪ್ಲಿಕೇಷನ್‍ಗಳನ್ನು ಅಳವಡಿಸಿ ಸ್ಮಾರ್ಟ್‍ಫೋನ್‍ಗಳನ್ನಾಗಿ ಮಾರ್ಪಾಡು ಮಾಡಲಾಗಿದೆ. ಒಂದು ಕಾಲದಲ್ಲಿ ಕೇವಲ ಸಮಯ ನೋಡಲು ಬಳಸುತ್ತಿದ್ದ ವಾಚ್‍ಗಳೂ ಕೂಡ ಇದೀಗ ಮೊಬೈಲ್‍ಗಳು ಮಾಡುವ ಕೆಲಸ ಮಾಡುತ್ತಾ ಸ್ಮಾರ್ಟ್ ವಾಚಾಗಿ ಪರಿರ್ತನೆಗೊಂಡಿವೆ. ಇದೀಗ ಸ್ಕೂಟರ್‍ಗಳ ಸರದಿ.

image


ನೀವು ಎಲ್ಲಿ ಹೋಗಬೇಕೆನ್ನುತ್ತೀರೋ ಅಲ್ಲಿಗೆ ದಾರಿ ತೋರಿಸುತ್ತಾ, ನ್ಯಾವಿಗೇಷನ್ ಸೇವೆ ನೀಡುತ್ತಾ ನಿಮ್ಮನ್ನು ಕರೆದುಕೊಂಡು ಹೋಗುವ ಬ್ಯಾಟರಿ ಚಾಲಿತ ಸ್ಮಾರ್ಟ್ ಸ್ಕೂಟರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ತಂತ್ರಜ್ಞಾನವಿರುವ ಬ್ಯಾಟರಿ ಚಾಲಿತ ಸ್ಕೂಟರ್ ಬೆಂಗಳೂರಿನಲ್ಲಿ ಸಿಗುತ್ತಿದೆ. ಆದರೆ ಅದಕ್ಕೆ ನೀವು ಇನ್ನೂ ಸ್ವಲ್ಪ ದಿನ ಕಾಯಬೇಕಿದ್ದು, ಈಗ ಆನ್‍ಲೈನ್‍ನಲ್ಲಿ ಬುಕ್ ಮಾಡಿ ತಮ್ಮ ಸ್ಮಾರ್ಟ್ ಸ್ಕೂಟರಿಗಾಗಿ ಕಾಯಬಹುದಾಗಿದೆ.

ಇದನ್ನು ಓದಿ: ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!

ಅಥೆರ್ ಎನರ್ಜಿ ಸಂಸ್ಥೆ ತಯಾರಿಸಿರುವ ಎಸ್340 ಹೆಸರಿ ಬ್ಯಾಟರಿ ಚಾಲಿತ ಸ್ಮಾರ್ಟ್ ಸ್ಕೂಟರ್ ಬಗ್ಗೆ ನೀವು ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತೂ ಸತ್ಯ. ಏಕೆಂದರೆ ದ್ವಿಚಕ್ರ ವಾಹನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಿಪಿಎಸ್ ಆಧಾರಿತ ಸ್ಕೂಟರ್ ಇದಾಗಿದೆ. ಲಿಥಿಯಂ ಲೋನ್‍ನಿಂದ ಆವೃತ್ತವಾ ಬ್ಯಾಟರಿ, ಗಂಟೆಗೆ 72 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 60 ಕಿ.ಮೀ.ವರೆಗೆ ಸಂಚರಿಸುವ ಸಾಮರ್ಥ್ಯವಿರುವ ಎಸ್340 ಸ್ಕೂಟರ್ ಇನ್ನಷ್ಟು ವಿಶೇಷ ಗುಣಗಳನ್ನು ಹೊಂದಿದೆ.

ಮೊದಲ ಜಿಪಿಎಸ್ ಸ್ಕೂಟರ್

ದೇಶದಲ್ಲೇ ಮೊದಲ ಡ್ಯಾಷ್‍ಬೋರ್ಡ್‍ನಲ್ಲಿ ಟಚ್‍ಸ್ಕ್ರೀನ್ ಹೊಂದಿರುವ ಸ್ಕೂಟರ್ ಎಂಬ ಹೆಗ್ಗಳಿಕೆಯೂ ಎಸ್340 ಗಳಿಸಿದೆ. ಈವರೆಗೆ ಕಾರ್‍ಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಹಲವು ವಿಶೇಷತೆಗಳನ್ನು ಈ ಎಸ್340 ಸ್ಕೂಟರ್‍ಗೆ ಅಳವಡಿಸಲಾಗಿದೆ. ಕ್ಲೌಡ್ ಬೇಸ್ಡ್ ಡಾಟಾ ಮೂಲಕ ಸ್ಕೂಟರ್‍ನಲ್ಲಿನ ಟಚ್‍ಸ್ಕ್ರೀನ್ ಡ್ಯಾಷ್‍ಬೋರ್ಡ್ ಆಪರೇಟ್ ಮಾಡಬಹುದಾಗಿದೆ. ಅಲ್ಲದೆ ಸ್ಕೂಟರ್ ಬಳಸುವವರು ತಮ್ಮ ಪ್ರೊಫೈಲನ್ನು ಎಂಟ್ರಿ ಮಾಡಿದರೆ ನ್ಯಾವಿಗೇಷನ್, ಚಾಲನಾ ಮಾದರಿಯನ್ನು ಸ್ಪೋರ್ಟ್ ಅಥವಾ ಎಕಾನಮಿಗೆ ಬದಲಿಸಿಕೊಳ್ಳಬಹುದಾಗಿದೆ. ಹಾಗೆಯೇ ಬ್ಯಾಟರಿ ಎಷ್ಟು ಅವಧಿಯವರೆಗೆ ಬರಲಿದೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲದರಿಂದ ಬೈಕ್ ಸವಾರಿಯ ಹೊಸ ಅನುಭವವನ್ನು ಎಸ್340 ನೀಡಲಿದೆ.

ಬೆಂಗಳೂರಿನಲ್ಲಿ ಉತ್ಪಾದನಾ ಘಟಕ

ದೇಶದಲ್ಲಿ ಮೊದಲು ಬೆಂಗಳೂರಿನ ಮಾರುಕಟ್ಟೆಗೆ ಈ ಸ್ಮಾರ್ಟ್ ಸ್ಕೂಟರ್ ಪರಿಚಯಿಸಲಾಗಿದ್ದು, ಅದರೊಂದಿಗೆ ಚೆನ್ನೈ ಮತ್ತು ಪುಣೆಯಲ್ಲೂ ಇದನ್ನು ಮಾರಾಟ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅಥೆರ್ ಎನರ್ಜಿ ಸ್ಮಾರ್ಟ್ ಸ್ಕೂಟರ್‍ನ ಉತ್ಪಾದನಾ ಘಟಕ ಸ್ಥಾಪನೆ ಮಾಡಿದೆ. ಈ ವರ್ಷದ ಅಂತ್ಯದ ವೇಳೆ ಬೆಂಗಳೂರಿನಲ್ಲಿ ಎಸ್340 ಉತ್ಪಾದನೆಯಾಗಲಿದೆ. ಸಂಸ್ಥೆಯ ವೆಬ್‍ಸೈಟ್ www.atherenergy.com ನಲ್ಲಿ ಸ್ಕೂಟರ್ ಬುಕ್ ಮಾಡಬಹುದಾಗಿದೆ. ಸ್ಕೂಟರ್ ಬುಕ್ ಮಾಡಿದವರಿಗೆ ನೇರ ಮನೆಗೆ ಡೆಲಿವರಿ ನೀಡುವ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿಕೊಂಡಿದೆ.

image


ಹಲವು ಪೇಟೆಂಟ್‍ಗಳು:

ಟಚ್‍ಸ್ಕೀನ್ ಡ್ಯಾಷ್‍ಬೋರ್ಡ್, ನ್ಯಾವಿಗೇಷನ್ ಸೇರಿದಂತೆ ಹಲವು ವಿಶೇಷತೆಗಳಿರುವ ಎಸ್340 15ಕ್ಕೂ ಹೆಚ್ಚಿನ ಪೇಟೆಂಟ್ ಹೊಂದಿದೆ. ಬೇರೆ ಇನ್ಯಾವುದೇ ಸಂಸ್ಥೆ ಇದರಲ್ಲಿನ ವಿಶೇಷತೆಗಳನ್ನು ಬಳಸಿ ದ್ವಿಚಕ್ರ ವಾಹನ ತಯಾರಿಸಬೇಕೆಂದರೆ ಅಥೆರ್‍ನ ಅನುಮತಿ ಪಡೆದುಕೊಳ್ಳಬೇಕಿದೆ.

ಅಥೆರ್ ಬಗ್ಗೆ:

ಐಐಟಿ ವ್ಯಾಸಂಗ ಮಾಡಿರುವ ತರುಣ್ ಮೆಹ್ತಾ ಮತ್ತು ಸ್ವಪ್ನೀಲ್ ಜೈನ್ ಹುಟ್ಟುಹಾಕಿರುವ ಸಂಸ್ಥೆ ಅಥೆರ್ ಎನರ್ಜಿ. 2013ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಲಿಥಿಯಂ ಇಯಾನ್ ಬ್ಯಾಟರಿಗಳ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿತ್ತು. ಇದೀಗ ಸ್ಮಾರ್ಟಾಗಿ ಬ್ಯಾಟರಿ ಚಾಲಿತ ಬೈಕ್ ತಯಾರಿಕೆಗೆ ಮುಂದಾಗಿದೆ.

ಇದನ್ನು ಓದಿ:

1. ಗರ್ಭಿಣಿಯರ ಆರೋಗ್ಯದ ಕಾಳಜಿವಹಿಸುವ mhealth

2. ಬಿಯರ್ ಕುಡಿದು ಬೋರ್ ಆಗಿದ್ರೆ ಬಿಯರ್ ಕೇಕ್ ತಿನ್ನಿ..

3. ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?