ಎಟಿಎಂ ಕಾರ್ಡ್​ ಇಲ್ದೇ ಇದ್ರೂ ಹಣ ಡ್ರಾ ಮಾಡಬಹುದು..!

ಟೀಮ್​ ವೈ.ಎಸ್​. ಕನ್ನಡ

ಎಟಿಎಂ ಕಾರ್ಡ್​ ಇಲ್ದೇ ಇದ್ರೂ ಹಣ ಡ್ರಾ ಮಾಡಬಹುದು..!

Thursday June 23, 2016,

2 min Read

ಬ್ಯಾಂಕ್​ಗೆ ಹೋಗಿ ಚಲನ್​ ಬರೆದು, ಅಕೌಂಟ್​ನಿಂದ ದುಡ್ಡು ಪಡೆಯೋ ಕಾಲ ಹೋಗಿ ಅದೆಷ್ಟೋ ವರ್ಷವಾಗಿದೆ. ಈಗೀಗ ಡೆಪಾಸಿಟ್​ ಮಾಡೋದಿಕ್ಕೆ ಕೂಡ ಬ್ಯಾಂಕ್​ಗೆ ಹೋಗಬೇಕಿಲ್ಲ. ಇಂಟರ್​ನೆಟ್​ ಮೂಲಕ ಬ್ಯಾಂಕ್​ನ ಎಲ್ಲಾ ವ್ಯವಹಾರಗಳು ಒಂದೇ ಕ್ಲಿಕ್​ನಲ್ಲಿ ಮುಗಿದು ಬಿಡುತ್ತದೆ. ಆದ್ರೆ ಎಟಿಎಂನ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರ್ಚೇಸ್​ನಿಂದ ಹಿಡಿದು ಬುಕ್ಕಿಂಗ್​ ತನಕ ಎಲ್ಲವೂ ಎಟಿಎಂ ಕಾರ್ಡ್​ ಅಥವಾ ಡೆಬಿಟ್​ ಕಾರ್ಡ್​ನಿಂದ ನಡೆದು ಹೋಗುತ್ತದೆ. ಆದ್ರೆ ಎಟಿಎಂ ಕಾರ್ಡ್​ ಮಾತ್ರ ಹಳೆಯ ವ್ಯವಸ್ಥೆಯನ್ನೇ ಹೊಂದಿದೆ. ಹಳೆಯ ಎಟಿಎಂ ಟೆಕ್ನಾಲಜಿಗೆ ಹೊಸ ಟಚ್​ ನೀಡೋದಿಕ್ಕೆ ಆಧಾರ್​ ನಂಬರ್​ ಸಹಕಾರಿ ಆಗಿದೆ. ಆಧಾರ್​ ಮತ್ತು ಅಕೌಂಟ್​ ನಂಬರ್​ ಲಿಂಕ್​ ಆಗಿದ್ದರೆ, ಎಟಿಎಂನಿಂದ ಹಣವನ್ನು ಕೂಡ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ.

image


ಇನ್ನುಮುಂದೆ ಎಟಿಎಂ ಕಾರ್ಡ್ ಇಲ್ಲದೆಯು ನೀವು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದು. ಮೊದಲೆಲ್ಲ ಎಟಿಎಂ ಕಳೆದುಹೋದ್ರೆ ಹೇಗಪ್ಪಾ ಎನ್ನುವಂತ ಪರಿಸ್ಥಿತಿಯಿತ್ತು. ಎಟಿಎಂ ಕಾರ್ಡ್ ಕಳೆದ್ರೆ ಸಾಕು ಎಷ್ಟೋ ಜನ ಪರತಪಿಸಿಸುವಂತಿತ್ತು. ಅನೇಕರು ಕಾರ್ಡ್ ಹಿಂದೇನೆ ತಮ್ಮ ಪಿನ್ ನಂಬರ್ ಬರೆದು ನಾಮ ಹಾಕಿಸಿಕೊಂಡವರಿದ್ದಾರೆ. ಆದರೆ ಈಗ ಇಂತಹ ತಲೆನೋವಿಲ್ಲ. ಎಟಿಎಂ ಕಾರ್ಡ್ ಇಲ್ಲದಿದ್ರು ಜನರು ಸರಾಗವಾಗಿ ಹಣ ಡ್ರಾ ಮಾಡಿಕೊಳ್ಳಬಹುದು.

ಎಟಿಎಂಗೆ ಹೋಗಿ ಹಣ ಡ್ರಾ ಮಾಡಿಕೊಳ್ಳಬೇಕು ಅಂದ್ರೆ ಹತ್ತಾರು ತಾಪತ್ರಯ. ಎಟಿಎಂ ಕಾರ್ಡ್ ಇದ್ರೂ, ಪಿನ್ ಕೋಡ್ ತಪ್ಪಾದ್ರೆ ಹಣ ಬರೋದೆ ಇಲ್ಲಾ. ಅಲ್ಲದೇ ಎಟಿಎಂ ಕಾರ್ಡನ್ನು ಯಾರಾದ್ರೂ ಕದಿಯಬಹುದು ಅನ್ನೋ ಆತಂಕ ಬೇರೆ. ಇಂಥ ಆತಂಕಕ್ಕೆ ಈಗ ಬ್ರೇಕ್ ಹಾಕೋ ಸಮಯ ಬಂದಿದೆ. ಎಟಿಎಂ ಕಾರ್ಡ್ ಇಲ್ದಿದ್ರೂ ಹಣ ಕೈ ಸೇರುತ್ತೆ.

image


ಜಸ್ಟ್ ಸ್ಕ್ಯಾನರ್ ಮೇಲೊಂದು ಥಂಬ್ ಇಂಪ್ರೆಷನ್​..! ಆಧಾರ್ ಕಾರ್ಡ್ ನಂಬರ್..! ಇಷ್ಟಿದ್ರೆ ಕ್ಯಾಶ್ ಗ್ಯಾರೆಂಟಿ..! ಇದು ಡಿಸಿಬಿ ಬ್ಯಾಂಕ್ ಗ್ರಾಹಕರಿಗೆ ನೀಡಿರೋ ಸ್ಪೆಷಲ್ ಸೇವೆ. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಆಧಾರ್ ಡೇಟಾ ಬಳಸಿ ಹಣ ಡ್ರಾ ಮಾಡೋ ಎಟಿಎಂನ್ನು ಡಿಸಿಬಿ ಬ್ಯಾಂಕ್ ಪ್ರಾರಂಭಿಸಿದೆ. ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಈ ಎಟಿಎಂ ಚಾಲ್ತಿಯಲ್ಲಿದೆ. ಆದ್ರೆ ರಾಜ್ಯದಲ್ಲಿ ಬೆಂಗಳೂರಿನ ಜಯನಗರದಲ್ಲಿ ಮೊದಲ ಎಟಿಎಂ ಆರಂಭವಾಗಿದೆ. ಯು.ಐ.ಡಿ. ಎ.ಐ ನ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಡಿಸಿಬಿ ಬ್ಯಾಂಕ್​ನ ಈ ವಿನೂತನ ಎಟಿಎಂ ಲೋಕಾರ್ಪಣೆ ಮಾಡುವ ಮೂಲಕ ಹೊಸ ತಂತ್ರಜ್ಞಾನವನ್ನು ನಗರದ ಜನರಿಗೆ ಅರ್ಪಿಸಿದ್ದಾರೆ.

ಇದನ್ನು ಓದಿ: ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

ಜಗತ್ತಿನಲ್ಲಿ ಎಟಿಎಂನಿಂದ ಹಣ ಡ್ರಾ ಮಾಡುವ ಅತ್ಯಂತ ಸುಲಭ ವಿಧಾನವನ್ನು ಡಿಸಿಬಿ ಬ್ಯಾಂಕ್ ಪರಿಚಯಿಸಿದೆ. ನಿಮ್ಮ ಖಾತೆಗೆ ನಿಮ್ಮ ಆಧಾರ್ ನಂಬರ್ ಲಿಂಕ್ ಮಾಡಲಾಗುತ್ತದೆ. ಜೊತೆಗೆ ಬಯೋಮೆಟ್ರಿಕ್ ಸಿಸ್ಟಮ್ ಆಳವಡಿಸಿರುವುದರಿಂದ ನಿಮ್ಮ ಆಧಾರ್ ನಂಬರ್ ಬೇರೆಯವರು ಕದ್ದು ನೋಡಿದ್ರೂ, ನಿಮ್ಮ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ನಿಮ್ಮ ಹೆಬ್ಬೆರಳು ಇಟ್ಟರೆ ಮಾತ್ರ ಅಲ್ಲಿ ಎಟಿಎಂ ಯಂತ್ರ ಕಮಾಂಡ್ ತೆಗೆದುಕೊಳ್ಳುತ್ತದೆ. ಹಾಗಾಗಿ ಇದು ಅತ್ಯಂತ ಸೇಫ್ ವಿಧಾನವಾಗಿದೆ.

image


ಆಧಾರ್ ಎಟಿಎಂ ಬಳಸೋದು ತುಂಬಾ ಸುಲಭ. ಗ್ರಾಹಕರು ಈ ಎಟಿಎಂ ಮೂಲಕ ಹಣ ತೆಗೆಯಬೇಕಂದ್ರೆ ಮೊದಲು ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಬೇಕು. ಆಧಾರ್​ನ 12 ಅಂಕಿಗಳನ್ನು ಖಾತೆ ತೆರೆಯುವಾಗಲೇ ಲಿಂಕ್ ಮಾಡಿಸಿರಬೇಕು. ನಂತರ ಹಣ ತೆಗೆದುಕೊಳ್ಳಬೇಕಂದ್ರೆ ಮೊದಲು ನಿಮ್ಮ ಆಧಾರ್​ನ 12 ಅಂಕಿಗಳನ್ನು ಪ್ರೆಸ್ ಮಾಡಬೇಕು. ಬಳಿಕ ಸ್ಕ್ಯಾನರ್ ಮೇಲೆ ನಿಮ್ಮ ಹೆಬ್ಬೆರಳನ್ನು ಒತ್ತಿ. ಇದಾದ ಬಳಿಕ ಎಷ್ಟು ಹಣ ಬೇಕೋ ಅಷ್ಟು ಟೈಪ್ ಮಾಡಿ, ಎಟಿಎಂನಿಂದ ಹಣ ಹೊರಬರುತ್ತೆ.

ಈ ವಿನೂತನ ಸೇವೆ ಪ್ರಾರಂಭವಾಗುತ್ತಿದಂತೆ ಸಾಕಷ್ಟು ಜನ ಗ್ರಾಹಕರು ಬ್ಯಾಂಕ್​ನಲ್ಲಿ ಖಾತೆ ತೆರೆದು, ಆಧಾರ್ ನಂಬರ್ ಹಾಕಿ ಹಣ ಡ್ರಾ ಮಾಡಿಕೊಳ್ಳಲ್ಲು ಮುಂದಾಗಿದ್ದಾರೆ. ಈ ಜನೋಪಯೋಗಿ ಹಾಗೂ ಸೇಫ್ಟಿ ಸರ್ವೀಸ್ ರಾಜ್ಯಾದ್ಯಂತ ವಿಸ್ತರಿಸಲಿ. ಜೊತೆಗೆ ಇತರ ಬ್ಯಾಂಕ್​ಗಳು ಕೂಡ ಈ ಸೇವೆ ನೀಡುವಂತಾದರೆ, ಜನರು ನಿಟ್ಟುಸಿರಿನಿಂದ ತಮ್ಮ ಹಣವನ್ನು ಡ್ರಾ ಮಾಡಿಕೊಳ್ಳಬಹುದು.

ಇದನ್ನು ಓದಿ:

1. "ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

2. ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

3. "ಚಿಲ್ಲರೆ" ವಿಷ್ಯಕ್ಕೆ ಇನ್ನುಮುಂದೆ ಜಗಳ ಆಡ್ಬೇಡಿ..ಸ್ಮಾರ್ಟ್​ಕಾರ್ಡ್​ ಇಟ್ಕೊಂಡು ಓಡಾಡಿ..!