ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

ಎನ್​ಎಸ್​ಆರ್​

ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

Wednesday April 06, 2016,

3 min Read

ಟ್ರಾಫಿಕ್ ಸಮಸ್ಯೆಗೆ ಇಂದು ನಿನ್ನೆಯದಲ್ಲ, ದಶಕಗಳಿಂದ ಬೆಂಗಳೂರು ಟ್ರಾಫಿಕ್ ತವರೂರು ಆಗಿದೆ. ಇಲ್ಲಿ ಪ್ರತಿ ದಿನವೂ ಟ್ರಾಫಿಕ್​ನಲ್ಲಿ ಸಿಲುಕಿ ಕೊಳ್ಳದೆ ಬಚಾವ್ ಆಗಲು ಸಾಧ್ಯವೆ ಇಲ್ಲ. ಎಂಟು ಗಂಟೆಗಳ ಕಾಲ ಆಫೀಸ್​ನಲ್ಲಿ ಕೆಲಸ ಮಾಡಿದ್ರೆ, 4 ಗಂಟೆಗಳ ಕಾಲ ಟ್ರಾಫಿಕ್​ನಲ್ಲೇ ಸಮಯ ಕಳೆಯುವವರು ಬೆಂಗಳೂರಿನಲ್ಲಿ ತುಂಬಾ ಜನ ಇದ್ದಾರೆ. ಆದರೆ ಇಲ್ಲೊಂದು ಮಹಿಳಾ ಗುಂಪು ಇಂತಹ ಒಂದು ಸಮಸ್ಯೆಗೆ ಪರಿಹಾರ ಹುಡುಕಿಕೊಂಡಿದ್ದಾರೆ.

image


ಬೆಂಗಳೂರು ಟ್ರಾಫಿಕ್​ಗೆ ಬರೀ ಬಯ್ಯೋ ಜಾಯಮಾನ ನಿಮ್ಮದಾದ್ರೇ! ಎಲ್ಲದಕ್ಕೂ ಸರ್ಕಾರವೇ ಹೋಣೆ ಅಂತ ಗೋಗರಯೋ ಬುದ್ಧಿ ನಿಮಗಿದ್ರೇ! ಖಂಡಿತ ಈ ಸ್ಟೋರಿ ಓದಿ. ಬಹುಶಃ ನಿಮ್ಮ ಸುತ್ತಮತ್ತಲಿನ ಸಮಸ್ಯೆಗೆ ಪರಿಹಾರ ಸಿಗಬಹುದು. ಯಾಕಂದ್ರೆ ನಾವು ನಿಮಗೆ ಪರಿಚಯಿಸಲು ಹೊರಟಿರುವ ಮಹಿಳೆಯರು ಎಲ್ಲರಿಗಿಂತ ವಿಭಿನ್ನ. ಅವರ ಒಂದು ಪ್ರಯತ್ನದಿಂದಾಗಿ ಇಂದು ದೇವರಬೀಸನಹಳ್ಳಿ ಜನ ನಿಟ್ಟುಸಿರು ಬಿಡುತ್ತಿದ್ದಾರೆ.

ದೇವರಬೀಸನಹಳ್ಳಿ ಜನರಿಗೆ ಸಖತ್ ಆಗಿ ಕಾಡಿದ್ದು ಟ್ರಾಫಿಕ್ ಸಮಸ್ಯೆ. ಶಾಲೆಗೆ ಹೋಗುವ ಮಕ್ಕಳು ಅದೆಷ್ಟೋ ಸಲ ಶಾಲೆಗೆ ಹೋಗುವುದರಲ್ಲಿ ಲೇಟಾಗಿ ಬೀಡುತ್ತಿತ್ತು, ಆಫೀಸ್​ಗೆ ಹೋಗುವವರು ಗಂಟೆ ಮುಂಚೆ ಮನೆ ಬೀಡಬೇಕಾಯಿತು. ಸಾಯಂಕಾಲ ಮನೆಗೆ ಲೇಟ್ ಆಗಿ ಬರುವುದು ಮಾಮೂಲಿ ಆಗಿ ಬಿಟ್ಟಿತ್ತು. ಟ್ರಾಫಿಕ್ ಸಮಸ್ಯೆಯಿಂದಾಗಿ ಸಮಯ ವ್ಯರ್ಥದ ಜೊತೆಗೆ ವಾಯುಮಾಲಿನ್ಯ ಕೂಡ ಆಗುತ್ತಿತ್ತು. ಇದರೊಂದಿಗೆ ಇಂಧನ ವ್ಯಯವಾಗುತ್ತಿತ್ತು. ಶಬ್ಧ ಮಾಲಿನ್ಯದಿಂದಾಗಿ ವಯಸ್ಸಾದವರಿಗೂ ಸಮಸ್ಯೆಯಾಗುತ್ತಿತ್ತು,. ಇದಕ್ಕೆಲ್ಲ ಕಾರಣ ಹದಗೆಟ್ಟ ರಸ್ತೆ. ಟ್ರಾಫಿಕ್ ಪೋಲೀಸರ ಕೊರತೆಯಾಗಿತ್ತು.

image


ದೇವರಬೀಸನಹಳ್ಳಿಯ ಸರ್ಕಲ್​ನ ಟ್ರಾಫಿಕ್ ನಿಯಂತ್ರಿಸಬೇಕೆಂದು ಅಲ್ಲಿನ ಮಹಿಳೆಯರು ಗಂಭಿರವಾಗಿ ಚಿಂತಿಸಿದ್ರು. ಸಾವಿತ್ರಿ ರಂಗನ್ ಮತ್ತು ಸೌಮ್ಯ ಎಂಬುವವರು ನಾವೆಲ್ಲಾ ಸೇರಿ ಏನಾದ್ರೂ ಮಾಡಬೇಕು ಎಂದು ಯೋಚಿಸುತ್ತಿರುವಾಗಲೆ ಒಂದು ಫೋರಮ್ ಸಿದ್ದವಾಯ್ತು. ಮಹಿಳೆಯರು ಪೀಕ್ ಸಮಯದಲ್ಲಿ ಟ್ರಾಫಿಕ್ ಪೋಲೀಸ್ ಕೆಲಸ ಮಾಡಲು ಮುಂದಾದ್ರು. ಆಗ ವಾಟ್ಸ್​ಅಪ್​ನಲ್ಲಿ ಒಂದು ಗ್ರೂಪ್ ಮಾಡಿಕೊಂಡು ಎಲ್ಲರೂ ಒಂದೊಂದು ಗಂಟೆ ಫೀಕ್ ಅವರ್​ನಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಬೇಕು ಎಂದು ಯೋಜನೆ ರೂಪಿಸಿದ್ವಿ".
            - ಸೌಮ್ಯ

ಟ್ರಾಫಿಕ್ ಪೋಲೀಸರು ವಾಹನಗಳನ್ನು ನಿಯಂತ್ರಿಸಲು ಅನುಸರಿಸುವ ನಿಯಮಗಳನ್ನು ಕಲಿತ್ರು. ತಾವೇ ಸೂಚನಫಲಕ ಹಿಡಿದು ಕೊಂಡ್ರು. ಆರು ತಿಂಗಳ ಹಿಂದೆ ಶುರುವಾದ ಈ ಸಣ್ಣ ಪ್ರಯತ್ನ ಇಂದು ಹಲವು ಜನರ ನೆಮ್ಮದಿಗೆ ಕಾರಣವಾಗಿದೆ. ಗಂಟೆಗಳ ಕಾಲ ಟ್ರಾಫಿಕ್​ನಲ್ಲಿ ಇರುತ್ತಿದ್ದ ಜನ ಈಗ 10 ನಿಮಿಷದಲ್ಲೇ ಸುಗಮವಾಗಿ ಬಂದು ಮನೆಗೆ ತಲುಪುತ್ತಾರೆ. ಇದಕ್ಕೆಲ್ಲಾ ಕಾರಣ ಈ ಟ್ರಾಫಿಕ್ ಫೋರಮ್.

ಇದನ್ನು ಓದಿ: ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

ಇಂದು ಈ ಫೋರಮ್​​ನಲ್ಲಿ ಹಲವು ಗೃಹಣಿಯರಿದ್ದಾರೆ. ಕೆಲಸ ಮಾಡುವ ಮಹಿಳೆಯರು ಇದ್ದಾರೆ. ಅವರದೆಯಾದ ಒಂದು ವಾಟ್ಸಾಆ್ಯಪ್ ಗುಂಪು ಮಾಡಿಕೊಂಡು ಇಲ್ಲಿ, ಎಲ್ಲರು ಒಂದು ಗಂಟೆಗಳ ಕಾಲ ಟ್ರಾಫಿಕ್ ನಿಯಂತ್ರಿಸುತ್ತಾರೆ. ಗ್ರೂಪ್​ನಲ್ಲೇ ಯಾರು ಯಾವ ಸಮಯದಲ್ಲಿ ಹೋಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿ ಇದು ಯಾರಿಗೂ ಹೊರೆಯಾಗಿಲ್ಲ. ಮೊದ-ಮೊದಲು ಇವರ ಪ್ರಯತ್ನಕ್ಕೆ ನಗುತ್ತಿದ್ದ ಜನರು ಇಂದು ಇವರನ್ನು ಹೊಗಳುತ್ತಿದ್ದಾರೆ ಇವರ ನಿಸ್ವಾರ್ಥ ಸೇವೆಗೆ. ತಲೆಬಾಗಿದ್ದಾರೆ. ಇವರಿಂದಾಗಿಯೇ ಈ ಭಾಗದ ಜನರ ಮೊಗದಲ್ಲಿ ನಗು ಮೂಡಲು ಕಾರಣವಾಗಿದೆ.

image


ಇವರು ಸರ್ಕಾರದಿಂದ ಏನನ್ನೂ ಕೇಳಲಿಲ್ಲ. ಹಂಗಂತ ಕೆಲಸ ಇಲ್ಲದೇ ಫ್ರೀಯಾಗಿರೋರು ಅಲ್ಲ. ಬ್ಯುಸಿ ಲೈಫ್​ನ ನಡುವೆ ಬಿಡುವು ಮಾಡಿಕೊಂಡು ತಮ್ಮ ಏರಿಯಾದ ಸರ್ಕಲ್​ನಲ್ಲಿ ಗಂಟೆಗೆ ಒಬ್ಬರಂತೆ ಬೆಳಗ್ಗೆಯಿಂದ ರಾತ್ರಿಯವರೆಗೆ ಟ್ರಾಫಿಕ್ ನಿಯಂತ್ರಣ ಮಾಡ್ತಾರೆ ಇವ್ರು. ಬೆಳಂದೂರ್ ಹತ್ತಿರ ಇರುವ ದೇವರಬೀಸನಹಳ್ಳಿಯ ಸರ್ಕಲ್​ನಲ್ಲಿ ಈ ಅಪರೂಪದ ಪ್ರಯತ್ನ ನಡೆಯುತ್ತಿರೋದು ನಿಜವಾಗಿಯೂ ಎಲ್ಲರಿಗೆ ಪ್ರೇರಣೆಯಾಗಿದೆ. ಹಾಗಾಗಿ ಅನೇಕ ಜನರು ತಮ್ಮೊಂದಿಗೆ ಕೈ ಜೋಡಿಸುತ್ತಿರುವುದಾಗಿ ಈ ಫೋರಮ್ ಸಕ್ರೀಯ ಸದಸ್ಯ ಆಟೋ ಚಾಲಕರಾದ ಮೊಹ್ಮದ್ ರಫೀಕ್ ಹೇಳುತ್ತಾರೆ.

ಮೊದಲು ಇಲ್ಲಿ ಬಾಡಿಗೆಗೆ ಬಂದ್ರು ಹೋಗಿ ಬರಲು ಗಂಟೆಗಳ ಕಾಲ ಸಮಯವಿಡುತ್ತಿತ್ತು. ಹೆಚ್ಚು ಬಾಡಿಗೆ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಬಾಡಿಗೆ ಸಿಕ್ಕರು ಅರ್ಧಹಣ ಟ್ರಾಫಿಕ್​ನಲ್ಲೇ ಖಾಲಿಯಾಗುತ್ತಿತ್ತು. ದುಡಿದ ಹಣ ಕೂಡ ನಮಗೆ ಸಿಗುತ್ತಿರಲಿಲ್ಲ. ಆದರೆ ಈಗ ನಾವೇ ನಮ್ಮ ಫೋರಮ್​ನವರು ಮಾಡುತ್ತಿರುವ ಕಾರ್ಯದಿಂದ ಇಂಧನ ಉಳಿಯುತ್ತಿದೆ. ವಾಯುಮಾಲಿನ್ಯ, ಶಬ್ಧ ಮಾಲಿನ್ಯದ ಜೊತೆ ಬೇಕಾದಷ್ಟೂ ಸಮಯ ನಮ್ಮಗೆ ಉಳಿಯುತ್ತಿದೆ ಹಾಗಾಗಿ ನಮ್ಮ ಕುಟುಂಬದವರಿಗೆ ನಾವು ಸಮಯ ನೀಡಲು ಸಾಧ್ಯವಾಗುತ್ತಿದೆ ಇದರಿಂದ ಎಲ್ಲರೂ ಖೂಷಿಯಾಗಿದ್ದಾರೆ.

image


"ದೇವರಬೀಸನಹಳ್ಳಿ ಟ್ರಾಫಿಕ್ ಫೋರಮ್ ಅನ್ನೊ ವಾಟ್ಸ್​ಆ್ಯಪ್​ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಯಾರು ಫ್ರೀ ಆಗಿರ್ತಾರೆ ಅಂತ ತಿಳಿದು ಟ್ರಾಫಿಕ್ ನಿಯಂತ್ರಣಕ್ಕೆ ಒಬ್ಬರಾದ ಮೇಲೆ ಒಬ್ಬರು ಬರ್ತಾರೆ. ಇವರ ಏರಿಯಾದ ಟ್ರಾಫಿಕ್ ಕಮ್ಮಿಯಾಗಿದೆ. ಅರ್ಧಗಂಟೆಯ ಪ್ರಯಾಣ 10ನಿಮಿಷಕ್ಕೆ ಇಳಿದಿದೆ. ಈ ಕೆಲಸ ನಮಗೂ ನಮ್ಮ ಏರಿಯಾದ ಜನಕ್ಕೂ ಖುಷಿಕೊಟ್ಟಿದೆ" 
      - ಸಾವಿತ್ರಿ ರಂಗನ್

ಸದ್ಯ ಇವರ ಕೆಲಸವನ್ನು ನೋಡಿ ಇವರ ಗ್ರೂಪ್​ಗೆ ಹಲವರು ಸ್ವಯಂಪ್ರೇರಣೆಯಿಂದ ಬಂದು ಸೇರಿಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳು, ಸಹ ಆಸಕ್ತಿ ತೋರಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಇಲ್ಲಿ ಸೇವೆ ಮಾಡುವ ಅವಕಾಶ ನೀಡಿಲ್ಲ. ಅವರಿಗೆ ಚೆನ್ನಾಗಿ ಓದಿ ಎಂದು ಕಿವಿಮಾತು ಹೇಳುವ ಈ ಫೋರಮ್​​ನವರು,ಈ ಕಾರ್ಯದಿಂದ ತುಂಬಾ ನೆಮ್ಮದಿಯಾಗಿದ್ದಾರೆ. ಸದ್ಯ ಹಲವು ಪುರುಷರು ಸಹ ಇವರ ಜೊತೆ ಕೈಜೋಡಿಸಿದ್ದು, ಸಾಯಂಕಾಲ 5 ರಿಂದ 9ರವರೆಗೆ ಮತ್ತು ಬೆಳ್ಳಂಬೆಳಗ್ಗೆ ಟ್ರಾಫಿಕ್ ನಿಯಂತ್ರಿಸುತ್ತಿದ್ದಾರೆ. ಇವರ ಈ ಒಂದು ಸಣ್ಣ ಪ್ರಯತ್ನದಿಂದ ಉಳಿಯುತ್ತಿರುವ ಎರಡು ಮೂರು ಗಂಟೆ ಸಮಯವನ್ನು ಎಲ್ಲರೂ ತಮ್ಮ ಕುಟುಂಬದೊಂದಿಗೆ ಸಾರ್ಥಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಫೋರಮ್ ಹಲವರಿಗೆ ಪ್ರೇರಣೆಯಾಗಿದೆ.

ನಮ್ಮ ಸುತ್ತಮತ್ತಲಿನ ಸಮಸ್ಯೆಗಳನ್ನ ನೊಡಿಕೊಂಡು ಸುಮ್ಮನಿರೋದು ಬಿಟ್ಟು ನಾವೇ ಪರಿಹಾರ ಕಂಡುಕೊಂಡ್ರೇ ಸುಖೀ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ನಮ್ಮ ಸಮಸ್ಯೆಗಳ ವಿರುದ್ದ ನಾವೇ ಎದ್ದು ನಿಂತು, ಜವಾಬ್ದಾರಿಯನ್ನ ಹೊತ್ತು, ಪರಿಹಾರದ ಕಡೆಗೆ ಸಾಗಿದರೆ ಯಶಸ್ಸು ಗ್ಯಾರೆಂಟಿ. ಇವರ ಒಂದು ಪ್ರಯತ್ನ ಹಲವರಿಗೆ ಪ್ರೇರಣೆಯಾದಲ್ಲಿ, ಪೋಲೀಸರ ಹೊರೆ ಕಡಿಮೆಯಾಗಲಿದೆ. ಭಾರತ ಟ್ರಾಫಿಕ್ ಮುಕ್ತ ದೇಶವಾಗಲಿದೆ. ಒಂದು ಸಣ್ಣ ಪ್ರಯತ್ನ ನಿಮ್ಮಿಂದಲೂ ಬಂದರೆ ಮಾತ್ರ.

ಇದನ್ನು ಓದಿ:

1. ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..

2. ರಜಾ ದಿನಗಳಿಗೆ ಸಿಂಪಲ್​ ಆಗಿ ಪ್ಲಾನ್​ ಮಾಡಿ...

3. ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!