ಸಿಟಿಯಲ್ಲೋಂದು ಹಳ್ಳಿ - ಬನ್ನಿ ಮಕ್ಕಳಿಗೆ ಪ್ರಾಣಿ ಪರಿಚಯ ಮಾಡಿಸಿ

ಆರಾಭಿ ಭಟ್ಟಾಚಾರ್ಯ

Sunday February 21, 2016,

2 min Read

ಈಗಿನ ಮಕ್ಕಳಿಗೆ ಬಾತುಕೋಳಿ, ಕೋಳಿ, ಹಸು ,ಎಮ್ಮೆ ನೋಡಲು ಹೇಗಿವೆ ಅನ್ನೋದೆ ಗೊತ್ತಿರಲ್ಲ. ಹೆಚ್ಚೆಚ್ಚು ಅಂದ್ರೆ ಚಿತ್ರದಲ್ಲಿ , ಪುಸ್ತಕದಲ್ಲಿ ನೋಡಿರ್ತಾರೆ. ಇನ್ನೂ ಹೆಚ್ಚು ಅಂದ್ರೆ ಶಾಲೆಗೆ ಹೋಗುವಾಗ ಹಸುವನ್ನ ಕಂಡು ಆಶ್ಚರ್ಯದಿಂದ ಬೆರಗಾಗುತ್ತಾರೆ. ನಮ್ಮ ಜೀವನ ಶೈಲಿ ಬದಲಾದ ಹಾಗೆ ಹಳ್ಳಿ ಪರಿಸರ ,ಪ್ರಾಣಿಗಳ ಪರಿಚಯ ಎಲ್ಲವೂ ಕೂಡ ದೂರ ಆಗುತ್ತಾ ಹೋಗುತ್ತಿದೆ. ಆದ್ರೆ ಮನುಷ್ಯ ಅಂದ ಮೇಲೆ ಪ್ರಾಣಿ ಹಳ್ಳಿ ಸೊಗಡು ಇವುಗಳ ಪರಿಚಯ ಇರಲೇಬೇಕು. ಇಂದಿನ ಬ್ಯೂಸಿ ಲೈಫ್ ನಲ್ಲಿ ಮನೆಯಲ್ಲಿರೋ ಎಲ್ಲರೂ ತಮ್ಮದೆಯಾದ ಕೆಲಸದಲ್ಲಿ ಬ್ಯೂಸಿ ಆಗಿರ್ತಾರೆ. ಮನೆಯಲ್ಲಿ ನಾಲ್ಕು ಜನ ಇದ್ರೆ ಒಬ್ಬೊಬ್ಬರಿಗೆ ಒಂದೊಂದು ದಿನ ರಜೆ. ಹಳ್ಳಿ ಹಿನ್ನಲೆಯಿಂದ ಬಂದು ಸಿಟಿಯಲ್ಲಿ ವಾಸವಿದ್ರು ಕೂಡ ಬಿಡುವು ಮಾಡಿಕೊಂಡು ದೂರದ ಊರಿಗೆ ಬೇಟಿ ಕೊಡಲು ಸಾಧ್ಯ ಆಗಿರೋದಿಲ್ಲ. ಆದ್ರೆ ಮಕ್ಕಳಿಗೆ ತಮ್ಮ ಊರು ಪರಿಸರವನ್ನ ಪರಿಚಯ ಮಾಡಿಸ್ಬೇಕು ಅನ್ನೋ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಆದ್ರೆ ಇಷ್ಟೆಲ್ಲ ಬೆಳೆದಿರೋ ಪಟ್ಟಣದಲ್ಲಿ ಅದೇಗೆ ಪ್ರಾಣಿ ,ಹಳ್ಳಿ ,ಕೆರೆ ಪರಿಚಯ ಆಗೋದಕ್ಕೆ ಸಾಧ್ಯ. ನಮ್ಮದಂತು ಆಯ್ತು ಇನ್ನ ಮಕ್ಕಳಿಗೆ ಪ್ರಾಣ ಹಳ್ಳಿ ಪರಿಸರವನ್ನು ಪರಿಚಯ ಮಾಡಿಸಬೇಕು ಅಂತ ಚಿಂತಿಸ್ತಿರೋರಿಗೆ ಇಲ್ಲಿದೆ ಒಂದು ಸೂಪರ್ ಜಾಗ. ಇಲ್ಲಿ ಮಕ್ಕಳು ಹಳ್ಳಿ ವಾತಾವರಣದಲ್ಲಿ ಬೆರೆಯಬಹುದು. ಪ್ರಾಣಿಗಳ ಜೊತೆ ಆಟ ಆಡಬಹುದು ಅಷ್ಟೇ ಅಲ್ಲದೆ ಅವುಗಳ ಜೊತೆ ಬೆರೆತು ಆಟ ಆಡಬಹುದು.

ಮಾರ್ಟಿನ್ ಫಾರ್ಮ್ ಅನ್ನೋ ಪುಟ್ಟ ಹಳ್ಳಿ

ಚಿಕ್ಕದೊಂದು ಕೆರೆ, ಅದ್ರಲ್ಲಿ ಹಾಯಾಗಿ ಈಜುತ್ತಿರೋ ಬಾತುಕೋಳಿಗಳು,ಅಲ್ಲಲ್ಲಿ ಹುಲ್ಲು ಮೇಯುತ್ತಿರೋ ಹಸು ಕರುಗಳು, ಚೆಂದದ ಗುಡಿಸಲುಗಳು ಇವೆಲ್ಲ ಕಂಡು ಬರೋದು ಮಾರ್ಟಿನ್ ಫಾರ್ಮ್ ನಲ್ಲಿ ,ಸರ್ಜಾಪುರದ ರಸ್ತೆಯಲ್ಲಿರೋ ಚಿಕ್ಕ ಬೆಳಂದೂರಿನ ಬಳಿ ಇರೋ ಮಾರ್ಟಿನ್ ಫಾರ್ಮ್ ನಲ್ಲಿ ಇಷ್ಟೆಲ್ಲ ಅನುಭವ ಆಗುತ್ತೆ…ಹಾಗಂತ ಇವು ಟೂರಿಸ್ಟ್ ಪ್ಲೇಸ್ ಅಲ್ಲ..ಆದ್ರೆ ಮಕ್ಕಳಿಗಾಗಿ ಅಂತಾನೇ ಸೃಷ್ಠಿ ಆಗಿರೋ ಪುಟ್ಟ ಹಳ್ಳಿ ಪ್ರಪಂಚ…ಇಲ್ಲಿ ಕೃಷಿ ನಡೆಯುತ್ತೆ,ಪ್ರಾಣಿ ಸಾಕಾಣಿಕೆ ಆಗುತ್ತೆ ಅದರ ಜೊತೆಗೆ ಮಕ್ಕಳಿಗೆ ಹಳ್ಳಿಯ ಪ್ರಪಂಚದ ಅನಾವರಣ ಆಗುತ್ತೆ

ಇದನ್ನಿ ಓದಿ

ಮೆಟ್ರೋ ಸಿಟಿಯಲ್ಲಿ ಗುಬ್ಬಚ್ಚಿಗಳಿಗೆ ಬೆಚ್ಚನೆ ಗೂಡು

ಇಂದಿನ ಮಕ್ಕಳಿಗೆ ಹಳ್ಳಿ ಪ್ರಪಂಚ ಹಾಗೂ ಪ್ರಾಣಿಗಳ ಜೊತೆ ಬೆರೆಯೋಕೆ ಅಂತ ಅವಕಾಶ ಮಾಡಿಕೊಡಲು ಅಂತಾನೇ ಈ ರೀತಿಯ ಫಾರ್ಮ್ ಅನ್ನ ಹುಟ್ಟುಹಾಕಿದ್ದಾರೆ ಮಾರ್ಟಿನ್…ಇಲ್ಲಿಗೆ ಮಕ್ಕಳು ಬಂದ್ರೆ ಸಾಕು ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟ ಅನುಭವ ಆಗುತ್ತೆ..ಇಲ್ಲಿ ಬಂದ ಮಕ್ಕಳು ಪ್ರಾಣಿಗಳಿಗೆ ಊಟ ತಿನ್ನಿಸೋದು ,ಹಸು ಮೇಯಿಸೋದು,ಗಿಡ ಬೆಳೆಸೋದು,ಗಿಡಗಳಿಗೆ ನೀರು ಹಾಯಿಸೋದು,ಮರಗಳಲ್ಲಿ ಜೋಕಾಲಿ ಹಾಡೋದು,ಹೀಗೆ ಇನ್ನು ಅನೇಕ ಅನುಭವಗಳನ್ನ ಅನುಭವಿಸಬಹುದು…ಇದ್ರ ಜೊತೆಗೆ ಸಾಹಸ ಆಟಗಳನ್ನೂ ಆಡಬಹುದಾಗಿದೆ…

ಒಂದು ದಿನದ ಹಳ್ಳಿ ಪ್ರಯಾಣ

ಸೋಮವಾರ ಹೊರತು ಪಡಿಸಿ ಪ್ರತಿನಿತ್ಯ ಬೆಳ್ಳಿಗ್ಗೆಯಿಂದ ಸಂಜೆಯವರೆಗೂ ಓಪನ್ ಇರೋ ಈ ಸಿಟಿಯಲ್ಲಿನ ಹಳ್ಳಿಗೆ ನೀವು ಬೇಟಿ ನೀಡಿಬಹುದು..ಮೊದಲೇ ಹೇಳಿದಂತೆ ಇದು ಯಾವುದೇ ರೆಸಾರ್ಟ್ ಹಾಗೂ ಫಾರ್ಮ್ ಹೌಸ್ ಅಲ್ಲ…ಇಲ್ಲಿ ಮಕ್ಕಳಿಗೆ ಮನೋರಂಜನೆ ನೀಡೋ ಎಲ್ಲಾ ರೀತಿಯ ವಸ್ತುಗಳು ಹಾಗೂ ಜಾಗ ಲಭ್ಯ ಇದೆ…ಇಲ್ಲಿ ಯಾವುದೇ ರೀತಿ ಆಹಾರ ವ್ಯಾಪಾರವನ್ನ ಮಾಡುವುದಿಲ್ಲ…ಆದ್ರೆ ಮಕ್ಕಳಿಗೆ ಕುಡಿಯೋ ನೀರು ಶೌಚಾಲಯದ ವ್ಯವಸ್ಥೆ ಇದೆ...ಇಲ್ಲಿ ಬಂದ ಮಕ್ಕಳಿಗೆ ಮಣ್ಣಿನ ಹಾಗೂ ನೀರಿನ ಮಹತ್ವವನ್ನ ತಿಳಿಸಲಾಗುತ್ತದೆ. ಪ್ರಾಣಿಗಳ ಜೊತೆ ಆಟ ಆಡಲು ವ್ಯವಸ್ಥೆ ಮಾಡಲಾಗುತ್ತೆ. ಈಗಾಗ್ಲೆ ಸಾಕಷ್ಟು ಮಕ್ಕಳು ಬೇಟಿ ನೀಡಿರೋ ಈ ಮಾರ್ಟಿನ್ ಫಾರ್ಮ್ ಗೆ ನಿಮ್ಮ ಮಕ್ಕಳನ್ನು ಕರೆತಂದು ಮಕ್ಕಳಿಗೆ ಪುಟ್ಟಹಳ್ಳಿಯ ಪರಿಚಯ ಮಾಡಿಸಿಕೊಳ್ಳಿ…

ದಿನೇ ದಿನೇ ಬೆಳೆಯುತ್ತಿರೋ ಈ ಸಿಟಿಯ ವಾತಾವರಣವನ್ನ ನೋಡಿದ ಮಾರ್ಟಿನ್ ಮಕ್ಕಳಿಗೆ ಹೊಸದೊಂದು ಪ್ರಪಂಚದ ಪರಿಚಯ ಮಾಡಿಸಬೇಕು ಅಂತ ಯೋಚನೆ ಮಾಡಿ ಈ ಪುಟ್ಟಹಳ್ಳಿಯನ್ನ ಪ್ರಾರಂಭ ಮಾಡಿದ್ದಾರೆ…ಶಾಲೆಯಲ್ಲಿ ಮಕ್ಕಳಿಗೆ ಒಂದು ದಿನದ ಪ್ರವಾಸ ಅಂತ ಎಲ್ಲೆಲ್ಲೋ ಕರೆದುಕೊಂಡು ಹೋಗುವ ಬದಲು ಇಲ್ಲಿಗೆ ಕರೆತಂದ್ರೆ ಮಕ್ಕಳಿಗೂ ಉಪಯೋಗವಾಗುತ್ತೆ…. 

ಇದನ್ನು ಓದಿ

1. ಮುಸ್ಲಿಂರು ನಿರ್ಮಿಸಿದ ರಾಮಮಂದಿರ!

2. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

3. ಮೊಬೈಲ್​ನಲ್ಲೇ ಪಿಯುಸಿ ಪ್ರಶ್ನೆ ಪತ್ರಿಕೆ..!