ಆಗಲ್ಲ ಅನ್ನುವ ಮಾತೇ ಇಲ್ಲ-  ಕುಗ್ರಾಮದ ಕಥೆ ಬದಲಿಸಿದ ಪಂಚಾಯತ್​ ಅಧ್ಯಕ್ಷೆ..!

ಟೀಮ್​ ವೈ.ಎಸ್​. ಕನ್ನಡ

1

ನಾಯಕತ್ವ ಅಂದರೇನು..? ವರ್ಷನುಗಟ್ಟಲೆ ರಾಜಕೀಯ ಮಾಡಿ, ಶಾಸಕ, ಮಂತ್ರಿಗಿರಿ ಅಥವಾ ಚುನಾವಣೆಗಳನ್ನು ಗೆಲ್ಲುವುದೇ..? ಇದು ಯಾವುದೂ ಅಲ್ಲ. ನಿಜವಾದ ನಾಯಕತ್ವಕ್ಕೆ ನಾವು ಹೇಳುವ ಕಥೆಯನ್ನು ಓದಿ ನೋಡಿ. ನಮ್ಮ ನಿಮ್ಮ ನಡುವಿನ ರಾಜಕೀಯ ವ್ಯಕ್ತಿಗಳಿಗಿಂತ ಈಕೆ ಎಷ್ಟು ವಿಭಿನ್ನ ಅನ್ನುವುದು ಅರ್ಥವಾಗುತ್ತದೆ.

ಈಕೆಯ ಹೆಸರು ಮಳರ್​ಕೋಡಿ ಧನಸೇಕರ್. ಈಕೆಯ ಮುಂದಾಳತ್ವದಲ್ಲಿ ಸುಮಾರು 650 ಶೌಚಾಲಯಗಳು ನಿರ್ಮಾಣವಾಗಿವೆ. ಕುಗ್ರಾಮವೊಂದು ಇವತ್ತು ಶುಚಿತ್ವದ ಹೆಸರಿನಲ್ಲಿ ಮನೆ ಮಾತಾಗುತ್ತಿದೆ. ಧನಸೇಕರ್ ಕುಗ್ರಾಮವೊಂದರ ಅಧ್ಯಕ್ಷರಾಗಿ 2011ರಲ್ಲಿ ಆಯ್ಕೆಯಾಗುತ್ತಾರೆ. ಆ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇರಲಿಲ್ಲ. ಆದರೆ ಇವತ್ತು ಆ ಗ್ರಾಮ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತಮ ನಾಯಕತ್ವದಿಂದ ಪ್ರಗತಿ ಸಾಧಿಸಬಹುದು ಅನ್ನುವುದಕ್ಕೆ ಉದಾಹರಣೆ ಸಿಕ್ಕಿದೆ.

49 ವರ್ಷದ ಧನಸೇಕರ್ ಮೂಲತಃ ಕೃಷಿ ಕುಟುಂಬದಿಂದ ಬಂದವರು. ಪಂಚಾಯತ್ ಲೀಡರ್ ಆಗಿ ಬೆಳೆದ್ರು. ಪುರುಷ ಪ್ರಧಾನ ಸಮಾಜದಲ್ಲಿ ಧನಸೇಕರ್ ಹಣಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದರು. ರಾಜಕೀಯ ಜೀವನದಲ್ಲೂ ಕಷ್ಟಪಟ್ಟರು. ಆದ್ರೆ ಹಠವನ್ನು ಬಿಡಲಿಲ್ಲ. ಆರಂಭದಲ್ಲಿ ಸರಕಾರ ನೀಡುತ್ತಿದ್ದ ಧನಸಹಾಯಕ್ಕೆ ಕೂಡ ಕೈಚಾಚುವ ಪರಿಸ್ಥಿತಿ ಇತ್ತು. ಆದರೆ ಇವತ್ತು ಸರಕಾದಿಂದಲೇ ಎಲ್ಲವನ್ನೂ ಮಾಡಿಸುತ್ತಿದ್ದಾರೆ. ಪುರುಷರು ಮಾಡುವ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡಿದ್ದಾರೆ. ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.

ಇದನ್ನು ಓದಿ: "ಸ್ವಚ್ಛಗೃಹ"ದಲ್ಲಿದೆ ಕಸದಿಂದ ರಸ ಮಾಡಿಕೊಳ್ಳುವ ಪಾಠ..!

ಇಂಡಿಯಾ ಸ್ಪೆಂಡ್ ಡಿಸೆಂಬರ್ 2016ರಲ್ಲಿ ಮಾಡಿರುವ ವರದಿ ಪ್ರಕಾರ ಧನಸೇಕರ ವಾಸಿಸುವ ರಾಜ್ಯದಲ್ಲಿ ಅತೀ ಕಡಿಮೆ ಸಂತಾನೋತ್ಪತ್ತಿ ಆಗುತ್ತಿತ್ತು. ಆಸ್ಟ್ರೇಲಿಯಾ, ಫಿನ್ಲೆಂಡ್ ಮತ್ತು ಬೆಲ್ಜಿಯಂಗಿಂತಲೂ ಕಡಿಮೆ ಪ್ರಮಾಣದಲ್ಲಿ ಇಲ್ಲಿ ಗರ್ಭಧರಿಸುತ್ತಿದ್ದರು. ಶಿಶು ಮರಣ ಮತ್ತು ಗರ್ಭಿಣಿಯರು ಮರಣ ಹೊಂದುತ್ತಿದ್ದರು. ಮಕ್ಕಳ ಮತ್ತು ಮಹಿಳೆಯರ ವಿರುದ್ಧ ಅತೀ ಕಡಿಮೆ ಕ್ರೈಮ್​ಗಳಾಗುತ್ತಿದದರು. ಮೇಳಮರುಗೂರ್​​ನ ಜನರಿಗೆ ಕುಡಿಯಲು ನೀರು ಮಾತ್ರ ಇರುತ್ತಿರಲಿಲ್ಲ. ನಾಲ್ಕೈದು ದಿನಕ್ಕೆ ಒಮ್ಮೆ ನೀರು ಸಿಗುತ್ತಿತ್ತು. ಸರಕಾರಿ ಅಧಿಕಾರಿಗಳು ಈ ಗ್ರಾಮವನ್ನು ಮರೆತೇ ಬಿಟ್ಟಿದ್ದರು. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಬಂದು ಹೋಗುತ್ತಿದ್ದರು. ಮತ ಪಡೆದು ವಿಜಯಿಗಳಾದರೂ ಈ ಕುಗ್ರಾಮಕ್ಕೆ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುತ್ತಿರಲಿಲ್ಲ. ನಾವೆಲ್ಲರೂ ಅವರ ಪಾಲಿಗೆ ಸತ್ತೇ ಹೋದಂತಿದ್ದೆವು.

“ ನಾನು ಈ ವ್ಯವಸ್ಥೆಯನ್ನು ಬದಲಿಸುವ ನಿರ್ಧಾರ ಮಾಡಿದೆ. ನಾನು ಜಿಲ್ಲಾಧಿಕಾರಿಗಳಿಗೆ ನಮ್ಮ ಗ್ರಾಮದ ಬಗ್ಗೆ ವಿವರಣೆ ನೀಡಿದೆ. ಅಷ್ಟೇ ಅಲ್ಲ ಈ ಸ್ಥಿತಿಯನ್ನು ಬದಲಿಸಲು ಮನವಿ ಸಲ್ಲಿಸಿದೆ. ನಾವೇನು ಮಾಡಬಹುದು ಅನ್ನುವುದನ್ನು ಅರಿವು ಮಾಡಿಕೊಟ್ಟೆ. ಅಂದು ಕೊಂಡ ಕೆಲಸವನ್ನು ತಕ್ಕ ಮಟ್ಟಿಗೆ ಮಾಡಿದ್ದೇನೆ ”
ಮಳರ್​ಕೋಡಿ ಧನ ಸೇಕರ, ಗ್ರಾಮಪಂಚಾಯತ್ ಅಧ್ಯಕ್ಷೆ

2005ರಲ್ಲಿ ರಾಮನಾಥ ಪುರಂ ಜಿಲ್ಲೆಯ 8 ಗ್ರಾಮಗಳನ್ನು ಮೆಲಮರುಗೂರ್ ಪಂಚಾಯತ್ ಜೊತೆ ಸೇರಿಸಲಾಯಿತು. ಆದ್ರೆ ಸ್ಟೇಟ್ ಗ್ರಾಂಟ್ ಕಮಿಷನ್ ಮೆಲಮರುಗೂರ್ ಜೊತೆ ಸೇರಿದ ರಾಮನಾಥಪುರಂ ಜಿಲ್ಲೆಯ ಗ್ರಾಮಗಳಿಗೆ ಅನುಧಾನವನ್ನು ಬಿಡುಗಡೆ ಮಾಡಲಿಲ್ಲ. ಪಂಚಾಯತ್ಗಳಿಗೆ ಸ್ಟೇಟ್ ಗ್ರಾಂಟ್ ಕಮಿಷನ್ ನೀಡುತ್ತಿದ್ದ ಅನುದಾನವೇ ದೊಡ್ಡ ಆದಾಯವಾಗಿತ್ತು. ಧನಸೇಕರ ಇದಕ್ಕಾಗಿ ಹೋರಾಟ ಆರಂಭಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡಿದರು. ಮಂತ್ರಿಗಳ ಹಿಂದೆ ಬಿದ್ದರು. ಮಾಧ್ಯಮಗಳ ಮುಂದೆ ನಿಂತರು. ಕೋರ್ಟ್, ಕಟಕಟೆ ಹೀಗೆ ಎಲ್ಲವೂ ಏರಿದರು. ಸುಮಾರು 6 ತಿಂಗಳ ಬಳಿಕ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಕೊಟಾದಲ್ಲಿ ಅನುಧಾನ ಸಿಕ್ಕಿತು. ದುಡ್ಡು ಸಿಕ್ಕಿದ ಆರೇ ಆರು ತಿಂಗಳುಗಳಲ್ಲಿ ಆ ಕುಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಧನಸೇಕರ ಕಲ್ಪಿಸಿಕೊಟ್ಟರು.

ಧನಕಸೇಕರ ಅವರ ಅತೀ ದೊಡ್ಡ ಸಾಧನೆ ಅಂದರೆ ಅದು ಗ್ರಾಮದಲ್ಲಿ 650 ಶೌಚಾಲಯಗಳನ್ನು ನಿರ್ಮಿಸಿದ್ದು. ಅಂದಹಾಗೇ, ಧನಸೇಕರ ಇದಕ್ಕಾಗಿ ಕಡಿಮೆ ಹಣವನ್ನು ಖರ್ಚು ಮಾಡಿದ್ದರು. ಪ್ರತೀ ಶೌಚಾಲಯಕ್ಕೆ ಸುಮಾರು 13, 500 ರೂಪಾಯಿ ವೆಚ್ಚ ಮಾಡಿದ್ದರು. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಈ ಶೌಚಾಲಯಗಳಿಗೆ 12000 ರೂಪಾಯಿಗಳ ಸಬ್ಸಿಡಿ ಸಿಕ್ಕಿತ್ತು. ಹೆಚ್ಚು ಆರ್ಡರ್ ಗಳನ್ನು ಗುತ್ತಿಗೆ ದಾರರು ಪಡೆದುದ್ದರಿಂದ ಕಡಿಮೆ ಹಣದಲ್ಲಿ ಶೌಚಾಲಯ ನಿರ್ಮಾಣ ಸಾಧ್ಯವಾಗಿತ್ತು.

ಸಾಮಾನ್ಯವಾಗಿ ಶೌಚಾಲಯ ನಿರ್ಮಾಣ ಮಾಡಲು 20 ರಿಂದ 40 ಸಾವಿರ ರೂಪಾಯಿಗಳ ವೆಚ್ಚವಾಗುತ್ತದೆ. ಆದರೆ ಧನಸೇಕರ ಮಾತ್ರ ಕಡಿಮೆ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದರು. ತನ್ನ ಕೈಯಿಂದ ಸುಮಾರು 1ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಖರ್ಚು ಮಾಡಿದ್ದಾರೆ. ಆದರೆ ಈ ಹಣವನ್ನು ಸರಕಾರದಿಂದ ಪಡೆಯುವ ವಿಶ್ವಾಸ ಧನಸೇಕರಗಿದೆ. ಥೇವರ್ ಕಮ್ಯೂಟಿನಿಯ ಮರವಾರ್ ವಂಶಸ್ಥರಾಗಿರುವ ಧನಸೇಕರಸ ಸುಮಾರು 15 ಎಕರೆ ಜಮೀನು ಕೂಡ ಹೊಂದಿದ್ದಾರೆ. ಆದರೆ ಮಳೆ ಕೊರತೆಯಿಂದಾಗಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕಡಿಮೆ ಆಗಿದೆ. ಆದರೆ ಧನಸೇಕರಗೆ ಸಮಾಜ ಸೇವೆ ಮಾಡುವ ಮನಸ್ಸು ಕಡಿಮೆ ಆಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. 

ಇದನ್ನು ಓದಿ:

1. 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

2. ಎಂಟ್ರಿ ಲೆವೆಲ್ ಸ್ಮಾರ್ಟ್​ಫೋನ್​ಗಳಿಗೆ ಹೊಸ ಟಚ್- ಗೂಗಲ್​ನಿಂದ "ಆ್ಯಂಡ್ರಾಯ್ಡ್ ಗೊ" ಬಿಡುಗಡೆ..!

3. ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

Related Stories