1 ರೂಪಾಯಿಗೆ ವೈದ್ಯಕೀಯ ಸೇವೆ- ಮುಂಬೈನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದೆ ಭಾರತೀಯ ರೈಲ್ವೇ..!

ಟೀಮ್​ ವೈ.ಎಸ್​. ಕನ್ನಡ

1

ಭಾರತೀಯ ರೈಲ್ವೇ ವಿಶ್ವ ಮಟ್ಟದಲ್ಲೇ ಅತೀ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿದೆ. ಅತೀ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಸಂಪರ್ಕ ವ್ಯವಸ್ಥೆಯೂ ಭಾರತೀಯ ರೈಲ್ವೇ ಅನ್ನುವುದು ಅದರ ಖ್ಯಾತಿಗೆ ಇರುವ ಮತ್ತೊಂದು ಹೆಮ್ಮೆ. ಆದ್ರೆ ರೈಲ್ವೇ ಸ್ಟೇಷನ್​ಗಳೆಂದರೆ ಅದ್ಯಾಕೋ ಒಂತಾರಾ ಅನ್ ಕಂಫರ್ಟೆಬಲ್ ಪ್ಲೇಸ್ ಅನ್ನುವ ಹಾಗಾಗಿದೆ. ರೈಲ್ವೇ ನಿಲ್ದಾಣಗಳಲ್ಲಿರುವ ಶುಚಿತ್ವದ ಕೊರತೆ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವುದು ಸಹಜ. ಆದ್ರೆ ಇನ್ನುಮುಂದೆ ಭಾರತದ ರೈಲ್ವೇ ನಿಲ್ದಾಣಗಳು ಬದಲಾಗಲಿವೆ. ಅದರಲ್ಲೂ ಮಹಾನಗರ ಮುಂಬೈಯ 5 ರೈಲ್ವೇ ನಿಲ್ದಾಣಗಳು ಬದಲಾಗಲಿವೆ. ಮುಂದಿನ ಎರಡು ತಿಂಗಳುಗಳಲ್ಲಿ ಮುಂಬೈಯ 5 ರೈಲ್ವೇ ನಿಲ್ದಾಣಗಳಲ್ಲಿ ಎಮರ್ಜನ್ಸಿ ಮೆಡಿಕಲ್ ಕ್ಲಿನಿಕ್​ಗಳು ಆರಂಭವಾಗಲಿದೆ. ಈ ಮೆಡಿಕಲ್ ಕ್ಲಿನಿಕ್​ಗಳು ಕೇವಲ 1 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ. ಕೇಂದ್ರ ರೈಲ್ವೇ ಇಲಾಖೆ ಕೂಡ ಈ ಯೋಜನೆ ಜೊತೆ ಕೈ ಜೋಡಿಸಿದ್ದು, ಉಚಿತವಾಗಿ ಸ್ಥಳಾವಕಾಶವನ್ನು ಕೂಡ ಒದಗಿಸಿಕೊಡಲಿದೆ.

ಮುಂಬೈ ಮಹಾನಗರದ ಕುರ್ಲಾ, ಘಾಟ್ಕೋಪರ್, ಮುಲುಂದ್, ವಡಾಲಾ ಮತ್ತು ದದಾರ್​ನಲ್ಲಿ ಎಮರ್ಜನ್ಸಿ ಕ್ಲಿನಿಕ್​ಗಳು ಆರಂಭವಾಗಲಿದೆ. ತರ್ತುಚಿಕಿತ್ಸೆಗೆ ಮಾತ್ರವಲ್ಲದೆ, ಈ ಕ್ಲಿನಿಕ್​ಗಳಲ್ಲಿ ದಿನದ 24 ಗಂಟೆಯೂ ಎಂ.ಬಿ.ಬಿ.ಎಸ್. ಪದವಿ ಪಡೆದ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಸಕ್ಕರೆ ಕಾಯಿಲೆ, ಚರ್ಮರೋಗ ಮತ್ತು ಹೆರಿಗೆ ಮತ್ತು ಮಹಿಳಾ ತಜ್ಞ ವೈದ್ಯರು ಈ ಕ್ಲಿನಿಕ್​ಗಳಲ್ಲಿ ಇರಲಿದ್ದಾರೆ. ರಕ್ತ ಹಾಗೂ ಮೂತ್ರ ಪರೀಕ್ಷೆಯ ಲ್ಯಾಬ್​ಗಳು ಇರಲಿದ್ದು, ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟಮಾಡಲಾಗುತ್ತದೆ.

“ ಮುಂಬೈನ 5 ರೈಲ್ವೇ ನಿಲ್ದಾಣಗಳಲ್ಲಿ ಎಮರ್ಜನ್ಸಿ ಮೆಡಿಕಲ್ ರೂಮ್​ಗಳು ಕಾರ್ಯಾರಂಭ ಮಾಡಲಿದೆ. ಇಲ್ಲಿ ಒಂದು ರೂಪಾಯಿಗೆ ವೈದ್ಯಕೀಯ ಸೇವೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ 15 ರೈಲ್ವೇ ನಿಲ್ದಾಣಗಳಲ್ಲಿ ಈ ಎಮರ್ಜನ್ಸಿ ಮೆಡಿಕಲ್ ರೂಮ್​ಗಳು ಆರಂಭವಾಗಲಿದೆ. ”
- ಹಿರಿಯ ಅಧಿಕಾರಿ, ಭಾರತೀಯ ರೈಲ್ವೇ

ಪಬ್ಲಿಕ್ ಮತ್ತು ಪ್ರೈವೇಟ್ ಪಾಲುದಾರಿಕೆಯಲ್ಲಿ ಈ ವೈದ್ಯಕೀಯ ವ್ಯವಸ್ಥೆಗಳು ಆರಂಭವಾಗಲಿದೆ. ಭಾರತೀಯ ರೈಲ್ವೇ ಸ್ಥಳಾವಕಾಶದ ಜೊತೆ, ನೀರು ಮತ್ತು ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ. ಅಗತ್ಯ ಸಾಮಾಗ್ರಿಗಳು, ವೈದ್ಯಕೀಯ ಅಗತ್ಯೆಗಳು ಮತ್ತು ಉದ್ಯೋಗಿಗಳನ್ನು ಖಾಸಗಿ ಸಂಪನ್ಮೂಲಗಳು ನೋಡಿಕೊಳ್ಳಲಿವೆ. ಎಲ್ಲಾ ವ್ಯವಸ್ಥೆಗಳು ಭಾರತೀಯ ರೈಲ್ವೇ ಇಲಾಖೆಯೇ ನೋಡಿಕೊಳ್ಳಲಿದೆ.

ಮುಂಬೈ ಮಹಾನಗರದ ರೈಲ್ವೇ ನಿಲ್ದಾಣಗಳಲ್ಲಿ ಈ ರೀತಿಯ ಯೋಜನೆಗಳಿಗೆ ನಾಂದಿ ಹಾಡಿರುವುದು ಮುಂಬೈನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್, ರಾಹುಲ್ ಗುಲೆ. ರೈಲ್ವೇ ನಿಲ್ದಾಣಗಳಿಗೆ ಲಕ್ಷಾಂತರ ಜನರು ಬೇಟಿ ನೀಡುತ್ತಿರುವುದರಿಂದ, ಜನರಿಗೆ ಈ ರೀತಿಯ ವೈದ್ಯಕೀಯ ವ್ಯವಸ್ಥೆಯಿಂದ ಲಾಭವಾಗಲಿದೆ. ಒಟ್ಟಿನಲ್ಲಿ ಭಾರತೀಯ ರೈಲ್ವೇ ಬದಲಾವಣೆಯ ಹಾದಿ ತುಳಿದಿದೆ. ಅಭಿವದ್ಧಿಯ ಮಂತ್ರದ ಜೊತೆಗೆ ಜನರ ನೆರವಿಗೂ ನಿಲ್ಲುತ್ತಿದೆ.

ಇದನ್ನು ಓದಿ:

1. ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..!

2. ಟೆರೆಸ್​ ಮೇಲೆ ಬೆಳೆಯುತ್ತೆ ತರಕಾರಿ-ತಪ್ಪಿ ಹೋಯಿತು ಕಸದ ಕಿರಿಕಿರಿ..! 

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

Related Stories