ಬಾಕ್ಸಿಂಗ್ ತರಬೇತಿ ಪಡೆದಿಲ್ಲವಾದ್ರೂ ಅಂತರಾಷ್ಟ್ರೀಯ ಆಟಗಾರರಿಗೆ ನೀಡ್ತಾರೆ ಪಂಚಿಂಗ್ ಟ್ರಿಕ್ಸ್

ಟೀಮ್​ ವೈ.ಎಸ್​. ಕನ್ನಡ

0


ಮಹಿಳಾ ಬಾಕ್ಸರ್ ಅಂದಾಗ ನಮಗೆ ಮೊದಲು ನೆನಪಾಗೋದು ಮೇರಿ ಕೋಮ್. ದೇಶಕ್ಕೆ ಮೇರಿ ಕೋಮ್ ರಂತಹ ಬಾಕ್ಸರ್ ಗಳನ್ನು ನೀಡುವ ಕಾರ್ಯ ಮಾಡ್ತಿದ್ದಾರೆ ಗ್ವಾಲಿಯರ್ ನಿವಾಸಿ ತರನೇಶ್ ತಪನ್. ಮಧ್ಯಪ್ರದೇಶದ ಇಲೆಕ್ಟ್ರಿಸಿಟಿ ಬೋರ್ಡ್ ನಲ್ಲಿ ಕೆಲಸ ಮಾಡುವ ತಪನ್, ಬ್ಯಾಕ್ಸಿಂಗ್ ಟ್ರೈನಿಂಗ್ ನೀಡ್ತಾರೆ. ಹವ್ಯಾಸದಿಂದ ತರಬೇತಿ ಶುರುಮಾಡಿರುವ ತಪನ್ ಈವರೆಗೆ ಯಾವುದೇ ಬಾಕ್ಸಿಂಗ್ ತರಬೇತಿ ಪಡೆದಿಲ್ಲ. ಆದ್ರೆ ಈಗಾಲೇ ಸುಮಾರು 70ಕ್ಕೂ ಹೆಚ್ಚು ರಾಷ್ಟ್ರೀಯ ಬಾಕ್ಸಿಂಗ್ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ್ದಾರೆ.

ಯುವರ್ ಸ್ಟೋರಿ ಜೊತೆ ಮಾತನಾಡಿದ ಅವರು, `ನನಗೂ ಬಾಕ್ಸಿಂಗ್ ಗೂ ಯಾವುದೇ ಸಂಬಂಧ ಇರಲಿಲ್ಲ. ನಾನು ಹಾಕಿ ಆಟಗಾರನಾಗಿದ್ದೆ. ಗ್ವಾಲಿಯರ್ ನಲ್ಲಿ ದರ್ಪಣ ಖೇಲ್ ಸಂಸ್ಥಾ ಹೆಸರಿನ ಕ್ಲಬ್ ನಲ್ಲಿ ತರಬೇತಿ ನೀಡುತ್ತಿದ್ದೆ’ ಎಂದಿದ್ದಾರೆ.

ತಪನ್ ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಬಾಕ್ಸಿಂಗ್ ಟ್ರೈನಿಂಗ್ ನೀಡ್ತಾರೆ. ಅವರಿಗೆ ಬಾಕ್ಸಿಂಗ್ ಕೋಚ್ ಆಗಲು ಅವರ ಸ್ನೇಹಿತರೊಬ್ಬರು ಸಲಹೆ ನೀಡಿದ್ದರಂತೆ. ನೀನು ಸಾಕಷ್ಟು ಶ್ರಮಜೀವಿಯಾಗಿರುವುದರಿಂದ ಬಾಕ್ಸಿಂಗ್ ಬಗ್ಗೆ ಟ್ರೈನಿಂಗ್ ಕೊಡು ಎಂದು ಸಲಹೆ ನೀಡಿದ್ದರಂತೆ. ಆಗ ಗ್ವಾಲಿಯರ್ ನಲ್ಲಿ ಬಾಕ್ಸಿಂಗ್ ಹೊಸ ಕ್ರೀಡೆಯಾಗಿತ್ತು. ಅದ್ರ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಹಾಗಾಗಿ ಆರಂಭದಲ್ಲಿ ಸಾಕಷ್ಟು ಕಷ್ಟ ಎದುರಿಸಬೇಕಾಯ್ತು. ಕೋಚ್ ಕೂಡ ಅವರಿಗೆ ಸಿಗಲಿಲ್ಲ. ನಂತರ ಅವರು ಬಾಕ್ಸಿಂಗ್ ನಲ್ಲಿ ಪ್ರವೀಣರಾಗಿದ್ದ ಸೇನೆಯ ಸಿಬ್ಬಂದಿಯೊಂದಿಗೆ ಸೇರಿಕೊಂಡರು. ಕ್ಲಬ್ ನಲ್ಲಿ ಬಾಕ್ಸಿಂಗ್ ಬಗ್ಗೆ ತರಬೇತಿ ನೀಡಲು ಶುರುಮಾಡಿದರು. ಆದ್ರೆ ಸೇನಾ ಯೋಧರು ಕ್ರೀಡಾಪಟುಗಳಿಗೆ ಕಠಿಣವಾಗಿ ಟ್ರೈನಿಂಗ್ ನೀಡ್ತಾ ಇದ್ದಿದ್ದರಿಂದ, ಬಾಕ್ಸಿಂಗ್ ಕಲಿಯಲು ಇಷ್ಟವಿದ್ದ ಎಷ್ಟೋ ಮಂದಿ ಯೋಧರ ತರಬೇತಿ ಶೈಲಿ ನೋಡಿಯೇ ಹಿಂದೆ ಸರಿದರು. ಆಗ ತಾವೇ ಯಾಕೆ ಬಾಕ್ಸಿಂಗ್ ತರಬೇತಿ ನೀಡಬಾರದೆಂದು ಯೋಚಿಸಿದ್ರು ತರನೇಶ್. ಕೆಲ ಸ್ಪರ್ಧೆಗಳನ್ನು ವೀಕ್ಷಿಸಿದ್ದಲ್ಲದೇ ಜನರಿಂದ ಇದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ರು. ನಂತ್ರ ತಾವೇ ಬಾಕ್ಸಿಂಗ್ ತರಬೇತಿ ನೀಡಲು ಶುರುಮಾಡಿದ್ರು.

2002ರಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಮಹಿಳಾ ಬಾಕ್ಸಿಂಗ್ ಪದಾರ್ಪಣೆ ಮಾಡ್ತು. ಆದ್ರೆ ಹುಡುಗಿಯರಿಗೆ ಈ ಕ್ರೀಡೆ ಹೊಸದಾಗಿತ್ತು. ಹುಡುಗಿಯರಿಗೆ ಯಾಕೆ ಈ ಬಗ್ಗೆ ತರಬೇತಿ ನೀಡಬಾರದೆಂದು ತರನೇಶ್ ಯೋಚಿಸಿದ್ರು. ಈ ನಂತರ ಹುಡುಗರ ಜೊತೆ ಹುಡುಗಿಯರಿಗೂ ತರಬೇತಿ ನೀಡಲು ಶುರುಮಾಡಿದ್ರು. ಮೊದಲು 14ರಿಂದ 18 ವರ್ಷ ವಯಸ್ಸಿನ 15-20 ಹುಡುಗಿಯರು ಬಾಕ್ಸಿಂಗ್ ಕಲಿಯಲು ಬರ್ತಾ ಇದ್ದರು. ಮೊದಲ ಬಾರಿ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆ ನಡೆಯಿತೋ ಆಗ ತರನೇಶ್ ಟೀಂ ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಸ್ಪರ್ಧೆಯಲ್ಲಿ ತಪಾನ್ ತಂಡ ಚಾಂಪಿಯನ್ ಕೂಡ ಆಯ್ತು. ಸತತ ಎರಡು ವರ್ಷ ತಂಡ ಚಾಂಪಿಯನ್ ಆಯ್ತು. ತಪಾನ್ ರಿಂದ ತರಬೇತಿ ಪಡೆದ ನೇಹಾ ಠಾಕೂರ್ ಮೂರು ವರ್ಷಗಳ ಕಾಲ ಚಿನ್ನದ ಪದಕ ಗೆದ್ದುಕೊಂಡ್ರು. ನೇಹಾ ಬಾಕ್ಸಿಂಗ್ ನಲ್ಲೊಂದೆ ಅಲ್ಲ ಅಭ್ಯಾಸದಲ್ಲೂ ಜಾಣೆ. ಹಾಗಾಗಿ ಈ ವರ್ಷ ಐಎಎಸ್ ಪರೀಕ್ಷೆಯಲ್ಲಿ 20ನೇ ರ್ಯಾಂಕ್ ಪಡೆದಿದ್ದಾರೆ. ಬಾಕ್ಸರ್ ಐಎಎಸ್ ಟ್ರೈನಿಂಗ್ ಪಡೆಯುತ್ತಿರುವುದು ಇತಿಹಾಸದಲ್ಲಿ ಮೊದಲ ಬಾರಿ ಎನ್ನುತ್ತಾರೆ ತರನೇಶ್.

ದಿನ ಕಳೆದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಾಕ್ಸರ್ ಗಳು ಹೆಸರು ಮಾಡಿದ್ದಾರೆ. ಹಾಗಾಗಿ ಬಾಕ್ಸರ್ ಗಳಿಗೆ ಗ್ವಾಲಿಯರ್ ಬಹಳ ದೊಡ್ಡ ಶಕ್ತಿಯಾಗಿ ಮಾರ್ಪಟ್ಟಿದೆ. ನಂತರ ಸರ್ಕಾರಿ ಶಾಲೆಗಳಿಗೆ ಹೋಗಿ ಕೆಲ ಬಡ ಮಕ್ಕಳನ್ನು ಟ್ರೈನಿಂಗ್ ಗಾಗಿ ತರನೇಶ್ ಆಯ್ಕೆ ಮಾಡಿದ್ರು. ಇದರಲ್ಲಿ ಪ್ರೀತಿ ಸೋನಿ, ಪ್ರಿಯಾಂಕ ಸೋನಿ ಹಾಗೂ ನಿಶಾ ಜಾಟ್ವಾ ಮಧ್ಯಪ್ರದೇಶ್ ಸರ್ಕಾರ ಪ್ರತಿ ವರ್ಷ ನೀಡುವ ಏಕಲವ್ಯ ಪ್ರಶಸ್ತಿಗೆ ಪಾತ್ರರಾಗುತ್ತಿದ್ದಾರೆ. ಬಹಳ ಬಡತನದಿಂದ ಬಂದಿರುವ ಈ ಹುಡುಗಿಯರಿಗೆ ತರನೇಶ್ ಬಾಕ್ಸಿಂಗ್ ನಲ್ಲಿ ಉತ್ತಮ ತರಬೇತಿ ನೀಡಿದ್ದರು.ಸದ್ಯ 14ರಿಂದ 24 ವರ್ಷ ವಯಸ್ಸಿನ 20 ಹುಡುಗಿಯರಿಗೆ ಬಾಕ್ಸಿಂಗ್ ತರಬೇತಿ ನೀಡುತ್ತಿದ್ದಾರೆ. ಹುಡುಗಿಯರಿಗೆ ಬಾಕ್ಸಿಂಗ್ ತರಬೇತಿಯನ್ನು ಉಚಿತವಾಗಿ ನೀಡುತ್ತಾರೆ ತರನೇಶ್. ತರಬೇತಿ ಖರ್ಚನ್ನು ಕ್ಲಬ್ ನ ಸದಸ್ಯರು ನಿಭಾಯಿಸುತ್ತಾರೆ.

ಇಲ್ಲಿಯವರೆಗೆ ಹುಡುಗಿಯರು ಸೇರಿದಂತೆ 70ಕ್ಕೂ ಹೆಚ್ಚು ಬಾಕ್ಸರ್ ಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. 25ಕ್ಕೂ ಹೆಚ್ಚು ರಾಷ್ಟ್ರೀಯ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅಂಜಲಿ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಗಳಿಸಿದ್ದಾರೆ. ತರನೇಶ್ ಹಾಗೂ ಅವರು ತರಬೇತಿ ನೀಡಿದ್ದ ಪ್ರೀತಿ ಸೋನಿ ಒಂದಾಗಿ ಉಳಿದವರಿಗೆ ತರಬೇತಿ ನೀಡುತ್ತಿದ್ದಾರೆ. ತರನೇಶ್ ರಿಂದ ತರಬೇತಿ ಪಡೆದ ನೂರಕ್ಕೂ ಹೆಚ್ಚು ಆಟಗಾರರು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡ್ತಿದ್ದಾರೆ. ಅದರಲ್ಲಿ ಹೆಚ್ಚು ಮಂದಿ ಸೇನೆಯಲ್ಲಿದ್ದಾರೆ.

ಇಷ್ಟರ ನಡುವೆಯೂ ತರನೇಶ್ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕ್ರೀಡಾಪಟುಗಳಿಗೆ ಟ್ರೈನಿಂಗ್ ನೀಡುವ ವಿಚಾರದಲ್ಲಿ ಹಾಗೂ ಅವರನ್ನು ಬೇರೆ ನಗರಗಳಿಗೆ ಕರೆದುಕೊಂಡು ಹೋಗುವಾಗ ತಮ್ಮ ಸರ್ಕಾರಿ ಕೆಲಸಕ್ಕೆ ರಜಾ ಪಡೆಯಬೇಕಾಗುತ್ತದೆ. ಆರ್ಥಿಕ ಕಾರಣದಿಂದಾಗಿ ಬಾಕ್ಸರ್ ಗಳಿಗೆ ಗ್ಲೌಸ್​​ ಕೊರತೆ ಎದುರಾಗುತ್ತದೆ. ಬಾಕ್ಸಿಂಗ್ ಟ್ರೈನಿಂಗ್ ತರಬೇತಿ ಬಿಡುವಷ್ಟು ಕೆಟ್ಟ ಪರಿಸ್ಥಿತಿ ಇನ್ನೂ ಬಂದಿಲ್ಲ. ಆದ್ರೆ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬಿದ್ದರೂ ಮತ್ತೆ ಎದ್ದು ನಿಂತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಕೆಲಸದಿಂದ ರಿರ್ಟೈಡ್​​ ಆದ ನಂತರ ನಾನು ಈ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎನ್ನುತ್ತಾರೆ ತರನೇಶ್.


ಲೇಖಕ : ಹರೀಶ್ ಬಿಸ್ತ್

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada