ಹಸಿದವರಿಗೆ ಅನ್ನ ನೀಡುವ ಸಂಸ್ಥೆ- 11 ದಿನಗಳಲ್ಲಿ 1,22,937 ಜನರಿಗೆ ಊಟ...!

ಟೀಮ್​​ ವೈ.ಎಸ್​​. ಕನ್ನಡ

ಹಸಿದವರಿಗೆ ಅನ್ನ ನೀಡುವ ಸಂಸ್ಥೆ- 11 ದಿನಗಳಲ್ಲಿ 1,22,937 ಜನರಿಗೆ ಊಟ...!

Thursday November 19, 2015,

3 min Read

ಮಧ್ಯ ರಾತ್ರಿಯ ಹಸಿವು, ಒಂದು ಸಾಕ್ಷಾತ್ಕಾರ, ಒಂದು ಕಲ್ಪನೆ, ಒಂದು ಚಳುವಳಿ. ಮಹಿತಾ ಫರ್ನಾಂಡಿಸ್ ಫೇಸ್‍ಬುಕ್ ಮೂಲಕ "ನಿಮ್ಮ ನೆರೆಯವರಿಗೆ ಊಟ" ಎಂಬ ಕರೆ ಕೊಟ್ಟು, ದಸರಾ ಹಬ್ಬದೊತ್ತಿಗೆ 122937 ಜನರಿಗೆ ಊಟದ ವ್ಯವಸ್ಥೆ ಮಾಡಿದರು. ಮಹಿತಾ ಫರ್ನಾಂಡಿಸ್ ಅವರು ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ಮಕ್ಕಳ ಚಟುವಟಿಕೆಗಳಿಗೆ ಸಂಬಂಧಿಸಿದ ಉದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ 7 ವರ್ಷದ ಮಗನಿದ್ದಾನೆ. ಈ ಹಿಂದೆ ಅವರಿಗೆ ಇನ್ಫೋಸಿಸ್, ಕೆವಿನ್​​ಕೇರ್, ಮತ್ತು ಹೆಂಕೆಲ್ ನಂತಹ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.

image


ನೋವಿನಿಂದ ತುಂಬಿದ ಮಧ್ಯರಾತ್ರಿಯ ಹಸಿವು

‘ಸೆಪ್ಟೆಂಬರ್ ತಿಂಗಳಿನ ಒಂದು ಮಧ್ಯರಾತ್ರಿಯಂದು ಹಸಿವು ತಾಳಲಾರದೆ ನನಗೆ ನಿದ್ರಿಸಲಾಗಲಿಲ್ಲ. ಆಗ ನನ್ನ ತಲೆಯಲ್ಲಿ ಒಂದು ವಿಷಯ ಎದ್ದಿತ್ತು, ಅದೇನೆಂದರೆ ನನಗೆ ತಲೆಯ ಮೇಲೆ ಸೂರಿದೆ, ಬೆಚ್ಚಗಿನ ಹಾಸಿಗೆಯ ಮೇಲೆ ಮಲಗಿದ್ದೇನೆ, ರೆಫ್ರಿಜಿರೇಟರ್ ತುಂಬ ಆಹಾರ ತುಂಬಿದ್ದರೂ ನಾನು ಹಸಿವಿನಿಂದ ಬಳಲುತ್ತಿದ್ದೇನೆ. ಆದ್ರೆ ಇದೇ ರೀತಿ ಲಕ್ಷಾಂತರ ಜನ ಪ್ರತಿ ರಾತ್ರಿಯೂ ಹಸಿವಿನಿಂದ ಕಳೆಯವವರು ಎಷ್ಟೋ ಮಂದಿ ಇದ್ದಾರೆ. ಕೂಡಲೇ ಅಂಥವರಿಗೆ ನಾನೇನಾದರೂ ಮಾಡಬೇಕೆಂದು ನಿರ್ಧರಿಸಿದೆ. ಸುಮಾರು ಅರ್ಧ ಘಂಟೆಯವರೆಗೂ ಅದರ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸಿದೆ. ಮಾರನೆಯ ದಿನ ಫೇಸ್‍ಬುಕ್‍ನಲ್ಲಿ ನನಗೆ ಹೊಳೆದ ಐಡಿಯಾ ಒಂದರ ಬಗ್ಗೆ ಬರೆದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಮುಂದಿನ ಹಂತದಲ್ಲಿ ನನ್ನ ನೆರೆಹೊರೆಯವರನನ್ನು ಈ ಕಾರ್ಯದಲ್ಲಿ ಭಾಗಿಯಾಗಿಸುವುದ ನನ್ನ ಉದ್ದೇಶವಾಗಿತ್ತು. ಆದರೆ ಹೇಗೆ? ನಾನು ಈ ಕುರಿತು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದೆ. ಇದು ಗಮನಾರ್ಹವಾಗಿ ಇಡೀ ಸಮುದಾಯಕ್ಕೇ ಹರಡಿತು. ಅದಕ್ಕೆ ಹೆಚ್ಚೇನೂ ಕಷ್ಟವಾಗಲಿಲ್ಲ’ ಎಂದು ಮಾಹಿತಾ ಫೆರ್ನಾಂಡಿಸ್ ಹೇಳುತ್ತಾರೆ. Feed Your Neighbour (FYN)ನ ಬಗ್ಗೆ ತಿಳಿದವರೆಲ್ಲ ನಿಧಾನವಾಗಿ ತಮ್ಮ ಸ್ನೇಹಿಕರು ಮತ್ತು ಕುಟುಂಬದವರೊಂದಿಗೆ ಸೇರಿ ನನ್ನೊಂದಿಗೆ ಕೈಜೋಡಿಸಿದರು.

image


ನೀವು 5 ಜನರಿಗೆ ಅಡುಗೆ ಮಾಡುವ ಬದಲು 6 ಮಂದಿಗೆ ಅಡುಗೆ ಮಾಡುವುದು ಅಷ್ಟೊಂದು ಕಷ್ಟ ಎನಿಸುವುದಿಲ್ಲ. ಹಾಗೇ 1999 ಜನ ಮಾಡಿದರೆ ಅದು ದೊಡ್ಡ ಬದಲಾವಣೆ ತರುತ್ತದೆ. ನೆರೆಯವರ ಸಹಾಯವಿಲ್ಲದೆ ಇಷ್ಟೊಂದು ಕೆಲಸ ಮಾಡಲಾಗುತ್ತಿರಲಿಲ್ಲ. ಆದರೂ Feed Your Neighbour (FYN)ನ ಯಶಸ್ಸಿನೊಂದಿಗೆ ತೊಂದರೆಯೂ ಇತ್ತು. ಊಟವನ್ನು ಕೊಡುವವರು ಯಾರು? ಹಾಗೂ ಅದನ್ನು ಹಂಚುವವರು ಯಾರು? ಅದನ್ನು ಎಲ್ಲಿ ಕೇಂದ್ರೀಕೃತಗೊಳಿಸಬೇಕು? ಎಂಬುದು ಪ್ರಶ್ನೆಯಾಗಿತ್ತು. ಮೊದಲ ದಿನ 4454 ಊಟ ವಿತರಣೆ ಮಾಡಲಾಗಿತ್ತು. ಒಂದು ದಿನವಂತೂ 19,440 ಊಟವನ್ನು ವಿತರಿಸಿದ್ದು ಅತ್ಯಧಿಕವೆನ್ನಬಹುದು. ಇದು ಜನರಲ್ಲಿ ವಿಶ್ವಾಸವನ್ನು ಮರುಕಳಿಸಿತ್ತು. ದಸರಾ ಹಬ್ಬದ ದಿನಗಳಲ್ಲಿ 11 ದಿನ Feed Your Neighbour (FYN) ವತಿಯಿಂದ 1,22,937 ಜನರ ಹಸಿವನ್ನು ನೀಗಿಸಲಾಗಿತ್ತು. ನಮ್ಮ ಸಂಸ್ಥೆಯ ಕಾರ್ಯಕರ್ತರಿಗೆ ಈ ಎಲ್ಲಾ ಯಶಸ್ಸು ತಲುಪುತ್ತದೆ ಎಂದು ಹೇಳುತ್ತಾರೆ ಮಹಿತಾ. ಜನರು ಆಹಾರವನ್ನು ಡ್ರಾಪ್‍ಆಫ್ ಕೇಂದ್ರಗಳಿಗೆ ತಲುಪಿಸುತ್ತಾರೆ. ಅಲ್ಲಿಂದ ನಮ್ಮ ಸ್ವಯಂಸೇವಕರು ಆಹಾರವನ್ನು ಸಂಗ್ರಹಿಸಿ ಗುಡಿಸಲುಗಳು ಹಾಗೂ ಕೊಳಚೆ ಪ್ರದೇಶಗಳಿಗೆ ತೆರಳಿ, ವಿತರಿಸುತ್ತಾರೆ. ಹಸಿದವರಿಗೆಲ್ಲರಿಗೂ ಆಹಾರ ದೊರೆತಿದೆ ಎಂದು ಖಾತರಿಯಾದ ನಂತರ ಅಲ್ಲಿಂದ ತೆರಳುತ್ತಾರೆ. ಸ್ವಯಂಸೇವಕರು ಯಾವುದೇ ದುಡ್ಡಿನ ಸಹಾಯವಿಲ್ಲದೆ, ತಮ್ಮ ಪ್ರಯತ್ನ, ಹಣ, ಸಾರಿಗೆ ಎಲ್ಲವನ್ನೂ ತಾವೇ ನೋಡಿಕೊಳ್ಳುತ್ತಾರೆ. ನಗರದಾದ್ಯಂತ ಹಲವು ಜನರ ಸಹಾಯದಿಂದ ಮಾತ್ರ ಇದು ಸಾಧ್ಯವಾಯಿತು ಎಂದು ಮಹಿತಾ ಹೇಳುತ್ತಾರೆ. ತಮ್ಮಲ್ಲಿದ್ದ ಹಣವನ್ನೇ ಬಳಸಿ ಈ ಕಾರ್ಯವನ್ನು ಈಡೇರಿಸಲಾಯಿತು. ಹಲವಾರು ರೆಸ್ಟೋರೆಂಟ್‍ಗಳು, ಮಹಿಳಾ ಸಂಘ ಸಂಸ್ಥೆಗಳು, BNI ಸೇನಾ ವಿಹಾರ ಮಹಿಳಾ ಗುಂಪು ಇನ್ನಿತರ ಸಂಸ್ಥೆಗಳು ನಮಗೆ ಸಹಾಯ ಮಾಡಲು ಮುಂಬಂದವು. Feed Your Neighbour (FYN)ನ ಸ್ಥಾಪನೆಯೇನೋ ಸರಾಗವಾಗಿ ಆಯಿತು. ಅದರೆ ಹಸಿದವರ, ಬಡವ ಬಲ್ಲಿದರ ಹಸಿವನ್ನು ನೀಗಿಸುವ ಈ ಸಂಸ್ಥೆಯ ನ್ನು ಅಸ್ತಿತ್ವದಲ್ಲಿಟ್ಟು ನಿರಂತರವಾಗಿ ಕಾರ್ಯ ನಿರ್ವಹಿಸುವ ಹಾಗೆ ಮಾಡುವುದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿತ್ತು.

image


‘ಎಲ್ಲಾವಯಸ್ಸಿನ ಸ್ವಯಂ ಸೇವಕರು Feed Your Neighbour (FYN)ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ’ ಎಂದು ಅವರು ಮಹಿತಾ ಕೃತಜ್ಞತೆಯಿಂದ ಹೇಳುತ್ತಾರೆ.

image


ನಮ್ಮಲ್ಲಿ ಅತಿ ಚಿಕ್ಕ ವಯಸಿನ ಸ್ವಯಂಸೇವಕ ಎಂದರೆ ಅದು 2.5 ವರ್ಷದ ಮಗು. ಬಹಳಷ್ಟು ವೃದ್ಧರೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಬಹಳಷ್ಟು ಜನ, ನಮ್ಮ ಮನೆಯಲ್ಲಿ ಆಹಾರ ಹೆಚ್ಚಾಗಿ ತಿನ್ನುವವರಿಲ್ಲದೇ ಹಾಳಾಗುತ್ತಿದೆ ಎಂದುಕೊಂಡವರೆಲ್ಲ ನಮ್ಮನ್ನು ಭೇಟಿ ಮಾಡಿ ಖುಷಿ ಪಟ್ಟರು. ಅಡುಗೆ ಮಾಡುವವರು, ಡ್ರೈವರ್ ಗಳು ಬಹಳಷ್ಟು ಮಂದಿ ಸ್ವಯಂಸೇವಕರಾಗಿ ಮುಂದೆ ಬಂದುದರಿಂದ ಆಹಾರ ಸಿದ್ದಪಡಿಸುವಲ್ಲಿ ಹಾಗೂ ವಿತರಣೆಯಲ್ಲಿ ನಮಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ನಾವು ಈ ಸಂದರ್ಭದಲ್ಲಿ ಜೀವನ, ನಂಬಿಕೆ, ನಮ್ರತೆಯ ಪಾಠ ಕಲಿತೆವು. ನಮ್ಮ Feed Your Neighbour (FYN)ನ ಎಲ್ಲರ ವತಿಯಿಂದ ಹೇಳ ಬಯಸುತ್ತೇನೆ ಎಂದು ಮಹಿತಾ ಫರ್ನಾಂಡಿಸ್ ಹೇಳುತ್ತಾರೆ.

ಎಲ್ಲಿ ಹೋದರೂ ಮನಸ್ಸು ಧೃಡವಾಗಿದ್ದರೆ, ನಿಸ್ಸಂಶಯವಾಗಿ ಒಂದು ಮಾರ್ಗ ಇದ್ದೇ ಇರುತ್ತದೆ ಎಂದು ಹಲವರಿಗೆ Feed Your Neighbour (FYN) ತೋರಿಸಿಕೊಟ್ಟಿದೆ. ಇನ್ನು ಮಹಿತಾ ಫರ್ನಾಂಡಿಸ್ ಕೂಡ ತಮ್ಮ ಅಮೋಘ ಸೇವೆಯಿಂದ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ಜನರಿಗೆ ಮಾದರಿಯಾಗಿದ್ದಾರೆ.