ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!

ಟೀಮ್​ ವೈ.ಎಸ್​. ಕನ್ನಡ

1

ವಿದೇಶಗಳಲ್ಲಿ ಅದರಲ್ಲೂ ಅಮೆರಿಕಾ, ಯು.ಕೆ. ಮತ್ತು ಇತರ ಯುರೋಪಿಯನ್ ದೇಶಗಳಲ್ಲೂ ಪ್ರವಾಸದ ಬಗ್ಗೆ ಹೆಚ್ಚು ಒಲವಿದೆ. ಹೈಸ್ಕೂಲ್ ಮತ್ತು ಕಾಲೇಜ್ ನಡುವಿನ ವಿದ್ಯಾಭ್ಯಾಸದ ಸಮಯದಲ್ಲಿ ಈ ದೇಶಗಳಲ್ಲಿ ಒಂದು ವರ್ಷದ ಬಿಡುವು ಮಾಡಿಕೊಂಡು ಪ್ರವಾಸ ಮಾಡುವುದು ಕೂಡ ಕಾಮನ್ ಆಗಿದೆ. ಇದರಿಂದ ನಾಲೆಡ್ಜ್ ಜೊತೆಗೆ ಸಾಮಾಜಿಕ ಕಳಕಳಿಯೂ ಮೂಡುತ್ತದೆ. ಇದು ಹಲವು ದೇಶಗಳ ಸಂಸ್ಕೃತಿ, ಅಲ್ಲಿನ ಜನಜೀವನ ಸೇರಿದಂತೆ ಹಲವು ವಿಧಗಳಲ್ಲಿ ಸಹಾಯ ನೀಡುತ್ತದೆ. ಅಂದಹಾಗೇ, ಈ ಪ್ರವಾಸಗಳು ಸ್ವಯಂ ಪ್ರೇರಿತವಾಗಿರುತ್ತದೆ ಮತ್ತು ಸ್ವಯಂ ಸೇವಕನಾಗಿ ಕೆಲಸ ಮಾಡುವ ಮನಸ್ಸಿನಿಂದ ಕೂಡಿರುತ್ತದೆ. ಇದಕ್ಕಾಗೇ ವಾಲಿಂಟಿರಿಂಗ್ ಅನ್ನೋ ಕಾನ್ಸೆಪ್ಟ್ ಕೂಡ ಹುಟ್ಟಿಕೊಂಡಿದೆ.

“ ವಾಲಿಂಟಿರಿಂಗ್ ಅನ್ನು ಟ್ರಾವೆಲಿಂಗ್ ಜಗತ್ತಿನಲ್ಲಿ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅನುಭವಿ ಟ್ರಾವೆಲರ್​ಗಳ ಜೊತೆ ಪ್ರಯಾಣ ಬೆಳೆಸಲು ಇದು ಸಹಾಯ ಮಾಡುತ್ತದೆ. ವಾಲಿಂಟಿರಿಂಗ್​ಗೆ ಈಗ ಈ ಕೆಟಗರಿಯಲ್ಲಿ 10 ವರ್ಷದ ಅನುಭವ ಇದೆ.”

- ಸೌರಭ್ ಸಭಾರ್ವಾಲ್, ಸಹ ಸಂಸ್ಥಾಪಕ ವಾಲಿಂಟಿರಿಂಗ್ ಸೊಲ್ಯುಷನ್

2000 ದಶಕದ ಮಧ್ಯ ಭಾಗದಲ್ಲಿ ಮೇಕ್ ಮೈ ಟ್ರಿಪ್, ಯಾತ್ರಾ.ಕಾಮ್​ನಂತಹ ಆನ್​ಲೈನ್ ಟ್ರಾವೆಲಿಂಗ್ ಕನ್ಸಲ್ಟಿನ್ಸಿಗಳು ದೊಡ್ಡ ಸದ್ದು ಮಾಡುತ್ತಿದ್ದವು. ಈ ಸಮಯದಲ್ಲಿ ದೆಹಲಿಯ ಎರಡು ಯುವಕರು ಈ ವಿಭಾಗದಲ್ಲಿ ಹೊಸ ಬ್ಯುಸಿನೆಸ್​ನ ಕನಸು ಕಾಣಲು ಆರಂಭಿಸಿದ್ರು. ಸೌರಭ್, ಗ್ಯಾಪ್ ಈಯರ್ ಮತ್ತು ವಾಲಿಂಟಿರಿಂಗ್ ಬಗ್ಗೆ ಮೆಲ್ಬರ್ನ್​ನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಕಲಿತುಕೊಂಡಿದ್ದರು. ಅಷ್ಟೇ ಅಲ್ಲ ಯು.ಎಸ್. ಮೂಲದ ಕಂಪನಿಯೊಂದರಲ್ಲಿ ವಾಲಿಂಟಿರ್ ಪ್ಲೇಸ್​ಮೆಂಟ್ ವಿಭಾಗದಲ್ಲಿ ಕೆಲಸ ಮಾಡಿದ್ದರು. ಇದು ಈ ಇಂಡಸ್ಟ್ರಿಯ ಬೇಸಿಕ್ ಬಗ್ಗೆ ಹೇಳಿಕೊಟ್ಟಿತ್ತು. ಸೌರಭ್​ಗೆ ಸಹೋದರ ಸಾಹಿಲ್ ಜೊತೆಯಾದರು. ವಾಲಿಂಟಿರ್ ಟ್ರಾವೆಲಿಂಗ್ ಬ್ಯುಸಿನೆಸ್​ಗೆ ಇಳಿದು, ವಾಲಿಂಟಿರಿಂಗ್ ಸೊಲ್ಯುಷನ್ ಅನ್ನೋ ಕಂಪನಿಯನ್ನು 2006ರಲ್ಲಿ ಹುಟ್ಟಿ ಹಾಕಿದ್ರು.

“ಆರಂಭದಲ್ಲಿ ನಮ್ಮ ಉದ್ಯಮ ಕಷ್ಟಕರವಾಗಿತ್ತು. ಈ ಬ್ಯುಸಿನೆಸ್ ಮಾಡೆಲ್​ನಲ್ಲಿ ಕೆಲಸ ಮಾಡಲು ಆರಂಭಿದ್ದು ನಾವೇ ಮೊದಲು. ವೆಬ್​ಸೈಟ್ ಡಿಸೈನ್​ನಿಂದ ಹಿಡಿದು, ಅಪ್ಲಿಕೇಷನ್ ಗಳನ್ನು ಮ್ಯಾನೇಜ್ ಮಾಡಲು ಹೀಗೆ ಯಾವುದೇ ಕೆಲಸಕ್ಕೂ ನಮಗೆ ಯಾವುದೇ ಗೈಡ್​ಲೈನ್ಸ್​ಗಳಿರಲಿಲ್ಲ. ನಾವು ಏನ್ ಮಾಡಿದ್ರೂ ಗ್ರಾಹಕರ ಸಂತೋಷ ಮುಖ್ಯವಾಗಿರುತ್ತಿತ್ತು.”

- ಸೌರಭ್

ಹಾಗೂ ಹೀಗೂ ಒಂದು ವರ್ಷ ಮುಗಿದಿತ್ತು. ವಾಲಿಂಟಿರಿಂಗ್ ಸೊಲ್ಯುಷನ್ ಭಾರತ ಮತ್ತು ನೇಪಾಳದಲ್ಲಿ ಕೆಲಸ ಮಾಡುತ್ತಿತ್ತು. ಯಶಸ್ಸು ಬೇರೆ ದೇಶಗಳಿಗೆ ಉದ್ಯಮವನ್ನು ವಿಸ್ತರಿಸುವಂತೆ ಪ್ರೇರೇಪಿಸುತ್ತಿತ್ತು. ಹೀಗಾಗಿ ಭಾರತೀಯ ಮೂಲದ ವಾಲಿಂಟಿರಿಂಗ್ ಟ್ರಾವೆಲರ್​ಗಳಿಗೆ ಹೊಸ ವಿಂಗ್ ಒಂದನ್ನು ಆರಂಭಿಸಿ ಅದಕ್ಕೆ ವಾಲಿಂಟಿರಿಂಗ್ ಇಂಡಿಯಾ ಅಂತ ಹೆಸರು ಇಡಲಾಯಿತು.

ವಾಲಿಂಟಿರಿಂಗ್ ಸೊಲ್ಯುಷನ್ ಇವತ್ತು 1 ಮಿಲಿಯನ್ ಡಾಲರ್​ಗಳಿಗಿಂತ ಅಧಿಕ ಆದಾಯವನ್ನು ಪಡೆಯುತ್ತಿದೆ. ಥಾಯ್ಲೆಂಡ್, ಸೌತ್ ಆಫ್ರಿಕಾ, ಪೆರು, ಆಸ್ಟ್ರೇಲಿಯಾ, ಕಾಂಬೋಡಿಯಾ, ಶ್ರೀಲಂಕಾ. ತಾಂಜಾನಿಯಾ, ಮೊರೊಕ್ಕೋ, ವಿಯೆಟ್ನಾಂ, ಸಿಂಗಪೂರ, ಫಿಲಿಫೈನ್ಸ್, ಕೋಸ್ಟಾರಿಕಾ ಸೇರಿದಂತೆ ಸುಮಾರು 20 ದೇಶಗಳಲ್ಲಿ ಸೇವೆ ನೀಡುತ್ತಿದೆ.

ವಾಲಿಂಟಿರಿಂಗ್ ಸೊಲ್ಯುಷನ್ ಜಗತ್ತಿನ ವಿವಿದೆಡೆಯಿಂದ ಬರುವ ವಾಲಿಂಟಿರ್ ಟ್ರಾವೆಲರ್​ಗಳನ್ನು ವಿವಿಧ ಪ್ರಾಜೆಕ್ಟ್​ಗಳಿಗಾಗಿ ವಿವಿಧ ಕಡೆ ಪ್ಲೇಸ್​ಮೆಂಟ್ ಮಾಡುತ್ತಿದೆ. ಈ ಪ್ರೋಗ್ರಾಂ ಸಾಮಾಜಿಕ ಕಳಕಳಿ, ಮಗುವಿನ ರಕ್ಷಣೆ, ಬೀದಿ ಮಕ್ಕಳು, ಮಹಿಳಾ ಸ್ವಾವಲಂಭನೆ, ಟೀಚಿಂಗ್, ವೈಲ್ಡ್ ಲೈಫ್ ಕನ್ಸರ್ವೇಷನ್, ಹೆಲ್ತ್​ಕೇರ್ ಮತ್ತು ಮೆಡಿಕಲ್ ವಿಷಯಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಕೆಲಸ ಮಾಡುತ್ತಿದೆ.

“ ವಾಲಿಂಟಿರಿಂಗ್ ಸೊಲ್ಯುಷನ್ನಲ್ಲಿ ಭಾಗವಹಿಸುವವರು 200ರಿಂದ 4000 ಡಾಲರ್ ವರೆಗೆ ನೀಡಬಹುದು. ಇದನ್ನು ಅವರ ಆಯ್ಕೆಯ ಪ್ರೋಗ್ರಾಂಗಳಿಗೆ ಅಡ್ಮಿಷನ್ ಫೀಸ್ ಆಗಿ ಚಾರ್ಜ್ ಮಾಡುತ್ತೇವೆ. ಇದನ್ನು ನಾವು ಆಡಳಿತ ಖರ್ಚು, ಸ್ಟಾಫ್ ಸಪೋರ್ಟ್ ಮತ್ತು ಪ್ರಯಾಣ ವೆಚ್ಚವಾಗಿ ಬಳಸಿಕೊಳ್ಳುತ್ತೇವೆ. ಇದರಲ್ಲೇ ಭಾಗವಹಿಸುವವರಿಗೆ ಊಟ, ತಿಂಡಿ ಮತ್ತು ವಸತಿ ವ್ಯವಸ್ಥೆಯನ್ನು ಮಾಡುತ್ತೇವೆ.

- ಸೌರಭ್

ವಾಲಿಂಟಿರಿಂಗ್ ಸೊಲ್ಯುಷನ್ ಹೆಚ್ಚಿನ ಲಾಭಕಕ್ಕಾಗಿ ಅಂತಾಷ್ಟ್ರೀಯ ವಿಮೆ, ವಿಮಾನದ ಟಿಕೆಟಿಂಗ್ ಸೇರಿದಂತೆ ಹಲವು ಲಾಭದಾಯಕ ಉದ್ದಿಮೆಗಳನ್ನು ನಡೆಸುತ್ತಿದೆ. 2007ರಿಂದ ಇಲ್ಲಿ ತನಕ ವಾಲಿಂಟಿರಿಂಗ್ ಸೊಲ್ಯುಷನ್ ಸುಮಾರು 11750 ವಾಲಿಂಟಿರ್​ಗಳನ್ನು ಹೊಂದಿದೆ. ಈ ವರ್ಷ ಸುಮಾರು 1130 ಸ್ವಯಂ ಸೇವಕರು ಇದರ ಭಾಗವಾಗಿದ್ದಾರೆ. ಒಮ್ಮೆ ವಾಲಿಂಟಿರಿಂಗ್ ಸೊಲ್ಯುಷನ್ ಸಂಸ್ಥೆಗೆ ಒಮ್ಮೆ ಭೇಟಿ ಕೊಟ್ಟವರು ಮತ್ತೊಮ್ಮೆ ಬಂದೇ ಬರ್ತಾರೆ. ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಪ್ರಾಜೆಕ್ಟ್​ಗಳಲ್ಲಿ ಈ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ.

“ ಆರಂಭದಿಂದ ಇಲ್ಲಿ ತನಕ, ಈ ಕಂಪನಿ ಪಾಸಿಟಿವ್ ಹೆಜ್ಜೆಯನ್ನೇ ಇಡುತ್ತಿದೆ. ಭಾರತದಲ್ಲಿ ಇಂತಹ ಉದ್ದಿಮೆಗಳನ್ನು ಸ್ಥಾಪಿಸುವುದು ಮತ್ತು ಅದನ್ನು ಲಾಭ ಕಡೆಗೆ ಕೊಂಡೊಯ್ಯುವುದು ಸುಲಭದ ಕೆಲಸವಲ್ಲ ”

- ಸೌರಭ್

ಹತ್ತು ವರ್ಷದ ಹಿಂದೆ ನಾವು ಕಂಪನಿ ಆರಂಭಿಸಿದ್ದೆವು. ಅವತ್ತು ನಾವು ಏಕಾಂಗಿಯಾಗಿದ್ದೆವು. ಇವತ್ತು ನಮ್ಮಂತಹದ್ದೇ ಹಲವು ಕಂಪನಿಗಳಿವೆ. ವಾಲಿಂಟಿರ್ ಸೊಲ್ಯೂಷನ್ ಈಗ 40ಕ್ಕಿಂತಲೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. 2016ರಲ್ಲಿ ಈ ಕಂಪನಿ 7.20 ಕೋಟಿ ಆದಾಯಗಳಿಸಿತ್ತು. ಈ ವರ್ಷದ ಆದಾಯ 9ಕೋಟಿಯ ಗಡಿ ದಾಟಿದೆ.

ಭಾರತದ ಮಟ್ಟಿಗೆ ಹೊಸ ಉದ್ಯಮದ ಮಾಡೆಲ್ ಆಗಿದ್ದ ವಾಲಿಂಟಿರಿಂಗ್ ಸೊಲ್ಯುಷನ್ ಹೊಸ ಇತಿಹಾಸ ಬರೆದಿದ್ದು ಈಗ ಹಳೆಯ ಮಾತು. ಮುಂದಿನ ದಿನಗಳಲ್ಲಿ ಈ ಕಂಪನಿ ಮತ್ತಷ್ಟು ಹೊಸ ಹೊಸ ಐಡಿಯಾಗಳೊಂದಿಗೆ ಕೆಲಸ ಮಾಡಲಿದೆ.

ಇದನ್ನು ಓದಿ:

1. ಸಕ್ಕರೆ ಕಾಯಿಲೆ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ಸೆಲ್ಫ್​ ಮ್ಯಾನೇಜ್​ ಡಯಾಬಿಟಿಸ್​ ಆ್ಯಪ್​ನ್ನು ಡೌನ್​ಲೋಡ್​ ಮಾಡಿ..!

2. "ಓಲಾ ಡ್ರೈವ್" ಈಗ ಮತ್ತಷ್ಟು ಫ್ರೆಂಡ್ಲಿ ವಿತ್ "ಓಲಾ ಪ್ಲೇ"

3. "ಹಿಮಾಲಯನ್​ ಸಾಲ್ಟ್​" ಸಖತ್​ ಡಿಮ್ಯಾಂಡ್​- ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಸ್ಪೆಷಲ್​ ಉಪ್ಪು