ನಿಮ್ಮ ಪ್ರೀತಿ ತೋರಿಸಲು ಸ್ಪೆಷಲ್​ ಚಾಕಲೇಟ್​..!

ಆರಾಧ್ಯ

0

ಹಾಲುಹಲ್ಲಿನ ಕಂದನಿಂದ ಹಿಡಿದು ಹಲ್ಲುಬಿದ್ದ ಅಜ್ಜಿಯವರೆಗೂ ಚಾಕಲೇಟ್​ ಎಲ್ಲರಿಗೂ ಅಚ್ಚುಮೆಚ್ಚು. ಬಾಯಿಗಿಟ್ಟರೆ ಕರಗುವ, ಕಟಕಟ ಜಗಿದರೆ ಅರೆಕ್ಷಣದಲ್ಲಿ ನೀರಾಗುವ ಚಾಕಲೇಟ್ ಗೆ ಸಖತ್ ಬೇಡಿಕೆ. ಅದ್ರಲ್ಲೂ ಪ್ರೇಮಿಗಳ ದಿನ ಹತ್ತಿರ ಬಂತು ಅಂದ್ರೆ ಸಾಕು ಚಾಕಲೇಟ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಅಷ್ಟೇ ಅಲ್ಲ ಕಳೆದ ಕೆಲ ವರ್ಷಗಳಿಂದ ಸಿಲಿಕಾನ್ ಸಿಟಿಗೆ ಚಾಕಲೇಟ್ ಆಮದು, ವರ್ಷ ದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಈ ಚಾಕಲೇಟ್ ನ ಟ್ರೆಂಡ್ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ನಮ್ಮ ಬೆಂಗಳೂರಿನ ಅನುಪಮಾ ಅಮರನಾಥ್ ರವರು ಕೆಲ ವರ್ಷಗಳ ಹಿಂದೆ ಹಲಸೂರು ಕೆರೆಯ ಹಿಂಭಾಗದ ರಸ್ತೆಯಲ್ಲಿ `ಚಾಕಲೇಟ್ ಜಂಕ್ಷನ್' ಎಂಬ ಮಳಿಗೆಯನ್ನ ತೆರೆದ್ರು.. ಇದಕ್ಕಾಗಿ ಹಾಲೆಂಡ್ ನ ಚಾಕಲೇಟ್ ಟ್ರೈನರ್ ಬಳಿ ತರಬೇತಿಯನ್ನ ಪಡೆದು ಈ ಮಳಿಗೆಯನ್ನ ಪ್ರಾರಂಭ ಮಾಡಿದ್ರು.. ಇದರಲ್ಲಿ ಯಶಸ್ವಿಯನ್ನ ಕಂಡ ಇವರು ಬನ್ನೇರುಘಟ್ಟ, ಮಾದೇವ್ ಪುರ, ಹಲಸೂರು, ಬಸವನಗುಡಿ ಹೀಗೆ 4 ಮಳಿಗೆಗಳನ್ನ ತೆರೆದು ಯಶಸ್ವಿಯಾಗಿದ್ದಾರೆ.. ಇನ್ನು ಪ್ರತಿ ವರ್ಷ ಹಾಲೆಂಡ್​ನಿಂದ ತರಬೇತಿದಾರರು ಚಾಕಲೇಟ್ ಜಂಕ್ಷನ್ ಮಳಿಗೆಗೆ ಬಂದು ಹೊಸ ಪರಿಕಲ್ಪನೆಗಳ ಚಾಕಲೇಟ್ ತಯಾರಿ ಬಗ್ಗೆ ನೌಕರರಿಗೆ ತರಬೇತಿ ಕೊಡುತ್ತಾರೆ. ಇದರಿಂದಾಗಿ ಹೊಸ ಹೊಸ ಚಾಕಲೇಟ್ ತಯಾರಿಯ ಚಿಂತನೆ ಸಾಧ್ಯವಾಗಿದೆ ಅಂತಾರೆ ಅನುಪಮಾ ಅಮರನಾಥ್..

ಇದನ್ನು ಓದಿ

ಗೋ ವೆಜ್, ಗೋ ಗ್ರೀನ್ ಮೂಲಮಂತ್ರ..!

ಇನ್ನು ಚಾಕಲೇಟ್ ಜಂಕ್ಷನ್ ಮಳಿಗೆಯಲ್ಲಿ ಉಡುಗೊರೆಯ ಉದ್ದೇಶಕ್ಕಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಚಾಕಲೇಟ್ ಮಾರಾಟವಾಗುತ್ತಿದೆ. ಉಡುಗೊರೆಗಳ ಟ್ರೆಂಡ್ ಹೇಗೆ ಬದಲಾಗಿದೆಯೆಂದರೆ ಪ್ರೇಮಿಗಳ ದಿನಕ್ಕೆ ಚಾಕೊಲೇಟ್ ಬಾಕ್ಸ್ ಕೊಡುವ ಬದಲು ಚಾಕೊಲೇಟ್ ಗುಚ್ಛವನ್ನು ಕೊಡವುದು ಪ್ರಸ್ತುತ ಫ್ಯಾಷನ್ ಇದೆ.. ಕಳೆದ ಫೆಬ್ರುವರಿಯಲ್ಲಿ ಸಾವಿರಕ್ಕೂ ಹೆಚ್ಚು ಚಾಕೊಲೇಟ್ ಗುಚ್ಛ ಮಾರಾಟವಾಯ್ತು. ಇಷ್ಟೇ ಅಲ್ಲ, ಶುಭ ಸಮಾರಂಭಗಳಿಗೆ ಆಹ್ವಾನ ಪತ್ರಿಕೆಯೊಂದಿಗೆ ಅರಸಿನ ಕುಂಕುಮದ ಜತೆಗೆ ಚಾಕೊಲೇಟ್ ಗಿಫ್ಟ್ ಬಾಕ್ಸ್ ಕೂಡಾ ಕೊಡುವ ಕ್ರಮವೂ ಹೆಚ್ಚುತ್ತಿದೆ. ಅಂತಹ ಆರ್ಡರ್ಗಳು ಚಾಕಲೇಟ್ ಜಂಕ್ಷನ್ ಗೆ ಎಲ್ಲಾ ಸೀಸನ್​ನಲ್ಲೂ ಹೆಚ್ಚುತ್ತಿದೆ..

ಅಷ್ಟೇ ಅಲ್ಲದೇ ನಿಮ್ಮ ಆಪ್ತರ ಹುಟ್ಟುಹಬ್ಬ, ನಿಶ್ಚಿತಾರ್ಥ, ಮದುವೆ, ವಾರ್ಷಿಕೋತ್ಸವ, ಗೃಹಪ್ರವೇಶದಂತಹ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸುವ ಉಡುಗೊರೆ ಕೊಡಲು ಬಯಸುತ್ತೀದ್ರೆ? ಅವರದ್ದೊಂದು ಸುಂದರ ಭಾವಚಿತ್ರವನ್ನು ಅನುಪಮಾ ಕೈಗೆ ಕೊಡಿ. ಅವರ ಬೇಕರಿಯಲ್ಲಿ ಆ ಭಾವಚಿತ್ರ ಅಚ್ಚಾಗಿ ಮಾರ್ಪಟ್ಟು ಚಾಕೊಲೇಟ್ ಮಾಧ್ಯಮಕ್ಕೆ ರೂಪಾಂತರಗೊಂಡು ಚಾಕೊಲೇಟ್​​ನದ್ದೇ ಚೌಕಟ್ಟು ಒಂದು ನಿಮ್ಮ ಕೈಸೇರುತ್ತದೆ! ಇನ್ನು ಈ ಬಾರಿಯ ಪ್ರೇಮಿಗಳ ದಿನದ ಸಲುವಾಗಿ ಚಾಕಲೇಟ್ ಜಂಕ್ಷನ್ ಗೆ ಕಾಲಿಟ್ಟರೆ, ನಮ್ಮ ಕಣ್ಣಿಗೆ ಮೊದಲು ಬೀಳುವುದು ಬಣ್ಣ ಬಣ್ಣದ ರ್ಯಾಪರ್ ಗಳಲ್ಲಿ ಸುತ್ತಿಟ್ಟಿರುವ ಬಗ್ಗೆ ಬಗ್ಗೆಯ ಚಾಕಲೇಟ್, ಇನ್ನೊಂದೆಡೆ ಚಾಕಲೇಟ್ ನಲ್ಲಿ ಅರಳಿ ನಿಂತಿರುವ ಹಾರ್ಟ್ ಶೇಪ್ ಚಾಕಲೇಟ್ ಹಾಗೂ ಬಗೆ ಬಗೆಯ ಚಾಕಲೇಟ್ ಬೊಕ್ಕೆಗಳು.

ಹೌದು ಚಾಕೊಲೇಟ್ ಜಂಕ್ಷನ್ ನಲ್ಲಿ ವಾಲೆಂಟೈನ್ಸ್ ಡೇ ಸಲುವಾಗಿ ನೂರಾರು ಬಗ್ಗೆ ಬಗ್ಗೆಯ ಚಾಕಲೇಟ್ ಗಳು ತಯಾರಗಿವೆ.. ಅದ್ರಲ್ಲೂ ಚಾಕ್ ಲೇಟ್ ನಿಂದಲ್ಲೇ ತಯಾರಿಸಿದ ವಿವಿಧ ಬಗೆಯ ಗುಲಾಬಿಗಳು ಗ್ರಾಹಕ ಪ್ರಮುಖ ಆಕರ್ಷಣೆಯಾಗಿದೆ.. ಜೊತೆಗೆ ಫೋಟೋ ಫ್ರೇಮ್ ಚಾಕಲೇಟ್, ಲಾಲಿಪಾಪ್ ಚಾಕಲೇಟ್, ಬಣ್ಣ ಬಣ್ಣದ ಚಾಕಲೇಟ್ ಬೊಕ್ಕೆಗಳು, ಟೆಡ್ಡಿ ಬೇರ್ ಗಳು ಹೀಗೆ ನಾನಾ ವೆರೈಟಿಯ ಚಾಕಲೇಟ್ ಗಿಫ್ಟ್ ಪ್ಯಾಕ್ ಗಳು ಈ ಬಾರಿಯ ಪ್ರೇಮಿಗಳ ದಿನದ ಪ್ರಮುಖ ಆಕರ್ಷಣೆಯಾಗಿದೆ..

ಸಾವಿರ ಬಗೆಯ ಚಾಕೊಲೇಟ್​ಗಳನ್ನು ನಾವು ತಯಾರಿಸಿದ್ದೇವೆ' ಎಂದು ಸವಾಲಿನ ನಗೆ ಬೀರುವ ಅನುಪಮಾರವರು ಈ ಬಾರಿ ಚಾಕಲೇಟ್ ಜಂಕ್ಷನ್ ನಿಂದ ತಯಾರಗಿರುವ ಚಾಕಲೇಟ್ ಗಳನ್ನು ರಾಜಾಸ್ತಾನ, ಗುಜರಾತ್, ಕಾಶ್ಮೀರ ಹೀಗೆ ದೇಶದ ನಾನಾ ಭಾಗಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ.. ಅಷ್ಟೇ ಅಲ್ಲದೇ ಈ ಬಾರಿ ಪ್ರೇಮಿಗಳ ದಿನಕ್ಕೆ ಚಾಕಲೇಟ್ ಬೊಕ್ಕೆಗಳಿಗೆ, ಹಾರ್ಟ್ ಶೇಪ್ ಲಾಲಿಪಾಪ್ ಗಳು ಹೀಗೆ ತರಹೇವಾಗಿ ಚಾಕಲೇಟ್ ಗಳಿಗೆ ಬೇಡಿಕೆ ಹೆಚ್ಚಾಗಿತ್ತಂತೆ. ಈಗಾಗಲ್ಲೇ ಸಿಲಿಕಾನ್ ಸಿಟಿ ಮಂದಿ ಹಾಗೂ ವಿದೇಶಿಯರು ತಮಗೆ ಬೇಕಾದ ಚಾಕಲೇಟ್ ಗಳನ್ನ ಖರೀದಿ ಮಾಡೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ...

ಇದನ್ನು ಓದಿ

1.ಸಾಫ್ಟ್​ವೇರ್ ಬೋರಾಯ್ತು, ಫೋಟೋಗ್ರಫಿ ಇಷ್ಟವಾಯ್ತು

2.ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಇದೆ ಶಿಕ್ಷಾ ಫೈನಾನ್ಸ್

3.ಲೇಟ್​​ನೈಟ್.ಇನ್ ವೆಬ್​​ಸೈಟ್​​ನಲ್ಲಿ ಮಿಡ್​​ನೈಟ್ ಭೋಜನ..!


Related Stories